ಅಮಿತಾ ರವಿಕಿರಣ್, ಬೆಲ್ಛಾಸ್ಟ್
‘ದೇವರ ಮನೆಯಿದು ಈ ಜಗವೆಲ್ಲ ಬಾಡಿಗೆ ದಾರರು ಜೀವಿಗಳೆಲ್ಲ’ ಎಂಬ ಹಾಡನ್ನು ಕೇಳಿದಾಗಲೆಲ್ಲ, ನನಗೆ ನಾವೆಲ್ಲ ನಿರಾಶ್ರಿತರೇ ಎಂದೆನಿಸುತ್ತದೆ. ಆದರೆ ನಾವು ಮನುಷ್ಯರು ನಿರಾಶ್ರಿತ ನಿರ್ಗತಿಕರೆಂದು ಗುರುತಿಸುವ ಮಂದಿಯೇ ಬೇರೆ. ಅವರನ್ನು ನೋಡುವ ದೃಷ್ಟಿ ಕೋನವೂ!
ಆದರೂ ತಾವು ಹುಟ್ಟಿದ ಭೂ ಭಾಗವನ್ನುಬಿಟ್ಟು, ಬದುಕಬೇಕು, ಸಾಮಾನ್ಯ ಮನುಷ್ಯ ಜೀವನ ನಡೆಸಬೇಕು ಎಂಬ ಕಿಂಚಿತ್ ಆಸೆಯೊಂದಿಗೆ, ತಮ್ಮ ಭಾಷೆ ಮಾತಾಡದ, ಪರಿಚಿತರೇ ಇಲ್ಲದ ಮತ್ತೊಂದು ನಾಡಿಗೆ ರಾತ್ರೋರಾತ್ರಿ ಹೊರಟು ಬರುವುದು ಸಾಮಾನ್ಯ ನಿರ್ಧಾರವಲ್ಲ. ಅಂಥಾ ಧೈರ್ಯವಂತರನ್ನೇ ನಮ್ಮ ಸಮಾಜ ನಿರಾಶ್ರಿತರು ಎಂದು ಕರೆಯುತ್ತದೆ.
ಮುಂಡಗೋಡದಲ್ಲಿ ಹುಟ್ಟಿ ಬೆಳೆದ ನನಗೆ ನಿರಾಶ್ರಿತ ಪದ ಕೇಳುವುದು, ಅಥವಾಜನರನ್ನು ನೋಡುವುದು ಹೊಸದೇನಲ್ಲ. ಆದರೆ ಯುಕೆಗೆ ಬಂದಮೇಲೆಯೇ ಆ ಪದವಿ ಹೊತ್ತ ಸಾಮಾನ್ಯ ಜನರ ಅಸಾಮಾನ್ಯ ಪಯಣದ ಕಥೆಯನ್ನು ಕೇಳಲು ಸಿಕ್ಕಿದ್ದು. ಅವರ ಜೀವನವನ್ನು ಹತ್ತಿರದಿಂದ ನೋಡಲು, ಜೊತೆಗೆ ಕೆಲಸ ಮಾಡಲು ಸಿಕ್ಕಿದ್ದು. ಹುಟ್ಟಿದ ನೆಲದಲ್ಲಿ ಆದ ರಾಜಕೀಯ ಸ್ಥಿತ್ಯಂತರಗಳು ಮತ್ತು ಅವು ತಂದೊಡ್ಡಿದ ಯುದ್ಧ ಭೀತಿ ಒಂದಷ್ಟು ಜನರನ್ನು ಈ ನಾಡಿಗೆ ಪುಟ್ಟ ದೋಣಿಗಳಲ್ಲಿ ತುಂಬಿ ತಂದರೆ, ಓದುವ, ಬರೆಯುವ, ಚಿತ್ರ ಬಿಡಿಸುವ, ಹಾಡುವ, ನುಡಿಸುವ ಎಲ್ಲಾ ಸೃಜನಶೀಲ ಕೆಲಸಗಳನ್ನು ಹರಾಮ್ ಎಂದ ದೇಶದಿಂದ ಬರೀ ಓದುವ, ಕಲಿಯುವ ಆಸೆ ಹೊತ್ತು ಈ ನಾಡಿಗೆ ಬಂದ ಯುವಜನರು ಅದೆಷ್ಟೋ.
ಸಂಗೀತ ಕಲಾವಿದೆ ಆದ್ದರಿಂದ, workshop, ಗಾಯನ ಕಾರ್ಯಕ್ರಮ ಅಂತೆಲ್ಲ ಇವರನ್ನೆಲ್ಲ ಪದೇ ಪದೇ ಭೇಟಿ ಆಗಿದ್ದೇನೆ. ಒಮ್ಮೆ ಭೇಟಿ ಆದವರು ಇನ್ನೆಂದೂ ಸಿಗದೇ ಬೇರೆ ಊರಿಗೆ ಹೋಗಿಬಿಡುವ ಸಾಧ್ಯತೆಯೂ ಬಹಳಷ್ಟು. Home office ಕಟ್ಟಡವನ್ನು ಕಂಡು ಕೈಮುಗಿದವರನ್ನು ನೋಡಿ ವಿಸ್ಮಯಗೊಂಡಿದ್ದೇನೆ. ಯಾವಾಗ ಇಲ್ಲಿಂದ ಎತ್ತಂಗಡಿ ಮಾಡುತ್ತಾರೋ ಎಂದು ಗೊತ್ತಿಲ್ಲದೆ ನಲುಗುವ, ಬಿಕ್ಕುವ ಜನರಿಗೆ ಸಾಂತ್ವನ ಹೇಳಲೂ ಪದಗಳಿಲ್ಲದೆ ಮೌನವಾಗಿ ನಿಂತು ಅವರನ್ನು ದಿಟ್ಟಿಸಿದ್ದೇನೆ.
ತನ್ನ ೧೧ ವರ್ಷದ ಮಗಳೊಂದಿಗೆ ಅದ್ಯಾವುದೋ ಹಳ್ಳಿಯ ಪುಟ್ಟ ರೂಮ್‌ನಲ್ಲಿ ಉಳಿದುಕೊಂಡಿರುವ ಮುಜ್ಗಾನ್ ತನ್ನ ದೇಶದಲ್ಲಿ ಒಳ್ಳೆಯ ಹೆಸರುಗಳಿಸಿದ್ದ ಇಂಟೀರಿಯರ್ ಡಿಸೈನರ್. ಸಿತಾರ್ ಎಂಬ ಇರಾನಿಯನ್ ವಾದ್ಯ ನುಡಿಸುವ ಒನಿಡ್, ೪ ವರ್ಷ ಒಂದು ದೇಶದಲ್ಲಿದ್ದು, ಅಲ್ಲೇ ತನ್ನ ಭವಿಷ್ಯವನ್ನು ಕಲ್ಪಿಸಿಕೊಳ್ಳುತ್ತಿದ್ದ.ಮರುದಿನವೇ ಆತನಿಗೆ ಅಲ್ಲಿಂದ ತೆರಳಬೇಕು ಎಂಬ ಆದೇಶ ಬಂತು.
ಸಾಝ್ ನುಡಿಸಿ ಹಾಡುವ ಮೂರು ಮಕ್ಕಳ ತಂದೆ ಸಮ್ಹಾರ್ ಇರಬಹುದು. ತನ್ನ ತಾಯಿಯನ್ನು ಅಲ್ಲೇ ಬಿಟ್ಟು ಬಂದಿರುವ ವಾಹ್ಲಾಲ ಇರಬಹುದು. ಎಲ್ಲರ ಬದುಕು ksph ಆಫೀಸಿನಿಂದ ಬರುವ ಒಂದು ಹಾಳೆಯ ಮೇಲೆ ಅವಲಂಬಿತವಾಗಿದೆ. ಎಷ್ಟೋ ಸಂಘಟನೆಗಳು ಈ ನಿಟ್ಟಿನಲ್ಲಿ, refugeeಗಳ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದರೂ ಸ್ಥಿರತೆ ಇರದೆ ಯಾವ ಮನಸ್ಸು ತಾನೇ ನೆಮ್ಮದಿಯಲ್ಲಿದ್ದೀತು?
” ಯಾವಾಗ ಇಲ್ಲಿಂದ ಎತ್ತಂಗಡಿ ಮಾಡುತ್ತಾರೋ ಎಂದು ಗೊತ್ತಿಲ್ಲದೆ ನಲುಗುವ, ಬಿಕ್ಕುವ ಜನರಿಗೆ ಸಾಂತ್ವನ ಹೇಳಲೂ ಪದಗಳಿಲ್ಲದೆ ಮೌನವಾಗಿ ನಿಂತು ಅವರನ್ನು ದಿಟ್ಟಿಸಿದ್ದೇನೆ.”
ಮೈಸೂರು : ಇಂದಿನ ಕಾಲದಲ್ಲಿ ಜ್ಞಾನದ ಜೊತೆಗೆ ಕೌಶಲ ತುಂಬಾ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,…
ಮಂಡ್ಯ: ಸಚಿವ ಎಚ್.ಸಿ.ಮಹದೇವಪ್ಪ ಅವರ ಬೀದಿನಾಯಿ ಹೇಳಿಕೆ ಕುರಿತು ಸಾಕಷ್ಟು ಚರ್ಚೆಯಾಗುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಶಾಸಕ…
ವಿಶಾಖಪಟ್ಟಣಂ: ಭಾರತೀಯ ನೌಕಾಪಡೆಯ ವಿಶ್ವದ ವಿವಿಧ ದೇಶಗಳ ನೌಕಾಪಡೆಗಳೊಂದಿಗೆ ಸೇರಿ ತನ್ನ ಅಪ್ರತಿಮ ಶೌರ್ಯ ಹಾಗೂ ಸನ್ನದ್ಧತೆಯನ್ನು ಬುಧವಾರ ವಿಶಾಖಪಟ್ಟಣಂ…
ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನ ಮಾದಾಪಟ್ಟಣ ಗ್ರಾಮದಲ್ಲಿ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು…
ಬೆಂಗಳೂರು: ವಿಧಾನಸೌಧಕ್ಕೆ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಜೆಡಿಎಸ್ ಲೇವಡಿ ಮಾಡಿದೆ. ಪ್ರಶ್ನೆ ಕೇಳುವ…
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಮಾಧ್ಯಮಗಳಿಗೆ ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ನಿರ್ಬಂಧ ಹೇರಲಿದೆ. ಈ ಕುರಿತು ಸರ್ಕಾರದ…