ಅನ್ನದಾತರ ಅಂಗಳ

ಸಾವಯವ ಇಂಗಾಲ ವೃದ್ಧಿಸಲು ಸುಲಭ ಉಪಾಯಗಳು

• ರಮೇಶ ಪಿ.ರಂಗಸಮುದ್ರ
ಭಾರತ ಕೃಷಿ ಪ್ರಧಾನ ದೇಶ. ಹರಪ್ಪ ಮೊಹೆಂಜೊದಾರೋ ನಾಗರಿಕತೆಯ ಉಗಮದಿಂದ 1950ರ ತನಕ ನಮ್ಮಲ್ಲಿ ಮಣ್ಣು ಫಲವತ್ತಾಗಿತ್ತು. ಬೇಸಾಯ ಹಾಗೂ ಪಶುಪಾಲನೆಯ ಮುಖ್ಯ ಮುಖ್ಯ ಕಸುಬನಾಗಿ ಕಸುಬನ್ನಾಗಿ ಮಾಡಿಕೊಂಡಿದ್ದು ಇತಿಹಾಸ.
ನಮ್ಮ ಕೃಷಿ ಉತ್ಪನ್ನಗಳು, ಸಾಂಬಾರ ಪದಾರ್ಥಗಳು ಹಾಗೂ ಹತ್ತಿಯಿಂದ ತಯಾರಿಸಿದ ಉತ್ಕೃಷ್ಟವಾದ ಮಸ್ಲಿನ್ ಬಟ್ಟೆಗಳಿಂದ, ವಿಶ್ವದ ಆಹಾರ ಪ್ರಿಯರು ಹಾಗೂ ಸಿರಿವಂತರು ಉಡುಗೆ ತೊಡುಗೆಗಳಿಗಾಗಿ ಭಾರತವನ್ನೇ ಅವಲಂಬಿಸಿದ್ದಾರೆ. ವಿಶ್ವಕ್ಕೆ ಸಮೃದ್ಧ ಕೃಷಿಯನ್ನು ಪರಿಚಯಿಸಿದ, ಗುಣಮಟ್ಟದ ಆಹಾರವನ್ನು ಪೂರೈಸಿದ ಕೀರ್ತಿ ಭಾರತಕ್ಕಿದೆ.
1960ರ ತನಕ ನಮ್ಮ ದೇಶದ ಮಣ್ಣಿನಲ್ಲಿ ಸಾವಯವ ಇಂಗಾಲದ ಅಂಶ ಶೇ.3ಕ್ಕಿಂತಲೂ ಹೆಚ್ಚಾಗಿತ್ತು. ನಾವೆಲ್ಲರೂ ರಸ್ತೆ ಬದಿ ಆಟವಾಡುವಾಗ ಬಿದ್ದು ಗಾಯಗೊಂಡರೆ ಗಾಯದ ಮೇಲೆ ಮಣ್ಣನ್ನೇ ಔಷಧಿಯಂತೆ ಬಳಸುತ್ತಿದ್ದೆವು. ಅಂತಹ ಗುಣಮಟ್ಟದ ಮಣ್ಣನ್ನು ನಾವು 60 ವರ್ಷಗಳಲ್ಲಿ ವರ್ಷಗಳಲ್ಲಿ ಆಧುನಿಕ ಕೃಷಿಯ ಹೆಸರಿನಲ್ಲಿ ಮಣ್ಣಿಗೆ ರಾಸಾಯನಿಕಗಳನ್ನು ಸೇರಿಸಿ ವಿಷವನ್ನಾಗಿಸಿ. ದೇಶದ ಬಹುಭಾಗದಲ್ಲಿ ಮಣ್ಣು ಈಗ ಕಲುಷಿತಗೊಂಡು ಕೃಷಿಗೆ ಯೋಗ್ಯವಲ್ಲದಂತಾಗಿದೆ. ನಮ್ಮ ಮಣ್ಣಿನಲ್ಲಿ ಶೇ.3ರಿಂದ ಶೇ.4ರಷ್ಟಿದ್ದ ಮಣ್ಣಿನ ಸಾವಯವ ಇಂಗಾಲದ ಅಂಶ ಈಗ ಶೇ.0.5ಗಿಂತಲೂ ಕುಸಿದಿದೆ.
ಸಾವಯವ ಇಂಗಾಲ ಎಂದರೇನು?
ಇಂದಿಗೂ ಕೃಷಿಕರಲ್ಲಿ ಸಾವಯವ ಇಂಗಾಲ (ಆರ್ಗಾನಿಕ್ ಕಾರ್ಬನ್) ಎಂದರೇನು? ತುಂಬಾ ಖರ್ಚು ಮಾಡಬೇಕಾ? ಎಂಬೆಲ್ಲ ಪ್ರಶ್ನೆಗಳಿವೆ.
ಮಣ್ಣಿನಲ್ಲಿ ಲಕ್ಷಾಂತರ ಸೂಕ್ಷ್ಮಾಣು ಜೀವಾಣುಗಳನ್ನು ಪೋಷಿಸಿ, ಮಣ್ಣನ್ನು ಮೆದುವಾಗಿಸಿ ಬೆಳೆಗಳಿಗೆ ಬೇಕಾದ ಪೋಷಕಾಂಶಗಳನ್ನು ಮಣ್ಣಿನಲ್ಲಿ ಹದಗೊಳಿಸಿ, ಗಿಡಗಳ ಬೇರುಗಳಿಗೆ ಒದಗಿಸುವ ಮೂಲಕ ಉತ್ತಮವಾದ ಫಸಲನ್ನು ಪಡೆಯಲು ನೆರವಾಗುವ ಪ್ರಕ್ರಿಯೆಯ ಅಂಶವೇ ಸಾವಯವ ಇಂಗಾಲ (ಆರ್ಗ್ಯಾನಿಕ್ ಕಾರ್ಬನ್).
ಸಾಮಾನ್ಯವಾಗಿ ಶೇ.1ರಿಂದ 2 ಅಥವಾ 3ರಷ್ಟು ಅಂಶವನ್ನು ಒಳಗೊಂಡಿದ್ದರೆ ಆ ಮಣ್ಣು ಉತ್ಕೃಷ್ಟವಾದ, ಫಲವತ್ತಾದ ಮಣ್ಣಾಗಿದ್ದು, ಅಂತಹ ಮಣ್ಣಿನಲ್ಲಿ ಎಲ್ಲ ರೀತಿಯ ಬೇಸಾಯವನ್ನು ಮಾಡಬಹುದು ಸುಲಭ ಉಪಾಯಗಳು
ಒಂದು ಈರುಳ್ಳಿ ಚೀಲದಲ್ಲಿ ಜಮೀನಿನ ಸುತ್ತಮುತ್ತ ಸಿಗುವ ಮುಳ್ಳಿಲ್ಲದ ಹತ್ತು ಜಾತಿಯ ಎಲೆಗಳನ್ನು ಜಜ್ಜಿ ತುಂಬಿಸಬೇಕು. ಆ ಎಲೆಗಳನ್ನು ತುಂಬಿದ ಚೀಲಕ್ಕೆ 2 ಕೆಜಿ ಬೆಲ್ಲ, 5-6 ಕೆಜಿ ಸಗಣಿ, ಒಂದು ಲೀಟರ್ ಹುಳಿಮಜ್ಜಿಗೆ ಸೇರಿಸಿ ಪಾತಿಗೆ ನೀರು ಬಿಡುವ ಪ್ರಕಾರದಲ್ಲಿ ಒಂದು ಅಥವಾ ಒಂದೂವರೆ ಅಡಿ ಆಳವನ್ನು ತೆಗೆದು ಈ ಚೀಲವನ್ನು ಇಟ್ಟು ಅದರ ಮೂಲಕ ನೀರು
ತುಂಬಿ ಹರಿಯುವಂತೆ ಮಾಡಬೇಕು. ಈ ರೀತಿಯಾಗಿ ಎಲ್ಲ ಪಾತಿಗಳ ಪ್ರಾರಂಭದಲ್ಲಿ ಮಾಡಿದರೆ, ಈ ಚೀಲದ ಮೂಲಕ ಹರಿದು ಬರುವ ಮಿಶ್ರಣದ ನೀರು ಸುಮಾರು 4-6 ತಿಂಗಳುಗಳ ಕಾಲ ಮಣ್ಣಿನ ಮೇಲ್ಪದರದಲ್ಲಿ ಹರಡಿಕೊಂಡು, ಸೂರ್ಯನ ಶಾಖದೊಂದಿಗೆ ತನ್ನ ಜೈವಿಕ ಕ್ರಿಯೆಯನ್ನು ಪ್ರಾರಂಭಿಸಿ ಆಳದಲ್ಲಿರುವ ಎರೆಹುಳುಗಳು ಮೇಲೆ ಬಂದು ಮಣ್ಣು ಹಗುರವಾಗಿ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಹೆಚ್ಚುತ್ತದೆ.
ಬೆಳೆಗಳ ಬೇರುಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಪೂರೈಸುತ್ತದೆ. ಈ ಪದ್ಧತಿ ಭತ್ತದ ಗದ್ದೆಗಳು, ಕಬ್ಬಿನ ಬೆಳೆಯಲ್ಲಿ ಉತ್ತಮ ಪರಿಣಾಮವನ್ನು ಬೀರುತ್ತದೆ. ನೀರು ಹಾಯಿಸುವ ಪದ್ಧತಿಗೆ ಹೆಚ್ಚು ಸೂಕ್ತ.
ಹನಿ ನೀರಾವರಿಯಲ್ಲಿ ಎಲೆಗಳನ್ನು ಹಾಗೂ ಬೆಲ್ಲ, ಮಜ್ಜಿಗೆ ಸೇರಿಸಿದ ಈ ಹತ್ತು ಚೀಲಗಳನ್ನು ಒಂದು ಡ್ರಮ್ಮಿನಲ್ಲಿ ಇಟ್ಟು ಅದರ ಸಾರವನ್ನು ಸುಲಭವಾಗಿ ಹನಿ ನೀರಾವರಿ ವೆಂಚರ್ ಮೂಲಕ ಡ್ರಿಪ್ ಪೈಪ್ ಗಳಿಗೆ ಸೇರಿಸಿದರೆ ಹಣ್ಣು-ತರಕಾರಿಗಳು ಹೆಚ್ಚು ಇಳುವರಿಯನ್ನು ನೀಡುತ್ತವೆ.
ರಸ್ತೆಯ ಇಕ್ಕೆಲಗಳಲ್ಲಿ ಬೆಳೆಯುವ ಎಕ್ಕದ ಗಿಡ, ಹೊಂಗೆಸೊಪ್ಪು, ಗಂಡು ತುಳಸಿ, ಉಗನಿ ಅಂಬು, ಪಾರ್ಥೇನಿಯಂ ಸೊಪ್ಪು, ಬೇವಿನ ಸೊಪ್ಪು, ಕಳೆ ಗಿಡಗಳನ್ನು ನೀರು ಹಾಯಿಸುವ ಪ್ರಾರಂಭದ ಪಾತಿಗೆ ಕೆಸರು ಗದ್ದೆಯಲ್ಲಿ ತುಳಿದು ನಾಟಿ ಮಾಡಿದರೆ ಕಟಾವಿಗೆ ಬರುವ ಸಮಯಕ್ಕೆ ಪೂರ್ತಿ ನಿರಂತರವಾಗಿ ಮಣ್ಣಿನಲ್ಲಿ ಜೀವಾಣುಗಳು ವೃದ್ಧಿಸಿ ಸಾವಯವ ಇಂಗಾಲ ವೃದ್ಧಿಯಾಗಲು ನೆರವಾಗುತ್ತದೆ.
ಫಸಲು ಕಟಾವಾದ ನಂತರ ಭೂಮಿಯನ್ನು ಖಾಲಿ ಬಿಡದೆ ಚಂಬೆ (ಡಯಾಂಚ್), ಗೊಡಮಂಜಿ ಮಿಶ್ರಧಾನ್ಯಗಳನ್ನು ಬಿತ್ತಿ ಒಂದೂವರೆ ಅಡಿ ಎತ್ತರಕ್ಕೆ ಬಂದ ಹಸಿರು ಎಲೆಗಳನ್ನು ಭೂಮಿಗೆ ರೂಟವೇಟರ್ ಮಾಡಿ ಸೇರಿಸಬೇಕು
ಕೃಷಿ ಬೆಳೆಯ ಉಳಿಕೆಗಳನ್ನು ಮಣ್ಣಿಗೆ ಸೇರಿಸಬೇಕು. ಉದಾಹರಣೆಗೆ ಬಾಳೆದಿಂಡು, ಕಬ್ಬಿನ ತೆರಗು, ಕಳೆಗಳನ್ನು ಮಣ್ಣಿಗೆ ಸೇರಿಸುವುದರಿಂದ ನೈಸರ್ಗಿಕವಾಗಿ ಮಣ್ಣಿನಲ್ಲಿ ಪೊಟ್ಯಾಶಿಯಂ ವೃದ್ಧಿ ಆಗುತ್ತದೆ.
ಆಹಾರವನ್ನು ಕರಿದು ಉಳಿದ ಎಣ್ಣೆಯ ಜೊತೆ ಬೆಲ್ಲದ ಪಾಕ, ಉಳಿದ ಮಜ್ಜಿಗೆಯನ್ನು ಹಾಗೂ ಕರಿಬೇವಿನ ಎಲೆಗಳನ್ನು ಸೇರಿಸಿ ಬೇಯಿಸಿದ ನೀರು ಭೂಮಿಗೆ ಸೇರಿಸಿದರೆ. ಸಾವಯವ ಇಂಗಾಲ ಬಹಳ ಬೇಗ ವೃದ್ಧಿಯಾಗಿ ಗಿಡ ಸದೃಢವಾಗಿ ನಿಲ್ಲುವ ಶಕ್ತಿ ಲಭಿಸಿ ದೀರ್ಘ ಫಸಲನ್ನು ಪಡೆದುಕೊಳ್ಳಲು ನೆರವಾಗುತ್ತದೆ.
ಸಾಧ್ಯವಾದಷ್ಟು ಎಲ್ಲ ಬೆಳೆಗಳಲ್ಲೂ ಖಾಲಿ ಇರುವ ಮಣ್ಣಿನ ಜಾಗಕ್ಕೆ ಎಲೆಗಳಿಂದ ಹೊದಿಕೆಯನ್ನು ಮಾಡಿದರೆ ಮಣ್ಣಿನ ತೇವಾಂಶ ಕಡಿಮೆಯಾಗದಂತೆ ಕಾಪಾಡಿ ಜೈವಿಕ ಕ್ರಿಯೆ ಮಣ್ಣಿನಲ್ಲಿ ನಿರಂತರವಾಗಿ ನಡೆದು ಸಾವಯವ ಇಂಗಾಲ ಮಣ್ಣಿನಲ್ಲಿ ಸದಾ ಜಾಗೃತವಾಗಿರಲಿದೆ.
lokesh

Recent Posts

ಪ್ರತಿಭಟನೆ ಮಾಹಿತಿ ತಿಳಿದು ಕೆರೆಗೆ ನೀರು ತುಂಬಿಸಿದ ಅಧಿಕಾರಿಗಳು!

ಎಚ್.ಡಿ.ಕೋಟೆ : ತಾಲ್ಲೂಕಿನ ಕ್ಯಾತನಹಳ್ಳಿ, ಆಲನಹಳ್ಳಿ, ಜಿ. ಬಿ. ಸರಗೂರು ವ್ಯಾಪ್ತಿಯ ಐದು ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ನಿರ್ಲಕ್ಷಿ…

3 hours ago

ಓದುಗರ ಪತ್ರ | ರಸ್ತೆ ದುರಸ್ತಿ ಮಾಡಿ

ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆ ಎದುರಿನ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಎಲ್ಲೆಡೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು,…

3 hours ago

ಓದುಗರ ಪತ್ರ | ತಂಬಾಕುಯುಕ್ತ ದಂತ ಉತ್ಪನ್ನಗಳನ್ನು ನಿಷೇಧಿಸಿ

ಇತ್ತೀಚಿನ ದಿನಗಳಲ್ಲಿ, ಟೂತ್ ಪೇಸ್ಟ್‌ಗಳಲ್ಲಿ ತಂಬಾಕು ಮತ್ತು ನಿಕೋಟಿನ್ ಅಂಶ ಪತ್ತೆಯಾಗಿದ್ದು, ಇದರ ಸೇವನೆಯಿಂದ ಹಲವು ಮಕ್ಕಳು ತೊಂದರೆಗೊಳಗಾಗಿರುವ ಘಟನೆಗಳು…

3 hours ago

ಓದುಗರ ಪತ್ರ | ರಸ್ತೆಯಲ್ಲಿ ವಾಯುವಿಹಾರ ಅಪಾಯಕಾರಿ

ಮೈಸೂರಿನ ಕುವೆಂಪುನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ರಸ್ತೆ, ಗದ್ದಿಗೆ ರಸ್ತೆ, ವಿಶ್ವಮಾನವ ಜೋಡಿ ರಸ್ತೆ, ವಿದ್ಯಾರಣ್ಯಪುರಂ -…

3 hours ago

ಶಿವಾಜಿ ಗಣೇಶನ್‌ ಅವರ ದೆಹಲಿ ಕಣ್ಣೋಟ : ಉನ್ನತ ಶಿಕ್ಷಣದಲ್ಲಿ ಬದಲಾವಣೆಗೆ ಕೇಂದ್ರದ ಮುನ್ನುಡಿ

ಆಂದ್ರದಲ್ಲಿನ ಬಿಜೆಪಿ ನೇತೃತ್ವದ ಎನ್‌ ಡಿಎ ಸರ್ಕಾರ ನಾಲ್ಕು ವರ್ಷಗಳ ಹಿಂದೆ ಜಾರಿಗೆ ತಂದ ನೂತನ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ…

3 hours ago

ಬೈಕ್‌ಗೆ ಲಾರಿ ಡಿಕ್ಕಿ : ಸವಾರ ಸಾವು, ಮತ್ತೊರ್ವ ಗಂಭೀರ

ತಿ.ನರಸೀಪುರ : ಬೈಕ್ ಗೆ ಎದುರಿಗೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿಯಾದ ಪರಿಣಾಮ ಯುವಕನೋರ್ವ ಸ್ಥಳದಲ್ಲಿಯೇ ಮೃತಪಟ್ಟಿ ಘಟನೆ ತಾಲೂಕಿನ…

3 hours ago