ಕೀರ್ತಿ ಬೈಂದೂರು
ನೇರವಾಗಿ ಬಂದು ಕೆರೆಯ ನೀರಿಗೆ ನಾಲಿಗೆ ಚಾಚಬೇಕಿದ್ದ ಹುಲಿ ಕೆರೆಯ ದಡದಲ್ಲಿ ಸುಮ್ಮನೆ ಕುಳಿತುಕೊಂಡು ತನ್ನ ಹಿಂಭಾಗವನ್ನು ಮಾತ್ರ ಒದ್ದೆ ಮಾಡಿಕೊಂಡಿತು
ಬೆಳಗಿನ ಜಾವದ ಹೊತ್ತಿನಲ್ಲಿ ಕಬಿನಿ ಹಿನ್ನೀರಿನ ದಮ್ಮನಕಟ್ಟೆ ಕಾಡಲ್ಲಿ ಸಫಾರಿ ಹೋಗಿದ್ದೆವು . ‘ಇದೇ ಕೆರೆ ಪಕ್ಕನೇ ನೋಡ್ತಿರಿ. ಹುಲಿ ಬಂದು ನೀರು ಕುಡ್ಕೊಂಡು ಹೋಗತ್ತೆ’ ಅಂತ ಡ್ರೈವರ್ ಹೇಳಿದ. ಆಗವರು ಬರಿಯ ಡ್ರೈವರ್ ಆಗಿರಲಿಲ್ಲ. ಜಗತ್ತಿನ ಯಾವುದೋ ಅನೂಹ್ಯ ಲೋಕವನ್ನು ತೋರುವ ವಿಸ್ಮಯಕಾರನಾಗಿದ್ದ.
ಕಾದಿದ್ದಕ್ಕೂ ಸಾರ್ಥಕ, ಹುಲಿ ಬಂತು. ಜೀಪಿನಲ್ಲಿದ್ದ ಏಳು ಜನರೂ ಬೆಕ್ಕಸ ಬೆರಗಾಗಿ ಹುಲಿ ಹೇಗೆ ನೀರು ಕುಡಿಯುತ್ತದೆ ಎಂಬುದನ್ನು ನೋಡಲು ಕಾತರರಾಗಿದ್ದರು. ನಾನೂ ಮೊಬೈಲ್ ತೆಗೆದು, ವಿಡಿಯೋ ಮಾಡಿಕೊಳ್ಳತೊಡಗಿದೆ. ಅಚ್ಚರಿ ಎಂದರೆ ನೇರವಾಗಿ ಬಂದು ಕೆರೆಯ ನೀರಿಗೆ ನಾಲಿಗೆ ಚಾಚಬೇಕಿದ್ದ ಹುಲಿ ಕೆರೆಯ ದಡದಲ್ಲಿ ಸುಮ್ಮನೆ ಕುಳಿತುಕೊಂಡು ತನ್ನ ಹಿಂಭಾಗವನ್ನು ಮಾತ್ರ ಒದ್ದೆ ಮಾಡಿಕೊಂಡಿತು. ಉಳಿದವರೆಲ್ಲ, ‘ವಾವ್! ಎಷ್ಟು ಚೆನ್ನಾಗಿದೆ. ಹುಲಿ ನೀರು ಕುಡಿದು ಹೊರಡ್ತು’ ಎಂದೆಲ್ಲ ಬಾಯಿ ತೆಗೆಯುತ್ತಿದ್ದರು. ನಾನು ಮಾತ್ರ ಹುಲಿ ನೀರೇ ಕುಡಿದಿಲ್ಲವಲ್ಲಾ ಎಂದು ತಲೆಯಲ್ಲಿ ಹುಳ ಬಿಟ್ಟುಕೊಂಡಿದ್ದೆ. ಆಮೇಲೆ ಗೊತ್ತಾಗಿದ್ದು ಬೆಳಗಿನ ನಿತ್ಯ ಕರ್ಮಗಳನ್ನೆಲ್ಲ ಪೂರೈಸಿದ್ದ ಹುಲಿ ತನ್ನ ದೇಹವನ್ನು ಶುಚಿಯಾಗಿಟ್ಟುಕೊಳ್ಳುವುದರ ಭಾಗವಾಗಿ ತನ್ನ ಹಿಂಭಾಗವನ್ನು ನೀರಿಗೆ ಅದ್ದಿಕೊಂಡಿತ್ತು!
ಕಾಡಿನ ನಡುವೆ ರಾತ್ರಿ ಒಮ್ಮೆ ಗರ್ಜನೆ ಮತ್ತು ಆರ್ತನಾದ ಒಟ್ಟಿಗೇ ಕೇಳಿಸಿತು. ಎದೆ ಝಲ್ ಎಂದ ಅನುಭವ! ಇಲ್ಲೇ ಪಕ್ಕದಲ್ಲೆಲ್ಲೋ ಬೇಟೆ ನಡೆಯಿತೆನ್ನುವ ಭಾವ. ದೈತ್ಯ ಪ್ರಾಣಿಯೊಂದು ಅಸಹಾಯಕ ಪ್ರಾಣಿಯೊಂದನ್ನು ಹಿಡಿದಿರಬಹುದು ಎಂಬುದನ್ನು ಊಹೆ ಮಾಡಿಕೊಂಡು, ಕುಳಿತಿದ್ದವರೆಲ್ಲ ಭಯಭೀತರಾಗಿ ಕೋಣೆಯೊಳಕ್ಕೆ ತೆರಳಿದ್ದೆವು. ನಟ್ಟಿರುಳ ರಾತ್ರಿಯಲ್ಲಿ ಘಟಿಸಿರಬಹುದಾದ ಸನ್ನಿವೇಶವನ್ನು ಕಿವಿಯ ಸಹಾಯದಿಂದ ಮತ್ತೆ ಮರುಕಟ್ಟುತ್ತಾ, ನಿದ್ರೆಗೆ ಜಾರಿದ್ದೆವು.
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೇಸಿಗೆಯ ಬಿಸಿಲು ದಿನದಿಂದ ದಿನಕ್ಕೆ ಏರುತ್ತಿದ್ದು, ಮನುಷ್ಯರಂತೆ ಮೃಗಾಲಯದ ವನ್ಯಜೀವಿಗಳೂ ಕೂಡ ತತ್ತರಿಸಿವೆ. ಪ್ರಾಣಿ-ಪಕ್ಷಿಗಳಿಗೆ…
ಬೆಂಗಳೂರು: ಇರಾನ್-ಇಸ್ರೇಲ್ ನಡುವಿನ ಯುದ್ಧದಿಂದಾಗಿ ಪ್ರಪಂಚದಾದ್ಯಂತ ತೈಲ ಮಾರುಕಟ್ಟೆಗಳು ಸಂಪೂರ್ಣವಾಗಿ ಅಲುಗಾಡುತ್ತಿವೆ. ಇದರ ಎಫೆಕ್ಟ್ ರಾಜ್ಯದ ಮೇಲೂ ತಟ್ಟಿದ್ದು, ಡ್ರೈಫ್ರೂಟ್ಸ್…
ನಂಜನಗೂಡು: ಸ್ವಚ್ಛತೆಯ ಮೂಲಕವೇ ಗ್ರಾಮದ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರಿಗೆ ಸರ್ಕಾರ ಅಗತ್ಯ ರಕ್ಷಣಾತ್ಮಕ ಸೌಲಭ್ಯಗಳನ್ನು ನೀಡುವುದರ ಜೊತೆ ಚರಂಡಿಗಳನ್ನು…
ನವದೆಹಲಿ: ಕೇಂದ್ರ ಚುನಾವಣಾ ಆಯೋಗ ನಾಲ್ಕು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಮಾಡಲು…
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ಲಂಚದ ಹಾವಳಿ ಮಿತಿ ಮೀರಿದೆ. ಉಳ್ಳವರು ಲಂಚ ಕೊಟ್ಟು ತಮ್ಮ ಕೆಲಸವನ್ನು ಮಾಡಿಸಿಕೊಳ್ಳುತ್ತಾರೆ. ಆದರೆ…
ಮಾರ್ಚ್ ೬ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ೨೦೨೬-೨೭ ನೇ ಸಾಲಿನ ಆಯವ್ಯಯವನ್ನು ಮಂಡಿಸಲಿದ್ದಾರೆ. ಈ ಬಾರಿಯ ಆಯವ್ಯದಲ್ಲಿ ಪರಿಶಿಷ್ಟ ಜಾತಿ…