ಆಂದೋಲನ ಪುರವಣಿ

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಬೆಳೆಗಾರ ‘ಅರಿಶಿಣ ಅಲಕ್ಷ್ಯ’

ಸೌಮ್ಯ ಹೆಗ್ಗೆಡಹಳ್ಳಿ 

ಚಾಮರಾಜನಗರ ಜಿಲ್ಲೆಯಲ್ಲಿ ಅರಿಶಿಣ ಬೆಳೆಗಾರರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಮನಗಂಡು ಅರಿಶಿಣ ಕೃಷಿಯಲ್ಲಿ ರೈತರು ಎದುರಿಸುತ್ತಿರುವ ಅನಾನುಕೂಲಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ರೈತ ಸಮುದಾಯ ಒಗ್ಗೂಡಿ, ಕರ್ನಾಟಕ ರಾಜ್ಯ ಅರಿಶಿಣ ಬೆಳೆಗಾರರ ಸಹಕಾರ ಸಂಘವನ್ನು ಸ್ಥಾಪನೆ ಮಾಡಲು ಮುನ್ನುಡಿ ಬರೆದಿದ್ದಾರೆ.

ಅರಿಶಿಣ ಉತ್ಪಾದನೆಯಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಸರಿಪಡಿಸುವುದು, ಅರಿಶಿಣವನ್ನು ರಾಸಾಯನಿಕ ಶೇಷ ಮುಕ್ತವಾಗಿ ಉತ್ಪಾದಿಸುವುದು, ಅರಿಶಿಣ ಉತ್ಪಾದಕರ ಸಹಕಾರಿ ಬ್ಯಾಂಕ್ ಸ್ಥಾಪಿಸಿ, ಆ ಮೂಲಕ ಅಗತ್ಯ ಸಾಲ ಸೌಲಭ್ಯಗಳನ್ನು ತ್ವರಿತವಾಗಿ ಒಂದೆರಡು ದಿನಗಳಲ್ಲೇ ಬ್ಯಾಂಕಿನ ಮೂಲಕ ಒದಗಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತ ವಾಗುವುದು, ಅರಿಶಿಣ ಉತ್ಪಾದಕರಿಗೆ ಸುಸಜ್ಜಿತ ಗೋಧಾಮಗಳನ್ನು ನಿರ್ಮಿಸಿ, ಬೆಳೆಗಾರರಿಗೆ ಅನುಕೂಲ ಕಲ್ಪಿಸುವುದು, ಅಂತಾರಾಷ್ಟ್ರೀಯ ಕಂಪೆನಿಗಳ ಜೊತೆ ಒಡಂಬಡಿಕೆ ಮಾಡಿಕೊಂಡು, ಅರಿಶಿಣ ಉತ್ಪಾದನೆಯನ್ನು ಯಾಂತ್ರೀಕರಣಗೊಳಿಸಿ, ಕೊಯ್ಲು ಮತ್ತು ಒಕ್ಕಣೆ ಖರ್ಚು ಸುಧಾರಿಸುವುದು, ಮೌಲ್ಯವರ್ಧನೆ ಮಾಡುವುದು, ಉಪ-ಉತ್ಪನ್ನಗಳ ತಯಾರಿಕಾ ಘಟಕಗಳನ್ನು ಚಾಮರಾಜನಗರ ಜಿಲ್ಲೆಯಲ್ಲಿ ಸ್ಥಾಪಿಸಿ, ರೈತರಿಗೆ ಅನುಕೂಲ ಕಲ್ಪಿಸಿ, ರೈತರ ವರಮಾನವನ್ನು ಹೆಚ್ಚಿಸುವ ಉದ್ದೇಶಗಳನ್ನು ರಾಜ್ಯ ಅರಿಶಿಣ ಉತ್ಪಾದಕರ ಸಂಘವು ಹೊಂದಿದೆ.
ಪ್ರಸ್ತುತ ಎದುರಾಗಿರುವ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಬಗೆಹರಿಸುವ  ಮಾರ್ಗೋಪಾಯಗಳ ಬಗ್ಗೆ ಇತ್ತೀಚೆಗಷ್ಟೆ ಗುಂಡ್ಲುಪೇಟೆಯಲ್ಲಿ ನಡೆದ ಜಿಲ್ಲೆಯ ಅರಿಶಿಣ ಬೆಳೆಗಾರರು ಮತ್ತು ರೈತ ಪ್ರಮುಖರ ಸಭೆಯಲ್ಲಿ ಕೆಲವು ನಿರ್ಣಐಗಳನ್ನು ರೈತರ ಎಲ್ಲರೂ ಸೇರಿ ಕೈಗೊಂಡಿದ್ದಾರೆ.
ಒಂದು ಜಿಲ್ಲೆ ಒಂದು ಉತ್ಪನ್ನದ ಅಡಿಯಲ್ಲಿ ಚಾಮರಾಜನಗರ ಜಿಲ್ಲೆಗೆ ಅರಿಶಿಣ ಬೆಳೆಯನ್ನು ಆಯ್ಕೆ ಮಾಡಲಾಗಿದೆ. ಆದಾಗ್ಯು ಅರಿಶಿಣ ಬೆಳೆಗೆ ಯಾವುದೇ ರೀತಿಯ ಆರ್ಥಿಕ ಭದ್ರತೆಯನ್ನು ಸರ್ಕಾರ ಒದಗಿಸಿಲ್ಲ, ಆದ್ದರಿಂದ ಕೂಡಲೇ ಎಂಐಎಸ್ ಯೋಜನೆ ಅಡಿಯಲ್ಲಿ ಬೆಂಬಲ ಬೆಲೆಯಲ್ಲಿ ಅರಿಶಿಣ ಖರೀದಿಮಾಡಿ ಬೆಳೆಗಾರರ ರಕ್ಷಣೆಗೆ ಸರ್ಕಾರ ಮುಂದಾಗಬೇಕೆಂಬುದು ರೈತರ ಆಗ್ರಹವಾಗಿದೆ..


ಅರಿಶಿಣ ಮಾರುಕಟ್ಟೆ ದರ ನೆಲಕಚ್ಚಿರುವುದರಿಂದ ಬೆಳಗಾರರ ಹಿತರಕ್ಷಣೆಗೆಂದೇ ಇರುವ ( ಎಂಐಎಸ್)ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯನ್ನು ತಕ್ಷಣ ಜಾರಿಗೊಳಿಸಿ ಕ್ವಿಂಟಾಲ್ ಗೆ 12,000 ರೂ. ಬೆಂಬಲ ಬೆಲೆ ನಿಗದಿಪಡಿಸಿ, ಖರೀದಿ ಕೇಂದ್ರಗಳ ಮೂಲಕ ಖರೀದಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅರಿಶಿಣ ಬೆಳಗಾರರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕಿದೆ.

-ನಾಗಾರ್ಜುನ್ ಕುಮಾರ್ ಎಂಎಸ್‌ಸಿ. ಪಿಎಚ್‌ಡಿ.
ಅರಿಶಿಣ ಬೆಳೆಗಾರರು. ಗುಂಡ್ಲುಪೇಟೆ.


ಮೂಲತ: ನಮ್ಮದು ಕೃಷಿ ಕುಟುಂಬ, ಹಲವು ವರ್ಷಗಳಿಂದ ಅರಿಶಿಣ ಬೆಳೆಯನ್ನು ಬೆಳೆಯುತ್ತಾ ಬಂದಿದ್ದೇವೆ, ಗೊಬ್ಬರ, ಕಾರ್ಮಿಕರಿಗೆ ನೀಡುವ ಕೂಲಿ ಹೆಚ್ಚಾಗಿರುವುದರಿಂದ ನಮಗೆ ಕಷ್ಟವಾಗುತ್ತಿದೆ. 6 ಎಕರೆ ಅರಿಶಿಣ ಫಸಲು ಬೆಳೆದರೆ ಕೇವಲ 2 ಎಕ್ಕರೆಯಷ್ಟು ಮಾತ್ರ ನಮಗೆ ಫಸಲು ಲಭ್ಯವಾಗುತ್ತಿದೆ. ಇಳುವರಿ ಕುಸಿತದಿಂದಾಗಿ ರೈತರು ಕಂಗಲಾಗಿದ್ದಾರೆ. ಸರ್ಕಾರ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸುವ ಅನಿವಾರ್ಯತೆ ಬಹಳಷ್ಟು ಇದೆ. ಶಾಸಕರು,ಸಂಸದರು, ಜನಪ್ರತಿನಿಧಿಗಳು ಮುತುವರ್ಜಿ ವಹಿಸಿದರೆ ಸಮಸ್ಯೆಗೆ ಬೇಗ ಪರಿಹಾರಕಂಡುಕೊಳ್ಳಬಹುದು.

-ಶಶಿ, ಕೃಷಿಕರು.
ದೊಡ್ಡ ತುಪ್ಪೂರು.
ಗುಂಡ್ಲುಪೇಟೆ.


ಎಂಐಎಸ್ ಯೋಜನೆ ಮೂಲಕ ರಾಜ್ಯ ಸರ್ಕಾರ ಅರಿಶಿಣ ಖರೀದಿಸಿದ ಹಿನ್ನೆಲೆಯಲ್ಲಿ 2012 ರಲ್ಲಿ ಉತ್ತಮ ದರ ಸಿಕ್ಕಿ, ರೈತರು ಮತ್ತು ಎಪಿಎಂಸಿಗೆ ಅನುಕೂಲವಾಯಿತು. ತದ ನಂತರ ಸರ್ಕಾರಗಳ ಉದಾಸೀನತೆಯಿಂದಾಗಿ ಚಾಮರಾಜನಗರದ ಅರಿಶಿಣ ಸಂಸ್ಕರಣಾ ಘಟಕವೂ ಪ್ರಯೋಜನಕ್ಕೆ ಬಾರದೆ ನಿರರ್ಥಕವಾಗಿದೆ. ಪ್ರಸ್ತುತ 12 ಸಾವಿರದಿಂದ 14 ಸಾವಿರ ರೂ.ವರೆಗೆ ಸಿಗಬೇಕಿದ್ದ ದರ ತೀವ್ರ ಕುಸಿದಿದ್ದು, ಸರ್ಕಾರ ತುರ್ತು ಗಮನ ಹರಿಸಬೇಕಿದೆ.

– ಎ.ಎಂ. ಮಹೇಶ್ ಪ್ರಭು.

ರಾಜ್ಯ ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ

ಚಾಮರಾಜನಗರ.


ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆ( ಎಂಐಎಸ್) ಅನುಷ್ಟಾನದಿಂದಾಗಿ 2012 ರಲ್ಲಿ ಕ್ವಿಂಟಾಲ್ ಅರಿಶಿಣಕ್ಕೆ 6,300 ರೂ.ಗಳವರೆಗೆ ದರ ಸಿಕ್ಕಿತ್ತು. 2013 ರಲ್ಲಿ 8,500 ರೂ, 2014 ರಲ್ಲಿ 8,200 ರೂ.ಗಳವರೆಗೆ, 2015 ರಲ್ಲಿ 11 ಸಾವಿರ ರೂ., 2016 ರಲ್ಲಿ 12 ಸಾವಿರ ರೂ.ಗಳವರೆಗೂ ಅರಿಶಿಣಕ್ಕೆ ದರ ಸಿಕ್ಕಿ ರೈತರಲ್ಲಿ ಭರವಸೆಯನ್ನು ಮೂಡಿಸಿತ್ತು. ಆದರೆ ಸರ್ಕಾರ ಎಂಐಎಸ್ ಯೋಜನೆಯ ಬಗ್ಗೆ ನಿರಾಸಕ್ತಿವಹಿಸಿದ ಪರಿಣಾಮವಾಗಿ 2017 ರಿಂದೀಚೆಗೆ ಸತತವಾಗಿ ಬೆಲೆ ಕುಸಿತಗೊಂಡಿದೆ. 2023 ರಲ್ಲಿ 6,200 ರೂ.ಗೆ ದರ ಕುಸಿದಿದ್ದು, ಅರಿಶಿಣ ಬೆಳೆಗಾರ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕಂಗಾಲಾಗಿದ್ದಾರೆ.

 

 

andolanait

Recent Posts

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

23 mins ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

29 mins ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

38 mins ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

1 hour ago

ಮುಡಾ ಮೇಲೆ ಇ.ಡಿ.ದಾಳಿ: ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ: ಡಿಸಿಎಂ ʼಡಿಕೆಶಿʼ

ಬೆಂಗಳೂರು: ಮುಡಾ ಕಚೇರಿ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲಿಸಿದ್ದಾರೆ. ಕಚೇರಿಯಲ್ಲಿಯೇ ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ…

2 hours ago

ಮುಡಾ ಕಚೇರಿ ಮೇಲೆ ಇ.ಡಿ.ದಾಳಿ: ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…

2 hours ago