ಆಂದೋಲನ ಪುರವಣಿ

ಅನ್ನದಾತರ ಅಂಗಳ : ಬೆಳಕಿನ ಬೇಸಾಯದ ಆಹಾರವೇ ಪರಿಹಾರ

ಅವಿನಾಶ್ ಟಿ ಜಿ ಎಸ್,ಲೇಖಕರು, ಕೃಷಿ ತಜ್ಞರು.

ಮೊನ್ನೆ ರಾಜಶೇಖರ್ ಎನ್ನುವವರು ಬೆಳಕಿನ ಬೇಸಾಯ ಪುಸ್ತಕ ಎಲ್ಲಿ ಸಿಗುತ್ತದೆ ಎಂದು ವಿಚಾರಿಸಲು ಪೋನ್ ಮಾಡಿದ್ದರು. ಇದರ ಮಾಹಿತಿಯನ್ನು ನೀಡಿದ ನಂತರ ಅವರು ತಮ್ಮ ಮಾತುಗಳನ್ನು ಮುಂದುವರೆಸಿ ‘ಸರ್ ನಮ್ಮ ಏಳು ವರ್ಷದ ಮಗುವಿಗೆ ಎ ಪ್ಲಾಸ್ಟಿಕ್ ಅನೀಮಿಯಾ ಖಾಯಿಲೆ ಬಂದಿದೆ. ಆಸ್ಪತ್ರೆಯಲ್ಲಿ ಇದ್ದೇವೆ. ಈ ಖಾಯಿಲೆ ಗುಣವಾಗಲು ಬೋನ್ ಮಾರೋ ಚಿಕಿತ್ಸೆಗಾಗಿ ಸರಿಸುಮಾರು 25 ಲಕ್ಷ ರೂ. ಖರ್ಚಾಗುತ್ತದೆ ಎಂದು ಹೇಳಿದ್ದಾರೆ… ದಾನಿಗಳ ಹತ್ತಿರ ದುಡ್ಡನ್ನು ಹೊಂದಿಸಿ ಚಿಕಿತ್ಸೆ ಕೊಡಿಸುತ್ತಿದ್ದೇವೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಈ ಖಾಯಿಲೆಗೆ ಕಾರಣ ಏನು ಎಂದು ಕೇಳಿದಾಗ, ‘ನಾವು ತಿನ್ನುವ ಆಹಾರದಲ್ಲಿ ರಾಸಾಯನಿಕಗಳು ಬೆರೆತಿವೆ, ಅದರಿಂದ ಈ ತರಹದ
ಖಾಯಿಲೆಗಳು ಬರುತ್ತಿವೆ ಎಂದು ಡಾಕ್ಟರ್ ತಿಳಿಸಿದ್ದಾರೆ ಸರ್’, ಈ ಮುಂಚೆ ನಾನು ಗೋಬಿ ಅಂಗಡಿಯನ್ನು ನಡೆಸುತ್ತಿದ್ದೆ. ಗೋಬಿ ತಯಾರಿಸಲು ಬಳಸುವ ಎಲೆಕೋಸು ಮತ್ತು ಹೋಕೋಸನ್ನು ಬೆಳೆಯಲು ವಿಪರೀತ ಕ್ರಿಮಿನಾಶಕಗಳನ್ನು ಬಳಸುತ್ತಾರೆ, ಮತ್ತೆ ನಾವು ಗೋಬಿಯನ್ನು ತಯಾರಿಸುವಾಗಲೂ ರಾಸಾಯನಿಕಗಳನ್ನು ಬಳಸುತ್ತೇವೆ. ಬಣ್ಣ, ಎಸೆನ್ಸ್‌ಗಳನ್ನು ಧಾರಾಳವಾಗಿ ಬಳಸುತ್ತೇವೆ ಸರ್, ಅದನ್ನು ನನ್ನ ಮಗಳು ತಿನ್ನುತ್ತಿದ್ದಳು. ಇದರ ಜೊತೆ ರಾಸಾಯನಿಕಗಳಿಂದ ಕೂಡಿದ ಆಹಾರ ಪದಾರ್ಥಗಳು ಸೇರಿಕೊಂಡು ನನ್ನ ಮಗಳಿಗೆ ಈ ಪರಿಸ್ಥಿತಿ ಬಂದಿದೆ. ಈಗ ನನಗೆ ಈ ರಾಸಾಯನಿಕಗಳು, ಕ್ರಿಮಿನಾಶಕಗಳಿಂದಾಗುವ ದುಷ್ಪರಿಣಾಮಗಳು ಅರ್ಥವಾಗಿವೆ. ಹಾಗಾಗಿ ಇನ್ನು ಮುಂದೆ ಗೋಬಿ ಅಂಗಡಿಯನ್ನು ತೆರೆಯುವುದಿಲ್ಲ, ಮತ್ತೆ ರಾಸಾಯನಿಕಗಳಿಂದ ಬೆಳೆದ ಆಹಾರ ಪದಾರ್ಥಗಳನ್ನು ತಿನ್ನುವುದಿಲ್ಲ ಸರ್, ನಮಗೊಂದು ನಾಲ್ಕು ಎಕರೆ ಭೂಮಿ ಇದೆ, ಅದರಲ್ಲಿ ಬೆಳಕಿನ ಬೇಸಾಯ ಪದ್ಧತಿಯಲ್ಲಿ ಆಹಾರವನ್ನು ಬೆಳೆದು ನನ್ನ ಮಗಳ ಆರೋಗ್ಯವನ್ನು ಕಾಪಾಡೋಣ ಅಂತ ನಿರ್ಧರಿಸಿದ್ದೇವೆ. ಇನ್ನು ಈ ಗೋಬಿಯನ್ನು ತಿನ್ನುವುದರಿಂದ ಆದ ಅನಾಹುತವನ್ನು ನನ್ನ ಪರಿಚಿತರೆಲ್ಲರಿಗೂ ತಿಳಿಸುತ್ತಿದ್ದೇನೆ. ಅವರ ಮಕ್ಕಳು ನನ್ನ ಮಗಳಂತೆಯೇ ಅಲ್ವಾ ಸರ್, ದಯವಿಟ್ಟು ನನಗೆ ಸಹಕಾರ ಮಾಡಿ ಸರ್ ಎಂದು ವಿನಂತಿಸಿಕೊಂಡರು. ನನ್ನ ಸಹಕಾರ ನಿಮ್ಮೊಂದಿಗೆ ಸದಾ ಇರುತ್ತದೆ ಎಂದು ತಿಳಿಸಿ ವಿಷಾದದಿಂದ ಪೋನ್ ಇಟ್ಟೆ. ಇಲ್ಲಿ ನಾವು ಕೃಷಿಯಲ್ಲಿ ಬಳಸುವ ರಾಸಾಯನಿಕಗಳು ಅಷ್ಟೇ ಅಲ್ಲ, ಈ ಆಹಾರ ಪದಾರ್ಥಗಳನ್ನು ಸಂರಕ್ಷಿಸಿಡುವಾಗ ಮತ್ತು ಅವುಗಳನ್ನು ಮೌಲ್ಯವರ್ಧನೆ ಮಾಡುವಾಗ ಮತ್ತು ಪ್ಯಾಕ್ ಮಾಡುವಾಗಲೂ ರಾಸಾಯನಿಕಗಳನ್ನು ಮತ್ತು ಪ್ಲಾಸ್ಟಿಕ್ ಅನ್ನು ಬಳಸಲಾಗುತ್ತದೆ. ಇನ್ನು ಮಾರುಕಟ್ಟೆಯಲ್ಲಿ ದೊರೆಯುವ ತರಕಾರಿ, ಹಣ್ಣು, ಕಾಳುಗಳು ಸದಾ ರಶ್‌ ಆಗಿರುವಂತೆ ಮಾಡಲು ರಾಸಾಯನಿಕಗಳನ್ನು, ಕೃತಕ ಬಣ್ಣಗಳನ್ನು, ವ್ಯಾಕ್ಸ್ ಕೋಟಿಂಗ್ ಬಳಸಲಾಗುತ್ತಿದೆ. ಇದು ಸಾಲದೆಂಬಂತೆ ಜಾಗತಿಕವಾಗಿ ತಾಪಮಾನ ಏರಿಕೆಗೆ ಕಾರಣವಾಗಿರುವ ಈ  ಶಾಖವರ್ಧಕ ಅನಿಲಗಳು, ಧೂಳು, ಪ್ಲಾಸ್ಟಿಕ್‌ನ ಕಣಗಳು ಗಾಳಿ ಹಾಗೂ ನೀರನ್ನು ನಿರಂತರವಾಗಿ ಕಲುಶಿತಗೊಳಿಸುತ್ತಿವೆ. ಇವೆಲ್ಲವೂ  ನೇರವಾಗಿ ನಮ್ಮ ದೇಹ ಸೇರುತ್ತಿವೆ. ಮತ್ತೊಂದು ಸಂಶೋಧನೆಯ ಪ್ರಕಾರ ‘ನಮ್ಮ ದೇಹದ ರಕ್ತದ ಕಣಗಳಲ್ಲಿ ಪ್ಲಾಸ್ಟಿಕ್‌ನ  ಸೂಕ್ಷ್ಮಾತಿಸೂಕ್ಷ್ಮ ಕಣಗಳು ಸೇರಿವೆ’ ಎಂದು ವಿಜ್ಞಾನಿಗಳು ದೃಢಪಡಿಸಿದ್ದಾರೆ. ಇದು ಅತ್ಯಂತ ಆತಂಕಕಾರಿ ಸಂಶೋಧನೆಯಾಗಿದೆ. ನಮ್ಮ ಆಧುನಿಕ ಜೀವನದ ಆವಿಷ್ಕಾರಗಳು ನಮ್ಮ ಅಸ್ತಿತ್ವಕ್ಕೆ ಮುಳುವಾಗಿದೆ. ಈಗ ರಾಜಶೇಖರ್‌ನಂತಹ ಉತ್ಸಾಹಿ ರೈತರಿಗೆ ಯಾವ ತರಹದ ಕೃಷಿ ಪದ್ಧತಿಯನ್ನು ತಿಳಿಸಬೇಕು ಎಂದು ಯೋಚಿಸಿದಾಗ, ಪ್ರಸ್ತುತ ನಮ್ಮ ಮಧ್ಯೆ ನೈಸರ್ಗಿಕ ಕೃಷಿ, ಸಾವಯವ ಕೃಷಿ, ಸಹಜ ಕೃಷಿ ಇತ್ಯಾದಿಗಳಾದಿಯಾಗಿ ಸಾಕಷ್ಟು ಹೆಸರುಗಳಿನ ಕೃಷಿ ಪದ್ಧತಿಗಳಿವೆ.
ಇಷ್ಟೆಲ್ಲಾ ಹೆಸರುಗಳು ನಮ್ಮನ್ನು ಗೊಂದಲಕ್ಕೆ ಈಡುಮಾಡಿಕೊಡುತ್ತಿರುವುದನ್ನು ಕೇಳಿದ್ದೇವೆ. ಈ ಪದ್ಧತಿ ಸರಿಯಾ? ಆ ಪದ್ಧತಿ ಸರಿಯಾ? ಎನ್ನುವ ಪ್ರಶ್ನೆಗಳು ಕಾಡುತ್ತಿವೆ. ಇಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾಗಿರುವುದು ಈ ಎಲ್ಲಾ ಪದ್ದತಿಗಳ ಮೂಲ ಆಶಯಗಳು ಒಂದೇ ಎನ್ನುವುದನ್ನು. ಇಲ್ಲಿ ಮೂಲ ಆಶಯಗಳು ಎಂದರೆ, ಒಂದು ಎಕರೆಯಲ್ಲಿ ಸಹಜವಾಗಿ ಒದಗುವ ಬೆಳಕನ್ನು ಸದ್ಬಳಕೆ ಮಾಡಿಕೊಳ್ಳುವುದರ ಜೊತೆಗೆ ಭೂಮಿಯ ಫಲವತ್ತತೆಯನ್ನು ವೃದ್ಧಿಸಲು ಹ್ಯೂಮಸ್ ಹಾಗೂ ಸಾಯವ ಇಂಗಾಲದ ಪ್ರಮಾಣವನ್ನು ಹೆಚ್ಚು ಮಾಡುತ್ತಾ ಮಳೆಗಾಲದ ಹನಿಹನಿ ನೀರನ್ನು ಹಿಡಿದಿಟ್ಟುಕೊಳ್ಳಬೇಕು. ಈ ಎಲ್ಲವನ್ನೂ ಸಾಧಿಸಬೇಕಾದರೆ ಮರಗಿಡಗಳಿಂದ ಕೂಡಿದ ಕೃಷಿ ಪದ್ಧತಿಯೂ ನಮ್ಮದಾಗಬೇಕಾಗಿದೆ. ಅಂದರೆ ನಮ್ಮ ಭೂಮಿಯನ್ನು ಆಹಾರ ಬನವನ್ನಾಗಿ ಪರಿವರ್ತಿಸಬೇಕು. ಆಗ ನಮ್ಮ ಭೂಮಿಯಲ್ಲಿ ಜೀವಾಣುಗಳು, ಸೂಕ್ಷ್ಮ ಜೀವಾಣುಗಳು, ಎರೆಹುಳುಗಳು, ಪ್ರಾಣಿಪಕ್ಷಿಗಳ ಸಂಖ್ಯೆಯೂ ವೃದ್ಧಿಯಾಗುತ್ತದೆ. ಇದರಿಂದ ಭೂಮಿಯಲ್ಲಿ ಸಹಜವಾಗಿ ನಡೆಯುವ ರಾಸಾಯನಿಕ, ಭೌತಿಕ ಹಾಗೂ ಜೈವಿಕ ಕ್ರಿಯೆಗಳು ಸರಾಗವಾಗಿ ನಡೆಯುತ್ತವೆ. ಈ ಎಲ್ಲಾ ಕ್ರಿಯೆಗಳು ಸರಾಗವಾಗಿ ನಡೆಯುತ್ತಿದ್ದಾಗ ಮಾತ್ರ ಹಣ್ಣು, ಕಾಳುಗಳಲ್ಲಿ ನಮ್ಮ ದೇಹಕ್ಕೆ ಅವಶ್ಯವಿರುವ ಕ್ಯಾಲೊರೀಸ್, ವಿಟಮಿನ್ಸ್, ಪ್ರೋಟಿನ್ಸ್,
ನ್ಯೂಟ್ರಿಯೆಂಟ್ಸ್, ಕಾರ್ಬೋಹೈಡ್ರೇಟ್ಸ್ ದೊರೆಯುತ್ತವೆ. ಇದರಿಂದ ರೋಗ ನಿರೋಧಕತೆ ಹೆಚ್ಚಾಗುತ್ತದೆ. ಬಹು ಮುಖ್ಯವಾಗಿ
ಅಪೌಷ್ಟಿಕಯನ್ನು ನಿವಾರಿಸಿಕೊಳ್ಳಬಹುದು. ಹಾಗೂ ಪರಿಶುದ್ಧವಾದ ವಾತಾವರಣವನ್ನು ಕಾಪಾಡಿಕೊಂಡು ಹೊಸ ಹೊಸ ಖಾಯಿಲೆಗಳು ಬಾರದಂತೆ ತಡೆಹಿಡಿಯುತ್ತಾ ಆರೋಗ್ಯಕರ ಜೀವನವನ್ನು ನಡೆಸಬಹುದಾಗಿದೆ.
ಇನ್ನು ನಮ್ಮ ಘನ ಸರ್ಕಾರಗಳು, ಸಕಲ ಜೀವರಾಶಿಗಳ ಜೀವವನ್ನು ಹಿಂಡುತ್ತಿರುವ ರಾಸಾಯನಿಕ ಕೃಷಿ ಪದ್ಧತಿಗೆ ಕೊಟ್ಟಿರುವ
ಆದ್ಯತೆಯನ್ನು ರಾಸಾಯನಿಕ ಮುಕ್ತ ಕೃಷಿ ಪದ್ಧತಿಗೂ ನೀಡಬೇಕಾಗಿದೆ. ಈಗ ಚಾಲ್ತಿಯಲ್ಲಿರುವ ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿ ಪ್ರಾಜೆಕ್ಟ್‌ಗಳನ್ನು ಒಂದು ಸೂರಿನಡಿ ತಂದು, ಪ್ರತಿ ಹಳ್ಳಿಯಲ್ಲೂ ಒಂದೊಂದು ಮಾದರಿ ತೋಟಗಳನ್ನು ನಿರ್ಮಿಸಿ,ಆಯಾ ರೈತರನ್ನು ಮಾರ್ಗದರ್ಶಿಗಳನ್ನಾಗಿ ನೇಮಕ ಮಾಡಿ, ಆಯಾ ಗ್ರಾಮ ವ್ಯಾಪ್ತಿಯಲ್ಲಿ ಬೆಳೆದ ಆಹಾರ ಪದಾರ್ಥಗಳನ್ನು ಅಲ್ಲಿಯೇ ಮೌಲ್ಯವರ್ಧನೆ ಮಾಡಿ, ಆಯಾ ಗ್ರಾಮ ವ್ಯಾಪ್ತಿಯಲ್ಲಿಯೇ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಬಹುಮುಖ್ಯ ಆಗುತ್ತದೆ. ಆಗ ಮಾತ್ರ ರಾಜಶೇಖರ್ ಅವರ ಮಗಳಿಗೆ ಬಂದಂತಹ ಖಾಯಿಲೆ ಇನ್ನಾವ ಮಕ್ಕಳಿಗೂ ಬಾರದು.

 

andolanait

Recent Posts

ಈ ತಿಂಗಳು ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ: ಅಧಿಕ ಉಷ್ಣಾಂಶ

ನವದೆಹಲಿ: ಈ ಬಾರಿ ಮೇ ತಿಂಗಳಿನಲ್ಲಿ ದೇಶದ ಹಲವೆಡೆ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಹಾಗೂ ಹೆಚ್ಚಿನ ಉಷ್ಣಾಂಶ ದಾಖಲಾಗಲಿದೆ ಎಂದು…

2 mins ago

ಪಾಕಿಸ್ತಾನದಲ್ಲಿ ಮತ್ತೊಬ್ಬ ಉಗ್ರ ನಿಗೂಢ ಸಾವು

ಇಸ್ಲಾಮಾಬಾದ್:‌ ನಿಷೇಧಿತ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ಉನ್ನತ ಕಮಾಂಡರ್‌ ಪಾಕಿಸ್ತಾನದ ಬಹಾವಲ್ಪುರದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಉನ್ನತ ಉಗ್ರಗಾಮಿ ಕಾರ್ಯಕರ್ತನನ್ನು ಅಪರಿಚಿತ ವಾಹನವೊಂದು…

8 mins ago

ಏಪ್ರಿಲ್‌ನಲ್ಲಿ ಹೊಸ ದಾಖಲೆಯ 2.43 ಲಕ್ಷ ಕೋಟಿ ರೂ ಜಿಎಸ್‌ಟಿ ಸಂಗ್ರಹ

ನವದೆಹಲಿ: ಅಮೇರಿಕಾ-ಇರಾನ್‌ ಯುದ್ಧದ ಹೊರತಾಗಿಯೂ ಏಪ್ರಿಲ್.‌2026ರಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು ದಾಖಲೆಗರಿಷ್ಠ ರೂ 2.43 ಲಕ್ಷ ಕೋಟಿ ತಲುಪಿದೆ. ಏಪ್ರಿಲ್‌ನಲ್ಲಿ…

14 mins ago

ಗ್ಯಾಸ್ ಬೆಲೆ ಗಗನಕ್ಕೆ : ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು : ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು 993 ರೂ. ಏಕಾಏಕಿ ಹೆಚ್ಚಿಸಿರುವ ಕೇಂದ್ರ ಸರ್ಕಾರದ…

11 hours ago

ಸಮೀಕ್ಷೆ ಭವಿಷ್ಯ : ದ್ರಾವಿಡ ಕೋಟೆ ಅಲುಗಾಟ ; ಕಿಂಗ್‌ ಮೇಕರ್‌ ಆಗ್ತಾರಾ ದಳಪತಿ ವಿಜಯ್?‌

ಚೆನ್ನೈ : ತಮಿಳುನಾಡಿನ ದಶಕಗಳ ದ್ರಾವಿಡ ರಾಜಕಾರಣಕ್ಕೆ ಸವಾಲು ಹಾಕಿ ಅಖಾಡಕ್ಕಿಳಿದಿರುವ ದಳಪತಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’…

11 hours ago

ಕಾರ್ಮಿಕರು ದೇಶದ ಆರ್ಥಿಕ, ಸಾಮಾಜಿಕ, ಅಭಿವೃದ್ಧಿಯ ಶಿಲ್ಪಿಗಳು : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ಕಾರ್ಮಿಕರು ದೇಶದ ಆರ್ಥಿಕ ಸಾಮಾಜಿಕ, ಅಭಿವೃದ್ಧಿಯ ಶಿಲ್ಪಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂದು ಕೆಪಿಸಿಸಿ ಕಚೇರಿಯಲ್ಲಿ…

13 hours ago