ಹಾಡು ಪಾಡು

ಅಂಬೇಡ್ಕರ್ ಜೀವಜಲವನ್ನು ಹರಿಯುವಂತೆ ಮಾಡುವುದು ನಮ್ಮ ಕೆಲಸವಾಗಿದೆ

ಕೋಟಿಗಾನಹಳ್ಳಿ ರಾಮಯ್ಯ

ಇದು ಕದಡಿದ ನೀರಿನಂತಹ ಕಾಲ. ಈ ಮಬ್ಬಿನ ವಾತಾವರಣದಲ್ಲಿ ಬಹುರೂಪಿ ರಂಗಾಯಣದಲ್ಲಿ ‘ಬಹುರೂಪಿ ಅಂಬೇಡ್ಕರ್’ ಎಂಬ ಆಶಯ ವಾಕ್ಯದಲ್ಲಿ ಅಂಬೇಡ್ಕರ್ ಸುತ್ತ ಇರುವಂತಹ ಹಲವು ಮಗ್ಗಲುಗಳು, ಆಯಾಮಗಳು ಇರುವಂತಹ ನಾಟಕಗಳ ಪ್ರದರ್ಶನವಿದೆ. ಅದರಲ್ಲಿ ಒಂದು, ನಾನು ಆರು ವರ್ಷಗಳ ಹಿಂದೆ ರಂಗಪ್ರಯೋಗ ಮಾಡಿದಂತಹ ‘ಅಂಬೇಡ್ಕರ್ ಕೊಲಾಜ್’ ಅನ್ನು ಮತ್ತೆ ಇಲ್ಲಿ ರಂಗಾಯಣ ರೆಪರ್ಟರಿಯಲ್ಲಿ ಚಿದಂಬರ ಜಂಬೆಯವರು ಮಾಡ್ತಾರೆ ಅನ್ನೋ ಕಾರಣಕ್ಕಾಗಿ ನನ್ನ ಅರಿವನ್ನು ವಿಸ್ತರಿಸಿಕೊಳ್ಳಲು ಬಂದಿದ್ದೇನೆ.

ram ಯಾಕೆ ನಾನು ಬಾಬಾ ಸಾಹೇಬ್ ಅಂಬೇಡ್ಕರ್ ನಾಟಕ ಬರೆದೆ ಎಂದು ನೋಡುವುದಾದರೆ, ಅಂಬೇಡ್ಕರರನ್ನು ವಿವಿಧ ಆಯಾಮಗಳಲ್ಲಿ ಹಲವು ರೂಪದಲ್ಲಿ ನೋಡಬಹುದು ಎಂದು ತೋರಿಸಿಕೊಡಲುಕೆಂದೇ ‘ಅಂಬೇಡ್ಕರ್ ಸುತ್ತ’ ನಾಟಕ ಕಟ್ಟಿಕೊಟ್ಟೆ. ಈ ಸಮಕಾಲೀನ ವರ್ತಮಾನದಲ್ಲಿ ಯಾಕೆ ಈ ನಾಟಕ ಆಯ್ಕೆ ಮಾಡಿಕೊಂಡಿದ್ದಾರೆಂದು ಗೊತ್ತಿಲ್ಲ. ನಾನು ನಾಟಕ ಕಟ್ಟಿದ ರೀತಿ ಹೇಗಿತ್ತೆಂದರೆ, ಕಳಪೆ ಬೌದ್ಧಿಕತೆ ಇರುವ, ಅರೆಬರೆ ಬೌದ್ಧಿಕತೆ ಹೊಂದಿದ ಮತ್ತು ಈಗಾಗಲೇ ಹಲವು ಚಿಂತನಾಶಾಲೆಗಳಲ್ಲಿ ಬೆಂದು ಬಂದಂತಹ ಇಟ್ಟಿಗೆಗಳಂತಿರುವ ವಾಹಕವಾದ ನಟರಿಗೆ ಅಂಬೇಡ್ಕರರನ್ನು ಅರ್ಥ ಮಾಡಿಸಬೇಕಿತ್ತು. ಅದಕ್ಕಾಗಿ ಎಲ್ಲರೂ ಸೇರಿ ಅಂಬೇಡ್ಕರರನ್ನು ಓದುವುದು ಒಳ್ಳೆಯದೆನಿಸಿತು. ಎಲ್ಲರೂ ಓದಿ, ಕಟ್ಟಿ, ಸಫಲರಾದರು.

ನಾನು ನೋಡಿದಷ್ಟು ಆ ನಾಟಕ ಒಪ್ಪತಕ್ಕದಾಗಿತ್ತು. ಚೊಕ್ಕವಾಗಿತ್ತು. ಆದರೆ ಅಂದಿನ ಕಾಲಕ್ಕೆ ಯಾರ ಕಣ್ಣಿಗೂ ಬೀಳದೆ ಕಾಡ ಕುಸುಮದಂತೆ ಮಣ್ಣಿಗೆ ಬಿತ್ತು. ಅದನ್ನು ಮತ್ತೆ ಈ ಸಂದರ್ಭದಲ್ಲಿ ತರುವುದು ಸವಾಲು ಎನ್ನಿಸಿತು. ಎಪ್ಪತ್ತು ವರ್ಷಗಳ ಕಾಲ ಅಂಬೇಡ್ಕರ್ ಸುತ್ತ ಕಟ್ಟಿದ ಕಥನಗಳು, ಕಟ್ಟು ಕಥನಗಳು, ಕಾದಂಬರಿಗಳು ಮಿಥ್ಯ ಕತೆಗಳು, ಜನಪದ ರೂಪದ ಸಣ್ಣಸಣ್ಣ ಝರಿಗಳನ್ನು ಪಕ್ಕಕ್ಕಿಟ್ಟ ಹುಸಿಯಾಗಿ ಕಟ್ಟಿದ್ದಾರೆ. ಮಟ್ಟಸವಾಗಿ ಕಟ್ಟಿ ಜುಳುಜುಳು ಹರಿಯುವ ಜ್ಞಾನಗಂಗೆಯನ್ನು ಮುಟ್ಟದಂತೆ ಮಾಡಿದ್ದಾರೆ. ಆದುದರಿಂದ ಅವನ್ನೆಲ್ಲ ಒಡೆದು ಹಾಕಿ, ನಿಜವಾದ ಅಂಬೇಡ್ಕರ್ ಜೀವಜಲವನ್ನು ಹರಿಯುವಂತೆ ಮಾಡುವುದು ನಮ್ಮ ಕೆಲಸವಾಗಿದೆ. ನನ್ನನ್ನು ಕೆಲವರು ಅಂಬೇಡ್ಕರ್ ಭಂಜಕನೆಂದು ನೋಡುವ ಸಾಧ್ಯತೆಯಿದೆ. ಉಳಿದವರು ಒಪ್ಪಲಿ ಬಿಡಲಿ, ನನ್ನ ಅಂಬೇಡ್ಕರರನ್ನು ನಾನು ಕಂಡುಕೊಳ್ಳುತ್ತೇನೆ. ಅದಕ್ಕಾಗಿ ನಾನು ಪ್ರಯೋಗಶೀಲನಾಗಿದ್ದೇನೆ. ಹಾಗಾಗಿ ನನ್ನ ಎಲ್ಲ ಯೋಚನೆಗಳನ್ನು ಕಾರ್ಯಗತಗೊಳಿಸಿದ್ದೇನೆ.

ಕದಡಿದ ನೀರಿನಲ್ಲಿ ಮೀನಿನ ಬೇಟೆ, ಮನುಷ್ಯನ ಡಾರ್ಕ್ ಸೈಡನ್ನು ತೆರೆದಿಡುತ್ತದೆ. ಹರಿಯುವ ನೀರಿನಲ್ಲಿ ಮೀನಿನ ಚಲನೆಯನ್ನು ಕಂಡುಹಿಡಿಯುವುದು ಒಂಟಿಕಾಲಿನಲ್ಲಿ ನಿಲ್ಲುವ ಕೊಕ್ಕರೆ ಮಾತ್ರ. ಅಂಬೇಡ್ಕರ್ ಅವರು ನೂರಾರು ಬಗೆಯ ಮೀನಿನ ರಾಶಿಯಿರುವ ಸರೋವರ ಎಂದುಕೊಳ್ಳಬಹುದು. ಈ ಎಪ್ಪತ್ತು ವರ್ಷಗಳಲ್ಲಿ ಆ ಸರೋವರವನ್ನು ಜನರು ಅವರಿಗೆ ಬೇಕಾದಂತೆ ಕಲುಷಿತಗೊಳಿಸಿದ್ದಾರೆ. ಕೆಲವು ಸುಂದರವಾದ ಕೆಲಸಗಳೂ ನಡೆದಿವೆಯೆಂಬುದನ್ನು ತಳ್ಳಿ ಹಾಕುವಂತಿಲ್ಲ. ಅಂಬೇಡ್ಕರ್ ಈಗ ಕದಡಿದ ನೀರಾಗಿದ್ದಾರೆ. ಜನರು ತಮ್ಮ ತಮ್ಮ ಬಲೆಗಳನ್ನು ಹಾಕಿ ಬೇಟೆಯಾಡುತ್ತಿದ್ದಾರೆ. ದೇಶ ಇನ್ನೂ ಸರಿಯಾಗಿ ಅಂಬೇಡ್ಕರರನ್ನು ಅರ್ಥ ಮಾಡಿಕೊಂಡಿಲ್ಲ. ಚಾಣಾಕ್ಷ ನಿರ್ಲಕ್ಷ್ಯವನ್ನು ತೋರಿಸಿದ್ದಾರೆ. ಅಂಬೇಡ್ಕರ್ ಕೊಲಾಜ್ಸೃ ಷ್ಟಿಯಾಗಿದ್ದೇ ಸಮೂಹ ಓದಿನ ಮೂಲಕ. ಇತಿಹಾಸದಲ್ಲಿ ಮುಚ್ಚಿಹೋದ ಅಧ್ಯಾಯವನ್ನು ಮತ್ತೆ ತೆರೆದಿಡುವ ಪ್ರಯತ್ನ ಮಾಡುತ್ತಿದ್ದೇವೆ. ರೆಪರ್ಟರಿಯಲ್ಲಿರುವವರು ಅಂಬೇಡ್ಕರರನ್ನು ಅರ್ಥಮಾಡಿಕೊಳ್ಳಲು ಸಿದ್ಧರಿದ್ದಾರೆ. ನನಗೆ ಹಾಡು ರಾಜಕೀಯ ತಿಳಿವಳಿಕೆಯನ್ನು ದಾಟಿಸುವ ಮಾಧ್ಯಮವಾಗಿದೆ. ಹಾಗಾಗಿ ಅಂತಹ ಹಾಡುಗಳನ್ನು ಇದರಲ್ಲಿ ಕಟ್ಟಿಕೊಟ್ಟಿದ್ದೇನೆ.

(ಕೋಟಿಗಾನಹಳ್ಳಿ ರಾಮಯ್ಯ ಬರೆದ ‘ಅಂಬೇಡ್ಕರ್ ಕೊಲಾಜ್’ ನಾಟಕ ಈ ಬಾರಿಯ ರಂಗಾಯಣ ಬಹುರೂಪಿಯ ಮುಖ್ಯ ಆಕರ್ಷಣೆ)

” ದೇಶ ಇನ್ನೂ ಸರಿಯಾಗಿ ಅಂಬೇಡ್ಕರರನ್ನು ಅರ್ಥ ಮಾಡಿಕೊಂಡಿಲ್ಲ. ಎಲ್ಲರೂ ಚಾಣಾಕ್ಷ ನಿರ್ಲಕ್ಷ್ಯವನ್ನು ತೋರಿಸಿದ್ದಾರೆ.”

ಆಂದೋಲನ ಡೆಸ್ಕ್

Recent Posts

‘ಹೆರಿಟೇಜ್ ಟೂರಿಸಂ ಅಭಿವೃದ್ಧಿಗೆ ಯೋಜನೆ’

ಟಾಂಗಾ ಸವಾರಿ ವಲಯ ನಿರ್ಮಾಣಕ್ಕೆ ೨.೭೧ ಕೋಟಿ ರೂ. ಮಂಜೂರು ಕೇಂದ್ರದ ಸ್ವದೇಶ ದರ್ಶನ ಯೋಜನೆಯಡಿ ಗ್ರೀನ್ ಟೂರ್‌ಗೆ ಆದ್ಯತೆ …

7 mins ago

ಜನವರಿ.3ರಿಂದ ನೈಸರ್ಗಿಕ ಕೃಷಿ ಕಾರ್ಯಾಗಾರ

ಹಾಸನ ಜಿಲ್ಲೆ ಹಳೇಬೀಡಿನ ಪುಷ್ಪಗಿರಿ ಮಠದಲ್ಲಿ ಆಯೋಜನೆ: ಡಾ.ಅನಂತರಾವ್ ಮಂಡ್ಯ: ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ವತಿಯಿಂದ…

11 mins ago

ತಾಯಿ ನಂಜನಗೂಡಿನ ನಂಜಿ, ಮಗ ನಿಕೋಲಸ್ ವಿಶ್ವವಿಖ್ಯಾತ ಕ್ಯಾಮೆರಾಮ್ಯಾನ್

ಸ್ಟ್ಯಾನ್ಲಿ ‘ನನ್ನಮ್ಮ ರೋಸ್ಮಂಡ್ ವಾನಿಂಗನ್ ಆಂಗ್ಲ ಮಹಿಳೆಯಾಗಿದ್ದರೂ, ಅವಳು ನಂಜನಗೂಡಿನ ನಂಜಿಯಾಗಿದ್ದಳು. ಬಿಸಿಲ್ ಮಂಟಿ ಗ್ರಾಮಸ್ಥರು ಆಕೆಗೆ ಇಟ್ಟಿದ್ದ ಹೆಸರಾಗಿತ್ತದು.…

20 mins ago

ಉಪಟಳ ನೀಡುತ್ತಿದ್ದ ಚಿರತೆ ಸೆರೆ : ನಿಟ್ಟುಸಿರು ಬಿಟ್ಟ ಜನತೆ

ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…

10 hours ago

ಮೃಗಾಲಯದ ಬೇಟೆ ಚೀತಾ ‘ಬ್ರೂಕ್’ ಇನ್ನಿಲ್ಲ

ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…

11 hours ago