ಹಾಡು ಪಾಡು

ಹಸಿರ ನಡುವಿನ ಮಳೆಯ ಫ್ಯಾಂಟಸಿ

ಮಹಾರಾಷ್ಟ್ರದ ಮಾಲ್ಶೇಜ್

ಸಿನಿಮಾದಲ್ಲಿ ತೋರಿಸುವ ಫ್ಯಾಂಟಸಿ ಲೋಕ ಕಣ್ಣೆದುರು ನಿಂತುಬಿಟ್ಟರೆ ಹೇಗೆನಿಸಬಹುದು? ನಿಸರ್ಗ ಸೃಷ್ಟಿಸಿದ ಬೆರಗನ್ನು ಕಣ್ಣ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿಕೊಳ್ಳುವ ಸಲುವಾಗಿ, ಹನಿ ಮಳೆಯನ್ನು ಕಾಣುವುದಕ್ಕಾಗಿ ಮಹಾರಾಷ್ಟ್ರದ ಮಾಲ್ಶೇಜ್‌ಗೆ ಪಯಣ ಹೊರಟೆವು.

ಮಧ್ಯಾಹ್ನದ ಎರಡರ ಹೊತ್ತಾಗಿದೆಯೆಂದು ಗಡಿಯಾರವಷ್ಟೇ ಹೇಳುತ್ತಿತ್ತು. ಮಾಲ್ಶೇಜ್ ಘಟ್ಟ ಮಾತ್ರ ಮುಂಜಾವಿನಲ್ಲೇ ಮುಳುಗಿತ್ತು. ಬೀಸಿದ ಗಾಳಿ ನೀರು ಚಿಮುಕಿಸುತ್ತಿತ್ತು. ನೋಡನೋಡುತ್ತಲೇ ಮಳೆ ಶುರುವಾಗೇಬಿಟ್ಟಿತು! ಕೋವಿಯಂತೆ ಉದ್ದವಿದ್ದ ಕೋಲಿಗಿಂತ ತುಸು ದಪ್ಪವಿದ್ದ ‘ಕಾಸ್ಟ್ಲಿ’ ಕೊಡೆಯನ್ನು ಬಿಡಿಸಿ, ಕಂಬವನ್ನು ಆಶ್ರಯಿಸಿದಂತೆ ಅಪ್ಪಿಹಿಡಿದು ಹೆಜ್ಜೆ ಹಾಕಿದೆವು. ಜಿಟಿ ಜಿಟಿ ಮಳೆಯಲ್ಲಿ ಆ ಘಟ್ಟದಲ್ಲಿ ಕೊಡೆ ಹಿಡಿದು ನಡೆವ ನಡಿಗೆ ಇದೆಯಲ್ಲಾ, ಆಹಾ! ಮನಸ್ಸಿಗೂ ಮಂಜಿಗೂ ಪ್ರೀತಿಯ ಸಮರ. ಸುತ್ತಣ ಹಸಿರನ್ನೊಮ್ಮೆ ನೋಡಬೇಕೆಂಬ ಮನಸ್ಸನ್ನು ಮಂಜು ಅದೆಷ್ಟು ಸತಾಯಿಸುತ್ತದೆ! ಅತ್ತ ಮಳೆ ನಿಲ್ಲುವುದಿಲ್ಲ, ಇತ್ತ ಕವಿದ ಮಂಜು ಕರಗುವುದಿಲ್ಲ.

ತಂಪು ಹವೆ, ಮೈಗಂಟುವ ಚಳಿಯ ನಡುವೆ ಮಳೆಯ ರಭಸಕ್ಕೆ ಹಿಡಿದ ಕೊಡೆಯೇ ನೃತ್ಯ ಮಾಡುವ ಪ್ರಸಂಗವಂತೂ ಅಲ್ಲಿ ಸಾಮಾನ್ಯ. ಹಾಗೇ ಅಲ್ಲಲ್ಲಿ ಪುಟ್ಟ ಪುಟ್ಟ ಝರಿಗಳು ಕಾಣುತ್ತವೆ. ಕತ್ತು ಮೇಲೆತ್ತಿದರೆ ಬಂಡೆಯ ನಡುವೆ’ ಇದು ನನ್ನ ದಾರಿ’ ಎನ್ನುತ್ತಾ ಬೆಡಗು ಬಿನ್ನಾಣದಿಂದ ಹರಿವ ಝರಿಗಳವು. ಬಂಡೆಯ ಕೆಲ ಕಡೆಗಳಲ್ಲಿ ಹಸಿರು ಹಬ್ಬಿತ್ತು. ಒಂದಷ್ಟು ದೂರ ನಡೆದ ಮೇಲೆ ಮಳೆಯೊಂದಿಗೆ ನಡೆಯೋಣ ಅನಿಸಿತು. ಅಷ್ಟು ಹೊತ್ತಿಗಾಗಲೇ ತೊಟ್ಟ ಬಟ್ಟೆಗಳೆಲ್ಲ ಮುಕ್ಕಾಲು ಭಾಗ ಒದ್ದೆಯಾಗಿತ್ತು. ಮಳೆಯಲ್ಲಿ ನೆನೆಯಬೇಕು, ಆದರೆ ಬಟ್ಟೆ ಒದ್ದೆಯಾಗಬಾರದು ಎಂಬ ವಿಚಿತ್ರ ಲಾಜಿಕ್ ನಮ್ಮದು. ಹಾಗಾಗಿ ಮಳೆಯ ಸಲುವಾಗಿಯೇ ಬ್ಯಾಗಿನಲ್ಲಿದ್ದ ರೈನ್‌ಕೋಟ್ ತೊಟ್ಟು, ಕೊಡೆ ಮಡಚಿಟ್ಟು ನಡೆದೆವು.

ಮಾಲ್ಶೇಜ್ ಘಟ್ಟದ ಪಕ್ಕವಿರುವ ಬಂಡೆಯ ತುದಿ ತಾಕಿ ಬರುವ ಮಳೆಯ ದಪ್ಪ ಹನಿಗಳು ಬಿದ್ದೊಡನೆ ಕಲ್ಲೇ ಬಿದ್ದಂತ ಅನುಭವ. ನಮ್ಮಂತೆ ಅದೆಷ್ಟೋ ಮಂದಿ ಮಳೆಯಲ್ಲಿ ನೆನೆಯುತ್ತಾ ಸಂಭ್ರಮಿಸುತ್ತಿದ್ದರು. ಕಂಡರೆ ಕಾಣದಂತಿರುವ ಹಸಿರು, ಎಲ್ಲಿಂದಲೋ ಧುತ್ತೆಂದು ಬಂದು ನಿಂತ ಮಂಜು, ಬೆನ್ನಿಗೆ ಬಡಿಯುತ್ತಿರುವ ಕಲ್ಲು ಮಳೆ? ಸೃಷ್ಟಿಯ ಸೌಂದರ್ಯ ಸಹಜ ಸುಂದರ.

ಕೀರ್ತಿ ಬೈಂದೂರು  ( keerthisba2018@gmail.com )

ಆಂದೋಲನ ಡೆಸ್ಕ್

Recent Posts

ಕೊಡಗು ಜಿಲ್ಲೆಯಲ್ಲಿ ಮನೆ ಗಣತಿ ಕಾರ್ಯ ಚುರುಕು

ನವೀನ್ ಡಿಸೋಜ ಜಿಲ್ಲೆಯಲ್ಲಿ ಸು.೧೭೪,೧೧೪ ಕುಟುಂಬಗಳು, ಗಣತಿ ಕಾರ್ಯಕ್ಕೆ ಗುರುತು, ೭,೩೭೯ ಕುಟುಂಬಗಳಿಂದ ಸ್ವಯಂ ಗಣತಿ ಮಡಿಕೇರಿ: ನಮ್ಮ ಗಣತಿ,…

1 hour ago

ಏರುತ್ತಿರುವ ತಾಪಮಾನ; ತಂಪು ಪಾನೀಯಗಳಿಗೆ ಮೊರೆ

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆಯಲ್ಲಿ ೩೫ರಿಂದ ೪೦ ಡಿಗ್ರಿ ಉಷ್ಣಾಂಶ, ಬಿಸಿಗಾಳಿಗೆ ಹೈರಾಣಾದ ಜನರು ಗುಂಡ್ಲುಪೇಟೆ: ಬೇಸಿಗೆಯ ಬಿಸಿಲಿನ ತಾಪ ದಿನೇದಿನೇ…

1 hour ago

ಆಗ ಟೈಲರ್ ಕಾಲ, ಈಗ ಆನ್ ಲೈನ್ ಕಾಲ…

ಮಧುಕರ ಮಳವಳ್ಳಿ (ಈ ಲೇಖನಕ್ಕೆ ಕೃತಕ ಬುದ್ಧಿಮತ್ತೆಯ ಚಿತ್ರ ಬಳಸಲಾಗಿದೆ) ಹಬ್ಬಕ್ಕೆ ಯಾರಿಗೆ ತಾನೆ ಹೊಸ ಬಟ್ಟೆ ಇಷ್ಟ ಇಲ್ಲ…

1 hour ago

ಸೈಕಲ್ಲು, ಸಿರೀಂದ್ರ ಮತ್ತು ನನ್ನ ನಟರಾಜ ಸರ್ವೀಸು

ಭಾರತಿ ಬಿ.ವಿ. ಅವನೆದುರು ಮಾನ ತೆಗೆದ ಸೈಕಲ್ಲಿನ ಸಹವಾಸ ನನಗೆ ಮತ್ತೆ ಬೇಕೆನ್ನಿಸಲಿಲ್ಲ ನಾವೆಲ್ಲ ‘ನಟರಾಜ ಸರ್ವೀಸ್’ನಲ್ಲೇ ಬದುಕು ಕಳೆದವರು.…

2 hours ago

ತರುಣ ತಲೆಮಾರಿನ ಕೈಯಲ್ಲಿ ನೆರೆಯ ನೇಪಾಳದ ಚುಕ್ಕಾಣಿ…

ಶುಭಾ ಖಟಾವಕರ ಮ್ಹೆತ್ರಸ್ ನೇಪಾಳದ ಕನಸುಗಣ್ಣಿನ ಯುವಜನಾಂಗದ ಈ ಹೊಸ ಸರ್ಕಾರ ಈಗ ಇಟ್ಟಿರುವ ಹೆಜ್ಜೆಗಳು ಯಶಸ್ವಿಯಾದರೆ ದಕ್ಷಿಣ ಏಷ್ಯಾದಲ್ಲಿ…

2 hours ago

ದೇವನೂರಿಗೆ ಆಗಮಿಸಿದ ಪಂಪ

ಪಂಪ ಪ್ರಶಸ್ತಿ ಪಡೆಯುತ್ತಿರುವ ಮಹಾದೇವರಿಗೆ ಎಲ್ಲಾ ಮನೆಗಳ ಜೋತಮ್ಮದೀರು ಹರಸಲಿ ರಾಜೇಂದ್ರ ಚೆನ್ನಿ ೧ ತಮ್ಮ ಒಟ್ಟು ಬರಹಗಳು ಇಷ್ಟು ಕಡಿಮೆ…

2 hours ago