ಅನ್ನದಾತರ ಅಂಗಳ

ಬಂಗಾರ ಬಾಳೆ ಬೆಳೆದ ಹುಳಿಮಾವಿನ ಮಹದೇವಸ್ವಾಮಿ

ಸುತ್ತೂರು ನಂಜುಂಡ ನಾಯಕ

ತಮಗಿರುವ ಒಂದು ಎಕರೆ ಕೃಷಿ ಭೂಮಿಯಲ್ಲಿ ನಂಜನಗೂಡು ರಸಬಾಳೆಯನ್ನು ಉತ್ತಮವಾಗಿ ಬೆಳೆದು ಮಾದರಿ ರೈತರೆನಿಸಿಕೊಂಡಿದ್ದಾರೆ ಹುಳಿಮಾವು ಗ್ರಾಮದ ಎಚ್‌.ಪಿ. ಮಹದೇವಸ್ವಾಮಿ.

ಮೈಸೂರಿನ ವರುಣ ಕ್ಷೇತ್ರಕ್ಕೆ ಸೇರಿರುವ ಹುಳಿಮಾವು ಗ್ರಾಮದ ಪ್ರಗತಿಪರ ರೈತ ಎಚ್.ಪಿ.ಮಹದೇವಸ್ವಾಮಿ, ತಮ್ಮ ಒಂದು ಎಕರೆ ಕೃಷಿ ಭೂಮಿಯಲ್ಲಿ ಬಂಗಾರದಂತಹ ಬಾಳೆ ಬೆಳೆ ಬೆಳೆದಿದ್ದು, ಫಸಲು ಕಟಾವಿಗೆ ಬಂದಿದ್ದು, ನಿರೀಕ್ಷೆಯಂತೆ ಲಾಭ ಗಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಮಗಿರುವ ಒಂದು ಎಕರೆ ಭೂಮಿ ಯಲ್ಲಿಯೇ ಕೃಷಿ ಮಾಡಿ ಆದಾಯಗಳಿಸಬೇಕು ಎಂದು ಶ್ರಮಿಸುತ್ತಿದ್ದ ರೈತ
ಮಹದೇವಸ್ವಾಮಿಯವರಿಗೆ ನಿರೀಕ್ಷೆಯಂತೆ ಬಾರಿ ಬಂಗಾರ ಬಾಳೆ ಬೆಳೆದ ಒಂದು ಕಡೆ ಭಡೆಯಲ್ಲಸಾ ಹುಳಿಮಾವಿನ ಮಹದೇವಸ್ವಾಮಿ ಅಧಿಕ ನಂಜನಗೂಡು ರಸಬಾಳೆ ಗಿಡಗಳನ್ನು ನಾಟಿ ಮಾಡಿದ್ದು, ಅವು ಈಗ ಕಟಾವಿಗೆ ಬಂದಿವೆ. ‘ಬಾಳೆ ಬೆಳೆಯಲು ತೋಟಗಾರಿಕೆ ಇಲಾಖೆ ವತಿಯಿಂದ ಸಹಾಯಧನ ಪಡೆದಿದ್ದು, ಸುಮಾರು ಎರಡು ಲಕ್ಷ ರೂ. ಖರ್ಚು ಮಾಡಿ ಬಾಳೆ ಬೆಳೆದಿದ್ದೇನೆ, ಮುಂದಿನ ವಾರ ಕಟಾವು ಮಾಡಬೇಕು. ಪ್ರತಿ ಕೆ.ಜಿ.ಗೆ 100 ರೂ.ಗಳಿಂದ 150 ರೂ. ಸಿಗುವ ನಿರೀಕ್ಷೆ ಇದೆ. ಅಷ್ಟು ಬೆಲೆ ಸಿಕ್ಕರೆ ಒಂದು ಎಕರೆಯಲ್ಲಿ 6ರಿಂದ 7 ಲಕ್ಷ ರೂ.ಗಳ ವರೆಗೆ ಆದಾಯ ಪಡೆಯಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ. ಅಷ್ಟು ಆದಾಯ ಬಂದೇ ಬರುತ್ತದೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ರೈತ ಮಹದೇವಸ್ವಾಮಿ.

ಇತರ ಬೆಳೆಗಳಿಗೆ ಹೋಲಿಸಿದರೆ ಈ ಭಾಗದಲ್ಲಿ ಬಾಳೆ ಬೆಳೆಯು ರೈತರಿಗೆ ಹೆಚ್ಚು ಆದಾಯವನ್ನು ತಂದು ಕೊಡುವ ಬೆಳೆಯಾಗಿದೆ. ಖರ್ಚು ಕಡಿಮೆ, ಆದಾಯ ಹೆಚ್ಚಿರುವುದರಿಂದ ರೈತರು ಹೆಚ್ಚಾಗಿ ಬಾಳೆ ಬೆಳೆಯುತ್ತಾರೆ. ಅದರಲ್ಲಿಯೂ ನಂಜನ ಗೂಡು ರಸಬಾಳೆಯನ್ನು ಕೆಲವೇ ಕೆಲವು ಭಾಗಗಳಲ್ಲಿ ಮಾತ್ರ
ಬೆಳೆಯುತ್ತಿದ್ದು, ಈ ಬಾಳೆಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿಯೇ ಅನೇಕ ರೈತರು ನಂಜನಗೂಡು ರಸಬಾಳೆಯನ್ನು ಬೆಳೆದು ಈಗಾಗಲೇ ಮಾರಾಟ ಮಾಡಲು ಆರಂಭಿಸಿದ್ದಾರೆ ಎಂಬುದು ಸ್ಥಳೀಯ ರೈತರ
ಮಾತು.

ಸದ್ಯ ಕಡಿಮೆ ಕೃಷಿ ಭೂಮಿಯಲ್ಲಿ ಉತ್ತಮವಾಗಿ ರಸಬಾಳೆಯನ್ನು ಬೆಳೆದಿರುವ ಮಹದೇವಸ್ವಾಮಿಯವರ ತೋಟಕ್ಕೆ ಜಿಲ್ಲಾ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಹೇಮಾ ಭೇಟಿ ನೀಡಿ ವೀಕ್ಷಿಸಿದರು. ನಂಜನಗೂಡು ರಸಬಾಳೆ ನಮ್ಮ ಜಿಲ್ಲೆ ಮಾತ್ರವಲ್ಲದೆ ಇತರೆ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಲ್ಲಿಯೂ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಎಲ್ಲೆಡೆ ಈ ಬಾಳೆಗೆ ಉತ್ತಮ ಬೆಲೆ ಸಿಗುವ ನಿರೀಕ್ಷೆ ಇದೆ. ಈ ಬಾಳೆಯನ್ನು ಮೈಸೂರು ಜಿಲ್ಲೆಯ ನಂಜನಗೂಡು ಭಾಗದಲ್ಲಿ ಹೆಚ್ಚಾಗಿ ಬೆಳೆಯುವುದು ಹೆಮ್ಮೆಯ ವಿಚಾರ. ಇದು ಹೆಚ್ಚು ಆದಾಯ ತಂದುಕೊಡುವುದರಿಂದ ರೈತರು ಹೆಚ್ಚಾಗಿ ನಂಜನಗೂಡು ರಸಬಾಳೆಯನ್ನು ಬೆಳೆದು ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು. ಇನ್ನು ಮಹದೇವಸ್ವಾಮಿಯವರ ಕೃಷಿ ಭೂಮಿಗೆ ತೋಟಗಾರಿಕೆ ಇಲಾಖೆ ಅಧಿಕಾರಿ ಗಳಾದ ಮಂಜುನಾಥ್ ಅಂಗಡಿ, ನಂಜನಗೂಡು ತಾಲ್ಲೂಕು ಅಧಿಕಾರಿ ಚಂದ್ರು, ಹುಳಿಮಾವು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತ ಮುಖಂಡರು ಭೇಟಿ ನೀಡಿ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ರೈತರು ತಮ್ಮ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಲು ನಂಜನಗೂಡು ರಸಬಾಳೆ ಬೆಳೆಯಬಹುದು. ನಂಜನಗೂಡು ರಸಬಾಳೆಗೆ ಎಲ್ಲೆಡೆ ಉತ್ತಮ ಬೆಲೆ ಇದ್ದು, ರೈತರಿಗೆ ಉತ್ತಮ ಆದಾಯ ತಂದುಕೊಡಲಿದೆ. ನಾನು ಮಹದೇವಸ್ವಾಮಿಯವರ ತೋಟಕ್ಕೆ ಭೇಟಿ ನೀಡಿದ್ದೆ. ಅವರು ತಮ್ಮ ಒಂದು ಎಕರೆ ಭೂಮಿಯಲ್ಲಿ ಉತ್ತಮವಾಗಿ ಬೆಳೆ ಬೆಳೆದಿದ್ದಾರೆ. ಶ್ರಮವಹಿಸಿದರೆ ಕೃಷಿಯಲ್ಲಿಯೂ ಉತ್ತಮ ಲಾಭ ಕಾಣಬಹುದು ಎಂಬುದಕ್ಕೆ ಮಹದೇವಸ್ವಾಮಿಯವರೇ ಸಾಕ್ಷಿ. -ಹೇಮಾ, ಜಂಟಿ ನಿರ್ದೇಶಕರು, ಜಿಲ್ಲಾ ತೋಟಗಾರಿಕಾ ಇಲಾಖೆ,

ಆಂದೋಲನ ಡೆಸ್ಕ್

Recent Posts

ಸೆಲ್ಫಿ ವಿಡಿಯೋ ಮಾಡಿ ಆಟೋ ಚಾಲಕ ಆತ್ನಹತ್ಯೆಗೆ ಯತ್ನ

ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…

6 hours ago

ಮಂಡ್ಯದಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು

ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…

8 hours ago

ರಾಜ್ಯದಲ್ಲಿ ಮೂರು ದಿನ ದಟ್ಟ ಮಂಜು ಕವಿದ ವಾತಾವರಣ: ತೀವ್ರ ಚಳಿ ಮುನ್ಸೂಚನೆ

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…

8 hours ago

ಯೂರಿಯಾ ಗೊಬ್ಬರ ತಿಂದು 11 ಮೇಕೆಗಳು ಸಾವು

ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…

8 hours ago

ಚಾಮರಾಜನಗರ| ಹುಚ್ಚುನಾಯಿ ದಾಳಿಯಿಂದ 7 ಮಂದಿಗೆ ಗಾಯ

ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…

9 hours ago

ದುಬಾರಿ ಗಿಫ್ಟ್‌ ತೆಗೆದುಕೊಳ್ಳುವುದು ತಪ್ಪಾಗುತ್ತದೆ: ಸಂಸದ ಯದುವೀರ್‌ ಒಡೆಯರ್‌

ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…

9 hours ago