ಅನ್ನದಾತರ ಅಂಗಳ

ಜಾನುವಾರುಗಳಿಗೆ ಬಹುವಾರ್ಷಿಕ ಮೇವಿನ ಬೆಳೆ ಬೆಳೆಯಿರಿ

ಮುಂಗಾರು ಹಂಗಾಮು ಮುಗಿದು ಹಿಂಗಾರು ಆರಂಭವಾಗಿದ್ದು, ಈ ದಿನಗಳಲ್ಲಿ ಹಸಿರು ಮೇವು ಉತ್ಪಾದನೆ ಜಾನುವಾರು, ಅದರಲ್ಲೂ ಹೈನೋದ್ಯಮದ ಬೆನ್ನೆಲುಬಾಗಿದೆ. ಹೈನುಗಾರಿಕೆಯಲ್ಲಿ ಶೇ.೭೦ರಷ್ಟು ಉತ್ಪಾದನಾ ವೆಚ್ಚ ರಾಸುಗಳಿಗೆ ಮೇವು ಪೂರೈಸುವುದ ಕ್ಕಾಗಿಯೇ ಆಗಿರುತ್ತದೆ. ಆದ್ದರಿಂದ ಕಡಿಮೆ ದರದಲ್ಲಿ ಮೇವು ಉತ್ಪಾದಿಸಿ ಹಾಗೂ ಅದರ ಸಮರ್ಪಕ ಬಳಕೆ ಯಿಂದ ಹೆಚ್ಚು ಲಾಭ ಗಳಿಸಬಹುದಾಗಿದೆ.

ಹಸು ಮತ್ತು ಎಮ್ಮೆಗಳಿಗೆ ಮೇವು ಪೂರೈಕೆ ಮಾಡುವುದು ಬಹಳ ಮುಖ್ಯ. ಪೋಷಕಾಂಶಗಳ ಕೊರತೆಯಿಂದ ಆಗುವ ತೊಂದರೆಗಳನ್ನು ತಡೆಯಲು, ರಾಸುಗಳ ಕ್ಷಮತೆಗೆ ತಕ್ಕಂತೆ ಹಾಲು ಉತ್ಪಾದಿಸಲು ಮತ್ತು ಆರೋಗ್ಯ ಕಾಪಾಡಲು ಸಾಕಷ್ಟು ಪ್ರಮಾಣದಲ್ಲಿ ವರ್ಷಪೂರ್ತಿ ಇಳುವರಿ ಕೊಡುವ ಪೌಷ್ಠಿಕಾಂಶಯುಕ್ತ ಹಸಿರು ಮೇವನ್ನು ಬೆಳೆಯುವುದು ಮೂಲಭೂತ ಅವಶ್ಯವಾಗಿದೆ. ಆದುದರಿಂದ ಬಹುವಾರ್ಷಿಕ ಮತ್ತು ಬಹು ಕಟಾವು ಮೇವಿನ ಬೆಳೆಗಳನ್ನು ಬೆಳೆಯುವುದು ಅಗತ್ಯ. ರಾಸುಗಳ ಉತ್ತಮ ಆರೋಗ್ಯ, ಹಾಲು ಇಳುವರಿಗೆ, ಲಾಭದಾಯಕತೆಗೆ ಮತ್ತು ಉತ್ಪಾದನೆ ವೆಚ್ಚವನ್ನು ಕಡಿಮೆ ಮಾಡುವಲ್ಲಿ ಹಸಿರು ಮೇವು ಬಹು ಮುಖ್ಯ ಪಾತ್ರವಹಿಸುತ್ತದೆ. ಈ ನಿಟ್ಟಿನಲ್ಲಿ ರೈತರು ಜಾನುವಾರುಗಳ ಪೋಷಣೆ ಅಂದರೆ ಮೇವು ಮತ್ತು ಸಮತೋಲನ ಪಶು ಆಹಾರ ನಿರ್ವಹಣೆ ಕ್ರಮಗಳ ಬಗ್ಗೆ ಅದರಲ್ಲೂ ವರ್ಷಪೂರ್ತಿ ಇಳುವರಿ ಕೊಡುವ ಬಹು ವಾರ್ಷಿಕ ಮೇವಿನ ಬೆಳೆಗಳ ಬಗ್ಗೆ ಹೆಚ್ಚಿನ ವೈಜ್ಞಾನಿಕ ಮಾಹಿತಿ ತಿಳಿದುಕೊಳ್ಳುವುದು ಅತ್ಯವಶ್ಯ.

ರಸ ಮೇವು ಸಂರಕ್ಷಣೆ:

ಮೇವಿಗಾಗಿ ಬೆಳೆಯುವ ಆಹಾರ ಧಾನ್ಯಗಳ ಬೆಳೆಗಳು ಮತ್ತು ಉತ್ತಮ ಹುಲ್ಲುಗಳನ್ನು ರಸ ಮೇವು ಮಾಡಲು ಬಳಸಬಹುದು. ಶೇ.೬೫-೭೫ರಷ್ಟು ತೇವಾಂಶವಿರುವ ಮತ್ತು ಹಾಲುಗಾಳು ಇರುವ ಹಂತದಲ್ಲಿ ಬೆಳೆಗಳನ್ನು ಕೊಯ್ದು ೧-೨ ಅಂಗುಲದ ತುಣುಕುಗಳನ್ನಾಗಿ ಕತ್ತರಿಸಬೇಕು. ಹೀಗೆ ಕತ್ತರಿಸಲ್ಪಟ್ಟ ಮೇವನ್ನು ಗುಂಡಿಗಳಲ್ಲಿ ಒತ್ತಿ ಒತ್ತಿ ತುಂಬಬೇಕು. ನಂತರ ಗಾಳಿಯಾಡದಂತೆ ಸೀಲ್ ಮಾಡಬೇಕು. ಹೀಗೆ ಮಾಡಿದ ೨-೩ ವಾರಗಳ ನಂತರ ನಿಯಂತ್ರಿತ ರಾಸಾಯನಿಕ ಕ್ರಿಯೆಯಿಂದ (ಹುದುಗುವಿಕೆ) ತಯಾರಾಗುವುದೇ ರಸ ಮೇವು (ಸೈಲೇಜ್) ಅಥವಾ ಹಗೇವು ಮೇವು. ಗೋವಿನ ಜೋಳ, ಜೋಳ, ಸಜ್ಜೆ ಮತ್ತು ಬಹು ವಾರ್ಷಿಕ ತಳಿಯ ಹುಲ್ಲುಗಳನ್ನು ರಸ ಮೇವಾಗಿ ಸಂಗ್ರಹಿಸಿಡಬಹುದು.

ಇದನ್ನು ಓದಿ : ಕಬ್ಬಿನ ಗದ್ದೆಯಲ್ಲಿ ಸಿಹಿ ಜೋಳದ ಬೆಲ್ಲ.

ಬಹುವಾರ್ಷಿಕ ಏಕದಳ ಮೇವು ಬೆಳೆಗಳು: 

ಸಿಒಎ-ಎಸ್-೨೯ ?

* ಬಹುವಾರ್ಷಿಕ ಮತ್ತು ಬಹು ಕಟಾವು ಏಕದಳ ಮೇವಿನ ಬೆಳೆ

* ನೀರಾವರಿ ಮತ್ತು ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆಯುವ ಉತ್ತಮವಾದ ಮೇವಿನ ಬೆಳೆ

* ಮೇವಿನ ಕಡ್ಡಿ ಸಣ್ಣ ಮತ್ತು ಮೃದುವಾಗಿರುವುದರಿಂದ ಕುರಿ ಮತ್ತು ಆಡುಗಳು ಇಷ್ಟಪಡುವ ಮೇವಾಗಿದೆ

* ಎಕರೆಗೆ ೪ ಕೆ.ಜಿ ಬಿತ್ತನೆ ಬೀಜ ಅಗತ್ಯ

* ಸಾಲಿನಲ್ಲಿ ಅಂತರ ಬೆಳೆಯಾಗಿ ಬಿತ್ತನೆ ಮಾಡಿ ನೀರಾವರಿ ಸೌಲಭ್ಯವಿದ್ದಲ್ಲಿ ೭-೧೦ ದಿನಗಳಿಗೊಮ್ಮೆ ನೀರು ಹಾಯಿಸಬೇಕು

*  ಶೇ.೫೦ರಷ್ಟು ಹೂವಾಡಿದಾಗ ಮೊದಲ ಕಟಾವು ಮಾಡಿ ನಂತರದ ೪೫- ೫೦ ದಿನಗಳಲ್ಲಿ ಕಟಾವು ಮಾಡಬೇಕು

*  ವಾರ್ಷಿಕ ಇಳುವರಿಯಾಗಿ ಸುಮಾರು ೫೫-೬೦ ಟನ್ ಹಸಿರು ಮೇವು ಪಡೆಯ ಬಹುದು.

ಸೂಪರ್ ನೇಪಿಯರ್ :

* ಈ ಬೆಳೆಯು ನೇಪಿಯರ್ ಜಾತಿಗೆ ಸೇರಿದ  ನೂತನ ಹೈಬ್ರಿಡ್ ತಳಿ

* ಅತ್ಯಂತ ವೇಗವಾಗಿ ಬೆಳೆಯುವ ಮತ್ತು ಉತ್ತಮ ಗುಣಮಟ್ಟದ ಮೇವು

* ಅಧಿಕ ಕಚ್ಚಾ ಸಸಾರಜನಕ ಅಂಶ ಹೊಂದಿದ್ದು, ೬೦ ದಿನಗಳಲ್ಲಿ ಹತ್ತು ಅಡಿ ಎತ್ತರ ಬೆಳೆಯುತ್ತದೆ.

* ಎರಡು ಗಿಣ್ಣುಗಳಿರುವ ಕಡ್ಡಿಗಳನ್ನು ಬಿತ್ತನೆಗೆ ಬಳಸಿ ಮತ್ತು ಸಾಲಿಂದ ಸಾಲಿಗೆ ೩ ಅಡಿ ಮತ್ತು ಗಿಡದಿಂದ ಗಿಡಕ್ಕೆ ೨ ಅಡಿ ಅಂತರವಿರಲಿ

* ವರ್ಷಕ್ಕೆ ೬-೭ ಬಾರಿ ಕಟಾವು ಮಾಡಿ ವರ್ಷಗಳವರೆಗೆ ಅಧಿಕ ಇಳುವರಿ ಪಡೆಯಬಹುದು

ಇದನ್ನು ಓದಿ : ಗ್ರಾಮೀಣ ಭಾಗಗಳಲ್ಲಿ ನಿಲ್ಲದ ವನ್ಯಮೃಗಗಳ ಹಾವಳಿ 

ಬಹುವಾರ್ಷಿಕ ದ್ವಿದಳ ಮೇವು ಬೆಳೆಗಳು: 

ಕುದುರೆ ಮೆಂತೆ:

* ಈ ಬೆಳೆಯು ಮೇವಿನ ರಾಣಿ ಎಂದೇ ತುಂಬಾ ಜನಪ್ರಿಯ

* ತಳಿಗಳು: ಟಿ-೯, ಆನಂದ-೨, ಸಿಸಾ-೯, ಆರ್.ಎಲ್-೮೮ ಈ ತಳಿಗಳು ಬಹುವಾರ್ಷಿಕ ಬೆಳೆಯಾಗಿ ೨-೩ ವರ್ಷಗಳ ವರೆಗೆ ಮೇವನ್ನು ಪಡೆಯಬಹುದು

* ಎಕರೆಗೆ ೪-೫ ಕೆಜಿ ಬಿತ್ತನೆ ಬೀಜ ಅಗತ್ಯ. ಬೀಜವನ್ನು ರೈಜೋಬಿಯಂ ಜೀವಾಣುಗಳಿಂದ ಬೀಜೋಪಚಾರ ಮಾಡಬೇಕು

* ಹೂವಾಡಿದಾಗ ಮೊದಲ ಕಟಾವು ಮಾಡಿ ನಂತರದ ಕಟಾವನ್ನು ೨೫-೩೦ ದಿನಗಳಲ್ಲಿ ಮಾಡಬೇಕು ಬೇಲಿ ಮೆಂತೆ ? ವರ್ಷವಿಡೀ ಬೆಳೆಯುವ ಮತ್ತೊಂದು ಪ್ರಮುಖ ದ್ವಿದಳ ಬಹು ವಾರ್ಷಿಕ ಮೇವು

* ಶೇ.೨೨ರಷ್ಟು ಸಸಾರಜನಕ ಹೊಂದಿದ್ದು, ಮಣ್ಣಿನ ಸಸಾರಜನಕ ಹೀರಿಕೊಳ್ಳುವ ಗುಣ ಹೊಂದಿದೆ

* ೮೦-೯೦ ದಿನಗಳಲ್ಲಿ ಮೊದಲ ಕಟಾವುಮಾಡಿ ನಂತರದ ಕಟಾವನ್ನು ೩೫-೪೫ ದಿನಗಳಲ್ಲಿ ಮಾಡಬೇಕು, ಎಕರೆಗೆ ಸುಮಾರು ೩೨ ರಿಂದ ೪೦

ಗಿರೀಶ್ ಹುಣಸೂರು

ಆಂದೋಲನ ಡೆಸ್ಕ್

Recent Posts

ರಾಜ್‌ಘಾಟ್‌ಗೆ ಭೇಟಿ ನೀಡಿ ರಾಷ್ಟ್ರಪತಿ ಮಹಾತ್ಮ ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್‌

ರಾಜ್‌ಘಾಟ್‌ಗೆ ಭೇಟಿ ನೀಡಿದ ವ್ಲಾಡಿಮಿರ್‌ ಪುಟಿನ್‌, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ದೆಹಲಿಯಲ್ಲಿ ರಾಷ್ಟ್ರಪತಿ…

5 mins ago

ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣಹವೆ: ಕೆಲವೆಡೆ ಮಂಜು ಕವಿದ ವಾತಾವರಣ

ಬೆಂಗಳೂರು: ರಾಜ್ಯದ ಹಲವೆಡೆ ಒಣಹವೆ ಇದ್ದರೆ ಮತ್ತೆ ಕೆಲವೆಡೆ ಮಂಜು, ಮೋಡ ಕವಿದ ವಾತಾವರಣ ಮುಂದುವರೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ…

26 mins ago

ಹಾಸನ | ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆ

ಹಾಸನ: ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,…

1 hour ago

ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಮರಗಳ ಮಾರಣಹೋಮ: ಎಫ್‌ಐಆರ್‌ ದಾಖಲು

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಮರಗಳ ಮಾರಣ ಹೋಮ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮಲೆ…

1 hour ago

ಓದುಗರ ಪತ್ರ: ಪತ್ರಿಕಾ ವಿತರಕರಿಗೆ ಬೆಚ್ಚನೆಯ ಉಡುಪು ಒದಗಿಸಿ

ಪ್ರತಿದಿನ ಬೆಳಗಿನ ಜಾವ ದಿನ ದಿನಪತ್ರಿಕೆಗಳನ್ನು ಬಹುತೇಕ ಮಕ್ಕಳೇ ವಿತರಿಸುತ್ತಿದ್ದಾರೆ. ಹವಾಮಾನ ವೈಪರೀತ್ಯದಿಂದ ವಿಪರೀತ ಚಳಿ ಇರುವುದರಿಂದ ಆರೋಗ್ಯದ ಮೇಲೆ…

2 hours ago

ಓದುಗರ ಪತ್ರ:  RTO ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ನಿಯಂತ್ರಿಸಿ

ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸಗಳಿಗೆ ಮಧ್ಯವರ್ತಿಗಳು ಹಾಗೂ ಚಾಲನಾ ತರಬೇತಿ ಶಾಲೆಗಳವರಿಗೆ ಅವಕಾಶ ನೀಡದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ…

2 hours ago