ಅನ್ನದಾತರ ಅಂಗಳ

ರುದ್ರಾಕ್ಷಿ ಹಲಸು: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

– ಜಿ.ಕೃಷ್ಣ ಪ್ರಸಾದ್

ಹೆಗ್ಗಡದೇವನಕೋಟೆ ತಾಲ್ಲೂಕಿನ ನೇರಳಕುಪ್ಪೆಯ ಶ್ರೀನಿವಾಸ ಅವರ ತೋಟದಲ್ಲಿ ರುದ್ರಾಕ್ಷಿ ಹಲಸಿನ ಮರವೊಂದಿದೆ. ತೋಟಕ್ಕೆ ಬಂದವರ ದೃಷ್ಟಿಯೆಲ್ಲಾ ಅದರತ್ತಲೇ. ಬೊಗಸೆ ತುಂಬುವಷ್ಟು ಗಾತ್ರದ ಪುಟ್ಟ ಹಲಸಿನಕಾಯಿಗಳು ಮರದ ರೆಂಬೆ ಕೊಂಬೆಗಳಲ್ಲಿ ತೊನೆಯುತ್ತವೆ. ಮಲೆನಾಡಿನಲ್ಲಿ ಚಿರಪರಿಚಿತವಾದ ರುದ್ರಾಕ್ಷಿ ಹಲಸು ಬಯಲು ಸೀಮೆಯ ರೈತರಿಗೆ ಅಷ್ಟೇನೂ ಪರಿಚಿತವಲ್ಲ. ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಮರಗಳಿವೆ.

‘ಇರೋದೆ ನಾವು ನಾಲ್ಕು ಜನ. ಇಷ್ಟು ದೊಡ್ಡ ಹಣ್ಣು ತಗೊಂಡು ನಾವೇನು ಮಾಡೋದು’ ಎಂದು ಗೊಣಗಾಡುವವರಿಗೆ ರುದ್ರಾಕ್ಷಿ ಹಲಸು ಪರಿಹಾರ. ರುದ್ರಾಕ್ಷಿ ಹಲಸು -ಟ್‌ಬಾಲ್ ಗಾತ್ರಕ್ಕಿರುತ್ತದೆ. 2-5 ಕೆ.ಜಿ ತೂಗುವ ಹಣ್ಣುಗಳು; ಚಿಕ್ಕ ಕುಟುಂಬಕ್ಕೆ ಹೇಳಿ ಮಾಡಿಸಿದ ತಳಿ. ಮೈಸೂರಿನ ಹೊರವಲಯದ ಬೆಳವಲ ಫಾರಂನಲ್ಲಿ ರುದ್ರಾಕ್ಷಿ ಹಲಸಿನ ಮರವಿದೆ.

‘2017ರಲ್ಲಿ ನೆಟ್ಟಿದ್ದ ರುದ್ರಾಕ್ಷಿ ಹಲಸು 2022ರಲ್ಲಿ ಕಾಯಿ ಬಿಟ್ಟಿತು. ಟೆನಿಸ್ ಬಾಲಿನಾಕಾರದ, ಸಂಪೂರ್ಣ ಮುಳ್ಳಿಲ್ಲದ ಸುಂದರವಾದ ಕಾಯಿಗಳನ್ನು ನೋಡುವುದೇ ಒಂದು ಖುಷಿ. ಎರಡರಿಂದ ಮೂರು ಕೆಜಿ ತೂಗುವ ಹಣ್ಣಿನಲ್ಲಿ ತುಂಬಾ ಗಟ್ಟಿಯೂ ಅಲ್ಲದ , ತುಂಬಾ ಮೆದುವೂ ಅಲ್ಲದ ತಿರುಳಿನ ನಡುವೆ ಮಧ್ಯಮ ಗಾತ್ರದ ತೊಳೆಗಳಿರುತ್ತವೆ. ಮನೆಯವರು ತಿಂದು ಚಪ್ಪರಿಸಲು ಇಷ್ಟು ಸಾಕು’ ಎಂದು ಡಾ.ರಾಮಕೃಷ್ಣಪ್ಪ ಹೇಳುತ್ತಾರೆ. ಬೆಳವಲ ಫಾರಂನಲ್ಲಿ ರುದ್ರಾಕ್ಷಿ ಹಲಸಲ್ಲದೆ ಇತರೆ ಹಲಸಿನ ತಳಿಗಳನ್ನೂ ಸಂರಕ್ಷಿಸಲಾಗುತ್ತಿದೆ.

ರುದ್ರಾಕ್ಷಿ ಹಲಸಿನಲ್ಲಿ ಹಳದಿ ಮತ್ತು ಕೆಂಪು ಹಣ್ಣಿನ ತಳಿಗಳಿವೆ. ಹಳದಿ ತೊಳೆಯ ಹಲಸು ಸಾಮಾನ್ಯವಾದರೆ, ಕೆಂಪು ತೊಳೆಯ ತಳಿಗಳು ಅಪರೂಪಕ್ಕೆ ಕಾಣಸಿಗುತ್ತವೆ. ರುದ್ರಾಕ್ಷಿ ಹಲಸು ಸಾಧಾರಣ ಗಾತ್ರಕ್ಕೆ ಬೆಳೆಯುವುದರಿಂದ ನಗರವಾಸಿಗಳು ಕೂಡ ಇದನ್ನು ಬೆಳೆಸಬಹುದು. ಬಡಾವಣೆಗಳ ನಾಗರಿಕರು ರಸ್ತೆ ಬದಿ ಮತ್ತು ಉದ್ಯಾನಗಳಲ್ಲಿ ಇದನ್ನು ನೆಡಬಹುದು. ನೆಟ್ಟ ನಾಲ್ಕರಿಂದ ಐದು ವರ್ಷಕ್ಕೆ ಕಾಯಿ ಬಿಡಲು ಆರಂಭವಾಗುತ್ತದೆ.

ಹತ್ತು ವರ್ಷಗಳ ಹೊತ್ತಿಗೆ ಇಡೀ ಮರ ಕಾಯಿಗಳಿಂದ ತುಂಬಿ ತುಳುಕುತ್ತದೆ. ಮೂರು ನಾಲ್ಕು ಜನರಿರುವ ಸಣ್ಣ ಕುಟುಂಬದ ಮನೆಗಳೇ ಈಗ ಹೆಚ್ಚು. ದೊಡ್ಡ ಗಾತ್ರದ ಹಲಸು ತಂದು ಕತ್ತರಿಸುವ, ಅದನ್ನು ಬಿಡಿಸುವ ತಾಳ್ಮೆ ಯಾರಿಗೂ ಇಲ್ಲ. ಮೃದು ತಿರುಳಿನ, ಕಡಿಮೆ ಅಂಟು ಇರುವ ರುದ್ರಾಕ್ಷಿ ಹಲಸನ್ನು ಕತ್ತರಿಸಿ, ತೊಳೆ ಬಿಡಿಸುವುದು ಸುಲಭ. ಹಾಗಾಗಿ ಮಾರುಕಟ್ಟೆ ಸಮಸ್ಯೆ ಇಲ್ಲ. ರುದ್ರಾಕ್ಷಿ ಹಲಸಿನ ತಳಿಯ ಗಿಡಗಳು ಮತ್ತು ಹಣ್ಣು ಮೈಸೂರಿನ ಹಲಸಿನ ಹಬ್ಬದಲ್ಲಿ ಮಾರಾಟಕ್ಕೆ ಬರಲಿವೆ. ಆಸಕ್ತರು ಕೊಳ್ಳಬಹುದು.

” ಮೈಸೂರಿನಲ್ಲಿ ಹಲಸಿನ ಹಬ್ಬ ಔಷಧಿಯ ಗುಣಗಳಿಂದ ಸಮೃದ್ಧವಾಗಿರುವ ಹಲಸು, ರೈತರಿಗೆ ಆದಾಯವನ್ನೂ, ಗ್ರಾಹಕರಿಗೆ ಆರೋಗ್ಯವನ್ನೂ ತರುತ್ತದೆ. ಹಲಸಿನ ಮಹತ್ವವನ್ನು ಗ್ರಾಹಕರಿಗೆ ಮತ್ತು ರೈತರಿಗೆ ಪರಿಚಯಿಸುವ ಉದ್ದೇಶದಿಂದ ಮೇ 3 ಮತ್ತು 4 ರಂದು ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ‘ಹಲಸಿನ ಹಬ್ಬ’ ಏರ್ಪಡಿಸಲಾಗಿದೆ. ಸಿದ್ದು, ಶಂಕರ , ರುದ್ರಾಕ್ಷಿ , ವಿಯಟ್ನಾಂ ಅರ್ಲಿ, ಲಾಲ್‌ಬಾಗ್ ಮಧುರ, ಡೆಂಗ್ ಸೂರ್ಯ ಮೊದಲಾದ 25 ತಳಿಯ ಹಲಸಿನ ಕಸಿ ಗಿಡಗಳು ಮಾರಾಟಕ್ಕೆ ಬರಲಿವೆ. ಬಾಯಲ್ಲಿ ನೀರೂರಿಸುವ ಕೆಂಪು, ಹಳದಿ ಮತ್ತು ಬಿಳಿ ಹಲಸಿನ ಹಣ್ಣು ಮತ್ತು ತೊಳೆ ಕೊಳ್ಳಲು ಸಿಗಲಿವೆ.”

” ಮೇ 3ರ ಶನಿವಾರ ಬೆಳಿಗ್ಗೆ 11 ಗಂಟೆಗೆ ರೈತರಿಗಾಗಿ ‘ಹಲಸಿನ ಕೃಷಿ ತರಬೇತಿ’ ಕಾರ್ಯಕ್ರಮ ಏರ್ಪಡಿಸಲಾಗಿದೆ. ಹಲಸು ತಜ್ಞರಿಂದ ಹಲಸಿನ ತಳಿ ಆಯ್ಕೆ, ನೆಡುವ ಕ್ರಮ, ಗಿಡಗಳ ಕಾಳಜಿ, ಪ್ರೂನಿಂಗ್ ಮಾಡುವುದು, ಕೊಯ್ಲು ಮತ್ತು ಮಾರುಕಟ್ಟೆಯ ಮಾಹಿತಿ ತಿಳಿಸಿಕೊಡಲಾಗುತ್ತದೆ. ಹಲಸಿನ ಹಬ್ಬದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಆಸಕ್ತರು ಭಾಗವಹಿ ಸಬಹುದಾಗಿದೆ. ವಿವರಗಳಿಗೆ ಮೊ.94821 15495 ಸಂಪರ್ಕಿಸಿ.”

ಆಂದೋಲನ ಡೆಸ್ಕ್

Recent Posts

ಚಿಕ್ಕಮಗಳೂರಲ್ಲಿ ಮತ್ತೊಮ್ಮೆ ಹೆಲಿ ಟೂರಿಸಂಗೆ ನಿರ್ಧಾರ : ಪರಿಸರ ಸಂಘಟನೆಗಳಿಂದ ತೀವ್ರ ವಿರೋಧ

ಚಿಕ್ಕಮಗಳೂರು : ಅತ್ಯಂತ ಪರಿಸರ ಸೂಕ್ಷ ಸ್ಥಳಗಳನ್ನು ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳದೆ…

8 mins ago

ಇತಿಹಾಸ ತಿರುಚಲು ಮೋದಿ ಯತ್ನ : ಗೌರವ್‌ ಗೊಗೊಯ್‌ ಆರೋಪ

ಹೊಸದಿಲ್ಲಿ : ಲೋಕಸಭೆಯಲ್ಲಿ ವಂದೇ ಮಾತರಂ ಗೀತೆ ಕುರಿತ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವು ಇತಿಹಾಸವನ್ನು…

14 mins ago

ಒಂದೇ ಒಂದು ಮಗುವಿದ್ದರೂ ಕೂಡ ಕನ್ನಡ ಶಾಲೆ ಮುಚ್ಚಲ್ಲ : ಸರ್ಕಾರ ಸ್ಪಷ್ಟನೆ

ಬೆಳಗಾವಿ : ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಒಂದೇ ಒಂದು ಮಗುವಿದ್ದರೂ ಕೂಡ ಯಾವುದೇ ಕಾರಣಕ್ಕೂ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವುದಿಲ್ಲ…

19 mins ago

ಸಿದ್ದರಾಮಯ್ಯ ಪೂರ್ಣವಧಿ ಸಿಎಂ : ಡಿನ್ನರ್‌ ಬ್ರೇಕ್‌ಫಾಸ್ಟ್‌ ಬಳಿಕವೂ ತಂದೆ ಪರ ಯಂತ್ರೀಂದ್ರ ಬ್ಯಾಟಿಂಗ್‌

ಬೆಳಗಾವಿ : ಡಿನ್ನರ್‌ ಬ್ರೇಕ್‌ಫಾಸ್ಟ್‌ ಬಳಿಕವೂ ತಂದೆಯ ಪರ ಪುತ್ರ ಯತೀಂದ್ರ ಬ್ಯಾಟಿಂಗ್‌ ಮಾಡುವುದನ್ನು ಮುಂದುವರಿಸಿದ್ದಾರೆ. ಸಿದ್ದರಾಮಯ್ಯ ಪೂರ್ಣ ಅವಧಿಯವರೆಗೆ…

41 mins ago

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ : ಡಿಕೆಶಿ ಆಪ್ತ ಇನಾಯತ್‌ ಅಲಿಗೆ ದಿಲ್ಲಿ ಪೊಲೀಸರಿಂದ ನೋಟಿಸ್‌

ಹೊಸದಿಲ್ಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಪ್ತ, ಕಾಂಗ್ರೆಸ್ ಮುಖಂಡ ಇನಾಯತ್ ಅಲಿಗೆ ದೆಹಲಿ…

1 hour ago

ಇಂಡಿಗೋ ಬಿಕ್ಕಟ್ಟು : ತುರ್ತು ವಿಚಾರಣೆಗೆ ಸುಪ್ರೀಂ ನಕಾರ

ಹೊಸದಿಲ್ಲಿ : ಇಂಡಿಗೋ ವಿಮಾನಗಳ ರದ್ದತಿ ಮತ್ತು ವಿಳಂಬದ ಕುರಿತು ತುರ್ತು ವಿಚಾರಣೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಆಲಿಸಲು…

1 hour ago