ಹಿಂದಿನ ಕಾಲದಲ್ಲಿ ಹೇರಳವಾಗಿ ಎಲ್ಲಾ ಕಡೆ ಲಭ್ಯವಿದ್ದ ಮತ್ತು ಎಲ್ಲಾ ಜನರು ತಮ್ಮ ಆಹಾರದಲ್ಲಿ ಬಳಸುತ್ತಿದ್ದ ಸಿರಿಧಾನ್ಯಗಳು ಇಂದು ಹುಡುಕಿದರೂ ನಮ್ಮ ಕಣ್ಣಿಗೆ ಕಾಣುವುದು ಅಪರೂಪ. ಕರ್ನಾಟಕದಲ್ಲಿ ವರ್ಷಕ್ಕೊಮ್ಮೆ ಯಾವುದೋ ಒಂದು ನಿರ್ದಿಷ್ಟ ಸ್ಥಳದಲ್ಲಿ ನಡೆಯುವ ಸಿರಿಧಾನ್ಯಗಳ ಮೇಳದಂತಹ ವಿಶೇಷ ಸಂದರ್ಭದಲ್ಲಿ ಮಾತ್ರ ಅವುಗಳನ್ನು ನೋಡುತ್ತಿ ದ್ದೇವೆ. ಅದು ಬಿಟ್ಟರೆ ನಮ್ಮ ದಿನನಿತ್ಯದ ಆಹಾರ ಪದಾರ್ಥಗಳು ನಮಗೆ ಸುಲಭವಾಗಿ ಸಿಗುವ ಹಾಗೆ ಸಿರಿಧ್ಯಾನಗಳಾದ ಸಾಮೆ, ಸಜ್ಜೆ, ನವಣೆ, ಹಾರಕ ಇತ್ಯಾದಿಗಳು ಲಭ್ಯವಿಲ್ಲ. ಹೀಗಾಗಿ ಜನರಿಗೆ ಇವುಗಳ ಕುರಿತ ಅರಿವು ಕೂಡ ಕಡಿಮೆ.
ಸಿರಿಧಾನ್ಯ ಬಳಕೆಯ ಪ್ರಯೋಜನಗಳೇನು?: ಸಿರಿಧಾನ್ಯಗಳು ಅತ್ಯಂತ ಪುರಾತನ ಧಾನ್ಯಗಳು. ನಾವು ದಿನನಿತ್ಯದ ಆಹಾರಗಳಲ್ಲಿ ಉಪಯೋಗಿಸುವ ಅಕ್ಕಿ ಹಾಗೂ ಗೋಧಿಗಳಿಗಿಂತ ೧೦ ಪಟ್ಟು ಪೋಷಕಾಂಶಗಳಿಂದ ಮತ್ತು ಔಷಧಿಯ ಗುಣಗಳಿಂದ ಕೂಡಿವೆ. ಜನರು ಆರೋಗ್ಯವಂತರಾಗಿ ಹೆಚ್ಚು ಆಯಸ್ಸು ಉಳ್ಳವರಾಗಿ ಬಾಳಲು ಇರುವಂತಹ ಒಂದು ಅದ್ಭುತ ಆಹಾರ ಧಾನ್ಯ. ಇತ್ತೀಚಿನ ದಿನಗಳಲ್ಲಿ ಈ ಧಾನ್ಯಗಳನ್ನು ಬೆಳೆಯುವುದು ಮತ್ತು ಬಳಸುವುದು ಎರಡೂ ಕಡಿಮೆಯಾಗಿದೆ.
ಇದರ ಪ್ರತಿಫಲವಾಗಿ ಜನರ ಆರೋಗ್ಯ ಮತ್ತು ಆಯಸ್ಸುಕ್ಷೀಣಿಸಿದೆ. ಸಿರಿಧಾನ್ಯಗಳನ್ನು ಮರೆತು ಅವುಗಳನ್ನು ಬಳಸದಿರುವ ಕಾರಣದಿಂದ ಮತ್ತು ಪೋಷಕಾಂಶಗಳು ಕಡಿಮೆ ಇರುವ ಪದಾರ್ಥಗಳ ಸೇವನೆಯಿಂದ ಹಾಗೂ ಆಹಾರಗಳನ್ನು ಬೆಳೆಯಲು ಬಳಸುವ ಔಷಧ, ಗೊಬ್ಬರಗಳ ಕಾರಣದಿಂದ ಜನರ ಆರೋಗ್ಯ ಹದಗೆಟ್ಟು ನಾನಾ ಬಗೆಯ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಅವು ಬಿಪಿ, ಸಕ್ಕರೆ ಕಾಯಿಲೆ, ಬೊಜ್ಜು ಮುಂತಾದ ಗಂಭೀರ ಕಾಯಿಲೆಗಳಿಗೆ ಮೂಲವಾಗಿವೆ. ಇದರ ಪರಿಣಾಮವಾಗಿ ಮನುಷ್ಯನ ಆಯಸ್ಸು ಕ್ಷೀಣಿಸುತ್ತಾ ಹೋಗುತ್ತಿದೆ.
ಸಿರಿಧಾನ್ಯಗಳು ದೇಹದಲ್ಲಿನ ವಿಷ ಪದಾರ್ಥಗಳನ್ನು ಹೊರಹಾಕುತ್ತವೆ. ರಕ್ತದಲ್ಲಿ ಶೇಖರಣೆಗೊಂಡ ಕೆಟ್ಟ ಕೊಬ್ಬನ್ನು ಕರಗಿಸುತ್ತವೆ, ಸ್ತನಗಳ ಕ್ಯಾನ್ಸರ್ ತಡೆಗಟ್ಟುತ್ತವೆ. ಸಕ್ಕರೆ ಕಾಯಿಲೆ ಯನ್ನು ತಡೆಗಟ್ಟುತ್ತದೆ, ಅಧಿಕ ರಕ್ತದ ಒತ್ತಡ ಕಡಿಮೆ ಮಾಡುತ್ತವೆ, ಹೃದಯದ ಕಾಯಿಲೆಗಳನ್ನು ತಡೆಗಟ್ಟುತ್ತವೆ,ಅಸ್ತಮಾದಂತಹ ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ಗುಣಪಡಿಸುವಲ್ಲಿ ಸಹಕಾರಿ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ, ಮಲಬದ್ಧತೆ, ಹೊಟ್ಟೆಯುಬ್ಬರ, ವಾಯು ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತವೆ..
ನವಣೆ: ನವಣೆಯಲ್ಲಿ ಪ್ರೊಟೀನ್ ಅಂಶ ಹೆಚ್ಚಿದ್ದು, ಮಕ್ಕಳ ಬೆಳವಣಿಗೆಗೆ ಇದು ಸಹಕಾರಿ. ಹೆಚ್ಚಿನ ನಾರಿನಂಶ ಮತ್ತು ಔಷಧಿಯ ಗುಣವಿರುವ ಸಸ್ಯಾಧಾರಿತ ರಾಸಾಯನಿಕಗಳು ಈ ಧಾನ್ಯದಲ್ಲಿದೆ. ಮಧುಮೇಹ ರೋಗಿಗಳಿಗೆ ಇದು ಉತ್ತಮ ಆಹಾರ. ದೇಹದಲ್ಲಿನ ಕೊಲೆಸ್ಟ್ರಾಲ್ ತಗ್ಗಿಸಲು, ರಕ್ತದೊತ್ತಡ ನಿಯಂತ್ರಿಸಲು ಮತ್ತು ಹೃದಯಾಘಾತ ಆಗದಂತೆ ತಡೆಯಲು ನವಣೆ ನೆರವಾಗುತ್ತದೆ.
ಸಜ್ಜೆ: ಸಜ್ಜೆಯ ಹಾಲು ಹೆಣ್ಣು ಮಕ್ಕಳಲ್ಲಿ ಮುಟ್ಟು ನಿಲ್ಲುವ ಸಮಯದಲ್ಲಿನ ಏರು ಪೇರುಗಳನ್ನು ಸಮತೋಲನದಲ್ಲಿಡುತ್ತದೆ.
ರಾಗಿ: ರಾಗಿ ತಿಂದವ ನಿರೋಗಿ. ರಾಗಿಯಲ್ಲಿ ಅಕ್ಕಿ,ಗೋಧಿಗಿಂತ ಹೆಚ್ಚಿನ ನಾರಿನಂಶ ಮತ್ತು ಕ್ಯಾಲ್ಸಿಯಂ ಇದೆ. ಮಕ್ಕಳಿಗೆ ಮತ್ತು ಮಧುಮೇಹಿಗಳಿಗೆ ರಾಗಿ ಪರಿ ಪೂರ್ಣ ಆಹಾರ. ‘ರಾಗಿ ಪೋಷಕಾಂಶಗಳ ಖಜಾನೆ’ ರಾಗಿಯಲ್ಲಿ ಕ್ಯಾಲ್ಸಿಯಂ ಮತ್ತು ಕಬ್ಬಿಣ ಹೇರಳವಾಗಿದೆ. ಇದರಲ್ಲಿ ಪ್ರೊಟೀನ್ ಅಂಶ ಸಮೃದ್ಧವಾಗಿ ಇರುವುದರಿಂದ ಅಪೌಷ್ಟಿಕತೆಯಿಂದ ಬಳಲುವವರಿಗೆ ಹೇಳಿ ಮಾಡಿಸಿದ ಆಹಾರ. ಗ್ಲಾಯ್ಸಮಿಕ್ ಇಂಡೆಕ್ಸ್ ಕಡಿಮೆ ಇರುವುದರಿಂದ ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಸಹಕರಿಸುತ್ತದೆ.
ಹಾರಕ: ಇದನ್ನು ‘ಬರಗಾಲದ ಮಿತ್ರ’ಎಂದು ಹೇಳುತ್ತಾರೆ. ಇದರ ಅಕ್ಕಿಯಿಂದ ತಯಾರಿಸಿದ ಅನ್ನ ದೇಹಕ್ಕೆ ತಂಪು ನೀಡುತ್ತದೆ. ಆದ್ದರಿಂದ ಇದನ್ನು ಸಿಗೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಈ ಅಕ್ಕಿ ಮಧುಮೇಹ ರೋಗಿಗಳಿಗೆ ಉತ್ತಮ ಆಹಾರ. ಇದು ರಕ್ತವನ್ನು ಶುದ್ಧೀಕರಿಸುತ್ತದೆ.
ಊದಲು: ಗೋಧಿಗಿಂತ ೧೦ ಪಟ್ಟು ಹೆಚ್ಚು ನಾರಿನಾಂಶ ಇರುವುದರಿಂದ ಸಕ್ಕರೆ ರೋಗಿಗಳಿಗೆ ಇದು ಉತ್ತಮ ಆಹಾರ. ಕೊಬ್ಬು, ಕ್ಯಾಲ್ಸಿಯಂ ಮತ್ತು ರಂಜಕಗಳಿಂದ ಸಮೃದ್ಧ. ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ ಮತ್ತು ರೋಗ ರುಜಿನಗಳಿಂದ ದೇಹವನ್ನು ರಕ್ಷಿಸುತ್ತದೆ. ಪಾಲಿಶ್ ಮಾಡದ ಅಕ್ಕಿಯಲ್ಲಿ ವಿಟಮಿನ್ ‘ಬಿ’ ಹೆಚ್ಚಾಗಿರುವುದರಿಂದ ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ.
ಬರಗು: ಇದರಲ್ಲಿ ಪ್ರೋಟಿನ್, ನಾರು ಮತ್ತು ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿದೆ. ಇದು ರಂಜಕ, ಕ್ಯಾಲ್ಸಿಯಂ, ಮ್ಯಾಂಗನೀಸ್ ಮತ್ತು ಮೆಗ್ನೀಷಿಯಂನಿಂದ ಸಮೃದ್ಧವಾಗಿದೆ. ಇದರ ಸೇವನೆಯಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗುತ್ತದೆ, ನರಗಳು ಬಲಗೊಳ್ಳುತ್ತವೆ. ಹೃದಯಾಘಾತ ಮತ್ತು ಸ್ತನ ಕ್ಯಾನ್ಸರ್ಗಳನ್ನು ದೂರ ಮಾಡುತ್ತದೆ. ನಿತ್ಯ ಸೇವನೆ ಮಾಡುವುದರಿಂದ ಶೀಘ್ರ ವೃದ್ಧಾಪ್ಯವನ್ನು ನಿಧಾನಗೊಳಿಸುತ್ತದೆ.
ಕೊರಲೆ: ಓಟ್ಸ್‌ಗಿಂತ ಅಧಿಕ ಪ್ರಮಾಣದಲ್ಲಿ ಸಹಜ ನಾರಿನಂಶವನ್ನು ಹೊಂದಿದೆ. ಬೊಜ್ಜು ಕರಗಿಸಲು ಇದರ ಬಳಕೆ ಶುರು ಮಾಡಬಹುದು. ಮಲಬದ್ಧತೆಯಿಂದ ಬಳಲುವವರಿಗೆ ಮತ್ತು ಸಕ್ಕರೆ ರೋಗಿಗಳಿಗೆ ಅತ್ಯುತ್ತಮ ಆಹಾರ. ಈ ಅಕ್ಕಿಯನ್ನು ಮೂರ್ನಾಲ್ಕು ತಿಂಗಳು ನಿರಂತರವಾಗಿ ಸೇವಿಸಿದರೆ ಥೈರಾಯ್ಡ್ ಹಾರ್ಮೋನ್ಸ್ ಸ್ರವಿಕೆಯನ್ನು ಸುಸ್ಥಿತಿಯಲ್ಲಿಡುತ್ತದೆ.
ಸಾಮೆ: ಸಾಮೆಯು ಹೆಣ್ಣು ಮಕ್ಕಳಲ್ಲಿ ಅಂಡಾಶಯದ ಅನಾರೋಗ್ಯವನ್ನು ಸರಿಪಡಿಸುತ್ತದೆ.
ಜೋಳ: ಪ್ರೋಟಿನ್, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ಕಬ್ಬಿಣ, ರಂಜಕ ಗುಣ ಹೊಂದಿದೆ.
ಮಿಲ್ಲೆಟ್ಸ್: ನ್ಯೂಟ್ರಿ-ಸಿರಿಲ್ಸ್ / ಸಿರಿಧಾನ್ಯಗಳು ಹೆಚ್ಚಿನ ಪೌಷ್ಟಿಕಾಂಶದಿಂದಾಗಿ ಸಿರಿಧಾನ್ಯಗಳನ್ನು ಸಾಮಾನ್ಯವಾಗಿ ನ್ಯೂಟ್ರಿ-ಸಿರಿಲ್ಸ್ ಎಂದು ಕರೆಯಲಾಗುತ್ತದೆ. ಪ್ರೋಟಿನ್, ಪೈಬರ್, ಮೈಕ್ರೋನ್ಯೂಟ್ರಿಯೆಂಟ್ಸ್ ಮತ್ತು ಫೈಟೋಕೆಮಿಕಲ್ಸ್ ಅಂಶಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿದ್ದು, ಕಡಿಮೆ ಇಂಗಾಲವನ್ನು ಹೊಂದಿರುತ್ತದೆ. ಮಿಲ್ಲೆಟ್ಸ್‌ಗಳನ್ನು ಕಡಿಮೆ ನೀರಿನಲ್ಲಿ ಬೆಳೆಯಬಹು ದಾಗಿದೆ. ಆದ್ದರಿಂದ ಮಿಲ್ಲೆಟ್ಸ್‌ಗಳನ್ನು ಸಿರಿಧಾನ್ಯಗಳು ಎಂದು ಕರೆಯಲಾಗಿದೆ.
– ಎಂ.ಎಸ್. ನಂದಿತಾ
(ಎಂಎಸ್‌ಸಿ ಕೃಷಿ ವಿದ್ಯಾರ್ಥಿನಿ)
ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…
ಮಂಡ್ಯ: ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಭಾಗದ ರೈತರನ್ನು ಆರ್ಥಿಕವಾಗಿ ಅಭಿವೃದ್ಧಿ ಮಾಡಲು ಮಂಡ್ಯದ ವಿ.ಸಿಫಾರಂನಲ್ಲಿ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯವನ್ನು…
ಬೆಂಗಳೂರು: ಆರ್.ಅಶೋಕ್ ಅವರನ್ನು ವಿಪಕ್ಷ ನಾಯಕನ ಸ್ಥಾನದಿಂದ ಇಳಿಸದೇ ಹೋದರೆ ಬಿಜೆಪಿ ಶಾಶ್ವತವಾಗಿ ವಿಪಕ್ಷದಲ್ಲಿ ಇರುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್…