ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಸಂಸ್ಥೆ ಇನ್ನರ್ ವೀಲ್. ಲಕ್ಷಾಂತರ ಮಹಿಳೆಯರನ್ನು ಸದಸ್ಯರನ್ನಾಗಿಸಿಕೊಂಡು ಪರಸ್ಪರ ಸ್ನೇಹ, ಪ್ರೀತಿಯಿಂದ ಬೆಸೆದು ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಈ ಸಂಸ್ಥೆ ಇದೀಗ ಶತಮಾನದ ಸನಿಹದಲ್ಲಿದೆ.
ಸೌಮ್ಯ ಹೆಗ್ಗಡಹಳ್ಳಿ
ನೂರು ವರ್ಷಗಳ ಹೊಸ್ತಿಲಲ್ಲಿ ನಿಂತಿರುವ ‘ಇನ್ನರ್ ವೀಲ್’ ಮಹಿಳೆಯರ ಪಾಲಿನ ಭರವಸೆ. ೧೯೨೪ರಲ್ಲಿ ಇಂಗ್ಲೆಂಡ್‌ನ ಮಾಂಚೆಸ್ಟರ್‌ನಲ್ಲಿ ಮಾರ್ಗರೇಟ್ ಗೊಲ್ಡಿಂಗ್ ಎಂಬ ನರ್ಸ್‌ರಿಂದ ಪ್ರಾರಂಭವಾದ ಸಂಸ್ಥೆ ಇಂದು ಭಾರತ ಸೇರಿ ೧೦೦ಕ್ಕೂ ಹೆಚ್ಚು ದೇಶಗಳಲ್ಲಿ ೧೦ ಲಕ್ಷಕ್ಕೂ ಅಧಿಕ ಮಂದಿ ಸದಸ್ಯರನ್ನು ಒಳಗೊಂಡು ಮುಂದೆ ಸಾಗುತ್ತಿದೆ.
ಗೆಳೆತನ ಮೊದಲು, ನಂತರ ಸೇವೆ ಎನ್ನುವ ಧ್ಯೇಯವನ್ನು ಇಟ್ಟುಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರ ಹೆಗ್ಗುರುತಾಗಿ ಕೆಲಸ ಮಾಡುತ್ತಿರುವ ಇನ್ನರ್ ವೀಲ್ ಪ್ರಾರಂಭವಾಗಿದ್ದೇ ರೋಚಕ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ತಮ್ಮ ಅಸ್ಥಿತ್ವನ್ನು ಕಂಡುಕೊಳ್ಳಲು, ತಾವೂ ಸಮಾಜದ ಸೇವೆಗೆ ಸಿದ್ಧರಿದ್ದೇವೆ ಎಂದು ತೋರಿಸಿಕೊಡುವ ಮಹಾತ್ವಾಕಾಂಕ್ಷೆ ಸಂಸ್ಥೆಯದ್ದು. ಇದರ ಜೊತೆಗೆ ಮಹಿಳೆಯ ಒಬ್ಬಂಟಿಯಲ್ಲ. ಅವಳ ಕಷ್ಟ-ಸುಖ ಕೇಳಲು ಕಿವಿಗಳಿವೆ, ಜೊತೆಗೆ ಕೈ ಜೋಡಿಸಲು ಸಮಾನ ಮನಸ್ಸುಗಳಿವೆ ಎಂಬುದನ್ನು ಪ್ರಾರಂಭದಿಂದಲೂ ಇನ್ನರ್ ವೀಲ್ ಸಾಭೀತು ಮಾಡುತ್ತಾ ಬಂದಿದೆ.
ಸಂಸ್ಥೆಯ ಪ್ರಾರಂಭದ ಹಿಂದಿನ ಉದ್ದೇಶ
ನಾನು ಮೈಸೂರಿಗೆ ಮದುವೆಯಾಗಿ ಹೊಸದಾಗಿ ಬಂದಾಗ ಯಾರೂ ಅಷ್ಟಾಗಿ ಪರಿಚಯವಿರಲಿಲ್ಲ. ಹೊರಗಡೆ ಹೊಗಲು, ಹೆಚ್ಚು ಜನರ ಜೊತೆ ಒಡನಾಟ ಬೆಳೆಸಲು ಅವಕಾಶಗಳೇ ಇರಲಿಲ್ಲ. ಹೀಗಾಗಿ ಹೊಸತನವಿಲ್ಲದೆ ಒತ್ತಡದಲ್ಲಿ ಸಿಲುಕಿದ್ದೇನೆ ಎನ್ನುವ ಭಾವನೆ ಕಾಡುತ್ತಿತ್ತು. ಆಗ ಕಂಡ ಬೆಳಕೇ ಇನ್ನರ್ ವೀಲ್. ಇಲ್ಲಿಗೆ ಸೇರಿದಾಗ ನನಗೆ ಸಾಕಷ್ಟು ಜನರ ಪರಿಚಯವಾಯಿತು. ಸಮಾಜದ ಬೇರೆ ಬೇರೆ ಸ್ಥಳಗಳಲ್ಲಿ, ಬೇರೆ ಬೇರೆ ವ್ಯಕ್ತಿತ್ವಗಳ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಹಲವಾರು ಮಹಿಳೆಯರ ಜೊತೆ ಒಡನಾಟ ಬೆಳೆಯಿತು. ಇಲ್ಲಿ ಸ್ನೇಹವನ್ನು ಮೀರಿ ನಾನು ಹಲವಾರು ಸಂಸ್ಥೆಗಳ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಗಳಿಸಿದೆ. ಅದರ ಮೂಲಕ ಸಮಾಜ ಸೇವೆಗೆ ತೆರೆದುಕೊಂಡೆ. ಆ ಮೂಲಕ ಬದುಕಿನ ಸಾರ್ಥಕತೆ ಕಂಡುಕೊಂಡಿದ್ದೇನೆ.-ನಂದಿನಿ ಎನ್., ಅಧ್ಯಕ್ಷರು, ಇನ್ನರ್ ವೀಲ್, ಮೈಸೂರು
ಇನ್ನರ್ ವೀಲ್‌ನಿಂದ ನಾನು ಗಳಿಸಿದ್ದು ಏನು ಎಂದರೆ ಉತ್ತಮ ಗೆಳತಿಯರು ಹಾಗೂ ನನ್ನ ಬಗ್ಗೆ ನನಗೆ ಆತ್ಮವಿಶ್ವಾಸ. ಸಮಾಜದಲ್ಲಿನ ಒಬ್ಬರಿಗೆ ನಾವು ಸಹಾಯ ಮಾಡಿದಾಗ ಅವರು ನಮಗೆ ಪ್ರೀತಿಯಿಂದ ಹರಸುವ ಪರಿೆುೀಂ ಸೋಜಿಗ. ಅದೊಂದು ಬೆಲೆ ಕಟ್ಟಲಾಗದ ಸಂಗತಿ. ನನ್ನ ಪಾಲಿಗೆ ಅದೊಂದು ದೊಡ್ಡ ಆಸ್ತಿ. ಅದನ್ನು ನಾವಿಲ್ಲಿ ನಿತ್ಯವೂ ಗಳಿಸುತ್ತಿದ್ದೇವೆ. ನಾನು ಪ್ರಾರಂಭದಲ್ಲಿ ಚಿಕ್ಕಮಗಳೂರಿಗೆ ಬಂದಾಗ ನನಗೆ ಇಲ್ಲಿ ಯಾರೂ ಪರಿಚಿತರಿರಲಿಲ್ಲ. ಆಗ ನಮ್ಮ ಅತ್ತೆಯೇ ನನ್ನನ್ನು ಇನ್ನರ್ ವೀಲ್‌ಗೆ ಸೇರಿಸಿದರು. ನನ್ನ ಅತ್ತೆಯ ಸಲಹೆಯಿಂದ ಇಂದು ಇಡೀ ಜಗತ್ತಿನಲ್ಲಿ ನನಗೆ ಗೆಳತಿಯರಿದ್ದಾರೆ ಎಂದು ಹೇಳಲು ಹೆಮ್ಮೆಪಡುತ್ತೇನೆ. -ಕವಿತಾ ನಿಯತ್, ಚೇರ್ಮನ್ ಇನ್ನರ್ ವೀಲ್, ಡಿಸ್ಟಿಕ್ 318
ಮನುಷ್ಯ ಸಂಘ ಜೀವಿ. ಆತ ಉಳಿಯಲು, ಬೆಳೆಯಲು, ಸಾಧನೆ ಮಾಡಲು ಒಂದು ಕಾರಣ ಬೇಕೆ ಬೇಕು. ನನ್ನ ಪ್ರಕಾರ ಆ ಕಾರಣವೇ ಗೆಳೆತನ ಮತ್ತು ಸೇವೆ. ಗೆಳೆತನ ಮತ್ತು ಸೇವೆಯಿಂದ ಉತ್ತಮವಾದ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಹೀಗಾಗಿ ನಾನು ಇನ್ನರ್ ವೀಲ್ ಗೆ ಸೇರಿದೆ. ಇಲ್ಲಿ ನಾನು ಗಳಿಸಿದ್ದು ಅಪಾರ. ಸಮಾಜದ ಏಳಿಗೆಗಾಗಿ ದುಡಿಯುತ್ತಿರುವ ವ್ಯಕ್ತಿಗಳಿಂದ ಪ್ರೇರೇಪಿತಳಾಗಿದ್ದೇನೆ. ನನ್ನ ಕೈಲಾದಷ್ಟು ಸೇವೆಯನ್ನು ನಾನು ಮಾಡುತ್ತಿದ್ದೇನೆ. ಸಮಾಜ ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ನಾವು ಏನನ್ನು ಕೊಟ್ಟಿದ್ದೇವೆ ಎನ್ನುವುದು ಮುಖ್ಯ. ಒಟ್ಟಾರೆ ನಾನು ಸಮಾನ ಮನಸ್ಕ ಸ್ನೇಹಿತರನ್ನು ಪಡೆದೆ. ಆ ಮೂಲಕ ಸಂತೋಷವನ್ನೂ ಕಂಡುಕೊಂಡೆ. – ಸೌಮ್ಯ ದಿನೇಶ್, ಕಾರ್ಯದರ್ಶಿ ಇನ್ನರ್ ವೀಲ್
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…