ಹಾಡು ಪಾಡು

ಬರೆದವವನಿಗೆ ಬಹುಮಾನದ ಹಂಗು ಬೇಕೆ?

ನಾನು ಸಣ್ಣವನಿದ್ದಾಗ ನಮ್ಮ ಅಪ್ಪನೂ ಹಲವಾರು ಕತೆಗಳನ್ನು ಹೇಳುತ್ತಿದ್ದ. ಅವೆಲ್ಲವೂ ಒಂದೊಂದು ಬೇರೆ ಬೇರೆ ರೀತಿಯ ಕತೆಗಳು. ನನ್ನ ಅಪ್ಪನಿಗೆ ಪ್ರಶಸ್ತಿ ಬಿಡಿ, ನನ್ನಪ್ಪ ಕತೆ ಹೇಳ್ತಾನೆ ಅಂತಾನೂ ನಮ್ಮ ಬೀದಿಯ ಅಕ್ಕಪಕ್ಕದ ಮನೆಯವರಿಗೂ ಗೊತ್ತಿರಲಿಲ್ಲ. ಅವನ ವಾರಗೆಯವರಿಗೆ ಗೊತ್ತಿರಬಹುದು. ಆದರೆ ನನ್ನಪ್ಪ ಮನಸಾದಾಗೆಲ್ಲ ಕತೆ ಹೇಳುತ್ತಲೇ ಇರುತ್ತಿದ್ದ. ಅದೇನೋ ನಾನೀಗ ಕತೆಯನ್ನು ಬರೆಯುತ್ತೇನೆ. ಕತೆಯ ಅಂದ ಚೆಂದದ ಬಗೆಗೆ ಅಷ್ಟೇನೂ ಗೊತ್ತಿಲ್ಲ.

ಅನಿಸಿದ್ದೋ, ನೋಡಿದ್ದೋ, ಅನುಭವಕ್ಕೆ ದಕ್ಕಿದ್ದನ್ನೋ ಕುರಿತು ಬರಿತೀನಿ. ಒಂದೆರಡು ಪತ್ರಿಕೆಗಳಲ್ಲೂ ಪ್ರಕಟವಾಗಿವೆ. ಆದರೆ ಪ್ರಶಸ್ತಿ ಪಡೆದ ಕತೆ ಅಂತ ಹಣೆಪಟ್ಟಿ ಹೊತ್ತಿರುವ ಕತೆಯನ್ನು ಓದುತ್ತೇನೆ. ಖಂಡಿತವಾಗಿಯೂ ನನಗೆ ಅವು ಏನೂ ಅನ್ನಿಸದೆ ನಾನೂ ಹಿಂಗೆ ಬರಿತೀನಿ. ವಸ್ತು ವಿಷಯ ಬೇರೆ ಇರಬಹುದು ಅನ್ನಿಸುತ್ತದೆ. ಯಾವ ಮಾನದಂಡದ ಆಧಾರದಲ್ಲಿ ಪ್ರಶಸ್ತಿ ಘೋಷಿಸಿರಬಹುದು ಗೊತ್ತಿಲ್ಲ. ಪ್ರಶಸ್ತಿಯ ಹಿಂದಿರುವ ಕಾರಣಗಳೇನಿರಬಹುದೆಂಬ ಕುತೂಹಲವಷ್ಟೇ. ಅದು ನನ್ನ ಮಿತಿಯೂ ಇರಬಹುದೇನೋ ಅದು ನನಗೆ ತಿಳಿದಿಲ್ಲ. ನಾನು ನನ್ನ ಒಂದು ಕತೆಯನ್ನು ಪ್ರಕಟಿಸಬಹುದೆಂದು ಮಾಸಪತ್ರಿಕೆಯೊಂದಕ್ಕೆ ಕಳಿಸಿದ್ದೆ. ಒಂದೂವರೆ ತಿಂಗಳ ನಂತರ ನಾನು ‘ನನ್ನ ಕತೆ ಪ್ರಕಟವಾಗುತ್ತದೋ , ಇಲ್ಲವೋ ಈ ಬಗ್ಗೆ ನೀವು ಏನೂ ಹೇಳಿಲ್ಲ’ ಎಂದು ಕೇಳಿದ ಮೂರು ದಿನಗಳ ನಂತರ ‘ನಿಮ್ಮ ಕತೆಯನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ’ ಎಂದರು.

ಕತೆ ಚೆನ್ನಾಗಿಲ್ಲದಿರಬಹುದು ಬಿಡಿ. ಆದರೆ ಪ್ರಶಸ್ತಿ ಪಡೆದ ಕತೆಗಳು ಎಂದು ಲೇಬಲ್ ಹೊತ್ತ ಕತೆಗಳು ನನಗೆ ಅರ್ಥವೂ ಆಗದೆ ಏನನ್ನೂ ‘ಉಕ್ಕಿಸಿಲ್ಲ’. ಇದಕ್ಕೆ ಬಹುಮಾನ ಕೊಡುವು ದಕ್ಕಿಂತ ಮೆಚ್ಚುಗೆ ಗಳಿಸಿದ ಕತೆಯೇ ಚೆನ್ನಾಗಿದೆ ಎಂದೆನಿಸಿದ್ದೂ ಇದೆ. ಕೆಲವು ಸಲ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಕತೆಯೇ ನನ್ನನ್ನು ಆವರಿಸಿ, ಅಲುಗಾಡಿಸಿ, ಇದಕ್ಕೆ ಬಹುಮಾನ ಬರಲೇಬೇಕಿತ್ತು ಅನ್ನಿಸಿದ್ದಿದೆ. ಇವೆಲ್ಲವೂ ನನ್ನ ಲೆಕ್ಕಾಚಾರದ ಮಾತುಗಳು. ಆದರೆ ಪ್ರಶಸ್ತಿ ಪಡೆದ ಕತೆ, ಕವಿತೆ, ಲೇಖನ ಅಂತ ಹಣೆ ಪಟ್ಟಿ ಇರುವ ಕತೆಯೊಂದನ್ನು ಓದಿದ ಗ್ರಾಮೀಣ ಪ್ರದೇಶದ ಅಥವಾ ನಗರದ ಪ್ರದೇಶದ ಬರಹಗಾರರು ಪ್ರಶಸ್ತಿ ಬರಲಿಲ್ಲ ಎಂದು ತಮಗೆ ಬರೆಯು ವುದೇ ಗೊತ್ತಿಲ್ಲವೇನೋ ಎಂದು, ತಿಳಿದು ಬರೆಯದೇ ಉಳಿದುಬಿಟ್ಟರೇ ಏನು ಗತಿ? ಹಾಗೆಂದು ಪ್ರಶಸ್ತಿ ಪಡೆದವರ, ನೀಡುವವರ ವಿರೋಽ ನಾನಲ್ಲ. ಅದು ಹೇಗೆ ಒಬ್ಬನೇ ಕತೆಗಾರನ ಕತೆ, ಕವಿತೆಗೆ ಪದೇ ಪದೇ ಪ್ರಶಸ್ತಿಗಳು ಸಿಗುತ್ತವೆ ಎಂಬ ಸಂದೇಹ ಇಂದಿನ ದಿನಮಾನದಲ್ಲಿ ಎಲ್ಲರನ್ನೂ ಕಾಡುತ್ತಿದೆ. ಯಾವ ಮಾನದಂಡದ ಮೇಲೆ ಪ್ರಶಸ್ತಿ ನೀಡಲಾಗುತ್ತದೆ ಎಂದು ನನಗೆ ವಿವರಣೆ ಬೇಕಿದೆ. ಅದರ ಹೊರತು, ನನಗಂತೂ ಪ್ರಶಸ್ತಿ ಬೇಕಾಗಿಲ್ಲ. ಆ ಆಸೆಯೂ ಇಲ್ಲ. ನೂರಾರು ಕತೆ ಹೇಳಿದ ನನ್ನ ತಾತ ಪಳ್ಳಿನಂಜಯ್ಯ, ನನ್ನ ಅಪ್ಪ ಮಹದೇವಯ್ಯ ಇವರಿಗೇ ಪ್ರಶಸ್ತಿ ಸಿಕ್ಕಿಲ್ಲದ ಮೇಲೆ ನಾಲ್ಕು ಕತೆ ಬರೆದ ನಾನು ಎಷ್ಟರವನು?

– ಮಧುಕರ ಮಳವಳ್ಳಿ

madhukaramalavalli@gmail.com

ಆಂದೋಲನ ಡೆಸ್ಕ್

Recent Posts

ಸೆಲ್ಫಿ ವಿಡಿಯೋ ಮಾಡಿ ಆಟೋ ಚಾಲಕ ಆತ್ನಹತ್ಯೆಗೆ ಯತ್ನ

ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…

7 hours ago

ಮಂಡ್ಯದಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು

ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…

9 hours ago

ರಾಜ್ಯದಲ್ಲಿ ಮೂರು ದಿನ ದಟ್ಟ ಮಂಜು ಕವಿದ ವಾತಾವರಣ: ತೀವ್ರ ಚಳಿ ಮುನ್ಸೂಚನೆ

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…

9 hours ago

ಯೂರಿಯಾ ಗೊಬ್ಬರ ತಿಂದು 11 ಮೇಕೆಗಳು ಸಾವು

ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…

9 hours ago

ಚಾಮರಾಜನಗರ| ಹುಚ್ಚುನಾಯಿ ದಾಳಿಯಿಂದ 7 ಮಂದಿಗೆ ಗಾಯ

ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…

10 hours ago

ದುಬಾರಿ ಗಿಫ್ಟ್‌ ತೆಗೆದುಕೊಳ್ಳುವುದು ತಪ್ಪಾಗುತ್ತದೆ: ಸಂಸದ ಯದುವೀರ್‌ ಒಡೆಯರ್‌

ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…

10 hours ago