ಅನ್ನದಾತರ ಅಂಗಳ

ಪಾರ್ವತಿ ಗಣಪತಿಯವರ ಹೊಸ ಬಗೆಯ ಕೃಷಿ ಪ್ರವಾಸೋದ್ಯಮ

ಡಿ.ಎನ್.ಹರ್ಷ

ಗ್ರಾಮೀಣ ಭಾಗದ ಮಹಿಳೆಯರು ತಾವು ಅಂದು ಕೊಂಡಂತೆ ಬದುಕು ಸಾಗಿಸುವ ಜತೆಗೆ ಸ್ವಾವಲಂಬಿಯಾಗಿ ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂಬ ಹಂಬಲಕ್ಕೆ ಸ್ಫೂರ್ತಿಯಾಗಿದ್ದಾರೆ ವಿರಾಜಪೇಟೆ ತಾಲ್ಲೂಕಿನ ಯವಕಪಾಡಿ ಗ್ರಾಮದ ಪಾರ್ವತಿ ಫ್ಯಾನ್ಸಿ ಗಣಪತಿ.

ಪಾರ್ವತಿಯವರು ಬಾಲ್ಯದಿಂದಲೂ ಕೊಡಗಿನ ಹಸಿರು ವಾತಾವರಣದಲ್ಲಿ ಬೆಳೆದವರು. ವೃತ್ತಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಕೃಷಿಯ ಮೇಲಿನ ವ್ಯಾಮೋಹದಿಂದಾಗಿ ಉಪನ್ಯಾಸಕ ವೃತ್ತಿಯನ್ನು ತೊರೆದು ಸಂಪೂರ್ಣವಾಗಿ ತಮ್ಮನ್ನು ತಾವು ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಇತರೆ ರೈತ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಪಾರ್ವತಿರವರ ಕೃಷಿ ಬದುಕಿಗೆ ಪತಿ ಗಣಪತಿ ಮತ್ತು ಮಗ ಅಮೃತ್ ತಿಮ್ಮಯ್ಯ ಬೆಂಬಲವಾಗಿ ನಿಂತಿದ್ದು, ಇವರ ಕೃಷಿ ಭೂಮಿಯಲ್ಲಿ ಅನೇಕ ಹೆಣ್ಣು ಮಕ್ಕಳಿಗೆ ಉದ್ಯೋಗ ಕಲ್ಪಿಸುವ ಮೂಲಕ ಅವರ ಬದುಕಿಗೂ ಆಸರೆಯಾಗಿದ್ದಾರೆ.

ಪಾರ್ವತಿಯವರು ಶಾಲಾ ಹಂತದಲ್ಲಿರುವಾಗ ತಮ್ಮ ನೆಚ್ಚಿನ ಶಿಕ್ಷಕಿಯಾಗಿದ್ದ ಫ್ಯಾನ್ಸಿ ಎಂಬವರ ಹೆಸರನ್ನು ತಮ್ಮ ಹೆಸರಿನೊಂದಿಗೆ ಸೇರಿಸಿಕೊಂಡಿದ್ದಾರೆ. ಇವರು ಕೃಷಿ ಭೂಮಿಯಲ್ಲಿ ಆರ್ಕಿಡ್ ಹೂವಿನ ಗಿಡಗಳು, ಕಾಫಿ, ಸ್ಟ್ರಾಬೆರಿ ಹಣ್ಣು, ಕೋಕೋ ಬೆಳೆ ಯುತ್ತಿದ್ದು, ಕೃಷಿಯಲ್ಲಿ ಸಾಧನೆಯ ಹಾದಿ ಹಿಡಿದಿ ದ್ದಾರೆ. ಈಗ ಕೃಷಿ ಪ್ರವಾಸೋದ್ಯಮ ಕ್ಷೇತ್ರದಲ್ಲಿಯೂ ಹೊಸತನದೊಂದಿಗೆ ಸಾಧನೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

ಅಮೃತ್‌ರವರಿಗೆ ವಿದ್ಯಾಭ್ಯಾಸ ಮುಗಿದ ಬಳಿಕ ಕೈತುಂಬಾ ಸಂಬಳ ಸಿಗುವ ಕೆಲಸಗಳ ಅವಕಾಶವಿ ದ್ದರೂ ಅವರು ಆಯ್ಕೆ ಮಾಡಿಕೊಂಡಿದ್ದು, ತಮ್ಮ ಮುತ್ತಜ್ಜ ಕೆಟೋಲಿರಾ ದಿವಾನ್ ಬಹದ್ದೂರ್ ಚೆಂಗಪ್ಪ ನವರು 1934ರಲ್ಲಿ ಕಟ್ಟಿಸಿದ್ದ ಬಂಗಲೆಯನ್ನು ಮೊದ ಲಿನ ಮಾದರಿಯಲ್ಲಿ ಉಳಿಸಿಕೊಂಡು, ಆಧುನಿಕ ಸ್ಪರ್ಶ ನೀಡುವ ಕಾಯಕದಲ್ಲಿ, ಕೊಡಗಿನ ಮೊದಲ ಮುಖ್ಯ ಆಯುಕ್ತರು ಮತ್ತು ಸ್ವತಂತ್ರ ಭಾರತದ ಮೊದಲ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದ ದಿವಾನ್ ಬಹದ್ದೂರ್ ಚೆಂಗಪ್ಪ ನವರು 90 ವರ್ಷಗಳ ಹಿಂದೆ ಬ್ರಿಟಿಷ್ ವಾಸ್ತುಶಿಲ್ಪ ಶೈಲಿಯಲ್ಲಿ ಕಟ್ಟಿಸಿದ ‘ದಿ ಬಂಗ್ಲೋ 1934 (WWW. thebungalow1934) ಇಂದು ದೇಶ ವಿದೇಶಗಳಿಂದ ಕೊಡಗಿಗೆ ಬರುವ ಪ್ರವಾಸಿಗರಿಗೆ ಕೊಡಗಿನ ವೀರರ ಇತಿಹಾಸವನ್ನು ತಿಳಿಸಿಕೊಡುವ
ತಾಣವಾಗಿದೆ.

ಪಾರ್ವತಿಯವರು ಪತಿ ಗಣಪತಿಯವರೊಂದಿಗೆ ಕಾಫಿ, ಹೂ ಮತ್ತು ವಿವಿಧ ರೀತಿಯ ಹಣ್ಣುಗಳ ಬೇಸಾಯ ಮಾಡು ತಿದ್ದು, ತಾವು ಬೆಳೆದ ಕೃಷಿ ಉತ್ಪನ್ನ ಗಳನ್ನು ಮೌಲ್ಯವರ್ಧನೆ ಮಾಡುವ ಕಾಯಕದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡು, ಯಶಸ್ವಿಯಾಗಿದ್ದಾರೆ. ಹಾಗೆಯೇ ಸುತ್ತಮುತ್ತಲಿನ ಮೂವತ್ತಕ್ಕೂ ಹೆಚ್ಚು
ಮಹಿಳಾ ಸಸಹಾಯ ಸಂಘಗಳಿಗೆ ತರಬೇತಿ ನೀಡಿ, ಇಂದು ನಬಾರ್ಡ್ ಬ್ಯಾಂಕ್‌ ಸಹಾಯದಿಂದ ವಿರಾಜಪೇಟೆಯಲ್ಲಿ ತಮ್ಮದೇ ಆದ ಮಾರು ಕಟ್ಟೆ ಸೃಷ್ಟಿಸಿಕೊಂಡಿರುವುದು ಮಾದರಿಯ ಸಂಗತಿ.

ಇವರ ತೋಟದಲ್ಲಿ ಹೋಂ ಮೇಡ್ ವೈನ್, ಹಪ್ಪಳ, ಸಂಡಿಗೆ, ಉಪ್ಪಿನ ಕಾಯಿ, ವಿವಿಧ ರೀತಿಯ ಮನೆ ಅಡುಗೆ ತಿಂಡಿಗಳು, ಮಸಾಲೆ ಪದಾರ್ಥಗಳು, ಕೊಬ್ಬರಿ ಎಣ್ಣೆ, ರೋಸ್ ಮೇರಿ ಆಯಿಲ್ ಮುಂತಾದ ಕೃಷಿ ಉತ್ಪನ್ನಗಳ ಜೊತೆಗೆ ವಿವಿಧ ಬಗೆಯ ಚಾಕಲೇಟ್ ಗಳು ಸಿಗಲಿವೆ. ಇವು ದೇಶದ ವಿವಿಧ ಭಾಗಗಳಲ್ಲದೆ, ಅಂತಾರಾಷ್ಟ್ರೀಯ ಮಟ್ಟವನ್ನು ತಲುಪಿರುವುದು ಹೆಮ್ಮೆಯ ವಿಚಾರ. ವಿಶೇಷವೆಂದರೆ ಖಾಸಗಿ ವಾಹಿನಿಯ ಅಡುಗೆ ಕಾರ್ಯಕ್ರಮದ ನಿರೂಪಕ ಹಾಗೂ ವಿಶ್ವ ವಿಖ್ಯಾತ ಅಡುಗೆ ತಜ್ಞ ಗೋರ್ಡನ್ ರಾಮ್ ಪಾರ್ವತಿಯವರ ಗ್ರೀನ್ ಎಕರ್‌ನಲ್ಲಿ ಮೂರು ದಿನಗಳ ಕಾಲ ಉಳಿದುಕೊಂಡು ಕೊಡಗಿನ ವಿಶಿಷ್ಟ ಖಾದ್ಯಗಳನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ತಮ್ಮ ಗ್ರೀನ್ ಎಕರ್ ಫಾರ್ಮ್‌ ಅನ್ನು ಮಾದರಿ ಕೃಷಿ ಪ್ರವಾಸೋದ್ಯಮ ಸ್ಥಳವನ್ನಾಗಿ ಬದಲಾಯಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಪಾರ್ವತಿಯ ವರಿಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮತ್ತು ಮೈಸೂರಿನ ವಿಶ್ವೇಶ್ವರಯ್ಯ ಡೆವಲಪ್ಟೆಂಟ್ ಆರ್ಗನೈ ಜೇಷನ್ ವತಿಯಿಂದ ಕೃಷಿ ಸಮ್ಮಾನ ಪುರಸ್ಕಾರ ಸೇರಿದಂತೆ, ಅನೇಕ ಸಂಘ ಸಂಸ್ಥೆಗಳ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಪಾರ್ವತಿಯವರ ದೂ.ಸಂ.: 97400-28225

harshayogi@gmail.com

ಆಂದೋಲನ ಡೆಸ್ಕ್

Recent Posts

ದೆಹಲಿಯಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…

55 mins ago

ಅಶ್ಲೀಲ ಕಮೆಂಟ್‌ ಪ್ರಕರಣ : ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್ ; ಆದರೂ ಇಲ್ಲ ಕ್ಷಮೆ ಎಂದ ನಟಿ

ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…

3 hours ago

ಬೆಳಗಿನ ಜಾವ ಸಿದ್ದಾಪುರ ಪಟ್ಟಣಕ್ಕೆ ಕಾಡಾನೆಗಳ ಎಂಟ್ರಿ: ಆತಂಕದಲ್ಲಿ ಜನತೆ

ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…

4 hours ago

ಸೋಮವಾರಪೇಟೆಯಲ್ಲಿ ಎಟಿಎಂ ದರೋಡೆಗೆ ಖದೀಮರ ಯತ್ನ

ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…

5 hours ago

ಸಿಎಂ ಡಿಕೆಶಿ ಹಾಗೂ ಸಚಿವ ಲಕ್ಷ್ಮಣ್ ಸವದಿ ಸಹಕಾರದಿಂದ ಅಧ್ಯಕ್ಷನಾಗಿದ್ದೇನೆ: ಶಾಸಕ ಜಿ.ಟಿ.ದೇವೇಗೌಡ

ಮೈಸೂರು: ಸಹಕಾರ ಮಹಾಮಂಡಲದ ಅಧ್ಯಕ್ಷ ಸ್ಥಾನಕ್ಕೆ ಜಿ.ಟಿ. ದೇವೇಗೌಡ ಆಯ್ಕೆಯಾಗಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

5 hours ago

ಓದುಗರ ಪತ್ರ: ನೀತಿ ಪಾಠಗಳು ಶಿಕ್ಷಣ ಭಾಗವಾಗಬೇಕೆಂಬ ಸಲಹೆ ಸ್ವಾಗತಾರ್ಹ

ಈಗಿನ ಕಾಲದ ಮಕ್ಕಳಿಗೆ ಎಲ್ಲವೂ ಕ್ಷಣ ಮಾತ್ರದಲ್ಲಿ ಅರ್ಥವಾಗುವುದರಿಂದ ಅವರ ವರ್ತನೆಯಲ್ಲಿ ಸಹಜತೆಯನ್ನು ಕಾಣಬಹುದು. ಇಂದಿನ ಮಕ್ಕಳಿಗೆ ಭಯ ಇಲ್ಲ…

11 hours ago