ಡಿ.ಎನ್.ಹರ್ಷ
ಸಾಕಷ್ಟು ಜನರಲ್ಲಿ, ತಾವು ವೃತ್ತಿಯಿಂದ ನಿವೃತ್ತಿ ಹೊಂದಿದ ಬಳಿಕ ಏನು ಮಾಡಬೇಕು ಎಂಬ ಆಲೋ ಚನೆ ಮೂಡುತ್ತದೆ. ಬೆರಳೆಣಿಕೆಯಷ್ಟು ಮಂದಿ ಮಾತ್ರ ತಾವು ಬಾಲ್ಯದಿಂದ ಕಂಡ ಕನಸುಗಳನ್ನು ನನಸು ಮಾಡಿಕೊಳ್ಳುವ ದಾರಿಯಲ್ಲಿ ಸಾಗುತ್ತಾರೆ. ಅಂತಹ ಬೆರಳೆಣಿಕೆಯಷ್ಟು ಮಂದಿಯ ಪೈಕಿ ರಾಜ್ಯ ಲೋಕೋಪ ಯೋಗಿ ಇಲಾಖೆಯಲ್ಲಿ ಮುಖ್ಯ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿ, ನಿವೃತ್ತರಾದ ಬಳಿಕ ತಮ್ಮ ೧೦ ಎಕರೆಗೂ ಹೆಚ್ಚು ಎಕರೆ ಭೂಮಿಯಲ್ಲಿ ತೋಟ ಗಾರಿಕೆ ಮಾಡುತ್ತಿರುವ ಟಿ.ಆರ್.ಶಿವರಾಮು ಕೂಡ ಒಬ್ಬರು.
ಶಿವರಾಮು ಮೂಲತಃ ರಾಮನಗರ ಜಿಲ್ಲೆ, ಕನಕಪುರ ತಾಲ್ಲೂಕಿನ ತುಂಗುಣಿ ಗ್ರಾಮದವರು. ಮನೆಯಲ್ಲಿ ಸಾಕಷ್ಟು ಬಡತನವಿದ್ದ ಕಾರಣ, ಬಿಡುವಿನ ವೇಳೆಯಲ್ಲಿ ಚಪ್ಪರ ಕಟ್ಟುವ ತೆಂಗಿನಗರಿ ಹೆಣೆಯುವ ಕೆಲಸ ಮಾಡುತ್ತಾ, ರಜಾ ದಿನಗಳಲ್ಲಿ ಕೃಷಿ ಕೆಲಸ ಮಾಡಿ ತಮ್ಮ ಓದಿನ ಖರ್ಚನ್ನು ತಾವೇ ನಿಭಾಯಿಸಿಕೊಳ್ಳುತ್ತಿದ್ದರು. ನಲವತ್ತು ವರ್ಷಗಳ ಹಿಂದೆ ಬೆಂಗಳೂರಿನ ಪ್ರತಿಷ್ಠಿತ ಯುವಿಸಿಇ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ ಶಿವರಾಮು ಹೊಸದಿಲ್ಲಿಯಲ್ಲಿ ಒಂದು ವರ್ಷ ಕರ್ತವ್ಯ ನಿರ್ವಹಿಸಿ ಬಳಿಕ ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ವಿವಿಧ ಶ್ರೇಣಿಯ ಹುದ್ದೆಗಳಲ್ಲಿ ಕೆಲಸ ಮಾಡಿ ಕೊನೆಗೆ ಮುಖ್ಯ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿ ಮೂರು ವರ್ಷಗಳ ಹಿಂದೆ ನಿವೃತ್ತರಾದರು.
ಬಾಲ್ಯದಿಂದಲೂ ಕೃಷಿಯ ಬಗ್ಗೆ ಒಲವು ಹೊಂದಿದ್ದ ಶಿವರಾಮು ತಮ್ಮ ವೇತನದ ಹೆಚ್ಚಿನ ಭಾಗವನ್ನು ಉಳಿತಾಯ ಮಾಡಿ, ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂ ಕಿನ ಜಿ.ಕೆ.ಹೊಸೂರು ಗ್ರಾಮದಲ್ಲಿ ಹತ್ತು ಎಕರೆ ಜಮೀನು ಖರೀದಿಸಿ ಕೃಷಿ ಚಟುವಟಿಕೆ ಆರಂಭಿಸಿದರು. ಇಂದು ಅವರ ಜಮೀನಿನಲ್ಲಿ ೮೦೦ ತೆಂಗು, ೩೦೦ ಮಾವು ಸೇರಿದಂತೆ ಅಡಕೆ, ನೇರಳೆ, ಸೀಬೆ ಇತ್ಯಾದಿ ಮರಗಳನ್ನು ಬೆಳೆಸಿದ್ದು, ಕೃಷಿ ಭೂಮಿ ನಂದನವವಾಗಿದೆ.
ಆರಂಭದಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ಮಾಡಿಕೊಂಡು ಕೃಷಿ ಮಾಡಿದ ಶಿವ ರಾಮು, ಬಳಿಕ ಅವುಗಳಿಗೆ ಕಡಿವಾಣ ಹಾಕಿ ಈಗ ಸಂಪೂರ್ಣ ಸಾವಯವ ಕೃಷಿ ಮಾಡುತ್ತಿದ್ದಾರೆ. ಇವರ ತೋಟದಲ್ಲಿ ತಿಪಟೂರು ಟಾಲ್ ಜಾತಿಯ ತೆಂಗಿನ ಮರಗಳಿದ್ದು, ಅವುಗಳಿಂದ ತಿಂಗಳಿಗೆ ಒಂದು ಲಕ್ಷ ರೂ.ಗಳಿಗೂ ಅಧಿಕ ಆದಾಯ ಪಡೆಯುತ್ತಿದ್ದಾರೆ. ಅಲ್ಲದೆ ಮದ್ದೂರು ತಾಲ್ಲೂಕಿನ ಕೋಣಸಾಲೆ ಗ್ರಾಮದ ರಾಧಾಕೃಷ್ಣ ರವರ ಸಹಕಾರದೊಂದಿಗೆ ಗುಂಪು ಏಲಕ್ಕಿ ಬಾಳೆ ಬೆಳೆಯುತ್ತಿದ್ದಾರೆ.
ಇನ್ನು ಜಿ.ಕೆ.ಹೊಸೂರು ಸಮೀಪದ ಸಿರ ಗೋಡು (ಮಹಾಲಿಂಗನ ಕಟ್ಟೆ) ಬಳಿ ಎಂಟು ಎಕರೆ ಜಮೀನಿನಲ್ಲಿ ಐದು ಎಕರೆ ತೆಂಗಿನ ತೋಟ ಮಾಡಿದ್ದಾರೆ. ಉಳಿದ ಮೂರು ಎಕರೆಯಲ್ಲಿ ಮೆಕ್ಕೆ ಜೋಳ ಬೆಳೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಪಪ್ಪಾಯ, ಬಾಳೆ ಮುಂತಾದ ವಾಣಿಜ್ಯ ಬೆಳೆಗಳನ್ನು ಬೆಳೆಯುವ ತಯಾರಿಯಲ್ಲಿದ್ದಾರೆ.
ಪ್ರಸ್ತುತ ಶಿವರಾಮುರವರು ಕೃಷಿಯಿಂದ ವಾರ್ಷಿಕವಾಗಿ ೨೫ ಲಕ್ಷ ರೂ.ಗಳಿಗೂ ಅಽಕ ಆದಾಯ ಗಳಿಸುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೆ ಅನೇಕರಿಗೆ ಉದ್ಯೋಗವನ್ನೂ ನೀಡುತ್ತಿದ್ದಾರೆ. ಇನ್ನು ಅವರ ಪತ್ನಿ ರೇಖಾ ಶಿವರಾಮು, ತೋಟದ ಆದಾಯ, ಖರ್ಚು ವೆಚ್ಚ ಇತ್ಯಾದಿಗಳ ಹಣಕಾಸು ನಿರ್ವಹಣೆ ಮಾಡಿದರೆ, ತಂಗಿಯ ಮಗ ಗಿರೀಶ್ ಸಂಪೂರ್ಣ ಹದಿನೆಂಟು ಎಕರೆ ಕೃಷಿ ಭೂಮಿಯ ಉಸ್ತುವಾರಿ ನೋಡಿಕೊಂಡು ಶಿವರಾಮುರವರ ಕೃಷಿ ಪ್ರೀತಿಗೆ ನೆರವು ನೀಡುತ್ತಿದ್ದಾರೆ.
ಭವಿಷ್ಯದಲ್ಲಿ ತಮ್ಮ ತೋಟದಲ್ಲಿ ಕೃಷಿ ಮೂಲಕ ಇಪ್ಪತ್ತಕ್ಕೂ ಹೆಚ್ಚು ಜನರಿಗೆ ನೇರ ಉದ್ಯೋಗ ಕೊಡಬೇಕು ಎಂಬ ಕನಸು ಹೊಂದಿರುವ ಶಿವ ರಾಮು, ಲೋಕೋಪಯೋಗಿ ಇಲಾಖೆ ಜ್ಞಾನ ಮತ್ತು ಅನುಭವದ ಮೂಲಕ ಜಿ.ಕೆ. ಹೊಸೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಕೃಷಿ ಹೊಂಡಗಳನ್ನು ವೈಜ್ಞಾನಿಕವಾಗಿ ನಿರ್ಮಿಸಿ ಮಳೆ ನೀರು ಸಂಗ್ರಹಣೆ ಮಾಡಿ, ಅಂತರ್ಜಲ ಮಟ್ಟ ವೃದ್ಧಿಸಲು ಸಹಕಾರಿಯಾಗಿರುವುದು ಹೆಮ್ಮೆಯ ವಿಚಾರ.
ಇವರ ಕೃಷಿ ಸಾಧನೆಯನ್ನು ಮೆಚ್ಚಿ ಮೈಸೂರಿನ ವಿಶ್ವೇಶ್ವರಯ್ಯ ಡೆವಲಪ್ ಮೆಂಟ್ ಆರ್ಗನೈಸೇಷನ್ ವತಿಯಿಂದ ‘ಕಾಯಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರ ವೃತ್ತಿ ಬದುಕಿನ ಸಾಧನೆಗಳನ್ನು ಗುರುತಿಸಿ ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ, ರಾಜೀವ್ ಗಾಂಧಿ ಸಿರಿಮೋನಿ ಅವಾರ್ಡ್, ಹಿಂಡ್ ರತನ್ ಅವಾರ್ಡ್ ಮುಂತಾದ ಅನೇಕ ಪ್ರಶಸ್ತಿಗಳು ಸಂದಿದ್ದು, ಇವರ ಬಗ್ಗೆ ‘ಬುದ್ಧ ಪ್ರಜ್ಞಾ’ ಎನ್ನುವ ಜೀವನ ಚರಿತ್ರೆ ಪುಸ್ತಕ ಕೂಡ ಬಿಡುಗಡೆ ಆಗಿರುವುದು ಶ್ಲಾಘನೀಯ ಸಂಗತಿ.
ಶಿವರಾಮುರನ್ನು ಸಂಪಕಿಸಲು ೯೪೪೮೦-೧೫೧೭೨ ಕರೆ ಮಾಡಿ.
ಮಹಾದೇಶ್ ಎಂ ಗೌಡ ಹನೂರು: ತಮ್ಮ ಊರಿನಿಂದ ದೂರದಲ್ಲಿರುವ ಶಾಲಾ ಕಾಲೇಜುಗಳಿಗೆ ಹೋಗುವುದಕ್ಕೆ ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸಲು ಕೋರಿ…
ಬಿ.ಎಸ್.ವಿನಯ್ ಮೊನ್ನೆ ಯಳಂದೂರಿನ ಬೀದಿಯಲ್ಲಿ ಸಾಗುತ್ತಿದ್ದಾಗ ಬಳೆಮಂಟಪದ ಮುಂದೆ ಪರಿಚಿತ ಹಿರಿಯರೊಬ್ಬರು ಎದುರಾದರು. ‘ಯಜಮಾನರೇ, ಕಾರ್ಯಕ್ರಮಕ್ಕೆ ಯಾಕೆ ಬರಲಿಲ್ಲ?’ ಕೇಳಿದರೆ…
ವಿನುತ ಕೋರಮಂಗಲ ನಮ್ಮ ಹಟ್ಟಿಯಿಂದ ನಾಲ್ಕೈದು ಕಿ.ಮೀ. ದೂರವಿರುವ ನಮ್ಮೂರಿನ ಕೆರೆಯ ಅಂಗಳಕ್ಕೆ ನಾವೇನು ನಡೆದುಕೊಂಡು ಹೋಗುತ್ತಿರಲಿಲ್ಲ. ಗಂಗೆ ಎಂದು…
ಅಕ್ಷತಾ ಖಾಲಿ ಹಾಳೆಯ ಒಂದೇ ಮಗ್ಗುಲಿನಲ್ಲಿ ಚಿತ್ತಿಲ್ಲದಂತೆ ಬರೆದು, ಪದ ಮಿತಿಯನ್ನು ಬೆರಳು ಲೆಕ್ಕದಲ್ಲಿ ಎಣಿಸಿ, ಪತ್ರಿಕೆಯ ವಿಳಾಸಕ್ಕೆ ಕಳುಹಿಸಿದ…
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…