ಮಡಿಕೇರಿ ದಸರಾದ ಹತ್ತು ದಿನಗಳ ಕಾಲ ನಾವೊಂದು ಕ್ಯಾಂಟಿನ್ ಮಾಡಿದ್ದೆವು. ಒಂದು ದಿನ ಗಿರಾಕಿಗಳು ಕಡಿಮೆ ಇದ್ದರಿಂದ ಕ್ಯಾಂಟಿನ್ ಬಾಗಿಲನ್ನು ರಾತ್ರಿ ಒಂದು ಗಂಟೆಗೇ ಮುಚ್ಚಿ, ಮಲಗಲು ಹೊರಡುವ ಸಮಯ. ನೆಲಕ್ಕೆ ಟಾರ್ಪಲ್, ಗೋಣಿಚೀಲ ಹಾಕಿ ನಾನು ಬೆಡ್ ನಿರ್ಮಾಣ ಮಾಡುತ್ತಿದ್ದೆ. ವೇದಿಕೆ ಬಳಿಯೇ ನಮ್ಮ ಕ್ಯಾಂಟಿನ್ ಇದ್ದರಿಂದ ಸಾಂಸ್ಕ ತಿಕ ಕಾರ್ಯಕ್ರಮ ನೋಡಲು ಬಂದಿದ್ದ ಜನರೆಲ್ಲಾ ಹೋಗಿ, ವೇದಿಕೆಯ ಕರಾಳ ಕರ್ಕಶ ಸದ್ದೆಲ್ಲವೂ ಬಂದಾಗಿ ಹೊರೆಗಲ್ಲಾ ಬಿಕೊ ಅನ್ನುತ್ತಿತ್ತು.
ಹೊರಗೆ ಇಣುಕಿ ನೋಡಿದ ನನಗೆ ಬೀದಿ ದೀಪದ ಕೆಳಗೆ ಹುಡುಗನೊಬ್ಬ ಒಂಟಿಯಾಗಿ ನಿಂತಿರುವುದು ಕಂಡಿತು. ಆ ನಡುರಾತ್ರಿ ಒಂಟಿ ಹುಡುಗನ್ನು ನೋಡಿ ನನಗೆ ಆಶ್ಚರ್ಯ. ಪಕ್ಕಕ್ಕೆ ಕರೆದು, ವಿಚಾರಿಸಲು ತೊಡಗಿದೆ. ಜೊತೆಗಿದ್ದ ಹುಡುಗರು ‘ಯಾರಾದರೂ ನಿಂತರೆ ನಮಗೇನಾಣ್ಣ.. ಬನ್ನಿ ಸುಮ್ನೆ ಮಲಗಿಕೊಳ್ಳಿ” ಎಂದು ಉಪದೇಶ ನೀಡಿದರು‘ ನಾನು ಮಾನವೀಯತೆ ಇಲ್ಲದವರು ಎಂದು ಹುಡುಗರನ್ನು ಗದರಿದೆ. ಕಾಲೇಜಿನ ರಜೆಯಲ್ಲಿ ನಮ್ಮೊಡನೆ ಕ್ಯಾಂಟಿನ್ ಕೆಲಸಕ್ಕೆ ಬಂದಿದ್ದ ಹುಡುಗರಿಗೆ ನಿದ್ರೆ ಎಳೆಯುತ್ತಿತ್ತು. ಅವರು ಸುಮ್ಮನೆ ಮಲಗಿದರು.
ಹುಡುಗನನ್ನು ಕ್ಯಾಂಟಿನಿನ ಒಳಗೆ ಕರೆದೆ. ಮುದ್ದಾದ ಹುಡುಗ. ಉಡುಗೆಯಲ್ಲೂ ಶ್ರೀಮಂತ ಮನೆಯ ಹುಡುಗನಂತೆ ಕಾಣುತ್ತಿದ್ದ. ಮನೆಯಲ್ಲಿ ಮುದ್ದಾಗಿ ಬೆಳಸಿದಂತಹಾ ಆರೋಗ್ಯಕರ ದೇಹ ಹುಡುಗನದ್ದು. ನಾವು ಹುಡುಗನನ್ನು ವಿಚಾರಿಸಿ ಉಳಿದಿದ್ದ ಎಗ್ ಫ್ರ್ತ್ಯೈಡ್ ರೈಸ್ ತಿನ್ನಿಸಿ, ಮನೆ ಎಲ್ಲಿ ಎಂದು ಕೇಳಿ ತಿಳಿದೆವು.
ಅವನನ್ನುಜೊತೆಗಿದ್ದ ಗೆಳೆಯ ಕೌಸರ್ ಡ್ರಾಪ್ ಮಾಡಿ ಇಂದು ಮನೆಗೆ ಹೋಗುವುದು, ನಾವು ಟೆಂಟಲ್ಲಿಯೇ ಮಲಗುವುದು ಎಂದು ನಿರ್ಧರಿಸಿದೆವು. ಅದರಂತೆ ಹುಡುಗನ್ನು ಕೌಸರ್ ಮಧ್ಯರಾತ್ರಿ ತನ್ನ ಬೈಕಿನಲ್ಲಿ ಕರೆದುಕೊಂಡು ಹೋದ. ನಮ್ಮ ನಿರ್ಧಾರದ ಕುರಿತು ನಮ್ಮ ಕ್ಯಾಂಟಿನ್ ಹುಡುಗರು ಅಸಮಾಧಾನ ವ್ಯಕ್ತಪಡಿಸಿದರು. ಅವನು ಯಾರೋ? ಏನೋ? ಇಷ್ಟು ರಾತ್ರಿಯಲ್ಲಿ ನೀವು ಅವನನ್ನು ಕೌಸರ್ ಅಣ್ಣನ ಜೊತೆ ಕಳುಹಿಸಿದ್ದು ಸರಿ ಅಲ್ಲ ಎಂದು ನನ್ನ ಮೇಲೆ ಅಸಮಾಧಾನ ಹೊರಹಾಕಿದರು. ಹೋಗಿ ಹದಿನೈದು ನಿಮಿಷ ಕಳೆದರೂ ಕೌಸರ್ ಕರೆ ಮಾಡದ್ದು ನೋಡಿ ನನಗೆ ಭಯ ಶುರುವಾಯಿತು.
ಇದ್ಯಾರೋ ದರೋಡೆ ಕೋರರ ತಂಡದ ಹುಡುಗ ಆಗಿದ್ದು, ಕೌಸರ್ ನನ್ನು ಕರೆದುಕೊಂಡು ಹೋಗಿ ಏನಾದರೂ ಅನಾಹುತ ಮಾಡಿದರೇ ? ಎಂದು ನನಗೆ ತಲೆನೋವು ಶುರುವಾಯಿತು. ಮೊಬೈಲ್ ತೆಗೆದು ಫೋನ್ ಮಾಡಿದೆ. ಆ ಕಡೆಯಿಂದ ಫೋನ್ ತುಂಡಾಯಿತು, ಮತ್ತೇ ಮಾಡಿದೆ. ಫೋನ್ ರಿಸಿವ್ ಆಯಿತಾದರೂ ಅವನು ಮಾತನಾಡುತ್ತಿಲ್ಲ. ಜೋರಾಗಿ ಗಲಾಟೆ ಸದ್ದು ಕೇಳಿ ಬರುತ್ತಿತ್ತು. ನನಗೆ ಆ ನಡುರಾತ್ರಿಯೂ ಚಳಿಯಲ್ಲೂ ಬೆವರು ಕಿತ್ತುಕೊಂಡು ಬರತೊಡಗಿತು.
ಪುನಃ ಆಚೆಯಿಂದ ಹತ್ತು ನಿಮಿಷ ಕಳೆದು ಕರೆಬಂತು. ಆ ಕಡೆಯಿಂದ ಬೇರೆ ಯಾರೋ ಮಾತನಾಡುತ್ತಿದ್ದರು.
‘ಇಷ್ಟೊತ್ತಿಗೆ ಹೀಗೆ ಇಲ್ಲಿಗೆ ಬರುವುದು ಸರಿಯಲ್ಲ. ಇವನನ್ನು ನಾವು ಸುಮ್ಮನೆ ಬಿಡಲ್ಲಾ’ ಎಂಬಿತ್ಯಾದಿ ಮಾತುಗಳು ಕೇಳಿಸುತ್ತಿದ್ದವು.
ಆ ಬಾಲಕ ಇತ್ತೀಚಿಗೆ ಮಡಿಕೇಇಯಲ್ಲಿ ನಡೆದ ಸರಣಿಗಳ್ಳತನದ ಮುಖ್ಯ ಬಾಲ ಆರೋಪಿಯಾಗಿದ್ದ ಹಾಗೂ ಆ ಬಾಲಕನ ಮನೆಯಲ್ಲಿ ಅವನ ತಾಯಿ ಒಂಟಿಯಾಗಿದ್ದಳು. ಅವರ ಮನೆಯ ಬಳಿ ಕೌಸರ್ನನ್ನು ಕಂಡಾಗ ಆ ಏರಿಯಾದ ಹುಡುಗನೊಬ್ಬ ಇಲ್ಲೇನೋ ಅವ್ಯವಹಾರ ನಡೆಯುತ್ತಿದೆ ಎಂದು ತಪ್ಪಾಗಿ ತಿಳಿದಿದ್ದ. ಇಷ್ಟೆಲ್ಲಾ ನಡೆದು ಕೊನೆಗೆ ಕೌಸರ್ ಮನೆಗೆ ತಲುಪಿದ್ದ. ನಿದ್ರೆ ಹಾಳಾಯಿತು ಎಂದು ಹುಡುಗರು ನನಗೆ ಬೈಯುತ್ತಾ ನಿದ್ರೆ ಹೋಗಿದ್ದರು.
ಈ ಗಲಾಟೆ ನಡುವೆ ಕ್ಯಾಂಟಿನಿನ ಒಳಗೆ ಬೀದಿ ನಾಯೊಂದು ನುಗ್ಗಿ, ನಮ್ಮ ಜೊತೆ ಮಲಗಿತ್ತು. ಅದನ್ನು ಓಡಿಸಲು ನನಗೆ ಧ್ವನಿಹೊರಡುತ್ತಿರಲಿಲ್ಲ. ನಿನ್ನೆ ಯಾರೋ ಕಥೆ ಬರಿ ಮಾರಾಯ ಅಂದಿದ್ದರು. ನನಗೆ ಈ ಹುಡುಗ ನೆನಪಾದ
ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…
ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…
ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…
ಮೈಸೂರು : ಮೈಸೂರು ಜಿಲ್ಲೆಯಾದ್ಯಂತ ಕ್ರೈಸ್ತ ಭಾಂದವರು ಕ್ರಿಸ್‌ಮಸ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ…
ಕೆ.ಆರ್.ಪೇಟೆ : ತಾಲ್ಲೂಕಿನ ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ತಮ್ಮ ಒಂದು ತಿಂಗಳ ವೇತನದಲ್ಲಿ…
ಬೆಂಗಳೂರು : ಸಾರ್ವಜನಿಕ ಸಾರಿಗೆಗಾಗಿ ಬಳಸುವ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಭೌತಿಕ ಕ್ಷಮತೆಯ ದೃಢೀಕರಣ ಪತ್ರ…