ಡಿ.ಎನ್.ಹರ್ಷ
ಜೀವನದಲ್ಲಿ ಹೊಸತನ್ನು ಅಳವಡಿಸಿಕೊಂಡು ಬೆಳೆದ ಹುಡುಗ, 30ನೇ ವಯಸ್ಸಿಗೇ ಜರ್ಮನಿ ಯಲ್ಲಿ ಪಿಎಚ್.ಡಿ. ಮುಗಿಸಿದ್ದು, ಪದವಿಗಾಗಿ ಕಾಯುತ್ತಿದ್ದಾರೆ ಮನಸ್ಸು ಮಾಡಿದ್ದರೆ ಅವರು, ಉತ್ತಮ ಹುದ್ದೆ ಹೊಂದಿ ತಿಂಗಳಿಗೆ 12 ಲಕ್ಷ ರೂ.ಗಳಷ್ಟು ಸಂಬಳ ಪಡೆಯುತ್ತಿದ್ದರು.
ಆದರೆ ತಂದೆ-ತಾಯಿ ಜತೆಗೂಡಿ ಮೂರು ಎಕರೆ ಭೂಮಿಯಲ್ಲಿ ಆಧುನಿಕ ತಂತ್ರಜ್ಞಾನ ಗಳನ್ನು ಅಳವಡಿಸಿಕೊಂಡು ಕೃಷಿ ಮಾಡುತ್ತಿರುವುದು ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ಮಂಡ್ಯದಲ್ಲಿ ಎಂ.ಟಿ.ಎನ್. ಕುಮಾರು ಎಂದೇ ಪರಿಚಿತರಾಗಿರುವ ಜೆ.ವಿ.ಕುಮಾ ಮತ್ತು ಹೆಚ್.ಎಸ್.ಮುಕ್ತಾರವರ ಪುತ್ರ ಜೆ.ವಿ.ಹರ್ಷ, ಆಧುನಿಕ ಕೃಷಿಯಲ್ಲಿ ತೊಡಗಿದ್ದಾರೆ. ಮಂಡ್ಯದ ಪಿಇಎಸ್ ಎಂಜಿನಿಯರಿಂಗ್ ಕಾಲೇಜ್‌ನಲ್ಲಿ ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯುನಿಕೇಷನ್ ವಿಭಾಗದಲ್ಲಿ ಬಿಇ ಪಡೆದು ಮುಂದೆ ಜರ್ಮನಿಯ ಎಸ್ತಿಲಿಂಗ್ ಜನ್ ವಿಶ್ವವಿದ್ಯಾನಿಲಯದಲ್ಲಿ ಮಾಸ್ಟರ್ ಡಿಗ್ರಿ ಮುಗಿಸಿ, Karlsruhe Institute of Technology (KIT) ಯಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿರುವ ಹರ್ಷರವರು, ಡಾಕ್ಟರೇಟ್ ಪದವಿ ಪಡೆಯುವತ್ತ ಸಾಗಿರುವುದು ಹೆಮ್ಮೆಯ ಸಂಗತಿ.
ಮಂಡ್ಯದ ಹತ್ತಿರದ ಕೀಲಾರದಲ್ಲಿರುವ ತಮ್ಮ 3 ಎಕರೆ ಭೂಮಿಯಲ್ಲಿ ನೂರಕ್ಕೂ ಹೆಚ್ಚಿನ ವಿವಿಧ ಜಾತಿಯ ಮಾವು, 180ಕ್ಕೂ ಹೆಚ್ಚಿನ ತೇಗ, 200 ಅಡಕೆ, 20 ತೆಂಗಿನ ಮರ, ಹಲಸು, ಕರಿಬೇವು ಇತ್ಯಾದಿಗಳನ್ನು ಕಳೆದ 20 ವರ್ಷಗಳಿಂದ ಯಾವುದೇ ರಾಸಾಯನಿಕಗಳನ್ನು ಬಳಸದೆ ಸಾವಯವ ಕೃಷಿ ಮಾಡುತ್ತಿದ್ದಾರೆ. 5 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ವಿದ್ಯುತ್ ಘಟಕವನ್ನು ಸ್ಥಾಪಿಸಿದ್ದಾರೆ. ಆ ಮೂಲಕ ಕಡಿಮೆ ಖರ್ಚಿನಲ್ಲಿ ಎಲ್ಲ ಆಧುನಿಕ ಸೌಲಭ್ಯಗಳೊಂದಿಗೆ ಕೃಷಿಭೂಮಿಯ ಜತೆಗೆ ಮನೆಗೂ ವಿದ್ಯುತ್ ಪಡೆಯುತ್ತಿದ್ದಾರೆ.
ಅಡಕೆ, ಮಾವು ಬೆಳೆಗಳಿಗೆ ತಕ್ಕ ಹಾಗೆ ನೀರು ಉಣಿಸಲು ಡ್ರಿಪ್ ಲೈನ್ ಮಾಡಿಕೊಂಡು ನೀರಿನ ಸದ್ಬಳಕೆ ಮಾಡಿಕೊಂಡಿದ್ದಾರೆ. ಹರ್ಷರಿಗೆ ಇಂಜಿನಿಯರಿಂಗ್, ಭೌತಶಾಸ್ತ್ರ, Applied science ಬಗ್ಗೆ ಹೆಚ್ಚು ಆಸಕ್ತಿ ಇದ್ದರೂ ಕೃಷಿಯ ಬಗೆಗಿನ ಒಲವು ಮಾತ್ರ ಕಡಿಮೆಯಾಗಿಲ್ಲ. ಇವರು ಇಂಜಿನಿಯರಿಂಗ್ ಪದವಿ ಅಭ್ಯಾಸ ಮಾಡುತ್ತಿದ್ದಾಗಲೇ ಬಾನುಲಿ ಕೃಷಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅದರ ಮಹತ್ವ ಅರಿತಿದ್ದರು.
ಸಾಧ್ಯವಾಗಲೆಲ್ಲಾ ಕೃಷಿ ಪೂರಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಹರ್ಷ ಈಗ ದೂರದ ಜರ್ಮನಿಯಲ್ಲಿಯೂ ಸಮಯ ಸಿಕ್ಕಾಗ ಕೃಷಿಕರ ಜಮೀನುಗಳಿಗೆ ಭೇಟಿ ಕೊಟ್ಟು ತನ್ನ ಕೃಷಿ ಜ್ಞಾನವನ್ನು ಹೆಚ್ಚಿಸಿಕೊಳ್ಳು ತ್ತಿದ್ದಾರೆ. ತಮ್ಮ ಮನೆಯ ಆವರಣದಲ್ಲಿಯೂ ವಿವಿಧ ರೀತಿಯ ತರಕಾರಿಗಳನ್ನು ಬೆಳೆದು ವಿಶೇಷ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಓದಿನೊಂದಿಗೆ ಕೆಲಸ ಮಾಡುತ್ತಿದ್ದ ಹರ್ಷ ಸಮಯಕ್ಕೆ ಸರಿಯಾಗಿ ಗಿಡಗಳಿಗೆ ನೀರುಣಿಸುವ ಸಲುವಾಗಿ ಸ್ವಯಂಚಾಲಿತವಾಗಿ ನೀರುಣಿಸುವ Sensor Based Irrigation Systeme ಅಂಕಣ ಆವಿಷ್ಠಾರ ಮಾಡಿದ್ದಾರೆ. ಅಲ್ಲದೆ ಹೈಡೋಪೋನಿಕ್ಸ್ ತಂತ್ರಜ್ಞಾನ ಉಪಯೋಗಿಸಿ ಒಂದು ಪುಟ್ಟ ಟ್ರೇನಲ್ಲಿ 17 ಕೆ.ಜಿ. ಟೊಮೆಟೋ ಬೆಳೆದಿರುವುದು ವಿಶೇಷ.
ಹರ್ಷ ಚೀನಾ, ಜಪಾನ್ ಸೇರಿದಂತೆ ಏಷ್ಯಾ ಮತ್ತು ಯುರೋಪ್‌ನ ಹಲವು ದೇಶಗಳಿಗೆ ಭೇಟಿ ಕೊಟ್ಟು, ಕೃಷಿ ಪೂರಕ ತಂತ್ರಜ್ಞಾನಗಳ ಬಗ್ಗೆ ಅರಿತಿದ್ದು, ಮುಂದಿನ ದಿನಗಳಲ್ಲಿ ನೋಡಿ ಕಲಿತ ಉಪಯುಕ್ತ ಜ್ಞಾನ ಮತ್ತು ತಂತ್ರಜ್ಞಾನವನ್ನು ನಮ್ಮ ದೇಶದ ಕೃಷಿ ಕ್ಷೇತ್ರದಲ್ಲಿ ಬಳಕೆ ಮಾಡಿಕೊಳ್ಳುವ ತುಡಿತ ಹೊಂದಿದ್ದಾರೆ. ಹರ್ಷರವರ ಸಂಪರ್ಕ ಸಂಖ್ಯೆ: 89512 94779.
ಮೈಸೂರು: ಬ್ರೇಕ್ ಫೇಲ್ ಆಗಿದ್ರು ರಸ್ತೆಗಿಳಿದ ಕೆಎಸ್‌ಆರ್‌ಟಿಸಿ ಬಸ್ಸೊಂದು ಏಕಾಏಕಿ ಮುಂದೆ ಚಲಿಸುತ್ತಿದ್ದ ಮತ್ತೊಂದು ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿರುವ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ರಾಜ್ಯದ ಪ್ರಸಿದ್ದ ಯಾತ್ರಾ ಸ್ಥಳವಾದ ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ…
ನಂಜನಗೂಡು: ಇಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ಸನ್ನಿಧಿಗೆ ಭಕ್ತಸಾಗರವೇ ಹರಿದುಬಂದಿದೆ. ಇಂದು ಬೆಳಿಗ್ಗೆಯಿಂದಲೂ ಸಾವಿರಾರು…
ಸುಂಟಿಕೊಪ್ಪ: ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಅಭಿವೃದ್ಧಿ ನಿಗಮ ನಿಯಮಿತದಿಂದ ಸುಂಟಿಕೊಪ್ಪದಲ್ಲಿ 3.64 ಕೋಟಿ ರೂ ವೆಚ್ಚದಲ್ಲಿ…
ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ದೇವಾಲಯದಲ್ಲಿ ಇನ್ನು ಮುಂದೆ ದಿನದ 24 ಗಂಟೆಯೂ ಪ್ರಸಾದ ವಿತರಣೆ ಮಾಡಲಾಗುತ್ತದೆ. ಮಧ್ಯಾಹ್ನದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಂಡಾಲ್ ಜಲಾಶಯದಲ್ಲಿ ನೀರಿನಲ್ಲಿ ಬೃಹತ್ ಗಾತ್ರದ…