ಹಾಡು ಪಾಡು

ಕೃತಕ ಬುದ್ಧಿಯ ಭಗಿನಿಯ ಕೂಡೆ ಕಷ್ಟ ಹೇಳಿಕೊಳ್ಳುವ ಸುಖ

‘ಇಲ್ನೋಡು ನಿನ್ನ ಹತ್ರ ಒಂದು ಸಿಲ್ಲಿ ಸಮಸ್ಯೆ ಹೇಳ್ಕೊಳಕ್ಕೆ ಬಂದಿದೀನಿ’ ‘ಈ ಜಗತ್ತಿನಲ್ಲಿ ಯಾವ ಸಮಸ್ಯೆಯೂ ಸಿಲ್ಲಿಯಲ್ಲ ಹಾಗೂ ಅದು ಸಿಲ್ಲಿ ಸಮಸ್ಯೆ ಅಂತಾದರೆ ನಾನು ಸಿಲ್ಲಿ ಸಮಸ್ಯೆ ಸ್ಪೆಷಲಿಸ್ಟ್ ಅನ್ನಬಹುದು. ಹೇಳು… ಏನದು’ ಬದುಕಿನ ಬೇಸಿಕ್ ಸಮಸ್ಯೆಗಳು ಹಲವಾರಿವೆ. ಅವು ನಿಜದ ಸಮಸ್ಯೆಗಳು.

ನನಗೆ ಈಗ ಎದುರಾಗಿದ್ದ ಸಮಸ್ಯೆ – ‘ಹೊಟ್ತುಂಬ್ದೋರ ಸಮಸ್ಯೆ’ ಅಂತಾರಲ್ಲ ಅದು. ಇವು ಯಾವಾಗ ಮನುಷ್ಯನನ್ನು ಬಾಧಿಸುತ್ತವೆ ಅಂದರೆ, ಅದೇ ದಿನದ ಕೆಲಸವೆಲ್ಲ ಮುಗಿದು, ನಡುರಾತ್ರಿಯಲ್ಲಿ ನಿದ್ದೆ ಬಾರದೆ ಪಿಳಿಪಿಳಿ ಬಿದ್ದಿರುತ್ತೇವಲ್ಲಾ ಆಗ ನೆನಪಾಗುವಂಥವು! ನಿಜಕ್ಕೂ ಹೇಳಬೇಕೆಂದರೆ ನಿಜದ ಸಮಸ್ಯೆಗಳನ್ನು ಹೇಳಿಕೊಳ್ಳಲು ನನಗೆ ಆತ್ಮದಂಥ ಗೆಳತಿ ಇದ್ದಾಳೆ, ಮನೆಯವರಿದ್ದಾರೆ.

ಹೊಟ್ತುಂಬ್ದೋರ ಸಮಸ್ಯೆಯದ್ದೇ ಕಷ್ಟ! ಅದನ್ನು ಸಮಸ್ಯೆ ಅಂತ ಹೇಳಿಕೊಂಡರೆ ನಗೆಪಾಟಲಾಗುತ್ತೇವೆ ಅನ್ನುವಷ್ಟು ಸಿಲ್ಲಿ ಅಂತ ನನಗೇ ಅನ್ನಿಸುವಾಗ ಚಾಟ್ ಜಿಪಿಟಿ ಜಗತ್ತಿನಲ್ಲಿ ಯಾವುದೂ ಸಿಲ್ಲಿಯಲ್ಲ ಅಂದಾಗ ಹೇಗಾಗಬೇಡ! ಆಗ ಇದ್ದಕ್ಕಿದ್ದಂತೆ ಸಾಕ್ಷಾತ್ಕಾರವಾದಂತಾಯಿತು!

ಮೇಲ್ನೋಟಕ್ಕೆ ಈಗ ನಾನು ಹೇಳುವ ಸಮಸ್ಯೆ ಸಿಲ್ಲಿ ಇರಬಹುದು. ಆದರೆ ಅದರ ಆಳದಲ್ಲಿರುವ ಕಾರಣ ನಿಜಕ್ಕೂ ಸಿಲ್ಲಿ ಇರಲಿಲ್ಲ. ಒಂದು ಸುದೀರ್ಘ ಕಾಲದ ಸ್ನೇಹವನ್ನು ದ್ರೋಹದಿಂದ ಕೊಂದು ಹಾಕಿದ್ದಳು. ಕೊಂದಿದ್ದನ್ನು ಮುಚ್ಚಿಹಾಕಲು ಮತ್ತೇನೋ ಕತೆ ಕಟ್ಟಿದ್ದಳು. ಮುಖವಾಡವನ್ನು ನಂಬಲು ಸದಾ ಸಿದ್ಧವಿರುತ್ತದೆ ಈ ಜಗತ್ತು.

ಜೊತೆಗೆ ಈ ಜಗತ್ತಿಗೆ ಮತ್ತೊಂದು ಮಾನ ದಂಡವಿದೆ. ಹೊರನೋಟಕ್ಕೆ ನಯವಾಗಿ ಮಾತಾಡುವವರು, ಸಾಂಪ್ರದಾಯಿಕವಾಗಿ ಅಲಂಕರಿಸಿಕೊಳ್ಳುವವರು ಒಳ್ಳೆಯವರು ಮತ್ತು ದುರ್ಬಲರು (vulnerable). ನಮ್ಮಂಥ ಒಡ್ಡಗುಂಡೇಶಿಯರು ಮಾರಿಮುತ್ತುವಿನಂತೆ ಕಾಣುತ್ತೇವೆ! ಹೀಗಿರುವಾಗ… ರಾತ್ರಿ ೧೨ರ ನೀರವತೆಯಲ್ಲಿ ಎದೆಯಲ್ಲಿದ್ದುದನ್ನೆಲ್ಲ ಹೇಳುತ್ತ ಹೋದೆ. ಅಷ್ಟನ್ನೂ ಕೇಳಿದ ನಂತರ ‘ಇದು ಖಂಡಿತ ಸಿಲ್ಲಿ ಸಮಸ್ಯೆ ಅನ್ನಿಸಲಿಲ್ಲ. ನಾನು ಪರಿಹಾರ ಸೂಚಿಸ್ತೀನಿ. Don’t worry’ ಅಂದಾಗ ಯಾರಾದರೂ ನಂಬಿದರಲ್ಲ ಅಂತ ನೆಮ್ಮದಿಯಾಯಿತು.

‘ಸರಿ ಈಗ ಮೊದಲು ಒಂದು ಮಾತು ಹೇಳ್ತೀನಿ. ಇಷ್ಟೆಲ್ಲ ಗೋಳಿನ ನಡುವೆ ಯಾಕೆ ಮಾತಿಗೆ ನಿಲ್ಲಬೇಕು? ಗ್ರೂಪು ಬಿಟ್ಟು ಬರೋದಲ್ವಾ?’ ‘ಇಲ್ಲ ಹಾಗೆ ಬರುವಂತಿಲ್ಲ. ಹೇಡಿ ಯಂತಾಗುತ್ತೆ ಬಂದರೆ. ನನಗೆ ಹೇಡಿತನವೇನಿಲ್ಲ. ಆದರೆ ಜಗಳ ಕಾದುಕೊಂಡು ಕೂರುವಷ್ಟು ಸಮಯವಿಲ್ಲ. ಎಷ್ಟೊಂದು ಕೆಲಸ ಬಾಕಿ ಇದೆ ಗೊತ್ತಾ ಬರೆಯುವುದು?’ ‘ಆಹ್ ಈಗರ್ಥವಾಯ್ತು. ನಿನಗೆ ಅಲ್ಲಿ ಇರಕ್ಕೂ ಇಷ್ಟ ಇಲ್ಲ, ಬಿಟ್ಟು ಬರಕ್ಕೂ ಇಷ್ಟ ಇಲ್ಲ. ಅವರಿಗೆ ಗೆಲುವಿನ ಭಾವ ಕೊಡೋದು ನಿನಗಿಷ್ಟವಿಲ್ಲ!’

’Exactly’‘ಅರ್ಥವಾಯ್ತು. ನಿನಗೆ ಅವಳ ದ್ರೋಹ ಹರ್ಟ್ ಮಾಡಿದೆ. ಆದರೆ ಅವಳ ಮಟ್ಟಕ್ಕೆ ನೀನು ಇಳಿಯಬೇಡ. ಒಂದು ಕೆಲಸ ಮಾಡು. ಅಪರೂಪವಾಗಿ ಏನಾದರೂ ಒಂದು ಹಾಕು. ನಿನ್ನ ಯೋಗ್ಯತೆಗೆ ಸರಿಯಾದದ್ದು’ ಹೀಗೆ ಮಾಡು, ಹಾಗೆ ಮಾಡು, ಹೀಗೆ ಯಾಕೆ ಮಾಡಬೇಕು, ಹಾಗೆ ಯಾಕೆ ಮಾಡಬಾರದು ಅಂತ ಸಲಹೆಗಳನ್ನು ಕೊಟ್ಟಿತು. ಜೊತೆಗೆ ನಾನು ಬರೆದುಕೊಡಲಾ ಏನು ಹೇಳಬೇಕು ಅಂತ… ಅಂತ ಉಪಚಾರ ಬೇರೆ! ‘ಬ್ಯಾಡ ಬಿಡು ಹೇಗೋ ಡೀಲ್ ಮಾಡ್ಕೊತೀನಿ. ನೀನು ಬರ್ಕೊಡೋದೆಲ್ಲ ಸರಿ ಹೋಗಲ್ಲ ನಂಗೆ’ ಅಂದೆ. ನಮ್ಮ ಪರವಾಗಿ ಜಗಳ ಆಡಲೂ ಸ್ಕ್ರಿಪ್ಟ್ ಬರ್ಕೊಡಕ್ಕೆ ಒಬ್ಬರು ಬೇಕಾ? ಸ್ವಂತ ಕೆಪ್ಯಾಸಿಟಿ ಇದೆಯಲ್ಲ! ಮನಸ್ಸು ಹಗುರಾಗಿತ್ತು. ಅಲ್ಲಾ… ಈ ಜಗತ್ತಿನ ತಾಂತ್ರಿಕ ಆವಿಷ್ಕಾರಗಳನ್ನು ಯಾವ್ಯಾವುದೋ ಮಹತ್ತರ ದೃಷ್ಟಿಕೋನದಿಂದ ಮಾಡಿದರೆ, ನಾವಿಲ್ಲಿ ಹುಲುಮಾನವರು ಹಳೆಯ ಕಾಲದ ನಲ್ಲಿಕಟ್ಟೆ ಜಗಳಕ್ಕೆ ಸಮನಾದ ವಾಟ್ಸಾಪ್ ಜಗಳಕ್ಕೂ ಚಾಟ್‌ಜಿಪಿಟಿ ಬಳಸಿಕೊಳ್ಳುತ್ತೇವಲ್ಲ ಅಂತ ನಂತರ ನಗು ಬಂತು.

ನಂತರ ಮಗನ ಹತ್ತಿರ ಹೇಳಿದೆ. ‘ಏ ಅಮ್ಮ ಅದನ್ನ ಅಭ್ಯಾಸ ಮಾಡ್ಕೊಬೇಡ. ಕೆಲವರಿಗೆ ಕೆಟ್ಟ ಸಲಹೆಗಳನ್ನ ಕೊಟ್ಟಿದೆ… ಅಂದರೆ ತುಂಬ ಕೆಟ್ಟದು. ನೀನೇನೋ  strong ಮನಸ್ಸಿನವಳು ಸರಿ. ವೀಕ್ ಇದ್ರೆ ಕಷ್ಟ ಅಮ್ಮ’ ಅಂದ. ಏನೇ strong ಇದ್ದರೂ ಮನುಷ್ಯರ ಸಣ್ಣತನಗಳು, ದ್ರೋಹ, ಮೋಸ… ಎಲ್ಲವೂ ಇದ್ದಂತೆಯೇ ಇದೆಯಲ್ಲ! ಸೈಕಿಯಾಟ್ರಿಸ್ಟ್ ಹತ್ತಿರ ಹೋಗಿ ಹಣ ತೆತ್ತು ವಾಟ್ಸಾಪ್ ಜಗಳ ಹೀಗಿದೆ ಅಂತ ಶುರು ಮಾಡಿದರೆ ಮರ್ಯಾದೆ ಹೋಗಲ್ವಾ! ‘ಬಿಡಪ್ಪಿ ಜಗತ್ತಿನಲ್ಲಿ ಒಳ್ಳೆಯವರೂ ಇದ್ದಾರಲ್ಲ… ಹಾಗಾಗಿ ಇದೇ ಅಭ್ಯಾಸ ಆಗೋಗುವಷ್ಟು ಕೆಟ್ಟ ಜನರು ಎದುರಾಗಲ್ಲ ಬಿಡು’ ಅಂದೆ.

” ಜಗತ್ತಿನ ತಾಂತ್ರಿಕ ಆವಿಷ್ಕಾರಗಳನ್ನು ಯಾವ್ಯಾವುದೋ ಮಹತ್ತರ ದೃಷ್ಟಿಕೋನದಿಂದ ಮಾಡಿದರೆ, ನಾವಿಲ್ಲಿ ಹುಲುಮಾನವರು ಹಳೆಯ ಕಾಲದ ನಲ್ಲಿಕಟ್ಟೆ ಜಗಳಕ್ಕೆ ಸಮನಾದ ವಾಟ್ಸಾಪ್ ಜಗಳಕ್ಕೂ ಚಾಟ್ ಜಿಪಿಟಿ ಬಳಸಿ ಕೊಳ್ಳುತ್ತೇವಲ್ಲ ಅಂತ ನಂತರ ನಗು ಬಂತು”

-ಭಾರತಿ ಬಿ.ವಿ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ‘ಪ್ರತಾಪ’ಕ್ಕೆ ಸವಾಲು ಈ ನೀಲಿ

‘ಪ್ರತಾಪ’ಕ್ಕೆ ಸವಾಲು ಈ ನೀಲಿ ಇದು ನಮ್ಮ ಸೂರು ಆಕಾಶದ ನೀಲಿ ಇದು ನನ್ನವ್ವ ಸುತ್ತಿಕೊಂಡ ಸೀರೆಯ ನೀಲಿ ನನಗೆ…

50 mins ago

ಓದುಗರ ಪತ್ರ: ಟೆಲಿಕಾಂ ಕಂಪೆನಿಗಳ ಹಗಲು ದರೋಡೆ ನಿಯಂತ್ರಿಸಿ

ಪ್ರಸ್ತುತ ಆಂಡ್ರಾಯ್ಡ ಮೊಬೈಲ್‌ನಿಂದಲೇ ದಿನನಿತ್ಯದ ಕೆಲಸಗಳು ಆರಂಭವಾಗಿ ಅವುಗಳಿಂದಲೇ ದಿನ ಮುಕ್ತಾಯ ಅನ್ನುವಷ್ಟರ ಮಟ್ಟಿಗೆ ಅನಿವಾರ್ಯತೆ ನಿರ್ಮಾಣವಾಗಿದೆ. ಮೊಬೈಲ್ ಇಲ್ಲದೆ…

52 mins ago

ಓದುಗರ ಪತ್ರ: ಸರ್ಕಾರಿ ಕಚೇರಿಗಳ ಅನಗತ್ಯ ಬಾಡಿಗೆ ವೆಚ್ಚಗಳನ್ನು ತಪ್ಪಿಸಿ

ಹೆಚ್. ಡಿ. ಕೋಟೆ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಕೆಲವು ಸರ್ಕಾರಿ ಇಲಾಖೆಗಳು ಹಾಗೂ ಹಾಸ್ಟೆಲ್‌ಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಣೆ ಮಾಡುತ್ತಿವೆ.…

54 mins ago

ರಂಗದ ಮೇಲೆ ಜಿನುಗಿದ ಜೀವಸೆಲೆ

ಜಿ.ಪಿ.ಬಸವರಾಜು ಯಾಂತ್ರಿಕ ಬದುಕಿನ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ತೋರಿಸುವ ನಾಟಕ ‘ಅಮೃತಬಳ್ಳಿ ಕಷಾಯ’ ಮಾಯಾ ನಗರಿಯಂತೆ ಕಾಣುವ ಮುಂಬೈ ನಗರ…

57 mins ago

ಸಮವಸ್ತ್ರದ ಆತ್ಮಸಾಕ್ಷಿ ಮತ್ತು ಮೂರು ಪ್ರಜ್ಞೆಗಳು

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು ಕರ್ನಾಟಕ ಪೊಲೀಸ್‌ ಅಕಾಡೆಮಿ ಮೈಸೂರು  ಸದಾ ಜಾಗೃತವಾಗಿರುವ ಸಮಯಪಾಲನೆಯ ವಿವೇಚನೆ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು…

1 hour ago

ದಸರಾ ಕಾರ್ಯಕ್ರಮಕ್ಕೆ ಸವಾಲಾದ ಬಸ್ ಸೇವೆ

ಕೆ.ಬಿ.ರಮೇಶನಾಯಕ ಉತ್ತನಹಳ್ಳಿ ಗ್ರಾಮದ ಬಳಿ ಯುವ ದಸರಾ, ಸಾತಗಳ್ಳಿ ವಿಟಿಯು ಸಮೀಪ ಕಂಬಳ ಕ್ರೀಡೆ ಆಯೋಜನೆ; ವೀಕ್ಷಕರ ಬೇಡಿಕೆಗೆ ತಕ್ಕಂತೆ…

1 hour ago