ಡಿ.ಎನ್. ಹರ್ಷ
ಕಂಡು ಕೇಳರಿಯದ ಕೊರೋನಾ ಎಂಬ ಮಹಾಮಾರಿ ಬಂದು ಹೋದ ಮೇಲೆ, ಸಾಕಷ್ಟು ಜನರ ಚಿತ್ತ ಉತ್ತಮ ಆರೋಗ್ಯ ಸಂಪತ್ತಿನ ಮೇಲೆ ಹರಿದಿದೆ. ಈ ಕಾರಣದಿಂದ ಪ್ರಕೃತಿಯ ಮಡಿಲಿನಲ್ಲಿ ಸಮಯ ಕಳೆಯಬೇಕು ಎನ್ನುವ ಉದ್ದೇಶದಿಂದ ದಿನೇದಿನೇ ಪ್ರವಾಸ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಪ್ರವಾಸೋದ್ಯಮವು ಜಾಗತಿಕವಾಗಿ ವಿವಿಧ ಆರ್ಥಿಕತೆಗಳ ಅವಿಭಾಜ್ಯ ಅಂಗವಾಗಿದೆ. ಇದು ಕೌಶಲ ರಹಿತ ಮತ್ತು ನುರಿತ ವ್ಯಕ್ತಿಗಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ.
ಜಪಾನ್, ಅಮೆರಿಕಾ, ಆಸ್ಟ್ರೇಲಿಯಾ, ಕೆನಡಾ ಮೊದಲಾದ ಹಲವಾರು ದೇಶಗಳಲ್ಲಿ ಕೃಷಿ ಪ್ರವಾಸೋದ್ಯಮ ಬೆಳೆಯುತ್ತಿರುವ ಉದ್ಯಮವೆಂದು ಪರಿಗಣಿಸಲಾಗಿದೆ. ಭಾರತದ ಜಿಡಿಪಿಯ ಸರಿಸುಮಾರು ೨೬ ಪ್ರತಿಶತವು ಕೃಷಿಯ ಮೂಲಕ ಬರುತ್ತಾ ಇದೆ. ಇಂದು ನಮ್ಮ ದೇಶದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಆಹಾರ ಉತ್ಪನ್ನಗಳನ್ನು ಬೆಳೆಯುತ್ತಲಿರುವ ಕಾರಣ, ರೈತ ಬೆಳೆದ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎನ್ನುವುದಕ್ಕೆ ಇತ್ತೀಚಿನ ಮಾವು, ಈರುಳ್ಳಿ ಬೆಳೆ ನೋಡಿ ತಿಳಿದುಕೊಳ್ಳಬಹುದು.
ಈ ನಿಟ್ಟಿನಲ್ಲಿ ಆಲೋಚನೆ ಮಾಡಿದರೆ ಕೃಷಿ ಪ್ರವಾಸೋದ್ಯಮವು ಹಳ್ಳಿಗರಿಗೆ ಪರ್ಯಾಯ ಆದಾಯ ಮೂಲಗಳನ್ನು ಸೃಷ್ಟಿಸುವ ವ್ಯವಸ್ಥೆಯೂ ಆಗಿದ್ದು, ಇದು ನಮ್ಮ ದೇಶಿ ಸಂಸ್ಕ ತಿಗಳನ್ನು ಸಂರಕ್ಷಣೆ ಮಾಡುವ ವ್ಯವಸ್ಥೆ ಆಗಿರುವುದು ಹೆಮ್ಮೆಯ ವಿಷಯ.
ಕೃಷಿ-ಪ್ರವಾಸೋದ್ಯಮ ಸಂಸ್ಕ ತಿಯು ಭಾರತೀಯ ಆರ್ಥಿಕತೆಯ ಪರವಾಗಿದ್ದು, ಸರಿಸುಮಾರು ೮೫% ಜನಸಂಖ್ಯೆಯು ನೇರವಾಗಿ ಅಥವಾ ಪರೋಕ್ಷವಾಗಿ ಕೃಷಿ ಮತ್ತು ಇತರ ಚಟುವಟಿಕೆಗಳ ಮೇಲೆ ಅವಲಂಬಿತವಾಗಿರುವ ಕಾರಣ ಭವಿಷ್ಯದಲ್ಲಿ ಹೆಚ್ಚಿನ ಬೇಡಿಕೆ ಇರುವ ಉದ್ಯಮವಾಗಿ ಬೆಳೆಯುವ ಎಲ್ಲಾ ಅವಕಾಶ ಇವೆ.
ಒಂದು ಸರ್ವೇ ಪ್ರಕಾರ ನಗರಗಳಲ್ಲಿ ವಾಸಿಸುವ ಒಟ್ಟು ಜನಸಂಖ್ಯೆಯ ೧/೩ ಭಾಗವು ಹಳ್ಳಿಗಳಲ್ಲಿ ವಾಸಿಸುವ ತಮ್ಮ ಸಂಬಂಧಿಕರನ್ನು ಹೊಂದಿಲ್ಲ ಮತ್ತು ಒಟ್ಟು ಜನಸಂಖ್ಯೆಯ ಅರ್ಧದಷ್ಟು ಹಳ್ಳಿಗಳಿಗೇ ಹೋಗಿಲ್ಲ. ಇವರೆಲ್ಲರ ಮನಸ್ಸಿನಲ್ಲಿ ಸಹಜವಾಗಿ ಕೃಷಿ ಬಗ್ಗೆ, ತಾವು ತಿನ್ನುವ ಆಹಾರದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಸಹಜವಾಗಿಯೇ ಇರುತ್ತದೆ.
ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎನ್ನುವ ಗಾದೆಯನ್ನು ನಾವು ಕೇಳಿದ್ದೇವೆ. ಪ್ರಕೃತಿಯ ಮಧ್ಯೆ ಮಾಡುವ ಕೃಷಿಯಲ್ಲಿ ಎಲ್ಲಾ ರೀತಿಯ ಜ್ಞಾನ ಪಡೆಯಬಹುದು ಎಂಬುದೇ ಈ ಗಾದೆಯ ಮಾತಿನ ಅರ್ಥ. ಅಂಕಿ ಅಂಶಗಳ ಪ್ರಕಾರ ಜಾಗತಿಕವಾಗಿ, ಕೃಷಿ ಪ್ರವಾಸೋದ್ಯಮ ಮಾರುಕಟ್ಟೆಯು ೨೦೧೯ರಲ್ಲಿ ೬೯.೨೪ ಶತಕೋಟಿ ಮೌಲ್ಯದ್ದಾಗಿದೆ. ೨೦೨೭ ರ ವೇಳೆಗೆ ೧೧೭.೩೭ ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ.
ಈ ಮೇಲಿನ ಎಲ್ಲ ಮಾಹಿತಿಯನ್ನು ಮತ್ತೊಮ್ಮೆ ಅವಲೋಕನ ಮಾಡಿದರೆ ಕೃಷಿ ಪ್ರವಾಸೋದ್ಯಮ ಎನ್ನುವುದು ಕೃಷಿಕರಿಗೆ ಹೆಚ್ಚಿನ ಆದಾಯ ತಂದುಕೊಡುವ ಉದ್ಯಮವಾಗಿದ್ದು, ಆರೋಗ್ಯವೇ ಭಾಗ್ಯ ಎನ್ನುವ ಗಾದೆಗೆ ಹೆಚ್ಚಿನ ಅರ್ಥ ಕಲ್ಪಿಸುತ್ತದೆ. ಮೂಲತಃ ಕೃಷಿಕರಾಗಿರುವ ಆರ್.ಎಸ್. ನವೀನ್ ರವರು ಕಳೆದ ಹತ್ತು ವರ್ಷಗಳಿಂದ ಕೃಷಿ ಪ್ರವಾಸೋದ್ಯಮದ ಬಗ್ಗೆ ಆಸಕ್ತಿ ಹೊಂದಿ, ದಕ್ಷಿಣ ಭಾರತದ ಎಲ್ಲ ಕಡೆ ತಿರುಗಿ ಅನುಭವದ ಜ್ಞಾನ ಪಡೆದು, ಸಮಾನ ಮನಸ್ಕರ ಜೊತೆ ಸೇರಿ, ಅಗ್ರಿಯಾನ ಟೂರಿಸಂ (Agriyana Tourism Pvt Ltd) ಎನ್ನುವ ಕಂಪೆನಿ ಶುರು ಮಾಡಿ, ಕಾರ್ಯಪ್ರವೃತ್ತರಾಗಿದ್ದಾರೆ. ಹೆಚ್ಚಿನ ಮಾಹಿತಿಗೆ ಆರ್.ಎಸ್.ನವೀನ್‌ರ ಮೊಬೈಲ್ ಸಂಖ್ಯೆ ೮೮೮೪೭೬೪೪೬೪ ಅನ್ನು ಸಂಪರ್ಕ ಮಾಡಬಹುದು.
ರಾಜ್‌ಘಾಟ್‌ಗೆ ಭೇಟಿ ನೀಡಿದ ವ್ಲಾಡಿಮಿರ್ ಪುಟಿನ್, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ದೆಹಲಿಯಲ್ಲಿ ರಾಷ್ಟ್ರಪತಿ…
ಬೆಂಗಳೂರು: ರಾಜ್ಯದ ಹಲವೆಡೆ ಒಣಹವೆ ಇದ್ದರೆ ಮತ್ತೆ ಕೆಲವೆಡೆ ಮಂಜು, ಮೋಡ ಕವಿದ ವಾತಾವರಣ ಮುಂದುವರೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ…
ಹಾಸನ: ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,…
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಮರಗಳ ಮಾರಣ ಹೋಮ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮಲೆ…
ಪ್ರತಿದಿನ ಬೆಳಗಿನ ಜಾವ ದಿನ ದಿನಪತ್ರಿಕೆಗಳನ್ನು ಬಹುತೇಕ ಮಕ್ಕಳೇ ವಿತರಿಸುತ್ತಿದ್ದಾರೆ. ಹವಾಮಾನ ವೈಪರೀತ್ಯದಿಂದ ವಿಪರೀತ ಚಳಿ ಇರುವುದರಿಂದ ಆರೋಗ್ಯದ ಮೇಲೆ…
ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸಗಳಿಗೆ ಮಧ್ಯವರ್ತಿಗಳು ಹಾಗೂ ಚಾಲನಾ ತರಬೇತಿ ಶಾಲೆಗಳವರಿಗೆ ಅವಕಾಶ ನೀಡದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ…