ರಮೇಶ್.ಪಿ ರಂಗಸಮುದ್ರ
ಮುಂಗಾರು ಎಂದರೆ ಅದು ಸಕಲ ಜೀವರಾಶಿಗಳಿಗೂ ಮರು ಹುಟ್ಟಿನ ಕಾಲ. ರೈತರು ಭೂಮಿಯನ್ನು ಉತ್ತಿ ಬಿತ್ತುವುದು ತನಗಾಗಿ ಮಾತ್ರವಲ್ಲ ಭೂಮಿಯ ಮೇಲಿನ ಸಕಲ ಜೀವರಾಶಿಗಳ ಬದುಕಿಗಾಗಿ, ಆದರೆ ಪ್ರಸ್ತುತ ನಮ್ಮ ಜೀವನಶೈಲಿ ಹಾಗೂ ಆಹಾರ ಪದ್ಧತಿಯಲ್ಲಿ ಮನುಕುಲದ ಆರೋಗ್ಯ ತೀವ್ರವಾಗಿ ಕುಸಿತಕ್ಕೆ ಒಳಗಾಗಿದೆ.
ಆಹಾರವೇ ಔಷಧವಾಗಿದ್ದ ಜಾಗದಲ್ಲಿ ಈಗ ಔಷಧವೇ ಆಹಾರವಾಗಿ ಸಮಾಜದ ಸ್ವಾಸ್ಥ್ಯ ಹದಗೆಡುತ್ತಿದೆ. ಇಂತಹ ಸಂದರ್ಭದಲ್ಲಿ ಕಿರುಧಾನ್ಯಗಳು ರೋಗಮುಕ್ತ ಸಮಾಜಕ್ಕೆ ಅವಶ್ಯವಾದ ಆಹಾರವಾಗಿದೆ. ಹತ್ತು ಸಾವಿರ ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿರುವ ಈ ಕಿರುಧಾನ್ಯಗಳನ್ನು ದೇಶದ ಉದ್ದಗಲಕ್ಕೂ ಬೆಳೆಯುತ್ತಿದ್ದರೂ ಭತ್ತ ಮತ್ತು ಗೋಧಿ ಪ್ರಭಾವದಿಂದಾಗಿ ಹಾಗೂ ಬದಲಾದ ಆಹಾರ ಪದ್ದತಿಗಳಿಂದ ರೈತರ ಹೊಲ ಮನೆಗಳಿಂದ ಈ ಸಿರಿಧಾನ್ಯಗಳು ದೂರ ಸರಿಯತೊಡಗಿದವು. ಮಧುಮೇಹ, ರಕ್ತದೊತ್ತಡ, ಹೃದಯ ರೋಗ, ಕೊಲೆಸ್ಟ್ರಾಲ್, ಕ್ಯಾನ್ಸರ್ ರೋಗಗಳು ಸಾರ್ವತ್ರಿಕವಾಗಿ ಜನರನ್ನು ಇನ್ನಿಲ್ಲದಂತೆ ಕಾಡಲು ಶುರು ಮಾಡಿದಾಗ ಜನರಿಗೆ ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಅನುಭವಕ್ಕೆ ಬಂದಿತು. ಪೋಷಕಾಂಶಗಳ ಆಗರವಾಗಿರುವ ಕಿರುಧಾನ್ಯಗಳು ಅಪಾರ ರೋಗನಿರೋಧಕ ಗುಣಗಳಿಂದಾಗಿ ಸಿರಿಧಾನ್ಯಗಳೆಂದು ಕರೆಯಲ್ಪಟ್ಟಿವೆ. ಸಿರಿ ಧಾನ್ಯಗಳಲ್ಲಿ ನವಣೆ, ಸಾಮೆ, ಹಾರಕ ಬರಗೂ ಊದಲು, ಕೊರಲೆ ಮುಖ್ಯವಾದವು. ಜೋಳ, ಸಜ್ಜೆ, ರಾಗಿ ಕೂಡ ಸಿರಿಧಾನ್ಯಗಳ ಕುಟುಂಬಕ್ಕೆ ಸೇರಿದ ಪ್ರಸಿದ್ದ ಧಾನ್ಯಗಳಾಗಿವೆ.
ಸಿರಿಧಾನ್ಯಗಳ ಸರಳ ಬೇಸಾಯ ಕ್ರಮಗಳು: ನವಣೆ, ಸಾಮೆ, ಊದಲು, ಹಾರಕ, ಕೊರಲೆ ಮೊದಲಾದ ಸಿರಿಧಾನ್ಯಗಳನ್ನು ಪೂರ್ವ ಮುಂಗಾರು ಕಾಲದಿಂದ ಡಿಸೆಂಬರ್ ತಿಂಗಳವರೆಗೂ ಬೆಳೆಯಬಹುದಾಗಿದೆ. ಅತಿ ಕಡಿಮೆ ನೀರಿನಲ್ಲಿಯೂ, ಶುಷ್ಕ ಭೂಮಿಯಲ್ಲಿ ಬೆಳೆಯಬಹುದಾದ ಧಾನ್ಯಗಳಾಗಿವೆ.
ಒಂದು ಎಕರೆಗೆ 8 ರಿಂದ 12 ಕೆ.ಜಿ. ಬಿತ್ತನೆ ಬೀಜ ಬೇಕಾಗುತ್ತದೆ. ಅಲ್ಲದೆ ಬಿತ್ತನೆಗೆ ಮುಂಚಿತವಾಗಿ ನಾಲ್ಕರಿಂದ ಐದು ಟನ್ ಗೊಬ್ಬರವನ್ನು ಒಂದು ಎಕರೆಗೆ ಮಣ್ಣಿನಲ್ಲಿ ಸೇರಿಸಬೇಕು. 3.5 ರಿಂದ 4ಸೆ. ಮೀ.ಗಿಂತ ಹೆಚ್ಚು ಆಳವಿಲ್ಲದಂತೆ ಬಿತ್ತಬೇಕು. ಪೈರಿನಿಂದ ಪೈರಿಗೆ 7.5 ರಿಂದ 10ಸೆ.ಮೀ. ಅಂತರವಿರಬೇಕು, 85ರಿಂದ 90 ದಿನಗಳ ಅವಧಿಗೆ ಕಟಾವಿಗೆ ಬರುವ ಸಿರಿಧಾನ್ಯಗಳು ಒಂದು ವಾರದ ಎಕರೆಗೆ 8ರಿಂದ 10 ಕ್ವಿಂಟಾಲ್ ಇಳುವರಿ ಕೃಷಿ ಅಂಕಣಯನ್ನು ಕೊಡುತ್ತವೆ. ಅಂತರ ಬೆಳೆಯಾಗಿ ಹುರುಳಿ ಮತ್ತು ಹಸಿರು ಕಾಳುಗಳನ್ನು ಬಿತ್ತಬಹುದು. ಸಿರಿಧಾನ್ಯಗಳ ಜೊತೆ ಅಂತರ ಬೆಳೆಯಾಗಿ ತೊಗರಿ, ಅವರೆ, ಹಸಿರು ಕಾಳು, ಹುಚ್ಚಳ್ಳು, ಶೇಂಗಗಳನ್ನೂ ಬೆಳೆದುಕೊಳ್ಳಬಹುದು.
ಸಿರಿಧಾನ್ಯಗಳು ಪಕ್ಷಿ ಸಂಕುಲಕ್ಕೆ ಬಲು ಇಷ್ಟವಾದ ಆಹಾರವಾದ್ದರಿಂದ ಒಂದು ಅಥವಾ ಎರಡು ಎಕರೆಯಲ್ಲಿ ಬೆಳೆದರೆ ಬೆಳೆ ಹಕ್ಕಿಗಳ ಪಾಲಾಗುತ್ತದೆ. ಆದ್ದರಿಂದ ಸಾಮೂಹಿಕವಾಗಿ ರೈತರು ಬೆಳೆಯಬೇಕು. ಸಿರಿಧಾನ್ಯಗಳ ಒಕ್ಕಣೆ ನಂತರದ ಹುಲ್ಲು ಹಸು, ಕುರಿ, ಮೇಕೆಗಳಿಗೆ ಪ್ರಿಯವಾದ ಮೇವಾಗುತ್ತದೆ.
ಸಿರಿಧಾನ್ಯ ಬೇಸಾಯದಿಂದಾಗುವ ಪ್ರಯೋಜನಗಳು
• ಕಡಿಮೆ ಖರ್ಚಿನಲ್ಲಿ, ಕಡಿಮೆ ಮಳೆ ಆಶ್ರತ ಪ್ರದೇಶಗಳಲ್ಲಿಯೂ ಬೆಳೆಯಬಹುದು.
• ಸರಳ ಬೇಸಾಯ ಕ್ರಮಗಳಿಂದ ವರ್ಷದಲ್ಲಿ 3 ಬೆಳೆಗಳನ್ನು ಪಡೆದುಕೊಳ್ಳಬಹುದು. ಮೇ-ಜುಲೈ ಒಂದು ಹಂಗಾಮು. ಆಗಸ್ಟ್ -ಅಕ್ಟೋಬರ್ ಒಂದು ಹಂಗಾಮು, ನವೆಂಬರ್
-ಜನವರಿ ಒಂದು ಹಂಗಾಮ
• ಪೂರ್ವ ಮುಂಗಾರಿನಿಂದ ಹಿಂಗಾರು ಹಾಗೂ ಇಬ್ಬನಿ ಅವಧಿಯಲ್ಲಿಯೂ ಬೆಳೆಯಬಹುದು.
• ಕಿರು ಧಾನ್ಯಗಳು ವಾತಾವರಣದಲ್ಲಿರುವ ಸಾರಜನಕ ಹಾಗೂ ತೇವಾಂಶವನ್ನು ಸ್ವೀಕರಿಸುವ ಕೆಲಸ ಮಾಡುತ್ತವೆ.
ಎಲ್ಲ ಜಾತಿಯ ಪಕ್ಷಿ ಸಂಕುಲಗಳನ್ನು ಆಕರ್ಷಿಸುವುದರಿಂದ ಮಣ್ಣಿನಲ್ಲಿ ಕೀಟ ಹುಳಭಾದೆಯನ್ನು ತಡೆಯುತ್ತವೆ.
• ಸಿರಿ ಧಾನ್ಯ ಕಟಾವಾದ ನಂತರ ಒಣ ಹುಲ್ಲನ್ನು ಮಣ್ಣಿಗೆ ಸೇರಿ ಸುವುದರಿಂದ ನೈಸರ್ಗಿಕ ಪೊಟ್ಯಾಷ್ ಮಣ್ಣಿಗೆ ದೊರೆಯುತ್ತದೆ. ಮಿಶ್ರ ಬೇಸಾಯ ಹಾಗೂ ಅಂತರ್ ಬೆಳೆಯಾಗಿ ಧಾನ್ಯದ ಜೊತೆ ದ್ವಿದಳ ಧಾನ್ಯಗಳು ಮತ್ತು ಉಚ್ಚಳ್ಳು ಶೇಂಗಾಗಳನ್ನೂ ಬೆಳೆಯಬಹುದು. ಹೆಚ್ಚು ನೀರನ್ನು ಕೇಳುವ ಭತ್ತ, ಗೋಧಿ ಉತ್ಪಾದನೆಯ ಒತ್ತಡವನ್ನು ನಿಯಂತ್ರಿಸಬಹುದು.
ಚಾ.ನಗರದ ತರಕಾರಿ ಮಾರುಕಟ್ಟೆ, ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಮುಚ್ಚಿದ ಶೌಚಾಲಯಗಳು; ಜನರಿಗೆ ಸಮಸ್ಯೆ ಚಾಮರಾಜನಗರ: ನಗರದಲ್ಲಿನ ಎರಡು ಸಾರ್ವಜನಿಕ…
ಹುಣಸೂರು: ಹಾಡಿಗಳ ಅರಣ್ಯ ಹಕ್ಕು ಸಮಿತಿಗಳ ಪ್ರತಿನಿಧಿಗಳಿಂದ ಅರಣ್ಯ ಪ್ರವೇಶ ಅಭಿಯಾನ ಹುಣಸೂರು: ತಾಲ್ಲೂಕಿನ ಆದಿವಾಸಿಗಳು ೨೦೦೬ರ ಆರಣ್ಯ ಹಕ್ಕು…
ಕೆ.ಬಿ.ರಮೇಶ ನಾಯಕ ೨೦೧೩-೧೪, ೨೦೧೪-೧೫ನೇ ಸಾಲಿನಲ್ಲಿ ಪ್ರವೇಶ ಪಡೆದು ಉತ್ತೀರ್ಣರಾದವರಿಗೆ ಪದವಿ ಪ್ರಮಾಣಪತ್ರ ಮುಕ್ತ ವಿವಿಯ ಇನ್‌ಹೌಸ್‌ನಲ್ಲಿ ಪ್ರವೇಶ ಪಡೆದಿದ್ದವರಿಗೆ…
ಕಡಿಮೆ ದರದಲ್ಲಿ ಊಟ, ತಿಂಡಿ ನೀಡುತ್ತಿದ್ದ ಕ್ಯಾಂಟೀನ್ ಮುಚ್ಚಿದ್ದರಿಂದ ಕೂಲಿ ಕಾರ್ಮಿಕರಿಗೆ, ಬಡವರಿಗೆ ತೊಂದರೆ ಎಚ್.ಡಿ.ಕೋಟೆ: ಅನೇಕ ವಿದ್ಯಾರ್ಥಿಗಳಿಗೆ, ಕೂಲಿ…
ನಾಲ್ವರು ನಿವೃತ್ತ ಪೊಲೀಸ್ ಅಧಿಕಾರಿಗಳ ನೇತೃತ್ವದ ಕ್ಷಿಪ್ರ ಕಾರ್ಯಪಡೆ ರಚನೆಗೆ ಒಪ್ಪಿಗೆ ಮೈಸೂರು: ಶಿಕ್ಷಣ, ಸಾಮಾಜಿಕ, ಆರೋಗ್ಯ ಮತ್ತಿತರ ಸೇವಾ…