ನಾಗರಾಜ್ ಹೆತ್ತೂರು
ನಿಜ ಹೇಳಬೇಕಂದ್ರೆ… ಕಳೆದ ಒಂದು ವಾರದಿಂದ ತಲ್ಲಣಿಸಿದ್ದೇನೆ. ಇವತ್ತು ಒಂದು ವಿಷ್ಯ ಕಿವಿಗೆ ಬಿತ್ತು. ಹಾಸನದ ಯುವ ರಾಜಕಾರಣಿಯೊಬ್ಬ, ತನ್ನ ಕಾಮ ತೃಷೆಗೆ ಬಳಸಿಕೊಂಡ ಅನೇಕ ಮಹಿಳೆಯರನ್ನು ಬೆತ್ತಲಾಗಿಸಿದ ಕಾಮುಕನ ವೀಡಿಯೋಗಳು ವೈರಲ್ ಆಗಿವೆ. ಹಾಗೆಯೇ ಆ ಮಹಿಳೆಯ ವೀಡಿಯೋ ಕೂಡ ವೈರಲ್ ಆಗಿದೆ. ಆಕೆ ಮನೆಯಿಂದ ಹೊರಬಂದಿಲ್ಲ. ಮುಖ ತೋರಿಸುತ್ತಿಲ್ಲ. ಅವರ ಕುಟುಂಬದಲ್ಲಿ ಅದೇನು ನಡೆದಿದೆಯೋ ಬಲ್ಲವರಿಲ್ಲ. ಆದರೆ ಅನಿರೀಕ್ಷಿತವಾಗಿ ಅಪ್ಪಳಿಸಿದ ಆ ವೀಡಿಯೋ ಅದೆಷ್ಟು ಮನಸ್ಸುಗಳನ್ನು, ವ್ಯವಸ್ಥೆಯನ್ನು ಹಾಳು ಮಾಡಿದೆ ಎಂದರೆ ಕೇಳಿದರೆ ಮೈ ಜುಂ ಎನ್ನುತ್ತದೆ.
ಮೊನ್ನೆ ಹೀಗೆ ಒಂದು ಕರೆ ಬಂತು. ಅದರ ಸಾರಾಂಶ ಹೀಗಿದೆ. ಆಕೆಯ ಮಗ/ ಮಗಳು ಹಾಸನದ ವೆಲ್ ರೆಪ್ಯೂಟೆಡ್ ಒಂದು ಪ್ರತಿಷ್ಠಿತ ಶಾಲೆಯಲ್ಲಿ ಓದುತ್ತಿದ್ದಾಳೆ/ನೆ. ಈ ಕಾಮಕೇಳಿಗಳ ವೀಡಿಯೋ ಹದಿಹರೆಯದವರಿಂದ ಹಿಡಿದು ವಯಸ್ಕರ ತನಕ ಅವರವರ ನೆಟ್‌ವರ್ಕ್‌ನಲ್ಲಿ ಎಲ್ಲಾ ಕಡೆ ಹರಿದಾಡಿರುವುದರಿಂದ ಹಾಸನದ ಆ ಮಹಿಳೆ ಇರುವ ವೀಡಿಯೋ ಕೂಡ ಸಾರ್ವಜನಿಕವಾಗಿ ಪ್ರಸಾರವಾಗಿವೆ.
ಅದನ್ನು ನೋಡಿದ ಜನ… ಏ ಅವ್ಳು …. ನಮ್ ಇವ್ಳಲ್ಲವಾ …? ಇವಳಿಗ್ಯಾಕೆ ಬೇಕಿತ್ತು…? ಒಳ್ಳೆ ಗರ್ತಿ ಥರಾ ಆಡೋವ್ಳು, ಸಂಸದ ನನ್ ಜೋಬಲ್ಲಿದ್ದಾನೆ ಅನ್ನೋ ಥರಾ ಆಟಿಟ್ಯೂಡ್ … ಒಂದೆನಾ ಅಥವಾ ಇನ್ನಾ ಇದ್ದಾವಾ…? ಇದ್ರೆ ಕಳ್ಸಿ ನೋಡೋಣ. ಹೀಗೆ ಆಸೆಗಣ್ಣಿನಿಂದ ಕೇಳಿದವರೇ ಅಧಿಕ.
ವಿಷಯ ಅದಲ್ಲ. ಜನ ಮಾತನಾಡಿಕೊಂಡಿದ್ದೇನೆಂದರೆ, ಅಷ್ಟೊಂದು ಜನರನ್ನು ಹೇಗೆ ಸಂಭಾಳಿಸಿದ ಆ ಸಂಸದನ ತಾಕತ್ತು, ಶೌರ್ಯದ ಬಗ್ಗೆ, ಮತ್ತು ಅದ್ಹೇಗೆ ಸಾಧ್ಯ… ವೀಡಿಯೋ ಯಾಕೆ ಮಾಡ್ಕೋತಿದ್ದ..? ಅದನ್ನು ಮತ್ತೆ ಎಲ್ಲಿ ಹಾಕ್ಕೊಂಡು ನೋಡ್ತಿದ್ದ. ವಿಕೃತನೇ..? ಅಷ್ಟಕ್ಕೂ ಆತನ ಕಾಮದಾಟಕ್ಕೆ ಒಬ್ಬಳು ಪೊಲೀಸ್ ಇನ್ಸ್‌ಪೆಕ್ಟರ್ ಒಳಗೊಂಡಂತೆ ಎಲ್ಲರೂ ಕೂಡ ಅದು ಹೇಗೆ ವೀಡಿಯೋ ಮಾಡಲು ಅನುಮತಿ ಕೊಟ್ಟರು..? ಎಂಬುದೇ ದೊಡ್ಡ ಪ್ರಶ್ನೆ… ಇಂತಹವನನ್ನು ನಡು ಬೀದಿಲಿ ಕಲ್ಲೊಡೆದು ಸಾಯಿಸಬೇಕು ಎಂದು ಕೆಲವರಾದರೇ..? ಅಯ್ಯೋ ಮಾಡಬಾರದ್ದೇನು ಮಾಡಿಲ್ಲ. ಅವ್ರಿಗೂ ಬೇಕಿತ್ತು, ಆತನಿಂದ ಎಲ್ಲಾ ಉಪಯೋಗ ತೆಗೆದುಕೊಂಡಿರುತ್ತಾರೆ. ನೋಡಿ ಎಲ್ಲಾ ಮುಚ್ಚೋಗುತ್ತೆ ಮುಂದೆ ಅವರೇ ದೊಡ್ಡವರಾಗುತ್ತಾರೆ ಎಂದವರೂ ಅನೇಕ.
ಈಗ ಆ ಸ್ಕೂಲ್ ವಿಚಾರಕ್ಕೆ ಬರೋಣ. ನೆನ್ನೆ ಅವರ ಆಡಳಿತ ಮಂಡಳಿಯವರು ಈ ಬಗ್ಗೆ ಚರ್ಚಿಸಿದ್ದಾರೆ. ಇಂತಹವರ ಮಗ/ ಮಗಳು ಆ ಸ್ಕೂಲಿನ ವಿದ್ಯಾರ್ಥಿ. ಒಳ್ಳೆಯ ವಿದ್ಯಾರ್ಥಿ. ಆ ಯಮ್ಮನೇ ಮಗಳನ್ನು ಕಳಿಸುವ, ಕರೆತರುವ ಕೆಲಸ ಮಾಡುತ್ತಿದ್ದರಿಂದ ಎಲ್ಲರಿಗೂ ಪರಿಚಯ, ಇದೀಗ ರಜೆ ಇರುವುದರಿಂದ ಹೋಗಿಲ್ಲ. ಆದರೆ ಆಕೆ ನಗ್ನ ವೀಡಿಯೋ ವೈರಲ್ ಆಗಿರುವುದರಿಂದ ಆಚೆ ಮುಖ ತೋರಿಸಿಲ್ಲ. ಅವರು ಶಾಲೆ ಬಳಿ ಬಂದರೆ ಮತ್ತು ಆ ಮಗುವನ್ನು ಇಲ್ಲೇ ಉಳಿಸಿಕೊಂಡರೆ ಶಾಲೆಯ ಪ್ರತಿಷ್ಠಗೆ ಧಕ್ಕೆಯಾಗುತ್ತದೆ. ಆದ್ದರಿಂದ ಅವರ ಪೋಷಕರಿಗೆ ಕರೆ ಮಾಡಿ. ದಯಮಾಡಿ ನಿಮ್ಮ ಮಗುವಿನ ಟಿಸಿ ತೆಗೆದುಕೊಂಡು ಹೋಗಿ. ನಮ್ಗೆ ಮುಜುಗರ ಆಗ್ತಿದೆ. ಪೋಷಕರೆಲ್ಲಾ ದೂರು ಹೇಳ್ತಿದ್ದಾರೆ. ಅವರಿಗೆ ಕನ್ವಿನ್ಸ್ ಮಾಡೋಕೆ ಆಗ್ತಿಲ್ಲ ಎಂದಿದ್ದಾರೆ.
ಸಾರ್, ಹೀಗಾಗಿದೆ ಏನು ಮಾಡೋದು..? ಪಾಪ ಆ ಮಗು ಏನು ತಪ್ಪು ಮಾಡಿತ್ತು ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ನನಗೆ ಪರಿಚಯ ಇದ್ದ ಪ್ರತಿಷ್ಠಿತ ಶಾಲೆಯ ಮುಖ್ಯಸ್ಥರಿಗೆ ಕರೆ ಮಾಡಿ ಮೇಡಂ ಈ ಥರಾ ಆಗಿದೆ. ನಿಮ್ಮ ಶಾಲೆಯ ವಿದ್ಯಾರ್ಥಿಯೇ..? ಎಂದು ಕೇಳಿದೆ. ಅದಕ್ಕವರು ನೋ… ಹಾಗೇನಾರೂ ಇದ್ರೆ ನನ್ನ ಶಾಲೆಯಲ್ಲಿ ಓದಿಸ್ತೀನಿ ಅವರಿಗೂ ಕೌನ್ಸಿಲಿಂಗ್ ಮಾಡ್ತೀನಿ ಕಳ್ಸಿ ನಾಗ್ರಾಜ್ ಎಂದರು. ಅಬ್ಬಾ ಎಂದು ಥ್ಯಾಂಕ್ಸ್ ಎಂದುಕೊಂಡು ನಿಟ್ಟುಸಿರು ಬಿಟ್ಟೆ.
ನಿಜ..!
ಕಾಫಿ ಶಾಪ್, ಬಾರುಗಳು, ಯಾವ ಹೋಟೆಲ್, ಆಫೀಸ್‌ಗಳಿಗೆ ಹೋದ್ರೂ ಅದೇ ಸುದ್ದಿ. ೧೬ ವರ್ಷಕ್ಕಿಂತ ಕಿರಿಯ ಮಕ್ಕಳುಗಳ ಮೊಬೈಲ್‌ಗೂ ಆ ವೀಡಿಯೋಗಳು ಬಂದಿವೆ. ಸದ್ಯ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
ಯಾರ್ ಕೇಳಿದ್ರೂ ಯಾವ್ದಾದ್ರೂ ಹೊಸತು ಬಂತಾ..? ಇದ್ರೆ ಕಳಿಸಿ, ನೀವು ಮೀಡಿಯಾದವರಲ್ಲ ನಿಮ್ಗೆ ಫಸ್ಟ್ ಬರೋದು… ಹೀಗೆ ಕೇಳುವರೆಲ್ಲ ಪ್ರಜ್ಞಾವಂತರು, ಬುದ್ಧಿವಂತರು, ಸಮಾಜದಲ್ಲಿ ಒಳ್ಳೆಯ ಹೆಸರು ಇಟ್ಟುಕೊಂಡವರೇ ಆಗಿರುತ್ತಾರೆ.
ಅದೆಷ್ಟು ಕುತೂಹಲ ಅಂದ್ರೆ ಬೇರೆಯವರ ಮನೆಯ ಹೆಣ್ಣುಮಕ್ಕಳ ಬೆತ್ತಲೆ ದೇಹವನ್ನು ನೋಡಿ ಸವಿಯುವ ತವಕ. ಕೆಲವರಿಗೆ ಕುತೂಹಲ ಅನ್ನಿ. ಮೊದಲ ವೀಡಿಯೋ ಬಂದಾಗ ನಮ್ಮ ಸುತ್ತಮುತ್ತಲಿನ, ಪರಿಚಯ ಇದ್ದ ಕೆಲವು ಹೆಣ್ಮಕ್ಕಳ ವೀಡಿಯೋ ಪರಸ್ಪರ ಒಪ್ಪಿಗೆ ಮೇಲೆ ನಡೆದಿದ್ದು ಇತ್ತು. ಅದೇ ವೀಡಿಯೋದಲ್ಲಿ ಕೊನೆಯ ಆ ತಾಯಿಯ ದೈನಸಿ ಸ್ಥಿತಿಯ ಆ ರೇಪ್ ವೀಡಿಯೋ ಸ್ವಲ್ಪ ನೋಡಿದ್ದು. ಸಂಕಟ, ಎದೆಯೊಳಗೆ ನೋವು ನಾವು ಇಂತಹ ಜಾಗದಲ್ಲಿ ಬದುಕಿದ್ದೀವಾ..! ಊಟ ಮಾಡಲು ಹೋದರೆ ಅದೇ ನೆನಪು. ಆ ತಾಯಿ ಅದೇನು ತಪ್ಪು ಮಾಡಿದ್ದಳು. ಆ ವಯಸ್ಸಿನಲ್ಲಿ ಅದೇಗೆ ಸಾಧ್ಯ. ಆಕೆ ಹೇಳುತ್ತಾರೆ ನಿಮ್ಮ ಅಪ್ಪನಿಗೆ ನಾನು ತುತ್ತು ಉಣಿಸಿದ್ದೀನಿ ಹಿಂಗೆಲ್ಲಾ ಮಾಡಬೇಡ ಎಂದು ಅಂಗಲಾಚುತ್ತಾಳೆ. ಆದರೆ ಆ ವಿಕೃತನ ಮನಸ್ಸು ಕರಗುವುದಿಲ್ಲ.
ಅಸಹ್ಯ, ನೋವು, ಕೋಪ ಎಲ್ಲವೂ ಉಮ್ಮಳಿಸುತ್ತಿತ್ತು ಅಕ್ಷರಶಃ ತುಂಬಾ ದಿನಗಳ ನಂತರ ಡಿಸ್ಟರ್ಬ್ ಆಗೋಗಿದ್ದೆ. ಇದೇ ಮೊದಲ ಬಾರಿಗೆ ಆತನ ಅಮಾನುಷ ವರ್ತನೆ, ಚಪಲ, ಶಕ್ತಿ ಸಾಮರ್ಥ್ಯ, ವಿಕೃತತೆ, ಅಧಿಕಾರದ ಮದ ನೋಡಿ ಆತನನ್ನು ಗಲ್ಲಿಗೆ ಹಾಕಬೇಕು ಎನ್ನುತ್ತಾರೆ. ಇದು ಇಲ್ಲಿಗೆ ಬಂದು ನಿಂತಿದೆ. ನಮ್ ಜನ ಮಾತ್ರ ಅವಳ್ದು ಐತಂತೆ… ಸಿಕ್ರೆ ಕಳಿಸಿ ಎಂದು ಮರೆಯದೆ ಕೇಳುತ್ತಾರೆ. ಪ್ರತಿಯೊಬ್ರೂ ಕೇಳೋದು ಇವತ್ತು ಹೊಸತು ಬಂತಾ…? ಯಾರಿಗೆ ಸಿಕ್ಕುತ್ತೋ ಅವನ್ಗೆ ವ್ಯಾಲ್ಯೂ ಜಾಸ್ತಿ. ಮೊದ್ಲು ನಂಗೆ ಸಿಕ್ಕಿದ್ದು ಎಂಬ ಅಹಂ. ನಂಗೆ ಮೊದಲು, ನಾವೇ ಮೊದಲು ತೋರಿಸ್ತಿರೋದು..? ನಮ್ಮಲ್ಲಿ ಮಾತ್ರ ಈ ಬೆತ್ತಲೆ ಚಿತ್ರಗಳು..? ನೋಡಿ ನೋಡಿ ಎಂದು ಹಾಕುತ್ತಾರೆ. ಒಂದು ಉದಾಹರಣೆ ಹೇಳಲೇಬೇಕು. ಕಳೆದ ತಿಂಗಳು ನಾವೊಂದು ಸಿನ್ಮಾ ಮಾಡಿದ್ದೆವು. ಸೆನ್ಸಾರ್‌ಗೆ ಹೋದಾಗ ಎ, ಯು ಸರ್ಟಿಫಿಕೆಟ್ ಪಡೆಯುವುದೇ ಸಾಹಸ ನಮ್ಮಲ್ಲಿ ಸ್ವಲ್ಪ ಕ್ರೈಂ ಇದೆ ಎಂದಿದ್ದಕ್ಕೆ ‘ಎ’ ಸರ್ಟಿಫಿಕೆಟ್ ಸಿಕ್ತು. ವಾಸ್ತವದಲ್ಲಿ ಅದೊಂದು ನಟನೆ, ಸಿನ್ಮಾ ಅಂದ್ರೇನೆ ಕಪೋಕಲ್ಪಿತ. ದುರಂತ ಅಂದ್ರೆ ಆ ಚಿತ್ರಕ್ಕೆ ನಮ್ಗೆ ಎ ಸರ್ಟಿಫಿಕೇಟ್ ಸಿಕ್ತು. ಅನಿವಾರ್ಯ. ಆದರೆ ಇದೇ ವ್ಯವಸ್ಥೆಯಲ್ಲಿ ಕನಿಷ್ಠ ಪ್ರಜ್ಞೆಯೂ ಇಲ್ಲದೆ, ತಮ್ಮ ರಾಜಕೀಯ ತೆವಲುಗಳಿಗಾಗಿ ನೂರಾರು ಮಹಿಳೆಯರ ಬೆತ್ತಲು ವೀಡಿಯೋಗಳನ್ನು ಯಾವುದೇ ಬ್ಲರ್ ಇಲ್ಲದೆ ಮೊಬೈಲ್‌ಗೆ ಬಿಟ್ಟು ಆ ವಿಕೃತಿಯನ್ನು ಮೆರೆದವನನ್ನು ಏನು ಮಾಡಬಹುದು ನೀವೇ ಹೇಳಿ. ಇದು ಹಾಸನ ಅಷ್ಟೇ ಅಲ್ಲ, ಇಡೀ ಮನುಷ್ಯ ಸಮುದಾಯದ ಮೇಲೆ ಬೀರಿರುವ ಪರಿಣಾಮ. ನಾವ್ಯಾರು ನಿರೀಕ್ಷಿಸಲು ಸಾಧ್ಯವೇ ಇಲ್ಲ. ಪೋಷಕರು ಉತ್ತರಿಸಲು ಸಾಧ್ಯವಾಗುತ್ತಿಲ್ಲ. ಎಲ್ಲರ ಮಾತುಗಳು ನಿಂತು ಹೋಗಿವೆ. ನಮ್ಮ ಎಂಪಿಯೊಂದಿಗೆ ‘ಸೆಲ್ಫಿ” ಎಂದು ಹೆಮ್ಮೆಯಿಂದ ಫೋಟೋ ತೆಗೆಸಿಕೊಂಡ ಹೆಣ್ಣು ಮಕ್ಕಳೆಲ್ಲರನ್ನೂ ಅವರ ಗಂಡಂದಿರು ಅನುಮಾನದಿಂದ ನೋಡುವಂತಾಗಿದೆ. ಅದು ಒಪ್ಪಿತವೋ ಅಥವಾ ಒಪ್ಪಿಗೆಯಿಲ್ಲದ್ದೋ ಆದರೆ ಅದನ್ನು ಚಿತ್ರಿಸಿಕೊಂಡ ಹಾಗೂ ಹೆಣ್ಣುಮಕ್ಕಳ ಬೆತ್ತಲೆ ದೇಹಗಳನ್ನು ಯಾರ ಅನುಮತಿಯೂ ಇಲ್ಲದೆ ಸಮಾಜಕ್ಕೆ ಬಿಟ್ಟ ವ್ಯಕ್ತಿಯನ್ನು ಗಲ್ಲಿಗೆ ಹಾಕಲೇಬೇಕು. ಸದ್ಯ ಈ ಪ್ರಕರಣ, ಕುಟುಂಬಗಳಲ್ಲಿ ಯಾರು ಯಾರನ್ನೂ ನಂಬದ ಸ್ಥಿತಿಗೆ ತಲುಪಿದೆ. ಅವನ ವಿಕೃತಿಗೆ ಬಲಿಯಾದ ಹೆಣ್ಣುಮಕ್ಕಳು ನಾಳೆ ಎಲ್ಲಿ ನಮ್ಮ ವೀಡಿಯೋ ಬರುತ್ತದೆಯೋ ಎಂದು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುತ್ತಿದ್ದಾರೆ. ಕೆಲವರು ಪಾನಿಕ್ ಆಗಿದ್ದಾರೆ. ನಂಬಿಕೆ… ಎಂಬ ಪದಕ್ಕೆ ಅರ್ಥವೇ ಇಲ್ಲದಂತಾಗಿದೆ. ಕೊನೆಯದಾಗಿ ಮೊನ್ನೆಯ ಘಟನೆ.
ಆತ ಆ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ತಮ್ಮ ನಾಯಕನನ್ನು ಗೆಲ್ಲಿಸಲು ಹಗಲಿರುಳೂ ಕೆಲಸ ಮಾಡುತ್ತಿದ್ದ. ಈ ಸುಡು ಬಿಸಿಲಲ್ಲಿ ಮದ್ಯಾಹ್ನ ೧೨ ಗಂಟೆಯಲ್ಲಿ ನಿಲ್ಲಿಸಿ ನೀರು ಕುಡಿದು ಕುಳಿತಿದ್ದ.
ಮೊಬೈಲ್‌ಗೆ ಒಂದು ಮೆಸೇಜ್ ಬಂತು…
ನೋಡಿ ಆ ಕ್ಷಣಕ್ಕೆ ಮನೆ ಕಡೆ ಓಡಿದ. ಹೌದು ಆ ವ್ಯಕ್ತಿಯ ಹೆಂಡತಿಯ ಬೆತ್ತಲೆ ವೀಡಿಯೋ…
ಏನಾಗಬಾರದಿತ್ತೋ ಅದಾಗಿತ್ತು. ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇವೆಲ್ಲವೂ ಸತ್ಯ ಘಟನೆಗಳೆ.
ಅದೆಷ್ಟು ಸ್ನೇಹಿತರು ನಮ್ಗು ಕಳ್ಸಪ್ಪ ನಿಮ್ಮ ಕಡೆ ವೀಡಿಯೋ… ಎಂದು ಅನೇಕ ಹಳೆಯ ಸ್ನೇಹಿತರು ಅಣಕಿಸುತ್ತಾ ಕರೆ ಮಾಡುತ್ತಾರೆ. ಅವರಿಗೆ ಹೇಳಲು ಉತ್ತರವಿಲ್ಲದ ಸ್ಥತಿ ನಮ್ಮದು. ಆತ ಸಂಸದ, ಹಣವಂತ, ಗೆದ್ದು ಮತ್ತೆ ಏನೂ ಆಗಿಲ್ಲದಂತೆ ಬರುತ್ತಾನೆ. ಎಲ್ಲಾ ಫೇಕ್ ಎಂದು ಕ್ಲಿಯರ್ ಆಗುತ್ತದೆ. ಸತ್ಯಕ್ಕೆ ಜಯ ಎನ್ನುತ್ತಾರೆ. ಪಾಪ ಆ ಹೆಣ್ಣುಮಕ್ಕಳು, ಕುಟುಂಬ ಸ್ಥಿತಿ…
ಕೊನೆಗೆ ಕಾಡುವ ಪ್ರಶ್ನೆ…
ಹೆಣ್ಣುಮಗಳೊಬ್ಬಳು ಹೇಳಿದಂತೆ ನನ್ನ ಅನುಮತಿ ಇಲ್ಲದೆ ಬೆತ್ತಲೆ ನೋಡಲು ಸಮಾಜಕ್ಕೆ ಅಧಿಕಾರ ಕೊಟ್ಟವರು ಯಾರು..? ಉತ್ತರಿಸಿ
(ಲೇಖಕರು ಹಾಸನದ ಭೀಮ ವಿಜಯ ಪತ್ರಿಕೆಯ ಸಂಪಾದಕ)
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…