Government Subsidy
ಪಿಎಂ ಕುಸುಮ್-ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ತಾನ್ ಮಹಾಭಿಯಾನ್ (PM-KUSUM:
Pradhan Mantri Kisan Urja Suraksha evam Uttan Mahaabhiyan)ಕಾಂಪೋನೆಂಟ್-ಬಿ ಅಡಿಯಲ್ಲಿ ಜಾಲಮುಕ್ತ ಸೌರ ಚಾಲಿತ ಪಂಪ್‌ಸೆಟ್ ಗಳನ್ನು ಅಳವಡಿಸುವ ಯೋಜನೆಯನ್ನು ಕೆಆರ್ ಇಡಿಎಲ್ (KREDL) ಮೂಲಕ ರಾಜ್ಯವ್ಯಾಪ್ತಿಯಲ್ಲಿ ಬರುವ ಎಲ್ಲ ವಿದ್ಯುತ್ ಸರಬರಾಜು ನಿಗಮಗಳ ಸಹಯೋಗದೊಂದಿಗೆ ಕೈಗೊಳ್ಳಲಾಗಿದೆ. ಈ ಯೋಜನೆಯ ಅಡಿಯಲ್ಲಿ ಪ್ರತಿ ಸೌರ ಪಂಪ್‌ಸೆಟ್‌ಗೆ ಶೇ.೩೦ರಷ್ಟು ಕೇಂದ್ರದಿಂದ ಸಹಾಯಧನದೊಂದಿಗೆ ಗರಿಷ್ಟ ೭.೫ ಎಚ್‌ಪಿ (೭.೫ hp) ಸಾಮರ್ಥ್ಯವಿರುವ ಪಂಪ್‌ಸೆಟ್‌ಗಳನ್ನು ಪಡೆದುಕೊಳ್ಳಬಹದಾಗಿದೆ.
ರೈತರು ೧೦ ಎಚ್‌ಪಿ (೧೦ hp) ಸಾಮರ್ಥ್ಯ ವಿರುವ ಪಂಪ್‌ಸೆಟ್‌ಗಳನ್ನು ಕೂಡ ಅಳವಡಿಸಬಹುದು. ಆದರೆ, ಪ್ರತಿ ಪಂಪ್‌ಸೆಟ್‌ಗೆ ಕೇಂದ್ರದ ಸಹಾಯಧನ ೭.೫ ಎಚ್‌ಪಿ ಸಾಮ್ಯರ್ಥದ ಪಂಪ್ ಸೆಟ್ ದರದ ಶೇ.೩೦ಕ್ಕೆ ಸೀಮಿತಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಶೇ. ೩೦ ಸಹಾಯಧನ ಹೊರತುಪಡಿಸಿ, ರಾಜ್ಯ ಸರ್ಕಾರದಿಂದ ಸಾಮಾನ್ಯ ವರ್ಗದ ರೈತ ಫಲಾನುಭವಿಗಳಿಗೆ, ಕೊಳವೆ ಅಥವಾ ತೆರೆದ ಬಾವಿಗಳಿಗೆ ಸೌರ ಪಂಪ್‌ಸೆಟ್ ಒದಗಿಸಲು ಶೇ.೩೦ ಸಹಾಯಧನದ ಒದಗಿಸಲಾಗುತ್ತಿದೆ.
ಇದಲ್ಲದೇ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಗಳ ರೈತರಿಗೆ ಶೇ.೫೦ ಸಹಾಯಧನದ ಒದಗಿಸಲಾಗುತ್ತಿದೆ. ಉಳಿದ ಮೊತ್ತವನ್ನು ರೈತರು ಪಾವತಿಸಬೇಕಾಗುತ್ತದೆ. (ಸಾಮಾನ್ಯ ವರ್ಗ ಶೇ.೪೦, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಶೇ.೨೦). ಅರ್ಹ ರೈತ ಫಲಾನುಭವಿಗಳು ಯಾವುದೇ ಕಚೇರಿಗಳಿಗೆ ಭೇಟಿ ನೀಡದೇ, ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಕೆಗೆ ನಿಯಮಗಳು:
* ರೈತರು ಜಮೀನಿನಲ್ಲಿ ಬಾವಿಯನ್ನು ಕೊರೆಸಿರಬೇಕು
* ಈ ಯೋಜನೆಯು ಹೊಸ ಕೃಷಿ ಪಂಪ್‌ಸೆಟ್‌ಗಳಿಗೆ ಮಾತ್ರ ಅನ್ವಯ
* ಹಾಲಿ ವಿದ್ಯುತ್ ಸಂಪರ್ಕ ಹೊಂದಿರುವ ಪಂಪ್‌ಸೆಟ್‌ಗಳು ಅರ್ಹವಿರುವುದಿಲ್ಲ
* ಈಗಾಗಲೇ ಗಂಗಾಕಲ್ಯಾಣ ಯೋಜನೆಯಡಿ ಲಾಭವನ್ನು ಪಡೆದಿರುವ ರೈತರು ಅರ್ಹರಲ್ಲ
* ಪಿಎಂ-ಕುಸುಮ್, ಕಾಂಪೋನೆಂಟ್-ಬಿ ಮಾರ್ಗಸೂಚಿಯ ಅನ್ವಯ ‘ಡಾರ್ಕ್ ಝೋನ್’ ಎಂದು ಘೋಷಿಸರುವ ಪ್ರದೇಶಗಳಲ್ಲಿ ಈ ಯೋಜನೆಯು ಅನ್ವಯಿಸುವುದಿಲ್ಲ
* ಅರ್ಜಿದಾರರು ಕೇವಲ ಒಂದು ಸೌರ ಪಂಪ್‌ಸೆಟ್‌ಗೆ ಅರ್ಜಿ ಸಲ್ಲಿಸಬಹುದು
* ಈಗಾಗಲೇ ಇತರೆ ಅನುದಾನಿತ ಸರ್ಕಾರಿ ಪ್ರಾಯೋಜಿತ ಯೋಜನೆಗಳಡಿ ಸೌರ ಪಂಪ್‌ಸೆಟ್ ಪಡೆದಿದ್ದರೆ ಅಂತಹ ಅರ್ಜಿದಾರರು ಈ ಯೋಜನೆಯ ಲಾಭವನ್ನು ಪಡೆಯಲು ಅರ್ಹರಿರುವುದಿಲ್ಲ
* ಎಲ್ಲ ವರ್ಗದ ಅರ್ಜಿಗಳಲ್ಲಿ ವಿಶೇಷಚೇತನರಿಗೆ ಶೇ.೫ ರಷ್ಟು ಮೀಸಲಾತಿ ಒದಗಿಸಲಾಗುತ್ತದೆ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
* ಭೂ ಮಾಲೀಕತ್ವ ಇರುವ ಅರ್ಜಿದಾರರ ಹೆಸರು
* ವಾಸಸ್ಥಳ ಮತ್ತು ವಿಳಾಸ, ಗ್ರಾಮ, ತಾಲ್ಲೂಕು, ಜಿಲ್ಲೆ
* ಆಧಾರ್ ಸಂಖ್ಯೆ, ದೂರವಾಣಿ ಸಂಖ್ಯೆ
* ಆರ್‌ಟಿಸಿ ಮತ್ತಿತರೆ ಅವಶ್ಯ ದಾಖಲೆಗಳು
* ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ https://kredlinfo.in/Applnoffgridswp
ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…
ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…
ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…
ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…
ಮೈಸೂರು: ಸಹಕಾರ ಮಹಾಮಂಡಲದ ಅಧ್ಯಕ್ಷ ಸ್ಥಾನಕ್ಕೆ ಜಿ.ಟಿ. ದೇವೇಗೌಡ ಆಯ್ಕೆಯಾಗಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…
ಈಗಿನ ಕಾಲದ ಮಕ್ಕಳಿಗೆ ಎಲ್ಲವೂ ಕ್ಷಣ ಮಾತ್ರದಲ್ಲಿ ಅರ್ಥವಾಗುವುದರಿಂದ ಅವರ ವರ್ತನೆಯಲ್ಲಿ ಸಹಜತೆಯನ್ನು ಕಾಣಬಹುದು. ಇಂದಿನ ಮಕ್ಕಳಿಗೆ ಭಯ ಇಲ್ಲ…