ಡಿ.ಎನ್.ಹರ್ಷ
ಗ್ರಾಮೀಣ ಭಾಗದ ಮಹಿಳೆಯರು ತಾವು ಅಂದು ಕೊಂಡಂತೆ ಬದುಕು ಸಾಗಿಸುವ ಜತೆಗೆ ಸ್ವಾವಲಂಬಿಯಾಗಿ ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂಬ ಹಂಬಲಕ್ಕೆ ಸ್ಫೂರ್ತಿಯಾಗಿದ್ದಾರೆ ವಿರಾಜಪೇಟೆ ತಾಲ್ಲೂಕಿನ ಯವಕಪಾಡಿ ಗ್ರಾಮದ ಪಾರ್ವತಿ ಫ್ಯಾನ್ಸಿ ಗಣಪತಿ.
ಪಾರ್ವತಿಯವರು ಬಾಲ್ಯದಿಂದಲೂ ಕೊಡಗಿನ ಹಸಿರು ವಾತಾವರಣದಲ್ಲಿ ಬೆಳೆದವರು. ವೃತ್ತಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಕೃಷಿಯ ಮೇಲಿನ ವ್ಯಾಮೋಹದಿಂದಾಗಿ ಉಪನ್ಯಾಸಕ ವೃತ್ತಿಯನ್ನು ತೊರೆದು ಸಂಪೂರ್ಣವಾಗಿ ತಮ್ಮನ್ನು ತಾವು ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಇತರೆ ರೈತ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಪಾರ್ವತಿರವರ ಕೃಷಿ ಬದುಕಿಗೆ ಪತಿ ಗಣಪತಿ ಮತ್ತು ಮಗ ಅಮೃತ್ ತಿಮ್ಮಯ್ಯ ಬೆಂಬಲವಾಗಿ ನಿಂತಿದ್ದು, ಇವರ ಕೃಷಿ ಭೂಮಿಯಲ್ಲಿ ಅನೇಕ ಹೆಣ್ಣು ಮಕ್ಕಳಿಗೆ ಉದ್ಯೋಗ ಕಲ್ಪಿಸುವ ಮೂಲಕ ಅವರ ಬದುಕಿಗೂ ಆಸರೆಯಾಗಿದ್ದಾರೆ.
ಪಾರ್ವತಿಯವರು ಶಾಲಾ ಹಂತದಲ್ಲಿರುವಾಗ ತಮ್ಮ ನೆಚ್ಚಿನ ಶಿಕ್ಷಕಿಯಾಗಿದ್ದ ಫ್ಯಾನ್ಸಿ ಎಂಬವರ ಹೆಸರನ್ನು ತಮ್ಮ ಹೆಸರಿನೊಂದಿಗೆ ಸೇರಿಸಿಕೊಂಡಿದ್ದಾರೆ. ಇವರು ಕೃಷಿ ಭೂಮಿಯಲ್ಲಿ ಆರ್ಕಿಡ್ ಹೂವಿನ ಗಿಡಗಳು, ಕಾಫಿ, ಸ್ಟ್ರಾಬೆರಿ ಹಣ್ಣು, ಕೋಕೋ ಬೆಳೆ ಯುತ್ತಿದ್ದು, ಕೃಷಿಯಲ್ಲಿ ಸಾಧನೆಯ ಹಾದಿ ಹಿಡಿದಿ ದ್ದಾರೆ. ಈಗ ಕೃಷಿ ಪ್ರವಾಸೋದ್ಯಮ ಕ್ಷೇತ್ರದಲ್ಲಿಯೂ ಹೊಸತನದೊಂದಿಗೆ ಸಾಧನೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.
ಅಮೃತ್‌ರವರಿಗೆ ವಿದ್ಯಾಭ್ಯಾಸ ಮುಗಿದ ಬಳಿಕ ಕೈತುಂಬಾ ಸಂಬಳ ಸಿಗುವ ಕೆಲಸಗಳ ಅವಕಾಶವಿ ದ್ದರೂ ಅವರು ಆಯ್ಕೆ ಮಾಡಿಕೊಂಡಿದ್ದು, ತಮ್ಮ ಮುತ್ತಜ್ಜ ಕೆಟೋಲಿರಾ ದಿವಾನ್ ಬಹದ್ದೂರ್ ಚೆಂಗಪ್ಪ ನವರು 1934ರಲ್ಲಿ ಕಟ್ಟಿಸಿದ್ದ ಬಂಗಲೆಯನ್ನು ಮೊದ ಲಿನ ಮಾದರಿಯಲ್ಲಿ ಉಳಿಸಿಕೊಂಡು, ಆಧುನಿಕ ಸ್ಪರ್ಶ ನೀಡುವ ಕಾಯಕದಲ್ಲಿ, ಕೊಡಗಿನ ಮೊದಲ ಮುಖ್ಯ ಆಯುಕ್ತರು ಮತ್ತು ಸ್ವತಂತ್ರ ಭಾರತದ ಮೊದಲ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದ ದಿವಾನ್ ಬಹದ್ದೂರ್ ಚೆಂಗಪ್ಪ ನವರು 90 ವರ್ಷಗಳ ಹಿಂದೆ ಬ್ರಿಟಿಷ್ ವಾಸ್ತುಶಿಲ್ಪ ಶೈಲಿಯಲ್ಲಿ ಕಟ್ಟಿಸಿದ ‘ದಿ ಬಂಗ್ಲೋ 1934 (WWW. thebungalow1934) ಇಂದು ದೇಶ ವಿದೇಶಗಳಿಂದ ಕೊಡಗಿಗೆ ಬರುವ ಪ್ರವಾಸಿಗರಿಗೆ ಕೊಡಗಿನ ವೀರರ ಇತಿಹಾಸವನ್ನು ತಿಳಿಸಿಕೊಡುವ
ತಾಣವಾಗಿದೆ.
ಪಾರ್ವತಿಯವರು ಪತಿ ಗಣಪತಿಯವರೊಂದಿಗೆ ಕಾಫಿ, ಹೂ ಮತ್ತು ವಿವಿಧ ರೀತಿಯ ಹಣ್ಣುಗಳ ಬೇಸಾಯ ಮಾಡು ತಿದ್ದು, ತಾವು ಬೆಳೆದ ಕೃಷಿ ಉತ್ಪನ್ನ ಗಳನ್ನು ಮೌಲ್ಯವರ್ಧನೆ ಮಾಡುವ ಕಾಯಕದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡು, ಯಶಸ್ವಿಯಾಗಿದ್ದಾರೆ. ಹಾಗೆಯೇ ಸುತ್ತಮುತ್ತಲಿನ ಮೂವತ್ತಕ್ಕೂ ಹೆಚ್ಚು
ಮಹಿಳಾ ಸಸಹಾಯ ಸಂಘಗಳಿಗೆ ತರಬೇತಿ ನೀಡಿ, ಇಂದು ನಬಾರ್ಡ್ ಬ್ಯಾಂಕ್ ಸಹಾಯದಿಂದ ವಿರಾಜಪೇಟೆಯಲ್ಲಿ ತಮ್ಮದೇ ಆದ ಮಾರು ಕಟ್ಟೆ ಸೃಷ್ಟಿಸಿಕೊಂಡಿರುವುದು ಮಾದರಿಯ ಸಂಗತಿ.
ಇವರ ತೋಟದಲ್ಲಿ ಹೋಂ ಮೇಡ್ ವೈನ್, ಹಪ್ಪಳ, ಸಂಡಿಗೆ, ಉಪ್ಪಿನ ಕಾಯಿ, ವಿವಿಧ ರೀತಿಯ ಮನೆ ಅಡುಗೆ ತಿಂಡಿಗಳು, ಮಸಾಲೆ ಪದಾರ್ಥಗಳು, ಕೊಬ್ಬರಿ ಎಣ್ಣೆ, ರೋಸ್ ಮೇರಿ ಆಯಿಲ್ ಮುಂತಾದ ಕೃಷಿ ಉತ್ಪನ್ನಗಳ ಜೊತೆಗೆ ವಿವಿಧ ಬಗೆಯ ಚಾಕಲೇಟ್ ಗಳು ಸಿಗಲಿವೆ. ಇವು ದೇಶದ ವಿವಿಧ ಭಾಗಗಳಲ್ಲದೆ, ಅಂತಾರಾಷ್ಟ್ರೀಯ ಮಟ್ಟವನ್ನು ತಲುಪಿರುವುದು ಹೆಮ್ಮೆಯ ವಿಚಾರ. ವಿಶೇಷವೆಂದರೆ ಖಾಸಗಿ ವಾಹಿನಿಯ ಅಡುಗೆ ಕಾರ್ಯಕ್ರಮದ ನಿರೂಪಕ ಹಾಗೂ ವಿಶ್ವ ವಿಖ್ಯಾತ ಅಡುಗೆ ತಜ್ಞ ಗೋರ್ಡನ್ ರಾಮ್ ಪಾರ್ವತಿಯವರ ಗ್ರೀನ್ ಎಕರ್‌ನಲ್ಲಿ ಮೂರು ದಿನಗಳ ಕಾಲ ಉಳಿದುಕೊಂಡು ಕೊಡಗಿನ ವಿಶಿಷ್ಟ ಖಾದ್ಯಗಳನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ತಮ್ಮ ಗ್ರೀನ್ ಎಕರ್ ಫಾರ್ಮ್ ಅನ್ನು ಮಾದರಿ ಕೃಷಿ ಪ್ರವಾಸೋದ್ಯಮ ಸ್ಥಳವನ್ನಾಗಿ ಬದಲಾಯಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಪಾರ್ವತಿಯ ವರಿಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮತ್ತು ಮೈಸೂರಿನ ವಿಶ್ವೇಶ್ವರಯ್ಯ ಡೆವಲಪ್ಟೆಂಟ್ ಆರ್ಗನೈ ಜೇಷನ್ ವತಿಯಿಂದ ಕೃಷಿ ಸಮ್ಮಾನ ಪುರಸ್ಕಾರ ಸೇರಿದಂತೆ, ಅನೇಕ ಸಂಘ ಸಂಸ್ಥೆಗಳ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಪಾರ್ವತಿಯವರ ದೂ.ಸಂ.: 97400-28225
harshayogi@gmail.com
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…