ಹಾಡು ಪಾಡು

ಮೌನಕ್ಕೆ ಶರಣಾಗಿರುವ ಮರದೂರಿನ ಈ ದೇಗುಲ

ಡಾ.ರಾಧಾಮಣಿ ಎಂ.ಎ.

ನಾನು ಹುಟ್ಟಿ ಬೆಳೆದದ್ದು ಹುಣಸೂರಿನ ಬಳಿಯ ಅಜ್ಜನ ಊರು ಬನ್ನಿಕುಪ್ಪೆಯಲ್ಲಿ. ಬನ್ನಿಕುಪ್ಪೆಯಿಂದ ಸುಮಾರು ೨ ಕಿಮೀ ದೂರದಲ್ಲಿ ಮರದೂರು ಎಂಬ ಪುಟ್ಟ ಹಳ್ಳಿಯಿದೆ.

ಬನ್ನಿಕುಪ್ಪೆಗೂ ಅಗ್ರಹಾರಕ್ಕೂ ಮಧ್ಯೆ ಲಕ್ಷ್ಮಣತೀರ್ಥ ನದಿ ಹರಿಯುತ್ತದೆ. ಇದರ ಸಮೀಪದಲ್ಲಿ ಮರದೂರಿನ ವ್ಯಾಪ್ತಿಯಲ್ಲಿ ವೇಣುಗೋಪಾಲಸ್ವಾಮಿ ದೇವಾಲಯವಿದೆ. ಇದು ಹೊಯ್ಸಳ ಶೈಲಿಯಲ್ಲಿ ರಚನೆಯಾಗಿದೆ. ಸಾವಿರ ವರ್ಷಕ್ಕೂ ಹೆಚ್ಚಿನ ಇತಿಹಾಸವಿರುವ ಈ ದೇಗುಲವನ್ನು ಎದುರುಗೊಂಡೇ ಪಯಣ ಮಾಡುತ್ತಿದ್ದವು. ಅದರ ಯಾವುದೇ ವಿಚಾರಗಳು ಗೊತ್ತಿಲ್ಲದಿದ್ದರೂ ದೊಡ್ಡವರ ಮಾತಿನಂತೆ ನಮಸ್ಕಾರ ಮಾಡಿ ಮುಂದುವರಿಯುತ್ತಿದ್ದವು.

ಇತ್ತೀಚೆಗೆ ಮತ್ತೆ ಆ ದಾರಿಯಲ್ಲಿ ಹೋಗುವಾಗ ಆ ದೇವಾಲಯವನ್ನು ನೋಡಿ ಮನಸ್ಸಿಗೆ ಒಂದು ಬಗೆಯ ಸಂಕಟವಾಯಿತು. ಹೊಯ್ಸಳರ ಕಾಲದ ಈ ದೇಗುಲವನ್ನು ಮೈಸೂರು ಅರಸರ ಕಾಲದಲ್ಲಿ ಜೀರ್ಣೋದ್ಧಾರ ಮಾಡಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಗರ್ಭಗುಡಿಯ ಮೇಲ್ಭಾಗವು ಗಾರೆ ಮತ್ತು ಇಟ್ಟಿಗೆಯನ್ನು ಬಳಸಿ ಕಟ್ಟಿದ ಗೋಪುರವಿದೆ. ಮೊದಲಿಗೆ ದೇವಾಲಯದ ಎದುರುಗಡೆ ಎರಡು ಕಂಬಗಳ ಮುಖಮಂಟಪವಿದೆ, ಇದರ ಮುಂಭಾಗದಲ್ಲಿ ವಿಜಯನಗರದ ಅರಸರ ಕಾಲದಲ್ಲಿ ಕಟ್ಟಿದ ಪ್ರವೇಶ ಮಂಟಪವಿದೆ.

ಪ್ರವೇಶ ದ್ವಾರದಲ್ಲಿ ಪದ್ಮಮಂಡಲದ ರಚನೆಯಿದೆ. ಒಳಭಾಗದಲ್ಲಿ ನವರಂಗವಿದೆ, ನವರಂಗದ ಕಂಬಗಳು ರುದ್ರಕಾಂತ ಶೈಲಿಯ ವಿವಿಧ ವಿನ್ಯಾಸದಲ್ಲಿ ರಂಗೋಲಿ ರೀತಿಯ ಚಿತ್ರಗಳನ್ನು ಕೆತ್ತಲಾಗಿದೆ. ನವರಂಗದ ಮೇಲ್ಭಾಗದಲ್ಲಿ ‘ವಿತ್ಥಾನ’ ಅಂದರೆ ಭುವನೇಶ್ವರಿಯ ಕೆತ್ತನೆಯು ಕೊಳೆ ತುಂಬಿಕೊಂಡು ಕಪ್ಪಾಗಿದೆ. ದೇವಸ್ಥಾನದ ಮುಖ್ಯ ಭಾಗ ಗರ್ಭಗೃಹ ಮತ್ತು ನವರಂಗದ ಮಧ್ಯಭಾಗ ವನ್ನು ‘ಸುಖನಾಸಿ’ ಎಂದು ಕರೆಯುತ್ತಾರೆ.

ಈ ಸುಖನಾಸಿಯು ಗರುಡಪೀಠದ ಶೈಲಿಯಲ್ಲಿ ರಚನೆಯಾಗಿದೆ. ಇದರಮೇಲೆಯೇ ವೇಣುಗೋಪಾಲಸ್ವಾಮಿಯ ಮೂರ್ತಿಯನ್ನು ಇಡಲಾಗಿತ್ತು ಎಂಬುದಕ್ಕೆ ಅದರ ಮೇಲೆ ಮೂರ್ತಿಯನ್ನು ಇಡಲು ಇರುವ ಒಂದು ಕುಳಿಯಿದೆ. ಇದರಲ್ಲಿದೇವರಿಗೆ ಸಂಬಂಧಪಟ್ಟಂತಹ ಆಭರಣ ಹಾಗೂ ವಸ್ತ್ರಗಳನ್ನು ಇಡುವುದಕ್ಕೆ ಬಳಸಲಾಗುತ್ತದೆ. ದೇವಾಲಯದ ಬಲಭಾಗದಲ್ಲಿ ಸಣ್ಣಗುಡಿಯ ರಚನೆಯಿದೆ ಮತ್ತು ಅದು ದುರಸ್ತಿಯಾಗದೆ ಚಾವಣಿ, ಕಂಬಗಳು ಎಲ್ಲವೂ ಕುಸಿದು ಬೀಳುತ್ತಿವೆ. ಇಲ್ಲಿ ಸಿಕ್ಕಿರುವ ಒಂದು ಶಾಸನದ ಪ್ರಕಾರ ೧೫ನೆಯ ಶತಮಾನದಲ್ಲಿ ಪಟ್ಟಣಸ್ವಾಮಿನಾಗಿಶೆಟ್ಟಿಯ ಮಗ ಗೋಪಿಶೆಟ್ಟಿಯು, ಗೋಪಿನಾಥ ದೇವಾಲಯಕ್ಕೆ ಗಂಧಗೋಟಿಯನ್ನು ಕಾಣಿಕೆ ನೀಡಿದ ವಿಷಯ ದಾಖಲಾಗಿದೆ. ದೇವಾಲಯದ ಗರ್ಭಗುಡಿಯಲ್ಲಿ ವೇಣುಗೋಪಾಲಸ್ವಾಮಿಯ ವಿಗ್ರಹ ಇಂದು ನಮಗೆ ನೋಡಲು ಸಿಗುವುದಿಲ್ಲ. ಹುಣಸೂರಿನ ಶ್ರೀ ನರಸಿಂಹಸ್ವಾಮಿ ದೇವಾಲಯ ದಲ್ಲಿ ವೇಣುಗೋಪಾಲಸ್ವಾಮಿ ಮೂರ್ತಿಯನ್ನು ಸಂರಕ್ಷಣೆ ಮಾಡಲಾಗಿದೆ. ೧೯೭೫ರಲ್ಲಿ ಭೂಸುಧಾರಣೆ ಕಾಯ್ದೆ ಜಾರಿಯಾದ ಸಂದರ್ಭದಲ್ಲಿ ಮರದೂರಿನಲ್ಲಿರುವ ದೇವಾಲಯದ ಜಾಗವನ್ನು ವಶಪಡಿಸಿಕೊಳ್ಳುವ ಸಲುವಾಗಿ ವೇಣುಗೋಪಾಲ ಮೂರ್ತಿಯನ್ನು ಕಿತ್ತು ಹೊರರಾಷ್ಟ್ರಕ್ಕೆ ಸಾಗಿಸುವ ಪ್ರಯತ್ನ ಮಾಡಲಾಗಿತ್ತು. ಆಗ ಅಂದಿನ ಮುಖ್ಯಮಂತ್ರಿಗಳಾದ ದೇವರಾಜ ಅರಸು ಅವರಿಗೆ ವಿಷಯ ತಲುಪಿದಾಗ ಬನ್ನಿಕುಪ್ಪೆಯ ಬಳಿ ಅವರನ್ನು ಹಿಡಿದು ತಹಸಿಲ್ದಾರ್ ಅವರ ಸುಪರ್ದಿಗೆ ಕೊಡು ತ್ತಾರೆ. ತಹಸಿಲ್ದಾರರು ಈ ವಿಗ್ರಹವನ್ನು ಶ್ರೀ ನರಸಿಂಹಸ್ವಾಮಿ ದೇವಾಲಯಕ್ಕೆ ಕೊಟ್ಟು ಸಂರಕ್ಷಣೆ ಮಾಡುವಂತೆ ಆದೇಶ ಮಾಡುತ್ತಾರೆ.

ನನ್ನ ಬಾಲ್ಯದದಿನದ ಕುತೂಹಲಕ್ಕೆ ಸಾಕ್ಷಿಯಾಗಿದ್ದ ದೇವಾಲಯ ಅನಾಥವಾಗಿ ನಿಂತಿದೆ. ಅಂದು ನಾನು ಮುಗ್ಧಭಕ್ತಿಯಿಂದ ಕಂಡ ದೇವಾಲಯವನ್ನು ಈಗ ನೋಡಿದರೆ ಯಾಕೋ ಒಂದು ಬಗೆಯ ಯಾತನೆಯಾಗುತ್ತದೆ. ಈ ಜಗತ್ತು ಎಷ್ಟು ವೇಗವಾಗಿ ಓಡುತ್ತಿದೆ. ಜನ, ಪರಿಸರ, ವ್ಯವಸ್ಥೆ ಎಲ್ಲವೂ ಶರವೇಗದಲ್ಲಿ ಓಡುತ್ತಿದೆಯಾದರೂ ಈ ದೇವಾಲಯ ಮಾತ್ರ ಯಾವ ಬದಲಾವಣೆಯನ್ನೂ ಕಾಣದೇ ತನ್ನ ಅಸ್ತಿತ್ವವನ್ನು ಮರೆತು, ನಿರ್ಲಿಪ್ತವಾಗಿ ಪ್ರಕೃತ್ತಿಯ ವಿಕೋಪಗಳಿಗೆ ಮೈಯೊಡ್ಡಿ ಮೌನವಾಗಿ ನಿಂತಿದೆ.

ಆಂದೋಲನ ಡೆಸ್ಕ್

Recent Posts

ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ: ಇಬ್ಬರ ಬಂಧನ

ಮಹೇಂದ್ರ ಹಸಗೂಲಿ, ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ಪಟ್ಟಣದ ಜನತಾ ಕಾಲೋನಿಯ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ ವೇಶ್ಯಾವಾಟಿಕೆ…

3 hours ago

ಭಾರತ-ಯುರೋಪ್‌ ಒಕ್ಕೂಟ ವ್ಯಾಪಾರ ಒಪ್ಪಂದಕ್ಕೆ ಸಹಿ

ನವದೆಹಲಿ: ಮದರ್‌ ಆಫ್‌ ಆಲ್‌ ಡೀಲ್ಸ್‌ ಎಂದೇ ಕರೆಯಲ್ಪಡುವ ಭಾರತ-ಯುರೋಪ್‌ ಒಕ್ಕೂಟವು ಮುಕಕ್ತ ವ್ಯಾಪಾರ ಒಪ್ಪಂದಕ್ಕೆ ಇಂದು ಅಧಿಕೃತವಾಗಿ ಸಹಿ…

8 hours ago

ಶಿಡ್ಲಘಟ್ಟ ಕೇಸ್‌ನಲ್ಲಿ ಕಾನೂನಿನಂತೆ ಕ್ರಮ: ಸಚಿವ ಭೈರತಿ ಸುರೇಶ್‌

ಬೆಂಗಳೂರು: ಶಿಡ್ಲಘಟ್ಟದಲ್ಲಿ ಪೌರಾಯುಕ್ತಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಕಾಂಗ್ರೆಸ್‌ ಮುಖಂಡ ರಾಜೀವ್‌ಗೌಡನನ್ನು ಸರ್ಕಾರ ರಕ್ಷಣೆ ಮಾಡಲ್ಲ. ಕಾನೂನು ಪ್ರಕಾರ ಶಿಕ್ಷೆ…

8 hours ago

ಪಿರಿಯಾಪಟ್ಟಣ: ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಸವಾರ ಸಾವು

ಪಿರಿಯಾಪಟ್ಟಣ: ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗೋಣಿಕೊಪ್ಪ-ಪಿರಿಯಾಪಟ್ಟಣ ರಸ್ತೆಯಲ್ಲಿ ನಡೆದಿದೆ. ತಾಲ್ಲೂಕಿನ…

8 hours ago

ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ: ಲೇಖಕಿಯರಿಂದ ಕಥಾಸಂಕಲನ ಆಹ್ವಾನ

ಮೈಸೂರು: ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು ಸಂಸ್ಥಾಪಕ ಅಧ್ಯಕ್ಷೆ, ಖ್ಯಾತ ಸ್ತ್ರೀವಾದಿ ವಿಮರ್ಶಕಿ ಹಾಗೂ ಲೇಖಕಿ ಡಾ.ವಿಜಯಾ ದಬ್ಬೆ ಅವರ ಹೆಸರಿನಲ್ಲಿ 2022…

9 hours ago

ಗುಂಡ್ಲುಪೇಟೆ: ಬೊಮ್ಮಲಾಪುರದಲ್ಲಿ ವಾಸದ ಮನೆಗೆ ನುಗ್ಗಿದ ಕಡವೆ

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದ ದೊರೆ ಎಂಬುವವರ ವಾಸದ ಮನೆಗೆ ನುಗ್ಗಿದ ಕಡವೆಯನ್ನು…

9 hours ago