• ಜಿ.ಕೃಷ್ಣ ಪ್ರಸಾದ್
ನಾಲ್ಕು ವರ್ಷಗಳ ಕೆಳಗೆ ರಾಜಸ್ಥಾನದ ಬಾನಸವಾಡ ಪಟ್ಟಣದ ಬೀಜಮೇಳಕ್ಕೆ ಹೋಗಿದ್ದೆ. ಬೀಜಮೇಳ ಆಯೋಜನೆಯಾಗಿದ್ದ ‘ವಾಗ್ದಾರ’ ಎಂಬ ಸಂಸ್ಥೆಯ ಆವರಣದಲ್ಲಿ ಸಿಂಗಪುರ ಚೆರಿ ಮರದ ರೀತಿ ಹರಡಿಕೊಂಡ ಹಿಪ್ಪುನೇರಳೆ ಗಿಡವಿತ್ತು.

ಗಿಡದ ತುಂಬಾ ಹಣ್ಣುಗಳು. ಕಿತ್ತಷ್ಟೂ ಬೊಗಸೆ ತುಂಬುತ್ತಿದ್ದವು. ನಾನಿದ್ದ ಎರಡೂ ದಿನ ಸಾಕು ಬೇಕಷ್ಟು ರೇಷ್ಮೆ ಹಣ್ಣು ತಿಂದಿದ್ದೆ.

ನಮ್ಮೂರಲ್ಲೂ ಹಿಪ್ಪು ನೇರಳೆ ಬೆಳೆಸುತ್ತಿದ್ದೆವು. ಆದರೆ ರೇಷ್ಮೆ ಹುಳುವಿನ ಮೇವಿಗೆ ಎಳೆಯ ಸೊಪ್ಪು ಕತ್ತರಿಸುತ್ತಿದ್ದರಿಂದ ಅದು ಬೆಳೆದು ಹಣ್ಣಾಗುವ ಅವಕಾಶ ಇರುತ್ತಿರಲಿಲ್ಲ. ಬದು ವಿನಲ್ಲಿ ತಪ್ಪಿಸಿಕೊಂಡ ಗಿಡಗಳಲ್ಲಿ ಅಪರೂಪಕ್ಕೆ ಒಂದೆರಡು ರೇಷ್ಮೆ ಹಣ್ಣುಗಳು ಸಿಗುತ್ತಿದ್ದವು.

ಇಲ್ಲಿ ನೋಡಿದರೆ ಗಿಡದ ತುಂಬಾ ಹಣ್ಣಿನ ಸುಗ್ಗಿ. ಅದರ ರುಚಿಗೆ ಮನಸೋತು ಒಂದಷ್ಟು ಕಡ್ಡಿಗಳನ್ನು ತಂದು ತೋಟದಲ್ಲಿ ನೆಟ್ಟಿದ್ದೆ. ಮೊನ್ನೆ ತೋಟಕ್ಕೆ ಹೋದಾಗ ನಾಲ್ಕು ವರ್ಷಗಳ ಹಿಂದೆ ನೆಟ್ಟ ರಾಜಸ್ಥಾನದ ಹಿಪ್ಪುನೇರಳೆ ಗಿಡ ಸಣ್ಣ ಮರವಾಗಿ, ಹಣ್ಣು ಹೊತ್ತು ತೊನೆಯುತ್ತಿತ್ತು. ಮನಸೋ ಇಚ್ಛೆ ತಿಂದು ಸಂಭ್ರಮಪಟ್ಟೆ.

ಹಿಪ್ಪು ನೇರಳೆ ಹಣ್ಣಿನ ತಳಿಗಳು: ಹಿಪ್ಪು ನೇರಳೆಯಲ್ಲಿ ನೂರಾರು ತಳಿಗಳಿವೆ. ತಮಿಳುನಾಡಿನ ಹೊಸೂರಿನಲ್ಲಿರುವ ರೇಷ್ಮೆ ಸಂಶೋಧನಾ ಕೇಂದ್ರದಲ್ಲಿ 1,269 ತಳಿಗಳ ಸಂಗ್ರಹವಿದೆ. ರೇಷ್ಮೆ ಕೃಷಿಗೆ ಬಳಸುವ ಸಾಮಾನ್ಯ ಹಿಪ್ಪು ನೇರಳೆ ತಳಿಗಳು ಹಣ್ಣಿಗೆ ಸೂಕ್ತವಲ್ಲ. ಮರವಾಗುವ, ಸಿಹಿ ರುಚಿ ಇರುವ ಉದ್ದನಾದ ಹಣ್ಣಿನ ವಿಶೇಷ ತಳಿಗಳ ಬೆಳೆಸಬೇಕು. ಈ ತಳಿಗಳು ಸಾಕು ಬೇಕಷ್ಟು ಹಣ್ಣು ಕೊಡುತ್ತವೆ; ನೆರಳೂ ನೀಡುತ್ತವೆ.

ನೆಟ್ಟ ಒಂದು ವರ್ಷಕ್ಕೆ ಹಣ್ಣು ಸಿಕ್ಕರೂ, ಸಮೃದ್ಧವಾಗಿ ಫಲ ನೀಡಲು ಮೂರು-ನಾಲ್ಕು ವರ್ಷ ಕಾಯಬೇಕು. ರೋಗ ಕೀಟಗಳ ಬಾಧೆ ಯಿಲ್ಲ. ಹೆಚ್ಚು ನೀರು, ಆರೈಕೆ ಕೇಳುವುದಿಲ್ಲ.

ಮೌಲ್ಯವರ್ಧನೆಯ ಅವಕಾಶಗಳು: ಹಣ್ಣುಗಳನ್ನು ಮಾರುಕಟ್ಟೆಗೆ ತರುವುದು ಕಷ್ಟ. ಹಾಲಿನಂತೆ ಫ್ರಿಜ್‌ನಲ್ಲಿ ಸಂಗ್ರಹಿಸಿಡಬೇಕು. ಇಲ್ಲವೆ ರೈತ ಸಂತೆಗಳಲ್ಲಿ ನೇರ ಮಾರಾಟ ಮಾಡಬೇಕು. ರೇಷ್ಮೆ ಹಣ್ಣನ್ನು ಒಣ ದ್ರಾಕ್ಷಿಯಂತೆ ನಿರ್ಜಲೀಕರಣ ಮಾಡಿ ಮಾರುವುದು ಹೆಚ್ಚು ಲಾಭದಾಯಕ. ಮಹಾರಾಷ್ಟ್ರದ ಕಂಪೆನಿಯೊಂದು ಇದಾಗಲೇ ಒಣ ರೇಷ್ಮೆ ಹಣ್ಣನ್ನು ಮಾರುಕಟ್ಟೆಗೆ ತಂದಿದೆ.

ನನ್ನ ತೋಟದ ಹಿಪ್ಪು ನೇರಳೆ ಹಣ್ಣನ್ನು ಎರಡು ದಿನ ಡೈಯರ್‌ನಲ್ಲಿಟ್ಟು ಒಣಗಿಸಿ ನೋಡಿದೆ. ಒಣ ದ್ರಾಕ್ಷಿಯಂತೆ ರುಚಿಯಾಗಿತ್ತು. ಬೇಗ ಬೂಸ್ಟ್ ಬರುವುದರಿಂದ, ಒಣಗಿಸುವಾಗ ಜಾಗ್ರತೆ ವಹಿಸಬೇಕು. ಹಿಪ್ಪುನೇರಳೆ ಹಣ್ಣು ರುಬ್ಬಿ, ಜೇನುತುಪ್ಪ ಸೇರಿಸಿದರೆ ರುಚಿಕರ ಜಾಮ್ ಸಿದ್ಧವಾಗುತ್ತದೆ. ಎಳೆಯ ಹಿಪ್ಪುನೇರಳೆ ಎಲೆಯ ಚೂರುಗಳನ್ನು ಕುದಿಯುವ ನೀರಿಗೆ ಹಾಕಿ ‘ಹರ್ಬಲ್ ಟೀ ತಯಾರಿಸಬಹುದು. ಎಲೆಗಳನ್ನು ಒಣಗಿಸಿ, ಪುಡಿಮಾಡಿ ಕೂಡ ಚಹ ತಯಾರಿಸಬಹುದು. ಇದರ ಸೇವನೆಯಿಂದ ಸುಖಕರ ನಿದ್ದೆ ಬರುತ್ತದೆ. ನರಗಳ ಸೆಳೆತ ಶಕ್ತಿ ಕಡಿಮೆಯಾಗುತ್ತದೆ. ಯಾವನೋ ಪುಣ್ಯಾತ್ಮ ರೇಷ್ಮೆ ಎಲೆ ಪುಡಿ ಮಾಡುವ ವಿಧಾನವನ್ನೂ ಪೇಟೆಂಟ್ ಮಾಡಿಕೊಂಡಿದ್ದಾನಂತೆ!

ಥಾಯ್‌ ಲ್ಯಾಂಡ್ ದೇಶದ ಹಣ್ಣಿನ ಅಂಗಡಿಗಳಲ್ಲಿ ಇದರ ಹಣ್ಣು ಮಾರಾಟಕ್ಕೆ ಸಿಗುತ್ತದೆ.

ಜಾಮ್ ಜಲ್ಲಿ ಮೊದಲಾದ ಇದರ ಮೌಲ್ಯವರ್ಧಿತ ಪದಾರ್ಥಗಳು ಲಭ್ಯ. ಮೈಸೂರು- ಕೆಆರ್‌ಎಸ್ ರಸ್ತೆಯಲ್ಲಿ ಬೆಳಗೊಳ ಸಮೀಪ ಇರುವ ಬೆಳವಲ ಪರಿಸರ ತೋಟ’ ದಲ್ಲಿ ಹಣ್ಣಿನ ತಳಿಯ ಹಿಪ್ಪು ನೇರಳೆ ಗಿಡಗಳು ಲಭ್ಯವಿವೆ. ಆಸಕ್ತರು ಮದನ್ ಮೊ. ಸಂ. 7411048468 ಸಂಪರ್ಕಿಸಬಹುದು.

ಔಷಧಿ ಗುಣಗಳ ಖಜಾನೆ: 
ಹಿಪ್ಪು ನೇರಳೆ ಹಣ್ಣಿನ ಬಳಕೆಯಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ದೃಷ್ಟಿ ದೋಷ ಸುಧಾರಿಸುತ್ತದೆ. ರಕ್ತ ಶುದ್ದೀಕರಣಕ್ಕೆ ಸಹಕಾರಿ, ನರದೌರ್ಬಲ್ಯದಿಂದ ಬಳಲುವವರಿಗೂ ಇದು
ಔಷಧಿ, ಹಿಪ್ಪು ನೇರಳೆ ಹಣ್ಣು ವಿಟಮಿನ್ ಸಿ, ವಿಟಮಿನ್ ಇ, ಪೊಟಾಷಿಯಂ ಮತ್ತು ಕಬ್ಬಿಣದಿಂದ ಸಮೃದ್ಧವಾಗಿದೆ. ಹಾಗಾಗಿ ರಕ್ತಪುಷ್ಟಿ ಹೆಚ್ಚಿಸಲು ಸಹಕಾರಿ. ಹಿಪ್ಪು ನೇರಳೆ ಹಣ್ಣು
ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಕಾರಿ, ಹಾಗಾಗಿ ಮಧುಮೇಹಿಗಳು ಅಂಜಿಕೆಯಿಲ್ಲದೆ ಹಿಪ್ಪು ನೇರಳೆ ಹಣ್ಣು ಚಪ್ಪರಿಸಬಹುದು. ನಮ್ಮ ದೇಹದ ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಅನಗತ್ಯ ಕೊಬ್ಬು ಈ ಹಣ್ಣಿನ ಸೇವನೆಯಿಂದ ಕಡಿಮೆಯಾಗುತ್ತದೆ. ಇದರಲ್ಲಿ ಅಧಿಕ ಪ್ರಮಾಣದ ಕಬ್ಬಿಣದ ಅಂಶ ಇದ್ದು, ಇದು ನಮ್ಮ ದೇಹದಲ್ಲಿ ರಕ್ತ ಚಲನೆಯನ್ನು ವೃದ್ಧಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಆಂದೋಲನ ಡೆಸ್ಕ್

Recent Posts

ಸೆಲ್ಫಿ ವಿಡಿಯೋ ಮಾಡಿ ಆಟೋ ಚಾಲಕ ಆತ್ನಹತ್ಯೆಗೆ ಯತ್ನ

ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…

8 hours ago

ಮಂಡ್ಯದಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು

ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…

10 hours ago

ರಾಜ್ಯದಲ್ಲಿ ಮೂರು ದಿನ ದಟ್ಟ ಮಂಜು ಕವಿದ ವಾತಾವರಣ: ತೀವ್ರ ಚಳಿ ಮುನ್ಸೂಚನೆ

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…

10 hours ago

ಯೂರಿಯಾ ಗೊಬ್ಬರ ತಿಂದು 11 ಮೇಕೆಗಳು ಸಾವು

ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…

10 hours ago

ಚಾಮರಾಜನಗರ| ಹುಚ್ಚುನಾಯಿ ದಾಳಿಯಿಂದ 7 ಮಂದಿಗೆ ಗಾಯ

ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…

11 hours ago

ದುಬಾರಿ ಗಿಫ್ಟ್‌ ತೆಗೆದುಕೊಳ್ಳುವುದು ತಪ್ಪಾಗುತ್ತದೆ: ಸಂಸದ ಯದುವೀರ್‌ ಒಡೆಯರ್‌

ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…

11 hours ago