ಅನ್ನದಾತರ ಅಂಗಳ

ಕೃಷಿ ಪ್ರವಾಸೋದ್ಯಮ ಬೇಸಾಯದ ಹೊಸ ಭರವಸೆ

ಡಿ.ಎನ್. ಹರ್ಷ

ಕಂಡು ಕೇಳರಿಯದ ಕೊರೋನಾ ಎಂಬ ಮಹಾಮಾರಿ ಬಂದು ಹೋದ ಮೇಲೆ, ಸಾಕಷ್ಟು ಜನರ ಚಿತ್ತ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ ಎನ್ನುವ ಸಂಪತ್ತಿನ ಮೇಲೆ ಹರಿದಿದೆ. ಈ ಕಾರಣದಿಂದ ಪ್ರಕೃತಿಯ ಮಡಿಲಿನಲ್ಲಿ ಸಮಯ ಕಳೆಯಬೇಕು ಎನ್ನುವ ಉದ್ದೇಶದಿಂದ ದಿನೇ ದಿನೇ ಪ್ರವಾಸ ಹೋಗುವವರ ಸಂಖ್ಯೆ ಹೆಚ್ಚುತ್ತಾ ಇದೆ.

ಪ್ರವಾಸೋದ್ಯಮವು ಜಾಗತಿಕವಾಗಿ ವಿವಿಧ ಆರ್ಥಿಕತೆಗಳ ಅವಿಭಾಜ್ಯ ಅಂಗವಾಗಿದೆ. ಇದು ಕೌಶಲರಹಿತ ಮತ್ತು ನುರಿತ ವ್ಯಕ್ತಿಗಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ. ಜಪಾನ್, ಅಮೆರಿಕ, ಆಸ್ಟ್ರೇಲಿಯಾ, ಕೆನಡಾ ಮುಂತಾದ ಹಲವಾರು ದೇಶಗಳಲ್ಲಿ ಕೃಷಿ ಪ್ರವಾಸೋದ್ಯಮವನ್ನು ಬೆಳೆಯುತ್ತಿರುವ ಉದ್ಯಮವೆಂದು ಪರಿಗಣಿಸಲಾಗಿದೆ.

ಭಾರತದ ಜಿಡಿಪಿಯ ಸರಿಸುಮಾರು ೨೬ ಪ್ರತಿಶತ ಕೃಷಿಯ ಮೂಲಕ ಬರುತ್ತಾ ಇದೆ. ಇಂದು ನಮ್ಮ ದೇಶದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಆಹಾರ ಉತ್ಪನ್ನಗಳನ್ನು ಬೆಳೆಯುತ್ತಾ ಇರುವ ಕಾರಣ, ರೈತ ಬೆಳೆದ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎನ್ನುವುದಕ್ಕೆ ಇತ್ತೀಚಿನ ಮಾವು, ಈರುಳ್ಳಿ ಬೆಳೆ ನೋಡಿ ತಿಳಿದುಕೊಳ್ಳಬಹುದು. ಈ ನಿಟ್ಟಿನಲ್ಲಿ ಆಲೋಚನೆ ಮಾಡಿದರೆ ಕೃಷಿ ಪ್ರವಾಸೋದ್ಯಮವು ಹಳ್ಳಿಗರಿಗೆ ಪರ್ಯಾಯ ಆದಾಯ ಮೂಲಗಳನ್ನು ಸೃಷ್ಟಿಸುವ ವ್ಯವಸ್ಥೆ ಆಗಿದ್ದು, ಇದು ನಮ್ಮ ದೇಶಿ ಸಂಸ್ಕೃತಿಯನ್ನು ಸಂರಕ್ಷಣೆ ಮಾಡುವ ವ್ಯವಸ್ಥೆ ಆಗಿರುವುದು ಹೆಮ್ಮೆಯ ವಿಷಯ. ಕೃಷಿ-ಪ್ರವಾಸೋದ್ಯಮ ಸಂಸ್ಕೃತಿಯು ಭಾರತೀಯ ಆರ್ಥಿಕತೆಯ ಪರವಾಗಿದ್ದು, ಸರಿ ಸುಮಾರು ಶೇ.೮೫ ರಷ್ಟು ಜನಸಂಖ್ಯೆಯು ನೇರವಾಗಿ ಅಥವಾ ಪರೋಕ್ಷವಾಗಿ ಕೃಷಿ ಮತ್ತು ಇತರ ಚಟುವಟಿಕೆಗಳ ಮೇಲೆ ಅವಲಂಬಿತವಾಗಿರುವ ಕಾರಣ ಭವಿಷ್ಯದಲ್ಲಿ ಹೆಚ್ಚಿನ ಬೇಡಿಕೆ ಇರುವ ಉದ್ಯಮವಾಗಿ ಬೆಳೆಯುವ ಎಲ್ಲಾ ಅವಕಾಶ ಇದೆ.

ಒಂದು ಸರ್ವೇ ಪ್ರಕಾರ ನಗರಗಳಲ್ಲಿನ ಒಟ್ಟು ಜನಸಂಖ್ಯೆಯ ೧/೩ ಭಾಗವು ಹಳ್ಳಿಗಳಲ್ಲಿ ವಾಸಿಸುವ ಸಂಬಂಧಿಕರನ್ನು ಹೊಂದಿಲ್ಲ ಮತ್ತು ಅರ್ಧದಷ್ಟು ಒಟ್ಟು ಜನಸಂಖ್ಯೆಯು ಹಳ್ಳಿಗಳಿಗೆ ಹೋಗಿಲ್ಲ. ಇವರೆಲ್ಲರ ಮನಸ್ಸಿನಲ್ಲಿ ಸಹಜವಾಗಿ ಕೃಷಿ ಬಗ್ಗೆ, ತಾವು ತಿನ್ನುವ ಆಹಾರದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಇದೆ.

ಮೊಬೈಲ್, ಟಿವಿಗಳಲ್ಲಿನ ಕಾರ್ಟೂನ್‌ಗಳು, ಧಾರಾವಾಹಿ, ಆನ್ ಲೈನ್ ಗೇಮ್‌ಗಳ ಅಡಿಕ್ಷನ್ ಇಂದ ಹೊರ ಬಂದು ಮನಸ್ಸಿನ ಆರೋಗ್ಯ ಕಾಪಾಡಲು ದೇಶಿ ಆಟಗಳು, ಕೃಷಿ ಸಹಾಯ ಮಾಡುವಂತೆ, ದಿನೇ ದಿನೇ ದೇಹದ ಆರೋಗ್ಯ ಕಡಿಮೆ ಮಾಡುತ್ತಾ ಇರುವ ಹೊರಗಿನ ಜಂಕ್ ಫುಡ್, ಕಲಬೆರಕೆ ಆಹಾರ ಸೇವನೆಯಿಂದ ಹೊರ ಬರಲು ಹಳ್ಳಿ ಸೊಗಡಿನ ದೇಶಿ ಆಹಾರ ಪರ್ಯಾಯ ಮೂಲವಾಗಿದೆ. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎನ್ನುವ ಗಾದೆಯನ್ನು ನಾವು ಕೇಳಿದ್ದೇವೆ.

ಪ್ರಕೃತಿಯ ಜೊತೆ ಮಾಡುವ ಕೃಷಿಯಲ್ಲಿ, ಎಲ್ಲಾ ರೀತಿಯ ಜ್ಞಾನ ಪಡೆಯಬಹುದು ಎಂಬುದೇ ಗಾದೆಯ ಅರ್ಥ. ಅಂಕಿ ಅಂಶಗಳ ಪ್ರಕಾರ ಜಾಗತಿಕವಾಗಿ, ಕೃಷಿ ಪ್ರವಾಸೋದ್ಯಮ ಮಾರುಕಟ್ಟೆಯು ೨೦೧೯ರಲ್ಲಿ ೬೯.೨೪ ಶತಕೋಟಿ ಮೌಲ್ಯದ್ದಾಗಿದೆ. ೨೦೨೭ರ ವೇಳೆಗೆ ೧೧೭.೩೭ ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ.

ಈ ಮೇಲಿನ ಎಲ್ಲ ಮಾಹಿತಿಗಳನ್ನೂ ಮತ್ತೊಮ್ಮೆ ಅವಲೋಕನ ಮಾಡಿದರೆ ಕೃಷಿ ಪ್ರವಾಸೋದ್ಯಮ ಎನ್ನುವುದು ಕೃಷಿಕರಿಗೆ ಪ್ಯಾಸಿವ್ ಇನ್‌ಕಮ್ ತಂದುಕೊಡುವ ಉದ್ಯಮವಾಗಿದ್ದು, ಆರೋಗ್ಯವೇ ಭಾಗ್ಯ ಎನ್ನುವ ಗಾದೆಗೆ ಹೆಚ್ಚಿನ ಅರ್ಥ ಕಲ್ಪಿಸುತ್ತೆ. ಮೂಲತಃ ಕೃಷಿಕರಾಗಿರುವ ನವೀನ್ ಆರ್.ಎಸ್.ರವರು ಕಳೆದ ಹತ್ತು ವರ್ಷಗಳಿಂದ ಕೃಷಿ ಪ್ರವಾಸೋದ್ಯಮದ ಬಗ್ಗೆ ಆಸಕ್ತಿ ಹೊಂದಿ, ದಕ್ಷಿಣ ಭಾರತದ ಎಲ್ಲ ಕಡೆ ತಿರುಗಿ ಅನುಭವದ ಜ್ಞಾನ ಪಡೆದು, ಸಮಾನ ಮನಸ್ಕರ ಜೊತೆ ಸೇರಿ, ಅಗ್ರಿಯಾನ ಟೂರಿಸಂ (Agriyana Tourism Pvt Ltd) ಎನ್ನುವ ಕಂಪೆನಿ ಸ್ಥಾಪನೆ ಮಾಡಿ ಕಾರ್ಯಪ್ರವೃತ್ತರಾಗಿದ್ದಾರೆ. ಹೆಚ್ಚಿನ ಮಾಹಿತಿಗೆ ನವೀನ್ ಆರ್.ಎಸ್. ಮೊ.೮೮೮೪೭ ೬೪೪೬೪ ಸಂಪರ್ಕಿಸಬಹುದು.

ಆಂದೋಲನ ಡೆಸ್ಕ್

Recent Posts

ಕ್ಯಾತನಹಳ್ಳಿಯಲ್ಲಿ ಅರ್ಧಕ್ಕೆ ನಿಂತ ಕಾಮಗಾರಿಗಳು

ಮಹೇಶ್ ಕರೋಠಿ ಕಿಕ್ಕೇರಿ: ಇಲ್ಲಿಗೆ ಸಮೀಪದ ಮಂದಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಯಾತನಹಳ್ಳಿ ಗ್ರಾಮದಲ್ಲಿ ಕಳೆದ ೨-೩ ವರ್ಷಗಳಿಂದ ಹಲವು…

2 hours ago

ಓದುಗರ ಪತ್ರ: ಬಂದರು ಎಂದರೆ…

ನೆಂಟರಿಷ್ಟರು ಮನೆಗೆ ಬಂದರು ಎಂದರೆ... ಏನು ಎತ್ತ, ಹೇಗೆ ಅವರ ಆತಿಥ್ಯ? ಇಂಥ ಸಂಕಷ್ಟಗಳಿಗೆಲ್ಲಾ ಕಾರಣ,ಬಂದ್ ಆಗಿರುವ ಆ ಹಾರ್ಮುಜ್…

2 hours ago

ಓದುಗರ ಪತ್ರ: ರಸ್ತೆ ಡುಬ್ಬಗಳಿಗೆ ಬಿಳಿ ಬಣ್ಣ ಬಳಿಯಿರಿ

ಮೈಸೂರಿನಿಂದ ಎಚ್.ಡಿ.ಕೋಟೆ ಮಾರ್ಗದಲ್ಲಿ ಬರುವ ಮಾದಾಪುರ ಗ್ರಾಮದಿಂದ ಕೆ. ಬೆಳತ್ತೂರು ಹಾಗೂ ಲೆಂಕೆ ಗ್ರಾಮದವರೆಗೂ ರಸ್ತೆ ಡಾಂಬರೀಕರಣವಾಗಿದೆ. ಈ ರಸ್ತೆಯಲ್ಲಿ…

2 hours ago

ಓದುಗರ ಪತ್ರ: ರಾಜಕೀಯದ ಪ್ರಚಾರ ಸಾಧನವಾಗುತ್ತಿರುವ ಜಾತ್ರೆಗಳು

ಜಾತ್ರೆಗಳು ಹಾಗೂ ಹಬ್ಬಗಳು ಗ್ರಾಮದ ಎಲ್ಲಾ ಜನರು ಒಟ್ಟುಗೂಡಿ ಮಾಡುವ ಕಾರ್ಯಕ್ರಮವಾಗಿವೆ. ಇದರಲ್ಲಿ ಜನರ ಒಗ್ಗಟ್ಟು, ಪರಸ್ಪರ ಸಹಕಾರ ಕಾಣುತ್ತೇವೆ.…

3 hours ago

ಓದುಗರ ಪತ್ರ: ಸೆಸ್ಕ್ ಯುಜಿ ಕೇಬಲ್ ಮುಂಜಾಗ್ರತೆ ವಹಿಸಿ

ಮೈಸೂರಿನ ಬಹುತೇಕ ಎಲ್ಲ ಬಡಾವಣೆಗಳಲ್ಲೂ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್)ದಿಂದ ಅಂಡರ್ ಗ್ರೌಂಡ್ ಕೇಬಲ್ ಅನ್ನು ಅಳಡಿಸುತ್ತಿದ್ದು, ಕಾಮಗಾರಿಯ…

3 hours ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಕೆನೆಪದರ ಪರಿಶಿಷ್ಟರಿಗೆ ಬೇಡವೆನ್ನುವ ಕೇಂದ್ರಕ್ಕೆ ಮತ್ತೆ ಸುಪ್ರೀಂ ತಾಕೀತು

ಮೀಸಲಾತಿ ವ್ಯವಸ್ಥೆ ಜಾರಿ ಸಂಬಂಧ ಪರ ಮತ್ತು ವಿರೋಧದ ಚರ್ಚೆ ಹಾದಿ ಬೀದಿ, ಹಳ್ಳಿಯ ಪಂಚಾಯಿತಿ ಕಟ್ಟೆಗಳಲ್ಲಿ ಮತ್ತು ಖಾಸಗಿಯಾಗಿ…

3 hours ago