ಹಾಡು ಪಾಡು

ವಿಶೇಷಚೇತನ ವಿಲ್ಪ್ರೆಡ್‌ ಇದೀಗ ಬೆಳ್ಳಿ ಪದಕ ವಿಜೇತ

ಕೀರ್ತಿ ಬೈಂದೂರು

ಮಾತೃ ಮಂಡಳಿ ಶಿಶು ವಿಕಾಸ ಕೇಂದ್ರ ವಿಶೇಷ ಶಾಲೆಗೆ ಹೋದಾಗ ಮಟಮಟ ಮಧ್ಯಾಹ್ನದ ಹೊತ್ತು. ಅರೆಕ್ಷಣ ನಿಲ್ಲದ ವಿಲ್ರೆಡ್ ಕೆಲಸ ಮಾಡುತ್ತಾ, ಓಡಾಡುತ್ತಲೇ ಇದ್ದ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ, ಎರಡು ಬೆಳ್ಳಿ ಪದಕಗಳನ್ನು ಪಡೆದ ಹುಡುಗನಿವ. ವಿಶೇಷಚೇತನ ಹುಡುಗನೆಂದು ಅಕ್ಕಪಕ್ಕದವರ ನಿರ್ಲಕ್ಷ್ಯಕ್ಕೆ ಒಳಗಾದ ವಿಲ್ರೆಡ್ ಈಗ ಎಲ್ಲರನ್ನೂ ಬೆರಗುಗೊಳಿಸುತ್ತಾ, ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದಾನೆ.

ವಿಲ್ರೆಡ್ ಹುಟ್ಟಿ ಮೂರು ವರ್ಷ ಕಳೆದಿತ್ತು. ಮಗುವನ್ನು ಮಾತನಾಡಿಸಲು ಬಂದವರೆಲ್ಲ, ‘ನಿಮ್ಮ ಮಗು ಮಾತಾಡ್ತಿಲ್ಲ ನೋಡಿ’ ಎಂದಿದ್ದರು. ಇದಕ್ಕೆ ಆಯಿಷ್ ಸಂಸ್ಥೆಯಲ್ಲಿ ಪರಿಹಾರ ಸಿಗಬಹುದೆಂದು ಅಲ್ಲಿಗೂ ಹೋದದ್ದಾಯಿತು.

ಮಗುವನ್ನು ತಪಾಸಣೆ ಮಾಡಿದ ವೈದ್ಯರು ಮಾತಿಗೆ ಸಂಬಂಧಿಸಿದ ಒಂದಷ್ಟು ಥೆರಪಿಗಳನ್ನು ಹೇಳಿಕೊಟ್ಟರು. ನಂತರ ಮಕ್ಕಳ ಕೇಂದ್ರದಲ್ಲಿ ಅಂಗವಿಕಲರ ಡೈರಿಯೊಂದನ್ನು ಕೊಟ್ಟಿದ್ದರು. ವಲ್ಲಿ ಡಿಸೋಜಾ ಅವರು ತನ್ನ ಮಗ ಅಂಗವಿಕಲ ಎಂದು ಒಪ್ಪದೆ, ಡೈರಿಯನ್ನು ಹರಿದುಹಾಕಿದ್ದರು. ಇತ್ತ ಮಗ ಮಾತು ಕಲಿತಿಲ್ಲ, ಅತ್ತ ಗಂಡ ಪರಿಸ್ಥಿತಿಯನ್ನು ಒಪ್ಪುತ್ತಿಲ್ಲವೆಂಬ ಸಂದಿಗ್ಧ ಸಂಕಟದಲ್ಲಿದ್ದವರು, ವಿಲ್ಮಾ ಅವರು.

ವಿಲ್ರೆಡ್‌ಗೆ ನಾಲ್ಕು ವರ್ಷವಾಗುತ್ತಿದ್ದಂತೆ ಶಾಲೆಗೆ ಸೇರಿಸಿದರು. ಇತರೆ ಹುಡುಗರ ರೀತಿ ಓದುವ ವಿಷಯದಲ್ಲಿ ಹಿಂದುಳಿದಿದ್ದ ವಿಲ್ರೆಡ್‌ನನ್ನು ಶಿಕ್ಷಕರೆಲ್ಲ ಗಮನಿಸುತ್ತಿದ್ದರು. ಶಿಕ್ಷಕರೊಬ್ಬರು ವಿಲ್ಮಾ ಅವರಲ್ಲಿ ತಮಗೆ ಪರಿಚಿತವಿರುವ ಮಾತೃ ಮಂಡಳಿ ಶಿಶು ವಿಹಾರ ಕೇಂದ್ರದ ವಿಶೇಷ ಶಾಲೆಗೆ ಸೇರಿಸುವಂತೆ ಸಲಹೆ ನೀಡಿದ್ದಷ್ಟೇ ಅಲ್ಲ, ವಿಲ್ರೆಡ್ ಮತ್ತವರ ಮನೆಯವರನ್ನು ಆಯಿಷ್ ಸಂಸ್ಥೆಗೆ ಕರೆದುಕೊಂಡು ಹೋದರು. ನಾಲ್ಕೈದು ವರ್ಷದವನಾಗಿದ್ದ ಮಗನ ಬುದ್ಧಿಶಕ್ತಿಯ ಬೆಳವಣಿಗೆ ಆರು ತಿಂಗಳ ಮಗುವಿನಂತಿದೆ ಎಂಬ ಸತ್ಯವನ್ನು ವಲ್ಲಿ ಅವರು ಒಪ್ಪಿಕೊಳ್ಳಲೇಬೇಕಾಯಿತು. ಈ ಬಾರಿ ಮಾತ್ರ ಅಂಗವಿಕಲರ ಡೈರಿಯನ್ನು ತಂದೆ ಜತನದಿಂದ ಕಾಪಿಟ್ಟುಕೊಂಡರು.

೨೦೦೯ರ ಹೊತ್ತಿಗೆ ವಿಲ್ರೆಡ್ ಮಾತೃ ಮಂಡಳಿ ವಿಶೇಷ ಚೇತನ ಶಾಲೆಗೆ ಸೇರಿದ. ಓದು, ಬರಹಕ್ಕೆಲ್ಲ ಕಷ್ಟಪಡುತ್ತಿದ್ದ ಇವನನ್ನು ಕಂಡ ಸಂಸ್ಥೆಯ ಶಿಕ್ಷಕರಾದ ಪಾಂಡು ಅವರು ಕ್ರೀಡೆಯಲ್ಲಿ ಆಸಕ್ತಿ ಮೂಡಿಸಿದರು. ವಿಲ್ರೆಡ್‌ನೊಳಗಿನ ಕ್ರೀಡಾಪಟುವನ್ನು ಗುರುತಿಸಿ, ಪ್ರೋತ್ಸಾಹಿಸಿದವರು, ಪಾಂಡು ಅವರು. ಅದೆಷ್ಟು ಪಳಗಿಸಿದರೆಂದರೆ, ಶಾಲೆಗೆ ಸೇರಿದ ಮಾರನೇ ವರ್ಷದಿಂದಲೇ ಅಥ್ಲೆಟಿಕ್ಸ್, ಟೇಬಲ್ ಟೆನ್ನಿಸ್ ಬಾಲ್ ಥ್ರೋ ಸೇರಿದಂತೆ ಅನೇಕ ಕ್ರೀಡೆಗಳಲ್ಲಿ ವಿಲ್ರೆಡ್ ಭಾಗವಹಿಸಿದ್ದ. ಒಮ್ಮೆ ಓಟ ಸ್ಪರ್ಧೆಯಲ್ಲಿ ವಿಶೇಷ ಚೇತನ ಹುಡುಗನೊಬ್ಬ ಇವನು ಓಡುತ್ತಿದ್ದ ಟ್ರ್ಯಾಕ್‌ಗೆ ಬಂದು ಬೀಳಿಸಿದ್ದ. ಆಗ ವಿಲ್ರೆಡ್, ‘ಬಿಡಿ ಸರ್, ಮತ್ತೆ ಓಡ್ತೀನಿ’ ಎನ್ನುತ್ತಲೇ ಓಡಿ, ಪದಕ ಗಳಿಸಿದನೆಂದು ಸಂಸ್ಥೆಯ ಮುಖ್ಯ ಶಿಕ್ಷಕರಾದ ಉಲ್ಲಾಸ್ ರಾಜ್ ಅವರು ನೆನಯುತ್ತಾರೆ.

ಕ್ರೀಡೆ ಮಾತ್ರವಲ್ಲ, ಸಾಂಸ್ಕ ತಿಕ ಚಟುವಟಿಕೆಗಳಲ್ಲೂ ವಿಲ್ರೆಡ್ ತನ್ನನ್ನು ತೊಡಗಿಸಿಕೊಂಡಿದ್ದಾನೆ. ಸ್ವಾವಲಂಬಿಯಾಗಬೇಕೆಂದು ಸಂಸ್ಥೆಯ ಶಿಕ್ಷಕರು ಎಲ್ಲ ಮಕ್ಕಳಿಗೆ ಮನೆಗೆಲಸಗಳನ್ನೂ ಕಲಿಸುತ್ತಾರೆ. ಅಂತೆಯೇ ವಿಲ್ರೆಡ್ ಕೂಡ ಶಾಲೆ ಮುಗಿಸಿ ಮನೆಗೆ ಬಂದ ಮೇಲೆ, ಕಸ ಗುಡಿಸಿ, ಮನೆಯೊರೆಸುವ ಕೆಲಸವನ್ನು ಚಾಚೂ ತಪ್ಪದೇ ಮಾಡುತ್ತಾನೆ. ತಲೆನೋವಿನಿಂದ ವಿಲ್ಮಾ ಅವರು ಮಲಗಿದ್ದಾಗೊಮ್ಮೆ, ‘ಅಮ್ಮ ಯಾವ್ ಟ್ಯಾಬ್ಲೆಟ್ ಬೇಕು ಅಂತ ಹೇಳಿ’ ಎಂದು ಒತ್ತಾಯಿಸಿ, ಮಾತ್ರೆ ತಂದುಕೊಟ್ಟಿದ್ದನೆಂದು ಹೇಳುವಾಗ ತಾಯಿಗೆ ಸಂಭ್ರಮವೋ ಸಂಭ್ರಮ.

ಬೋಚಿ ಆಟವನ್ನು ಕೋಚ್ ಕುಶಾಲ್ ಅವರ ಮಾರ್ಗದರ್ಶನದಲ್ಲಿ ವಿಲ್ಪ್ರೆಡ್‌  ಕಲಿಯುತ್ತಿದ್ದಾನೆ. ಜುಲೈ ತಿಂಗಳಲ್ಲಿ ದಾವಣಗೆರೆಯಲ್ಲಿ ನಡೆದ ರಾಜ್ಯ ಮಟ್ಟದ ಬೋಚಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದ. ನಂತರ ಗ್ವಾಲಿಯರ್‌ನಲ್ಲೂ ಚಿನ್ನದ ಪದಕ ಪಡೆದ. ನವೆಂಬರ್ ೧೮ರಿಂದ ೨೪ರವರೆಗೆ ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಬೋಚಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಽಸಿದ್ದಾನೆ. ಹೊರಡುವ ಮುನ್ನ, ತನ್ನ ಅಣ್ಣನಲ್ಲಿ ಚಿನ್ನದ ಪದಕ ತರುತ್ತೇನೆಂದು ಮಾತುಕೊಟ್ಟಿದ್ದ. ‘ದೆಹಲಿಗೆ ಬನ್ನಿ’ ಎಂದು ಶಾಲೆಯ ಶಿಕ್ಷಕರನ್ನೆಲ್ಲ ಕರೆದಿದ್ದ. ಬರಲಾಗದ ಅವರ ಅಸಹಾಯಕತೆಗೆ ಬೇಸರಿಸದೆ, ಎಲ್ಲರಿಂದ ಪ್ರೀತಿ, ಹಾರೈಕೆಗಳನ್ನು ಹೊತ್ತು, ತರಬೇತುದಾರರಾದ ಪ್ರೀತಿ ಮೇಡಂ ಅವರೊಂದಿಗೆ ದೆಹಲಿಗೆ ಪಯಣ ಬೆಳೆಸಿದ್ದ. ಅಂತೂ ೧೫ಕ್ಕೂ ಹೆಚ್ಚಿನ ದೇಶಗಳ ಸ್ಪರ್ಧಾರ್ಥಿಗಳು ಭಾಗವಹಿಸಿದ ಬೋಚಿ ಕ್ರೀಡೆಯಲ್ಲಿ ವೈಯಕ್ತಿಕ ಮತ್ತು ಗುಂಪು ವಿಭಾಗಗಳೆರಡರಲ್ಲೂ ವಿಲ್ರೆಡ್ ೨ ಬೆಳ್ಳಿಯ ಪದಕಗಳನ್ನು ಗೆದ್ದಿರುವುದು ಸಾಧನೆಯೇ ಸರಿ.

ವಿಲ್ಪ್ರೆಡ್‌ ಮೈಸೂರಿಗೆ ಮರಳಿ ಬಂದಾದ ಮೇಲೆ ಕ್ರೀಡೆ, ಪದಕ ಎಲ್ಲವನ್ನೂ ಮರೆತು, ದೂರ ದೇಶಗಳಿಂದ ದೆಹಲಿಗೆ ಬಂದು ಮೌನ ಸಂವಹನ ನಡೆಸುತ್ತಾ, ಭಾವಕ್ಕೆ ಆಸರೆಯಾದ ಒಂದಷ್ಟು ಗೆಳೆಯರ ಬಳಗವನ್ನೂ ನೆನೆಯುತ್ತಾನೆ

ಆಂದೋಲನ ಡೆಸ್ಕ್

Recent Posts

ಮುಡಾ ಪ್ರಕರಣ | ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ಜ.15ಕ್ಕೆ ಮುಂದೂಡಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಜನವರಿ…

6 mins ago

ಸಮ್ಮೇಳನಕ್ಕೆ ಕ್ಷಣಗಣನೆ | ಸಮ್ಮೇಳನ ಸರ್ವಾಧ್ಯಕ್ಷ ಗೊ.ರು ಚನ್ನಬಸಪ್ಪಗೆ ಆತ್ಮೀಯ ಸ್ವಾಗತ

ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…

16 mins ago

BJP ಎಂಎಲ್‌ಸಿ ಸಿ.ಟಿ ರವಿ ಬಂಧನ

ಬೆಳಗಾವಿ: ಸುವರ್ಣ ಸೌಧದಲ್ಲಿ ಗುರುವಾರ ನಡೆದ ವಿಧಾನ ಪರಿಷತ್‌ ಕಲಾಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ…

33 mins ago

ಸಿ. ಟಿ ರವಿ ಅವಾಚ್ಯ ಪದ ಬಳಕೆ ; ಸಭಾಪತಿ ಹಾಗೂ ಪೊಲೀಸರಿಗೆ ಸಚಿವೆ ದೂರು ನೀಡಿದ್ದಾರೆ: ಸಿಎಂ ಸಿದ್ದರಾಮಯ್ಯ

ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಕೆ ಮಾಡಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರ ವಿರುದ್ಧ…

47 mins ago

ಅಂಬೇಡ್ಕರ್‌ಗೆ ಅವಮಾನ | ಮೈಸೂರಲ್ಲಿ ಅಮಿತ್‌ ಶಾ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

ಮೈಸೂರು: ಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಎಸಗಿರುವುದನ್ನು ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯದ…

1 hour ago

ಸಿ.ಟಿ. ರವಿಗೆ ಮುತ್ತಿಗೆ ಹಾಕಿ ಹಲ್ಲೆಗೆ ಯತ್ನಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಬೆಂಬಲಿಗರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಬಗ್ಗೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ…

2 hours ago