ಹಾಡು ಪಾಡು

ಇದೀಗ ಮಹಿಳೆಯರು ಇದರಲ್ಲೂ ಸಮಾನರು!

ಅಂಜಲಿ ರಾಮಣ್ಣ

ಅದೊಂದು ಜಾಹೀರಾತು. ಹರೆಯದವರು ಮೋಜಿನಲ್ಲಿ ಹೋಟೆಲ್ಲೊಂದರಲ್ಲಿ ಇರುತ್ತಾರೆ. ನಡುವೆ ಯುವತಿಯೊಬ್ಬಳು ತಲೆ ನರೆತ, ಕಟ್ಟುಮಸ್ತಾದ ಗಂಡಸಿನ ಜೊತೆ ಬೈಕ್‌ನಲ್ಲಿ ಬಂದು ಇಳಿಯುತ್ತಾಳೆ. ಕೂಡಲೇ ಅಲ್ಲಿದ್ದ ಸ್ನೇಹಿತೆ ‘ವಾವ್ ನಿನ್ನ ತಂದೆ ಎಷ್ಟು ಹಾಟ್’ ಎನ್ನುತ್ತಾ ಆತನತ್ತ ಸೆಳೆತದ ನೋಟ ನೆಡುತ್ತಾಳೆ. ಸ್ವಲ್ಪ ಹೊತ್ತಿನ ನಂತರ ಈ ಯುವತಿ ಆತ ತನ್ನ ತಂದೆಯಲ್ಲವೆಂದು ಬಾಯ್ ಫ್ರೆಂಡ್ ಎಂದೂ ಹೇಳುತ್ತಾಳೆ. ತಮ್ಮ ಪಾನೀಯ ಕುಡಿದು ದಿಲ್ ಖೋಲ್ ಕೆ ಬೋಲೋ ಎನ್ನುವ ಕಂಪೆನಿಯ ಜಾಹೀರಾತು ಮುಗಿಯುತ್ತದೆ. ಇದರ ಗುಂಗಿನಲ್ಲೇ ಪೂರ್ತಿ ದಿನ ಕಳೆದು ಹೋಗಿದ್ದಾಗ ಒಮ್ಮೆಗೆ ಎನಿಸಿದ್ದು ಈ ಜಾಹೀರಾತಿನಲ್ಲಿ ಪಾತ್ರ ಪಲ್ಲಟ ಮಾಡಿದರೆ ಹೇಗಿರುತ್ತದೆ?!

ನಡುವಯಸ್ಸಿನಲ್ಲಿಯೂ ಮೈಕಟ್ಟು ಸುಂದರವಿರುವ ಹೆಣ್ಣೊಬ್ಬಳ ಜೊತೆ ಯುವಕನೊಬ್ಬ ಬಂದಿಳಿದಾಗ ಆತನ ಸ್ನೇಹಿತ ಆಕೆಯನ್ನೇ ದಿಟ್ಟಿಸುತ್ತಾ ‘ಹೇ ನಿನ್ನ ತಾಯಿ ಎಷ್ಟು ಹಾಟ್’ ಎಂದರೆ ಹೇಗಿರುತ್ತದೆ? ಆಗ ಬಹುಶಃ ಅದನ್ನು ಲಿಂಗಾಧಾರಿತ ಹೇಳಿಕೆ ಎಂದು ಗುಲ್ಲೆಬ್ಬಿಸುತ್ತಾ ಮಹಿಳೆಯ ಘನತೆಗೆ ಚ್ಯುತಿ ತಂದ ಜಾಹೀರಾತು ಎಂದು ಅದನ್ನು ತಡೆಹಿಡಿಯಲು ನಾವೆಲ್ಲರೂ ಒಗ್ಗಟ್ಟಾಗಿ ಕೂಗುತ್ತಿದ್ದೆವು. ಹಾಗಾದರೆ ಗಂಡಸಿನ ಬಗ್ಗೆ ಹೆಣ್ಣು ಯಾವ ಪದಗಳನ್ನೇಉಪಯೋಗಿಸಬಹುದೇ? ಮಾತುಗಳಲ್ಲಿ ಆತನ ಘನತೆ ಅಡಗಿಲ್ಲವೇ ಅವಳದರ ಹಾಗೆ? ಹಿಂದೊಮ್ಮೆ ಗಂಡಸರು ಮಾತ್ರ ಅವಾಚ್ಯ,ಅಸಭ್ಯ ಮತ್ತು ಅಶ್ಲೀಲ ಪದಗಳನ್ನು ಹೀಗೆ ಸಾರ್ವಜನಿಕ ವಲಯದಲ್ಲಿ ಎಗ್ಗುಸಿಗ್ಗಿಲ್ಲದೆ ಬಳಸುತ್ತಾರೆ ಎಂದಿತ್ತು. ಆದರೀಗ ಮಹಿಳೆಯರು ತಾವು ಇದರಲ್ಲೂ ಸಮಾನರು ಎನ್ನುವುದನ್ನು ತೋರಿಸಿ ಕೊಡಲು ಹತ್ತು ಹೆಜ್ಜೆ ಮುಂದ್ದಿದ್ದಾರೇನೋ ಎನ್ನಿಸುತ್ತದೆ.

ಪದವಿ ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕಳಾಗಿ ಹೋಗುತ್ತಿದ್ದೆ. ನಿತ್ಯದ ಶೈಲಿ ಬದಲಿಸಿ ಅಪರೂಪಕ್ಕೆ ಚೊಕ್ಕಟವಾಗಿ ಅಲಂಕಾರ ಮಾಡಿಕೊಂಡು ಹೋಗಿದ್ದಾಗ ವಿದ್ಯಾರ್ಥಿಯೊಬ್ಬ ಬಾಗಿಲಿನಲ್ಲೇ ‘ವಾವ್ ಮ್ಯಾಮ್ ಯು ಆರ್ ಲುಕಿಂಗ್ ಸೆಕ್ಸಿ’ ಎಂದ. ಆ ಕ್ಷಣದಲ್ಲಿ ಯಾವುದೇ ಪ್ರತಿಕ್ರಿಯೆ ನೀಡದೆ ಅಂದಿನ ಪೀರಿಯಡ್‌ನ ಕೊನೆಯ ಹತ್ತು ನಿಮಿಷ ಆ ಸಂದರ್ಭದಲ್ಲಿ ಆ ಹುಡುಗನ ಉದ್ದೇಶಕ್ಕೆ ಸರಿ ಹೊಂದುವ ಸೆಕ್ಸಿ ಪದಕ್ಕೆ ಪರ್ಯಾಯವಾದ ಪದಗಳ ಪಟ್ಟಿ ಮಾಡಿಸಿದೆ. ವಿದ್ಯಾರ್ಥಿಗಳು ಒಟ್ಟು ೧೨ ಪದಗಳ ಹೆಕ್ಕಿ ತೆಗೆದಿದ್ದರು. ಭಾಷೆಯ ಬಳಕೆಯನ್ನು ಒಂದೆರಡು ಪದಗಳಿಗೆ ಸೀಮಿತಗೊಳಿಸಿಕೊಂಡಾಗ ಮೆದುಳಿನ ಸಾಮರ್ಥ್ಯ ಕುಗ್ಗುತ್ತದೆ ಎನ್ನುತ್ತದೆ ವಿಜ್ಞಾನ. ಆದರೆ ಇಲ್ಲಿ ಹೇಳಬೇಕಿರುವುದು ಪುರುಷರೆಡೆಗೆ ಮಹಿಳೆಯರೂ ಸಸಾರವಾದ ಪದ ಬಳಕೆಯನ್ನು ನಿಲ್ಲಿಸಿದಾಗ ಅವಳ ಘನತೆ ಹೆಚ್ಚಿ ಸಮಾನತೆ ಎನ್ನುವುದು ಇಬ್ಬರ ನಡುವೆ ಸಹಜವಾದ ಉತ್ಪನ್ನವಾಗುತ್ತದೆ.

ಅವನು ಅವಳನ್ನು ಅಸಭ್ಯವಾಗಿ ಸಂಬೋಧಿಸಬಾರದು ಎನ್ನುವ ನಿರೀಕ್ಷೆ ಇದ್ದರೆ ಅವಳೂ ಅದನ್ನು ಪಾಲಿಸ ಬೇಕು. ಎನ್ನುವುದು ಪ್ರಕೃತಿ ಸಹಜ ನಿರೀಕ್ಷೆ ತಾನೇ? ನಿಶಬ್ಧ್ ಎನ್ನುವ ಹಿಂದಿ ಸಿನೆಮಾವೊಂದರಲ್ಲಿ ಮಧ್ಯವಯಸ್ಸಿನ ಅಮಿತಾಬ್ ತನ್ನ ಮಗಳ ಸ್ನೇಹಿತೆಯೊಡನೆ ಪ್ರೀತಿಗೆ ಬೀಳುತ್ತಾನೆ. ಆಕಥೆಯನ್ನೇ ನಮ್ಮ ಸಮಾಜ ನಿರಾಕರಿಸಿ ಸಿನೆಮಾವನ್ನು ಸೋಲಿಸಲಾಗಿತ್ತು. ಹೀಗೆಲ್ಲಾದರು ಆಗತ್ತಾ ಎನ್ನುವ ಸೋಜಿಗವನ್ನೇ ತಲೆ ಮೇಲೆ ಹೊತ್ತಿದ್ದವರು ಬಹುಪಾಲು ಜನರು ಆಗ. ಈಗ ದಿನದಿಂದ ದಿನಕ್ಕೆ ತಂದೆಯೇ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಅಪ್ಪನು ಮಗಳ ಸಹಪಾಠಿಯನ್ನೇ ಪ್ರತ್ಯೇಕ ಮನೆ ಮಾಡಿಟ್ಟು ಅವಳೊಡನೆ ಸಂಸಾರ ನಡೆಸುತ್ತಿದ್ದಾನೆ. ಮಗುವನ್ನೂ ಬಿಡದೆ ಕಾಮವನ್ನು ಕಂಡಕಂಡಲ್ಲಿ ಹರಿಸುತ್ತಿದ್ದಾನೆ. ಇಂತಹ ಕಾಡ್ಗಿಚ್ಚಿಗೆ ಹುಡುಗಿಯರು ಹೀಗೆ ಬಳಸುವ ಭಾಷೆ, ಮಾತುಗಳೂ ಪೆಟ್ರೋಲಿನಂತೆ ಕೆಲಸ ಮಾಡಬಾರದು ಅಲ್ಲವೇ? ಭಾವ ಎನ್ನುವುದು ನೋಡುವವರ ಕಣ್ಣಲ್ಲಿ, ಕೇಳುವವರ ಕಿವಿಯಲ್ಲಿ ಮಾತ್ರವಲ್ಲ ಆಡುವವರ ಭಾಷೆಯಲ್ಲಿಯೂ ಅಡಗಿರುತ್ತದೆ.

ಸಲುಗೆ ಎನ್ನುವ ತಲೆಬರಹದಡಿಯಲ್ಲಿ ಉದ್ದೇಶ ಇಲ್ಲದೆಯೂ ನಾವುಗಳು ಆಡುವ ಮಾತುಗಳು, ಬಳಸುವ ಪದಗಳು ಮಹಿಳಾ ಸಮುದಾಯದ ಘನತೆಯನ್ನೇ ಕುಗ್ಗಿಸಿ ಎಲ್ಲರೂ ಹೀಗೇ ಎನ್ನುವ ಷರಾ ಬರೆಸಿಬಿಡಬಾರದು. ನಾವು ಯುವಕರು ಏನು ಮಾಡಿದರೂ ಅದೇ ‘ಸ್ಮೈಲ್ ಸ್ಟೇಟ್ ಮೆಂಟ್’ ಎನ್ನುವ ಗುಂಗಿಗೆ ಬಿದ್ದ ನಡವಳಿಕೆ ನಿಜಾರ್ಥದಲ್ಲಿ ನೋಯುತ್ತಿರುವ ಮಹಿಳೆಯರು ಅವರ ಪಾಲಿನ ನ್ಯಾಯಯುತವಾದ ಪಾಲು ಪಡೆಯಲು ತೊಡಕಾಗಬಾರದು. ಅದೇ ಜಾಹೀರಾತಿನಲ್ಲಿ ‘ವಾವ್ ನಿಮ್ಮ ತಂದೆ ಎಷ್ಟು ಹಾಟ್’ ಎನ್ನುವ ಬದಲು ‘ವಾವ್ ನಿಮ್ಮ ತಂದೆ ಎಷ್ಟು ಕೂಲ್’ ಎಂದಿದ್ದರೆ ಎನ್ನುವ ಪ್ರಶ್ನೆಯನ್ನು ಹಾಕಿಕೊಂಡೇ ಸಹಬಾಳ್ವೆಗೆ ಹೊಸ ಭಾಷ್ಯವನ್ನು ಭಾಷೆಯಿಂದಲೂ ಬರೆಯಬೇಕಿದೆ.

” ಹಿಂದೊಮ್ಮೆ ಗಂಡಸರು ಮಾತ್ರ ಅವಾಚ್ಯ ಅಸಭ್ಯ ಮತ್ತು ಅಶ್ಲೀಲ ಪದಗಳನ್ನು ಹೀಗೆ ಸಾರ್ವಜನಿಕ ವಲಯದಲ್ಲಿ ಎಗ್ಗುಸಿಗ್ಗಿಲ್ಲದೆ ಬಳಸುತ್ತಾರೆ ಎಂದಿತ್ತು. ಆದರೀಗ ಮಹಿಳೆಯರು ತಾವು ಇದರಲ್ಲೂ ಸಮಾನರು ಎನ್ನುವುದನ್ನು ತೋರಿಸಿ ಕೊಡಲು ಹತ್ತು ಹೆಜ್ಜೆ ಮುಂದಿದ್ದಾರೇನೋ ಎನ್ನಿಸುತ್ತದೆ” 

ಆಂದೋಲನ ಡೆಸ್ಕ್

Recent Posts

ಬ್ರೇಕ್ ಫೇಲ್ ಆಗಿದ್ರು ರಸ್ತೆಗಿಳಿದ ಕೆಎಸ್‌ಆರ್‌ಟಿಸಿ ಬಸ್: ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ಮೈಸೂರು: ಬ್ರೇಕ್ ಫೇಲ್ ಆಗಿದ್ರು ರಸ್ತೆಗಿಳಿದ ಕೆಎಸ್‌ಆರ್‌ಟಿಸಿ ಬಸ್ಸೊಂದು ಏಕಾಏಕಿ ಮುಂದೆ ಚಲಿಸುತ್ತಿದ್ದ ಮತ್ತೊಂದು ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿರುವ…

6 hours ago

ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ: ಮಹದೇಶ್ವರನಿಗೆ ಎಣ್ಣೆಮಜ್ಜನ ಸೇವೆ, ವಿಶೇಷ ಪೂಜೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ರಾಜ್ಯದ ಪ್ರಸಿದ್ದ ಯಾತ್ರಾ ಸ್ಥಳವಾದ ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ…

9 hours ago

ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ನಂಜುಂಡೇಶ್ವರ ಸನ್ನಿಧಿಗೆ ಹರಿದು ಬಂದ ಭಕ್ತಸಾಗರ

ನಂಜನಗೂಡು: ಇಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ಸನ್ನಿಧಿಗೆ ಭಕ್ತಸಾಗರವೇ ಹರಿದುಬಂದಿದೆ. ಇಂದು ಬೆಳಿಗ್ಗೆಯಿಂದಲೂ ಸಾವಿರಾರು…

12 hours ago

ಸುಂಟಿಕೊಪ್ಪ: ನೂತನ ಪೊಲೀಸ್‌ ವಸತಿ ಗೃಹ ಉದ್ಘಾಟಿಸಿದ ಸಚಿವ ಪರಮೇಶ್ವರ್‌

ಸುಂಟಿಕೊಪ್ಪ: ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಅಭಿವೃದ್ಧಿ ನಿಗಮ ನಿಯಮಿತದಿಂದ ಸುಂಟಿಕೊಪ್ಪದಲ್ಲಿ 3.64 ಕೋಟಿ ರೂ‌ ವೆಚ್ಚದಲ್ಲಿ…

12 hours ago

ನಂಜುಂಡೇಶ್ವರನ ದೇವಸ್ಥಾನದಲ್ಲಿ ಇನ್ಮುಂದೆ ದಿನ 24 ಗಂಟೆಯೂ ಪ್ರಸಾದ ವಿತರಣೆ

ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ದೇವಾಲಯದಲ್ಲಿ ಇನ್ನು ಮುಂದೆ ದಿನದ 24 ಗಂಟೆಯೂ ಪ್ರಸಾದ ವಿತರಣೆ ಮಾಡಲಾಗುತ್ತದೆ. ಮಧ್ಯಾಹ್ನದ…

12 hours ago

ಗುಂಡಾಲ್ ಜಲಾಶಯದಲ್ಲಿ ಹುಲಿ ಮೃತ ದೇಹ ಪತ್ತೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಂಡಾಲ್ ಜಲಾಶಯದಲ್ಲಿ ನೀರಿನಲ್ಲಿ ಬೃಹತ್ ಗಾತ್ರದ…

12 hours ago