ಆಂದೋಲನ ಪುರವಣಿ

ಇಳಿಗಾಲದವರಿಗೆ ಬೇಕಿರುವುದು ಘನತೆ ಮತ್ತು ಪ್ರೀತಿ

ಕೀರ್ತನಾ ಎಂ

ತಂದೆ ಮಕ್ಕಳನ್ನು ಚಿಕ್ಕವರಿದ್ದಾಗ ಎದುರಿಸಿ ಇಟ್ಟುಕೊಳ್ಳುವುದು ಸಹಜ. ಅದು ತಪ್ಪು ಅಲ್ಲ ಕೂಡ. ಮಕ್ಕಳು ಅಡ್ಡ ದಾರಿ ಹಿಡಿಯಬಾರದು ಎನ್ನುವ ಉದ್ದೇಶವೂ ಅದರಲ್ಲಿ ಇರುತ್ತದೆ. ಅಲ್ಲದೆ ತಾವು ಕಷ್ಟಪಟ್ಟು ಒಂದಷ್ಟು ಸಂಪಾದನೆ ಮಾಡಿದ್ದನ್ನು ಕೂಡಿಸಿ ಇಟ್ಟು ಅದರಲ್ಲಿ ಒಂದಷ್ಟು ಆಸ್ತಿ ಮಾಡುವುದು ಕೂಡ ಮಕ್ಕಳಿಗಾಗಿಯೇ. ಆದರೆ ವಯಸ್ಸಾಗುತ್ತಾ ಬದುಕಿನ ಅವಸರಗಳಿಗೆ ಸಿಲುಕಿಕೊಳ್ಳುತ್ತಾರೆ. ತೋಳಿನಲ್ಲಿ ಬಲವಿದ್ದಾಗ ದುಡಿಯುವುದು ಬೇರೆ ಅದೇ ತೋಳು ಶಕ್ತಿ ಕಳೆದುಕೊಂಡು ದೇಹ ತೃಷವಾಗಿ ಆಸ್ಪತ್ರೆ ಸೇರಿದಾಗ ಅವರು ನನಗೆ ಏನೂ ಮಾಡಿಲ್ಲ ನಾನೇಕೆ ನೋಡಿಕೊಳ್ಳಬೇಕು? ಅವರು ನನ್ನನ್ನು ಪ್ರೀತಿಯಿಂದ ನೋಡಿಕೊಳ್ಳಲಿಲ್ಲ ನಾನೇಕೆ ಅವರ ಸೇವೆ ಮಾಡಬೇಕು? ಇರುವ ಆಸ್ತಿ ಎಲ್ಲ ಮಗಳಿಗೆ ಪಾಲು ಕೊಡುತ್ತಾರೆ ಅನಿಸುತ್ತೆ. ಅವರ ಆಪರೇಷನ್ ನಾನೇಕೆ ಮಾಡಬೇಕು? ಎನ್ನುವ ಮಕ್ಕಳು ಹಿಂದೆ ತಂದೆಯು ಹೀಗೆ ಯೋಚಿಸಿದ್ದರೆ ತಾವು ಯಾವ ಪರಿಸ್ಥಿತಿಯಲ್ಲಿ ಇರುತ್ತಿದ್ದೆವು ಎಂದು ಯೋಚಿಸಿದ್ದಾರ? ನಾಲ್ಕು ದಿನಗಳ ಹಿಂದೆ ನಡೆದ ಘಟನೆ.

ತೋಟದಲ್ಲಿ ಕೆಲಸ ಮಾಡುತ್ತಿದ್ದ ರಾಮಣ್ಣ (ಹೆಸರು ಬದಲಾಯಿಸಲಾಗಿದೆ) ಬೆಳಿಗ್ಗೆಯಿಂದ ಆರಾಮಾಗಿಯೇ ಇದ್ದರು. ಆದರೆ ಮಧ್ಯಾಹ್ನದ ಹೊತ್ತಿಗೆಲ್ಲ ಸುಸ್ತು ಆವರಿಸಿತು. ಒಂದಷ್ಟು ಸಮಯ ಅಲ್ಲೇ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆದು ಊಟ ಮುಗಿಸಿ ಮರಳಿ ಕೆಲಸದಲ್ಲಿ ತೊಡಗಿಕೊಂಡಾಗ ಎದೆ ನೋವು ತಾಳಲಾರದೆ ಬಿದ್ದು ಹೋದರು. ಅಕ್ಕ ಪಕ್ಕದ ಮನೆಯವರಿಗೆ ವಿಷಯ ತಿಳಿಯಿತು. ಅವರನ್ನು ಅರಕಲಗೂಡಿನಿಂದ ನೇರ ಮೈಸೂರಿನ ಜಯದೇವ ಆಸ್ಪತ್ರೆಗೆ ಸಾಗಿಸಿದರು. ಅವರ ಹಿರಿಯ ಮಗ ಇರುವುದು ಮೈಸೂರಿನಲ್ಲಿ ಆದ್ದರಿಂದ ಮತ್ತು ಖರ್ಚು ವೆಚ್ಚ ನೋಡಿಕೊಳ್ಳಲು ಅವರಿಗೆ ಸುಲಭವಾಗುತ್ತದೆ ಎಂದು ಊರಲ್ಲಿ ಇದ್ದ ಅವರ ಕುಟುಂಬಸ್ಥ ಊರಿನಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಕರೆದುಕೊಂಡು ಬಂದಿದ್ದರು.

ಮೂರು ದಿನಗಳೂ ಆಸ್ಪತ್ರೆಯಲ್ಲಿ ಉಳಿಯಲಿಲ್ಲ. ಕುಲಪುತ್ರ ಐಸಿಯು ಅಲ್ಲಿದ್ದ ತಂದೆಗೆ ಒಂದು ದಿನವೂ ಮನೆಯ ಊಟ ತಂದು ಕೊಡಲಿಲ್ಲ. ಕರೆದುಕೊಂಡು ಬಂದಿದ್ದವರನ್ನೇ ನೋಡಿಕೊಳ್ಳಲು ಹೇಳಿ ತಾನು ಕೆಲಸದ ಕಡೆ ಮುಖ ಮಾಡುತ್ತಿದ್ದ. ಮಗಳಂತೂ ತಂದೆಯನ್ನು ನೋಡಲು ಕೂಡ ಬರಲಿಲ್ಲ. ಇದೆಲ್ಲದರ ನಡುವೆ ಆಪರೇಷನ್ ಮಾಡಬೇಕು ಎಂದು ಡಾಕ್ಟರ್ ತಿಳಿಸಿದಾಗ ಬಹಳ ಯೋಚನೆ ಮಾಡಿದ. ಸರ್ಕಾರದ ಒಳಗೆ ಒದಗಿ ಬರುವ ಹಣದಲ್ಲಿ ಏನು ಚಿಕಿತ್ಸೆ ಕೊಡಿಸಬಹುದೋ ಅಷ್ಟನ್ನು ಮಾತ್ರ ಕೊಡಿಸಿ ಬದುಕಿದಷ್ಟು ದಿನ ಬದುಕಲಿ ನೋಡಿಕೊಳ್ಳುವುದು ಯಾರು ಎನ್ನುವ ನಿರ್ಧಾರಕ್ಕೆ ಬಂದ. ಆ ವಯಸ್ಸಾದ ತಂದೆ ನನ್ನ ಮಗ ನೋಡಿಕೊಳ್ಳುತ್ತಾನೆ ಎಂದು ನಂಬಿಕೆಯಿಂದ ಆಸ್ಪತ್ರೆಯ ಹಾಸಿಗೆಯಲ್ಲಿ ಉಸಿರಾಡುತ್ತಿದ್ದರು! ಅವರು ತಪ್ಪು ಮಾಡಿಲ್ಲ ಎಂದಲ್ಲ. ಆದರೆ ತಮ್ಮನ್ನು ಬೆಳೆಸಿದ ತಂದೆಗೆ ವಯಸ್ಸಾಗಿದೆ. ಈಗ ಅವರನ್ನು ನಾವೇ ನೋಡಿಕೊಳ್ಳಬೇಕು ಎನ್ನುವ ಯೋಚನೆ ಒಮ್ಮೆಯೂ ಅವರ ಮಗನಿಗೆ

ಬರಲಿಲ್ಲ ಎನ್ನುವುದು ವಿಷಾದನೀಯ. ಜೀವನದ ಪಾಠ ಕಲಿಸಿದವರು ವಯಸ್ಸು ಏರಿ ತಮ್ಮ ಮೇಲೆ ಅವಲಂಬಿತವಾಗುವ ಕಾಲದಲ್ಲಿ ಅವರನ್ನು ಕಾಲ ಕಸ ಮಾಡುವುದು ಏಷ್ಟು ಸರಿ? ಆಸ್ತಿಯನ್ನು ಸರಿಯಾಗಿ ಭಾಗ ಮಾಡಿಕೊಡಲಿಲ್ಲ ಎನ್ನುವುದು ಅವರಿಗೆ ಆಪರೇಷನ್ ಮಾಡಿಸದೆ ಇರಲು ಕಾರಣವಾದರೆ ಹೇಗೆ? ಶತ್ರುಗಳನ್ನು ಕೂಡ ಕಷ್ಟದಲ್ಲಿ ಇದ್ದಾಗ ಮಿತ್ರರಂತೆ ನೋಡಿ ಸಹಾಯ ಮಾಡಬೇಕು ಎನ್ನುತ್ತಾರೆ ತಿಳಿದವರು. ಆದರೆ ತಂದೆಯನ್ನೇ ಶತ್ರುಗಿಂತ ಕಡೆಯಾಗಿ ಕಡೆಗಾಲದಲ್ಲಿ ಕೈ ಬಿಡುವುದು ತಮ್ಮ ಮುಂದಿನ ಪೀಳಿಗೆಗೆ ಯಾವ ಉತ್ತಮ ಸಂದೇಶ ನೀಡುತ್ತದೆ?

ಮಗನನ್ನು ನಂಬಿರುವ ಆ ಜೀವ ಈಗಲೂ ಆಸ್ಪತ್ರೆಯಲ್ಲಿ ಉಸಿರಾಡುತ್ತಿದೆ. ಕೇವಲ ಮಗನ ಮೇಲಿರುವ ನಂಬಿಕೆಯಿಂದ ಆದರೆ ಆ ಮಗ ಅಥವಾ ಮಗಳು ಅವರನ್ನು ಉಳಿಸಿಕೊಳ್ಳುವ ಯೋಚನೆ ಬದಲು ತಮ್ಮ ದುಡಿಮೆಯ ಹಣವನ್ನು ಉಳಿಸುವ ಯೋಚನೆಯಲ್ಲಿಯೇ ಇದ್ದಾರೆ. ಹಿರಿಯರನ್ನು ಗೌರವಿಸಿ ಎನ್ನುವ

ಸಮಾಜಕ್ಕೆ ಇಂತಹ ಮಕ್ಕಳು ಎಂತಹ ಮಾದರಿ ಆಗಬಹುದು? ವಯಸ್ಸಾಯಿತು ಅವರಿಂದ ನಮಗೇನೂ ಸಿಗುವುದಿಲ್ಲ ಎಂದು ತಂದೆ ತಾಯಿಯನ್ನು ಇಂಥ ಸ್ಥಿತಿಯಲ್ಲಿ ಕೈ ಬಿಡುವವರ ಮನಸ್ಥಿತಿ ಬದಲಾಗಬೇಕಿದೆ. ನಮ್ಮ ಕೈಯಲ್ಲೂ ಏನು ಆಗದ ವಯಸ್ಸಲ್ಲಿ ನಮ್ಮನ್ನು ಅವರೇ ಜೋಪಾನ ಮಾಡಿದ್ದು ಎನ್ನುವುದನ್ನು ಮರೆಯಬಾರದು.

 

 

andolana

Recent Posts

ಕನ್ನಡಿಗರಿಗೆ ಉದ್ಯೋಗ ನೀಡದ ಸಾಹಿತ್ಯ ಸಮ್ಮೇಳನ: ವಾಟಲ್‌ ನಾಗರಾಜ್‌ ಆಕ್ರೋಶ

ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…

9 mins ago

ಹಾಸ್ಯ ಸಾಹಿತ್ಯ ಆಧುನಿಕ ಬದುಕಿಗೆ ಔಷಧಿ: ಪ್ರೊ.ಕರಿಯಪ್ಪ

ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…

17 mins ago

ಸಿ & ಡಿ ಲ್ಯಾಂಡ್ ಸಮಸ್ಯೆ ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ: ಯು.ಟಿ. ಖಾದರ್

ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…

53 mins ago

ಸಿ.ಟಿ ರವಿ ಕೊಲೆಗೆ ಪೊಲೀಸರ ಸಂಚು: ಅಶೋಕ್‌ ಆರೋಪ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…

1 hour ago

ವಿರಾಜಪೇಟೆ | ಬಿಟ್ಟಂಗಾಲದಲ್ಲಿ ಚಿರತೆ ಬೆಕ್ಕು ಸಾವು

ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…

1 hour ago

ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ನಟ ದರ್ಶನ್‌ ವಾಸ್ತವ್ಯ

ಮೈಸೂರು: ನಟ ದರ್ಶನ್‌ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…

1 hour ago