ನಂಜನಗೂಡು ಸೀಮೆಯೇ ದೇಸೀ ನುಡಿಗಟ್ಟಿನ ಬರಹಗಾರ್ತಿ ಕುಸುವಾ ಆರಹಳ್ಳಿ ಯವರ ಚೊಚ್ಚಲ ಕಾದಂಬರಿ ಇಂದು ಬೆಳಗ್ಗೆ ಹತ್ತೂವರೆಗೆ ಮೈಸೂರಿನ ನಟನ ರಂಗಶಾಲೆಯಲ್ಲಿ ಬಿಡುಗಡೆಯಾಗಲಿದೆ. ಈ ಹೊತ್ತಲ್ಲಿ ಅವರು ‘ಹಾಡುಪಾಡು’ ವಿಗೆ ಬರೆದ ವಿಶೇಷ ಬರಹ ಇಲ್ಲಿದೆ.
‘‘ನಾನು ತರಲೆ ಹೌದು. ಆದರೆ ಕಾದಂಬರಿ ಗಂಭೀರವಾಗಿದೆೋಂ ಎಂದು ನೀವು ಓದಿಯೇ ಹೇಳಬೇಕು…’’
ಕುಸುಮಾ ಆಯರಹಳ್ಳಿ
ಆ ಹೊತ್ತಿಗೆ ನಾನು ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದೆ. ಜೊತೆ ಜೊತೆಗೇ ಮೈಸೂರು ಆಕಾಶವಾಣಿಯಲ್ಲಿ ಪಾರ್ಟ್ ಟೈಂ ಕೆಲ್ಸವನೂ ಮಾಡ್ತಿದ್ದೆ. ಅಲ್ಲಿನ ಲೈಬ್ರರಿುಯಲ್ಲಿ ಭೈರಪ್ಪನವರ ಪುಸ್ತಕಗಳಿದ್ದವು. ಅದಾಗಲೇ ಕಾಲೇಜು ಲೈಬ್ರರಿಯಲ್ಲಿ ಇದ್ದ ‘‘ಗೃಹಭಂಗ’’ ಓದಿ ಭೈರಪ್ಪನವರು ತಲೆಯಲ್ಲಿ ಗುಂಯ್ಗುಡುತ್ತಿದ್ದರುʼ ದಾಟುʼ ಕೂಡ ನಂಗಿಷ್ಟವಾಗಿತ್ತು. ಆದರೆ ಆಕಾಶವಾಣಿಯ ಲೈಬ್ರರಿಯಲ್ಲಿ ಸಿಕ್ಕ ‘‘ತಂತು’’ ನನ್ನನ್ನು ಇನ್ನಿಲ್ಲದಂತೆ ಆವರಿಸಿಕೊಂಡಿತ್ತು. ಆಗ ಕಾಲೇಜಿಗಿಂತಲೂ ಚಳವಳಿ ಅಂತೆಲ್ಲ ಓಡಾಡುತ್ತಿದ್ದ ನನಗೆ ಅದನ್ನು ಓದಲು ಹೇಳಿದವರು ಆಕಾಶವಾಣಿಯ ಜಿ. ಕೆ. ರವೀಂದ್ರಕುವಾರ್. ೯೦೦ ಪುಟಗಳ ಆ ಕಾದಂಬರಿ ಓದಿ ತಿಂಗಳುಗಟ್ಟಲೆ ಅದೇ ಗುಂಗಿನಲ್ಲಿದ್ದೆ. ಮೈಸೂರು ಆಕಾಶವಾಣಿಯ ರೌಂಡ್ ಶೇಪಿನ ಕಟ್ಟಡದಲ್ಲಿ ನಾನು ಗಿರಂತ ತಲೆತಿರುಗಿದಂತೆ ಓಡಾಡುತ್ತಿದ್ದೆ. ‘‘ಏನಾಯ್ತ್ರೀ ನಿಮಗೆ?’’ ಅಂತಿದ್ದರು ಜಿಕೆಆರ್. ‘‘ಇಂತದ್ದೊಂದು ಕಾದಂಬರಿ ಬರ್ದು ಆಮೇಲ್ ಸತ್ರೂ ಪರ್ವಾಗಿಲ್ಲ ನೋಡಿ ಸರ್’’ ಅನ್ನುತ್ತಿದ್ದೆ. ಆ ವಾತಾಡಿದ ೨೦ ವರ್ಷಗಳ ನಂತರ ನಾನು ಕಾದಂಬರಿ ಬರೆದು ಮುಗಿಸಿದ್ದೇನೆ. ಜಿಕೆಆರ್ ಈಗ ಇಲ್ಲವಾಗಿದ್ದಾರೆ.
ಇಂತದನ್ನು ಓದು, ಇಲ್ಲಿಂದ ಆರಂಭಿಸು ಅಂತ ಹೇಳುವ ಅಕ್ಷರಸ್ಥರ ಕುಟುಂಬವಾಗಿರಲಿಲ್ಲ ನನ್ನದು. ‘‘ಇದೊಂದು ಶಾಸ್ತ್ರ ಪೂರೈಸಲು ಒಂದು ಸಾಹಿತ್ಯದ ಪುಸ್ತಕ ಬೇಕಾಗಿದೆ ಕೊಡಿ’’ ಅಂತ ಯಾರಾದರೂ ಕೇಳಿದರೂ ಶಾಸ್ತ್ರಕ್ಕೂ ಒಂದು ಪುಸ್ತಕ ಹುಡುಕೋದು ಕಷ್ಟವಿದ್ದ ಮನೆ ಮತ್ತು ಗ್ರಾಮದಲ್ಲಿದ್ದೆ ನಾನು. ಈಗಿನಂತೆ ಪಂಚಾಯತಿ ಲೈಬ್ರರಿಗಳಿರಲಿಲ್ಲ. (ಈಗ ಇದ್ರೂ ಉಪೋಂಗಿಸ್ತಿರೋದು ಅಷ್ಟ್ರಲ್ಲೇ ಇದೆ ಬಿಡಿ) ಕಾಲೇಜಿಗೆ ಬಂದ ಮೇಲೆೆಯೇ ನನಗೆ ಪುಸ್ತಕಗಳು ಸಿಕ್ಕಿದ್ದು. ಕಾದಂಬರಿಗಳೇ ಹೆಚ್ಚು ಸಿಕ್ಕವು. ಸಿಕ್ಕಿದ್ದೆಲ್ಲಾ ಓದಿದೆ. ಹಾಗೆ ಸಿಕ್ಕಿದ್ದರಲ್ಲಿ ಭೈರಪ್ಪನವರದೇ ಕಾದಂಬರಿಗಳು ಸಿಕ್ಕವಷ್ಟೆ. ಆದರೆ ಗೃಹಭಂಗ, ದಾಟು ಮತ್ತು ತಂತು ಇಷ್ಟವಾಗಲು ನನ್ನ ಹಳ್ಳಿ, ನನ್ನೊಳಗಿದ್ದ ಜರ್ನಲಿಸ್ಟಿಕ್ ಅಪ್ರೋಚ್ ಮತ್ತು ಚಳವಳಿಯ ಹಿನ್ನಲೆಗಳೂ ಕಾರಣವಿದ್ದೀತು ಅಂತ ಈಗ ಅನಿಸುತ್ತಿದೆ. ಆಮೇಲೆ ಓದಿದ್ದರಲ್ಲಿ ಬಹಳ ಪ್ರಭಾವಿಸಿದ ಕಾದಂಬರಿ ರಾವ್ಬಹದ್ದೂರರ ‘‘ಗ್ರಾಮಾಯಣ’’. ಸಿನೆಮಾ ಮತ್ತು ಕತೆಗಳಲ್ಲಿ ರಮ್ಯವಾಗಿ ಚಿತ್ರಿಸಲ್ಪಡುತ್ತಿದ್ದ ಹಳ್ಳಿಗಳನ್ನು ನೋಡಿ ‘‘ಇಲ್ಲ, ವಾಸ್ತವ ಹಾಗಿಲ್ಲ ಇಲ್ಲಿ’’ ಅಂತ ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ. ಹಾಗೆ ವಾಸ್ತವಕ್ಕೆ ಹತ್ತಿರ ಅಂತ ನಂಗನಿಸಿದ್ದು ಗ್ರಾಮಾಯಣ ಕಾದಂಬರಿ. ಅದರ ಗಾಢಪ್ರಭಾವದಿಂದ ಇಂದಿಗೂ ನನಗೆ ತಪ್ಪಿಸಿಕೊಳ್ಳಲಾಗಿಲ್ಲ. ಇದಾದ ಮೇಲೆ ನಾನು ದೇವನೂರರನ್ನು ಓದಿದೆ. ಅದಂತೂ ನಮ್ಮದೇ ಸೀಮೆಯ ಭಾಷೆ, ಇವತ್ತಿಗೆ ನಾನೂ ನನ್ನಂತಾ ಅನೇಕರೂ ನಮ್ಮ ನೆಲದ ಭಾಷೆಯನ್ನು ಆತ್ಮವಿಶ್ವಾಸದಿಂದ ಕತೆ ಕಾದಂಬರಿಗಳಲ್ಲಿ ತರಲು ದೇವನೂರರ ಕತೆಗಳೇ ಕಾರಣ
ಕಾದಂಬರಿ ಬರೆಯಬೇಕು ಎಂಬುದು ಹಳೆಯ ಕನಸಾಗಿತ್ತು. ಆದರೆ ಧಾರಾವಾಹಿ ಬರವಣಿಗೆ ಮಾಡುತ್ತಿದ್ದರಿಂದ ಅದು ಬಹಳ ವರ್ಷ ಸಾಧ್ಯವಾಗಲಿಲ್ಲ. ಅಥವಾ ಕತೆ ಒಳಗೇ ಹರಳಾಗುತ್ತಿತ್ತು. ಯಾವ ಕತೆಯೂ ಸುಮ್ಮನೇ ಕತೆಯಾಗುವುದಿಲ್ಲ, ಬಹುಶಃ ವಿಶ್ವಚೈತನ್ಯ ಬರೆಯುವವರಿಂದ ಅದನ್ನು ಬರೆಸಲು ತನ್ನದೇ ರೀತಿಯಲ್ಲಿ ರಾಜಕೀಯವಾಡುತ್ತದೆ ಅನಿಸುತ್ತದೆ. ನಾನು ಬರೆಯುತ್ತೇನೆ ಅಂತ ಯಾರೇ ಹೇಳಿದರೂ ಅದು ಸುಳ್ಳು. ನನ್ನ ಮಟ್ಟಿಗಂತೂ ಸುಳ್ಳು. ಬರೆಯುವ ಪ್ರಕ್ರಿಯೆಯಲ್ಲಿ ಪ್ರತಿಭೆ ಎಂಬುದು ಒಂದು ಸಣ್ಣಭಾಗವಷ್ಟೆ. ಉಳಿದ ಮ್ಯಾಜಿಕ್ ತಂತಾನೇ ಸಂಭವಿಸಬೇಕು. ಅದಕ್ಕೊಂದು ಅದೃಷ್ಟ ಬೇಕು. ಆ ಅದೃಷ್ಟ ನನ್ನದಾಯಿತು ಅಂತ ಭಾವಿಸುತ್ತೇನೆ.
ಬರೆಯುವ ವಿಷಯದಲ್ಲಿ ಅದೃಷ್ಟ ಎಂಬುದನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಾದರೆ ಕಾದಂಬರಿ ಬರೆಯಬೇಕು. ಅದೊಂದು ವಿವರಿಸಲಾರದ ಪ್ರಯಾಣ. ಒಂದು ಅಂದಾಜಿನ ಸ್ಕೆಲಿಟನ್ ಇಟ್ಟುಕೊಂಡು ಸುಮ್ಮನೆ ಶುರುಮಾಡುವುದಷ್ಟೆ ಕೆಲಸ. ಆಮೇಲೆ ಅದು ತಂತಾನೇ ನಡೆಸಿಕೊಂಡು ಹೋಗುತ್ತದೆ. ಹಾಗೆ ನಡೆಸಿಕೊಂಡು ಹೋಗುವಾಗ ಎಷ್ಟೊಂದು ಸಂಗತಿಗಳು, ವಸುಧೇಂದ್ರ ಅವರು ಹೇಳುವಂತೆ ಯಾವ್ಯಾವುದೋ ಚುಕ್ಕೆಗಳು ಸಾಲಾಗುತ್ತವೆ, ಯಾವ ಚುಕ್ಕೆಯನ್ನು ಎಲ್ಲಿಟ್ಟು ಎಲ್ಲಿಂದ ಎಲ್ಲಿಗೆ ಗೆರೆ ಎಳೆದರೆ ರಂಗೋಲಿ ಯಾವ ರೂಪ ತಾಳುತ್ತದೆ ಎಂಬುದು ಬರೆಯುವ ಕ್ಷಣದಲ್ಲಿ ಸಂಭವಿಸುವ ಮ್ಯಾಜಿಕ್. ಅದು ಸಂಭವಿಸಿದರೆ ಅದೇ ಅದೃಷ್ಟ. ಬರೆಯುವಾಗ ತಂತಾನೇ ಅದು ಘಟಿಸಿ ಬರೆಯುವವರನ್ನೆ ಅರೆರೆ ಹೀಗಾ್ಂತಾ? ಅಂತ ಅಚ್ಚರಿಗೆ ದೂಡುತ್ತದಲ್ಲಾ?ಆ ಚಮತ್ಕಾರ ಉಂಟು ವಾಡುವ ಭಾವವನ್ನು ಯಾವುದಕ್ಕೆ ಹೋಲಿಸುವುದು ಅಥವಾ ಹೇಗೆ ವರ್ಣಿಸುವುದು ತಿಳಿಯುವುದಿಲ್ಲ. ನಾನು ಅಂದುಕೊಂಡಿದ್ದ ಕಾದಂಬರಿ ಬೇರೆ, ನಾನು ಬರೆದದ್ದೇ ಬೇರೆ!
ಬರೆಯುವುದೇ ಯಾರೋ ಓದಲಿ ಅಂತ ನಿಜ. ಆದರೆ ಬರೆಯುವಾಗ ಓದುಗರಾಗಲಿ, ಅಥವಾ ಯಾವ ಬೇರೆ ಲೆಕ್ಕಾಚಾರಗಳಾಗಲಿ ಎದುರು ಬರುವುದಿಲ್ಲ. ಅದೊಂದು ಅತ್ಯಂತ ಖಾಸಗೀ ಗಳಿಗೆ. ಅಲ್ಲಿ ಮೂರನೆ ವ್ಯಕ್ತಿಗೆ ಜಾಗವೇ ಇಲ್ಲ. ಕಾದಂಬರಿಗಷ್ಟೇ ಅಲ್ಲ. ಎಲ್ಲ ಬರಹಗಳಿಗೂ, ಕತೆಗೂ ಇದು ಅನ್ವಯಿಸುತ್ತದೆ. ಆದರೆ ಕಾದಂಬರಿಯ ಪ್ರಯಾಣ ಸ್ವಲ್ಪ ಧೀರ್ಘವಾದ್ದರಿಂದ ಅದು ಕೊಡುವ ಲೌಕಿಕದಂತಹ ಒಂದು ಸ್ಥಿತಿಯಲ್ಲಿಯೂ ಹೆಚ್ಚು ಕಾಲ ಇರುವ ಅದೃಷ್ಟ ಇರುತ್ತದೆ. ಅದು ನಿಜಕ್ಕೂ ಕಾದಂಬರಿಕಾರರಿಗೆ ವಾತ್ರ ಸಿಗುವ ಸುಖ. ನನ್ನ ಮೊದಲ ಕಾದಂಬರಿ ಬರೀತಾ ನಾನು ಆ ಸುಖವನ್ನು ಸ್ಪರ್ಷಿಸಿದ್ದೇನೆ. ಅದೊಂದು ಚಟದ ಹಾಗೆ. ಬಹುಶಃ ಮೇಲಿಂದ ಮೇಲೆ ಕೆಲವರು ಕಾದಂಬರಿ ಬರೀತಾನೇ ಹೋಗುವದಕ್ಕೂ ಬರೆಯುವ ಸುಖಸ್ಪರ್ಷದ ಚಟವೇ ಕಾರಣವಿರಬಹುದು ಅಂತ ನನಗೀಗ ಗುಮಾನಿ. ಹಾಗೆ ಬರೆುುಂತ್ತಾ ನಾವು ನಮ್ಮದಲ್ಲದ, ಆದರೆ ನಮ್ಮದೇ ಆದ ಲೋಕದಲ್ಲಿ ಜೀವಿಸುತ್ತಿರುತ್ತೇವೆ. ಕಾದಂಬರಿ ಮುಗಿದಮೇಲೆ ದಿನವೂ ಸಿಗುತ್ತಿದ್ದ ಪಾತ್ರಗಳ ಜೊತೆಗಿನ ಮುಖಾಮುಖಿ ಮುಕ್ತಾಯವಾದಾಗ, ಆ ಬೀಳ್ಕೊಡುಗೆ ಬಹಳ ತ್ರಾಸದ ಕೆಲಸ. ಜಾತ್ರೆಯ ಕಾಗಡಿಯಾಟದಲಿ ಮೇಲೆಹೋಗಿ ತೇಲಿ ಕೆಳಗೆ ಬಂದು ಇಳೀತೀವಲ್ಲ?ಅಂತಾ ಭಾವ. ಆ ಪ್ರಯಾಣ ಮತ್ತೆ ಅಲಭ್ಯ. ಅಸಾಧ್ಯ!.
ಕಾದಂಬರಿಯ ವಸ್ತುವೇನು ಎಂಬ ಬಗ್ಗೆ ಒಂದು ಹಂತದ ಐಡಿಯಾ ಇತ್ತು. ಆದರೆ ಗಾತ್ರದ ಬಗ್ಗೆ ನನಗೆ ಯಾವ ಪೂರ್ವತಯಾರಿಯೂ ಇರಲಿಲ್ಲ. ಬರೆಯುತ್ತಾ ಬರೆಯುತ್ತಾ ‘ದಾರಿ’ ತಂತಾನೇ ತೆರೆದುಕೊಳ್ಳುತ್ತಾ ಹೋಯಿತು. ಇಷ್ಟು ದೊಡ್ಡ ಕಾದಂಬರಿ ಬರೆದೆ ಅಂದ್ರೆ ನಾನು ಭಯಂಕರ ಶ್ರದ್ಧಾಳು ಇರಬೇಕು ಅಂತೆಲ್ಲ ಭಾವಿಸಬೇಡಿ ಮತ್ತೆ. ನನ್ನಂತಾ ಸೋಮಾರಿ ಇಡೀ ಕರ್ನಾಟಕ ಹುಡುಕಿದರೂ ಸಿಗಲಿಕ್ಕಿಲ್ಲ. ಧಾರವಾಹಿಯ ಮಾತು ಬೇರೆ. ಶೂಟಿಂಗ್ ನಡೀಲೇಬೇಕು. ಬರೀಲೇಬೇಕು. ಅಂಕಣಗಳು ಕೂಡಾ ಡೆಡ್ಲ್ಯನ್ ಹೊತ್ತಿಗೆ ಕೊಡಲೇಬೇಕು. ಇವೆಲ್ಲ ಒತ್ತಡಕ್ಕೆ ಬರಲೇಬೇಕಾದವು. ಆದರೆ ಕತೆ ಕಾದಂಬರಿ ಎಲ್ಲ ಹಾಗಲ್ಲವಲ್ಲ? ಅದಕ್ಕೆ ನಿಜದ ಒಳಒತ್ತಡವೇ ಬೇಕು. ಇದನ್ನು ಹಲ್ಲುನೋವಿನಂತೆ, ಹೊಟ್ಟೆನೋವಿನಂತೆ ಅದು ಕಾಡಬೇಕು. ಇನ್ನು ಸಾಧ್ಯವೇ ಇಲ್ಲ ಅನ್ನುವಷ್ಟು ಡ್ಯಾಮಿನ ಕಟ್ಟೆೊಂಡೆದ ನೀರಂತೆ ನುಗ್ಗಿಬರಬೇಕು. ಇಷ್ಟೆಲ್ಲ ಆಗಿಯೂ ಕೂತು ಬರೆಯಬೇಕು . ಅದಕ್ಕೊಂದು ಶಿಸ್ತಂತೂ ಬೇಕೇಬೇಕಲ್ಲ. ಹಾಗಾಗಿಯೇ ದಿನಕ್ಕೆ ೫೦೦ ಪದ ಕನಿಷ್ಟ ಬರೆಯಲೇಬೇಕು ಅಂತ ತೀರ್ಮಾನಿಸಿಕೊಂಡಿದ್ದೆ. ಹಗಲು ರಾತ್ರಿಗಳ ವ್ಯತ್ಯಾಸವೇ ತಿಳಿಯುತ್ತಿರಲಿಲ್ಲ. ಮೂರು ಸಾವಿರ, ಐದು ಸಾವಿರ ಪದವೂ ಬರೆದದ್ದಿದೆ. ಮೂರು ತಿಂಗಳು ಬಿಟ್ಟು ನೋಡಿದರೆ ಸಿಕ್ಕಾಪಟ್ಟೆ ದೊಡ್ಡ ಕಾದಂಬರಿಯಾಗಿಬಿಟ್ಟಿದೆ. ಗಾತ್ರ ಬಿಡಿ, ಸರಿಯಾದ್ದೊಂದು ಕಾದಂಬರಿ ಆಗಿದೆಯೋ ಇಲ್ಲವೋ ಅಂತಾದರೂ ಯಾರಾದರೂ ಹೇಳಬೇಕಲ್ಲ? ನಮ್ಮ ಓ ಎಲ್ ಎನ್ ಸರ್, ಜೋಗಿ ಸರ್, ದಾದಾಪೀರ್, ಮಾಲಿನಿ , ಸಿಂಧು, ಸಂಯುಕ್ತ ,ಶಾಂತಿ ಹೀಗೆ ಬೇರೆ ಬೇರೆ ವಯೋಮಾನದ ಮತ್ತು ಹಿನ್ನೆಲೆಯವರಿಗೆ ಕೊಟ್ಟೆ. ಹೆಚ್ಚು ಸಮಯ ತೆಗೆದುಕೊಳ್ಳದೇ ಅವರೆಲ್ಲ ಓದಿ ಕೊಟ್ಟ ಪ್ರತಿಕ್ರಿಯೆ ನನ್ನ ಧೈರ್ಯ ಹೆಚ್ಚಿಸಿತು. ವಿವೇಕ್ ಶಾನಭಾಗ್ ಮತ್ತು ಓ ಎಲ್ ಎನ್ ಇನ್ನು ಅದನ್ನು ಮುಚ್ಚಿಡು. ಆರು ತಿಂಗಳು ತಲೆಹಾಕಬೇಡ ಅಂದಿದ್ದರು. ನನಗೋ ಚಡಪಡಿಕೆ, ಮತ್ತೆ ಮತ್ತೆ ಓದೋದು. ಒಂದು ಹಂತದಲ್ಲಿ ಬಿಟ್ಟುಬಿಟ್ಟೆ. ಪ್ರಕಾಶಕರಾದ ವಸುಧೇಂದ್ರ ಅವರು ಓದಿ ಗಾತ್ರ ಕಡಿಮೆಗೊಳಿಸಲು ಹೇಳಿದರು. ಕೆಲವು ಸಲಹೆಗಳನ್ನೂ ಕೊಟ್ಟರು. ಆದರೆ? ನಾನು ಅದನ್ನು ಮತ್ತಷ್ಟು ಹಿಗ್ಗಿಸಿ ಕೂರಿಸಿದೆ. ಬರೋಬ್ಬರಿ ಹತ್ತು ಸಾವಿರ ಪದಗಳಷ್ಟು! ಅದು ನನ್ನ ತಪ್ಪಾಗಿರಲಿಲ್ಲ. ಕತೆ ಕೆಲವು ಕಡೆ ಓಡಿಬಿಟ್ಟಿತ್ತು. ಅದರ ಗತಿ ನಿಧಾನಗೊಳಿಸಬೇಕಿತ್ತು. ಪಾಪ ವಸುಧೇಂದ್ರರಿಗೆ ಮತ್ತೆ ಪೇಚು! ಮತ್ತೆ ಕಷ್ಟ ಪಟ್ಟು ಗಾತ್ರ ತಗ್ಗಿಸಬೇಕಾ್ಯಿತು. ಸ್ವಲ್ಪ ಕಿರಿಕಿರಿ ಅನಿಸಿದರೂ. ಕಾದಂಬರಿ ಬರೆಯುವುದಕ್ಕಿಂತಲೂ ತಿದ್ದುವಿಕೆಯಲ್ಲಿಯೇ ಹೆಚ್ಚು ಸರಿಯಾಗಿ ರೂಪುಗೊಳ್ಳುತ್ತದಾ ಅಂತಲೂ ಅನಿಸಿತು. ಮನೆ ಕಟ್ಟಿದ ಮೇಲಿನ ಇಂಟೀರಿಯರ್ ಡಿಸೈನಿನ ಹಾಗೆ ಅದು. ಆ ಸಮಯದಲ್ಲಿ ವಿವೇಕ್ ಶಾನಭಾಗ್ ಆಗ ಮತ್ತೆ ಮತ್ತೆ ಮತ್ತೆ ನೆನಪಾದರು. ಅದೇ ಸಮಯದಲ್ಲಿ ಯಾತಕ್ಕೋ ಒಡಲಾಳ ಓದುತ್ತಿದ್ದೆ. ಒಂದು ಪದವೂ ಹೆಚ್ಚಿಲ್ಲ, ಕಡಿಮೆ ಇಲ್ಲ ಎಂಬಂತಿರುವ ಕೃತಿಯನ್ನು ಅವರು ಬರೆದದ್ದು ಹೆಚ್ಚೋ ತಿದ್ದಿದ್ದೋ? ಗೊತ್ತಿಲ್ಲ. ಕಾದಂಬರಿಗೆ ಬರೆಯುವ ಖುಷಿಯಷ್ಟೇ ತಿದ್ದುವ ಕಸುಬುಗಾರಿಕೆಯೂ ಬೇಕೇನೋ. ಅದನ್ನೆಲ್ಲ ಕಲಿಯಬೇಕಿದೆ ಇನ್ನೂ. ಆದರೆ ಹಿರಿಯರು ಆರು ತಿಂಗಳು ಬಿಡು ಅಂದದ್ಯಾಕೆ ಅಂತ ಆರು ತಿಂಗಳಾದ ಮೇಲೆ ಗೊತ್ತಾ್ಯಿತು!!
ಎಲ್ಲಾ ಸರಿ. ಹೀಗೆ ಊಟ, ನಿದ್ದೆ ಯಾವ್ದರ ಮೇಲೂ ಗ್ಯಾನವಿಲ್ದಂಗೆ ೨೪ ಗಂಟೆ ಬಾಲ್ಕನಿಯಲಿ ಕೂತು ತಿಂಗಳುಗಳ ಕಾಲ ನಾನು ಬರೆಯುವಾಗ ನಮ್ಮಮ್ಮನಿಗೆ ಪಾಪ ಡೌಟು. ಇದೆಷ್ಟು ಧಾರಾವಾಹಿ ಬರೀತಿರಬಹುದು? ಯಾಪಾಟಿ ದುಡ್ಡು ಬರಬಹುದು ಅಂತ. ನಾನು ಧಾರಾವಾಹಿ ಬರೆೋಂದು ಬಿಟ್ಟು ಕಾಲವಾಗಿತ್ತು. ಹಾಗೇನಾದರೂ ಬರೀತಿದ್ದರೆ ಇಂತದ್ದು ನೋಡಿ ಅಂತಾದರೂ ಹೇಳ್ತಿದ್ದೆ. ಅದೂ ಹೇಳಿರಲಿಲ್ಲ. ಕಡೆಗೆ ನನ್ನ ತಂಗಿ ಕಾದಂಬರಿ ಬರೀತಿದಾಳೆ ಯಾರೂ ತೊಂದರೆ ಕೊಡಬೇಡಿ ಅಂತ ತಾಕೀತು ಮಾಡಿದಾಳೆ. ಪಾಪ ನಮ್ಮಮ್ಮ, ನನ್ನ ಎರಡು ಮಕ್ಕಳು ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಟ್ಟಿದ್ದರು. ಬರೆದಾಯ್ತುು ಅಂದವಳು ಪುನಃ ತಿದ್ದಲು ಕೂತಾಗ ‘‘ಈಗ ಹೆಚ್ಚಾಯ್ತು ಅಂತ ಕಡಿಮೆ ವಾಡ್ತಿದಾಳೆ’’ ಅಂದ ತಂಗಿಗೆ ನಮ್ಮಮ್ಮ ‘‘ಹೆಜ್ಗೆ ಯಾಕ್ ಬರೀಬೇಕಿತ್ತು? ಮೊದಲೇ ಕೇಳ್ಕೊಂಡು ಎಷ್ಟು ಬೇಕೋ ಅಷ್ಟು ಬರೀಬೇಕು ತಾನೇ?’’ ಅಂದ್ರಂತೆ. ಹ ಹ್ಹ. ಹಾಗನ್ನುತ್ತಲೇ ಮೆಟ್ಟಿಲತ್ತಿಕೊಂಡು ಬಂದು ಕೂತ ಜಾಗಕ್ಕೇ ಆಗಾಗ ಕಾಫಿ ತಂದು ಕೊಡಲು ಮರೆಯುತ್ತಿರಲಿಲ್ಲ. ಈಚೆಗೆ ಪುಸ್ತಕ ಬಂದ ಮೇಲೆ ನಮ್ಮಮ್ಮ ‘‘ಇದಕ್ಕೆಷ್ಟು ದುಡ್ಡು ಕೊಟ್ರು’’ ಅಂತ ಕೇಳಿದರು. ಆಮೇಲೆ ‘‘ಇಷ್ಟೊ ಒಂದು ಬರ್ದೆಯಲ್ಲ. ಸಾಕು, ಯಾವ್ದಾಧ್ರೂ ಧಾರಾವಾಹಿ ಒಪ್ಕೋ’’ ಅಂದುಬಿಟ್ರು. ಮನೇಲಿ ಕಾದಂಬರಿಕಾರ್ತಿಗಿಂತ , ಧಾರಾವಾಹಿ ಡೈಲಾಗ್ ರೈಟರಿನ ಕಿಮ್ಮತ್ತೇ ಜಾಸ್ತಿಯಾಗಿದೆ ನೋಡಿ ಪಿಚ್ಚೆನಿಸಿತು.
ನಮ್ಕಡೆ ಹೆಂಗಸರು ತಮ್ಮ ಕಷ್ಟಸುಖ ಹೇಳಿಕೊಳ್ಳುವಾಗ ‘‘ಕೂಸು, ನನ್ ಕತೆಯೋಳಂದ್ರ ಒಂದ್ ಕತೆ ಪುಸ್ತಕ ಬರೀಬೌದು ಕವ್ವ ನೀನು’’ ಅಂತ ಶುರುವಾಡ್ತಾರೆ. ಅಂದರೆ ಪ್ರತಿಯೊಬ್ಬರ ಬಳಿಯೂ ಕತೆಗಳು, ಕಾದಂಬರಿಗಳಿರ್ತವೆ. ಎಲ್ಲರೂ ಒಂದಲ್ಲಾ ಒಂದು ರೀತಿ ಬದುಕಿನ ಕಷ್ಟ ಸುಖಗಳನ್ನು ಕಂಡವರೇ ಅಲ್ವ? ಆದರೆ ಎಲ್ಲರಿಗೂ ಬರೆಯಲು ಆಗುವುದಿಲ್ಲ. ಬರೆಯಲು ಬಲ್ಲವರಿಗೆ ಕೂಡ ನೆಮ್ಮದಿಯಿಂದ ಕೂತು ಕಾದಂಬರಿ ಪೂರೈಸುವಷ್ಟು ಸಮಯಾವಕಾಶ ಇರುವುದಿಲ್ಲ. ಅಂತಾ ಅವಕಾಶ ಸಿಕ್ಕದ್ದಕ್ಕಾಗಿ ನಾನು ಬರೆದಿದ್ದೇನೆ ಅಷ್ಟೆ. ಹೆಚ್ಚುಗಾರಿಕೆ ಏನೂ ಇಲ್ಲ.
ಪರಿಚಯದಲ್ಲಿ, ಆಹ್ವಾನ ಪತ್ರಿಕೆಗಳಲ್ಲಿ ನನ್ನ ಹೆಸರಿನ ಮುಂದೆ ಅಂಕಣಕಾರ್ತಿ. ಲೇಖಕಿ, ಇತ್ಯಾದಿ ಹೇಳುವಾಗೆಲ್ಲ. ಛೇ ಯಾವತ್ತಪ್ಪಾ ನಾನು ಕಾದಂಬರಿಕಾರ್ತಿ ಅನಿಸ್ಕೊಳೋದು ಅಂತ ಒದ್ದಾಡ್ತಿತ್ತು ಜೀವ. ಇನ್ನು ಆ ಚಿಂತೆ ಇಲ್ಲ ಬಿಡಿ. ಒಂದು ಕಾದಂಬರಿ ಬರ್ದಾಯ್ತಲ್ಲ . ಹ ಹ್ಹ.
ಎಚ್.ಡಿ.ಕೋಟೆ : ತಾಲೂಕಿನ ಚೌಡಹಳ್ಳಿ ಗ್ರಾಮದ ಪಕ್ಕದಲ್ಲೇ ಇರುವ ಜಮೀನೊಂದರಲ್ಲಿ ಹಸುವಿನ ಮೇಲೆ ದಾಳಿ ನಡೆಸಿರುವ ಹುಲಿ ಹಸುವನ್ನು ಕೊಂದು…
ಮೈಸೂರು : ಮೈಸೂರು ಮೂಲದ ಗೃಹಿಣಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಉತ್ತರ ಕರ್ನಾಟಕ ಮೂಲದ ಪೊಲೀಸ್ ಕಾನ್ಸ್ ಟೇಬಲ್ ನೊಂದಿಗೆ…
ಮೈಸೂರು : ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹನುಮ ಜಯಂತ್ಯೋತ್ಸವ ಸಮಿತಿ ವತಿಯಿಂದ ಶನಿವಾರ ನಡೆದ ಏಳನೇ ವರ್ಷದ ಹನುಮೋತ್ಸವ ಮೆರವಣಿಗೆಯು…
ಮನೆಯಲ್ಲಿ ರಾತ್ರಿಯಿಡೀ ಕೂಡಿಹಾಕಿ ಹಲ್ಲೆ ನಡೆಸಿದ ಮೂವರು ಆರೋಪಿಗಳು; ಹನಿಟ್ರ್ಯಾಪ್ ಶಂಕೆ, ತನಿಖೆ ಚುರುಕು ಮಡಿಕೇರಿ : ಸಾಮಾಜಿಕ ಜಾಲತಾಣದಲ್ಲಿ…
ಮೈಸೂರು : ನಗರದಲ್ಲಿ ಯುನಿಟಿ ಮಾಲ್ ನಿರ್ಮಿಸಲು ನಮ್ಮ ವಿರೋಧ ಇಲ್ಲ. ಆದರೆ, ಸರ್ಕಾರ ಗೊಂದಲವಿಲ್ಲದ ಸ್ಥಳ ನೀಡದೆ ದಿಕ್ಕು…
ಮೈಸೂರು : ಚುಮು ಚುಮು ಚಳಿಯ ನಡುವೆ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಗ್ರಾಹಕರ ಆಕರ್ಷಿಸುವ ಹಾಗೂ ಗ್ರಾಮೀಣ ಸೊಗಡಿನ…