ಆಂದೋಲನ ಪುರವಣಿ

ಯೋಗ ಕ್ಷೇಮ : ಕಣ್ಣಿನ ಆರೋಗ್ಯದ ಕಡೆಗಿರಲಿ ಗಮನ

ನಿತ್ಯ ಜೀವನ ಕ್ರಮದ ಬದಲಾವಣೆಯಿಂದ ನೇತ್ರ ರಕ್ಷಣೆ ಸಾಧ್ಯ

-ಡಾ. ಸೌಮ್ಯ ಗಣೇಶ್ ನಾಣಯ್ಯ

ಜಗತ್ತನ್ನು ನೋಡುವ ಕಣ್ಣುಗಳ ಆರೋಗ್ಯದ ಕಡೆಗೆ ಗಮನ ಕೊಡಬೇಕು. ಇಲ್ಲದೇ ಇದ್ದರೆ ನೋಟವೇ ನೋವು ತರಬಹುದು. ಮೊಬೈಲ್, ಟಿವಿ, ಕಂಪ್ಯೂಟರ್, ಗೆಜೆಟ್‌ಗಳ ಹೆಚ್ಚಿನ ಬಳಕೆಯ ಇಂದಿನ ದಿನಗಳಲ್ಲಿ ಕಣ್ಣಿಗೆ ಹೆಚ್ಚಿನ ಶ್ರಮವಾಗುತ್ತಿರುವುದು ಖಚಿತ. ಇಂತಹ ಸಂದರ್ಭದಲ್ಲಿ ಕಣ್ಣಿನ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸಬೇಕು ಎನ್ನುತ್ತಾರೆ ಕೊಡಗಿನ ಡಾ. ಸೌಮ್ಯ ನಾಣಯ್ಯ.

===========

ಎಲ್ಲರಿಗೂ, ಎಲ್ಲದಕ್ಕೂ ಒಂದೊಂದು ಸಾಮರ್ಥ್ಯ ಇರುತ್ತದೆ. ಅದಕ್ಕೆ ಮೀರಿದ ಹೊರೆ ಹೇರಿದರೆ ಸಮಸ್ಯೆಯಾಗುವುದು ಸಹಜ. ಇದನ್ನೇ ನಾವು ಕಣ್ಣಿನ ಆರೋಗ್ಯಕ್ಕೂ ಅನ್ವಯ ಮಾಡಿಕೊಳ್ಳಬಹುದು. ವಯೋಮಾನಕ್ಕೆ ಅನುಗುಣವಾಗಿ ಪ್ರತಿಯೊಬ್ಬರ ಕಣ್ಣುಗಳಿಗೂ ಒಂದೊಂದು ಸಾಮರ್ಥ್ಯ ಇರುತ್ತದೆ. ಇದನ್ನು ಅರಿತುಕೊಂಡು ಅದಕ್ಕೆ ತಕ್ಕುದಾದ ಜೀವನ ಕ್ರಮ ಅನುಸರಿಸಬೇಕು. ಇದೇ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇರುವ ಪ್ರಾಥಮಿಕ ಹಂತ.

ಡ್ರೈ ಐಗೆ ಅವಕಾಶ ಕೊಡಬೇಡಿ

ಇಂದು ಹೆಚ್ಚಾಗಿ ಕಣ್ಣಿನ ಸಮಸ್ಯೆ ಎಂದು ಹೇಳಿಕೊಂಡು ಬರುತ್ತಿರುವವರಲ್ಲಿ ಒಣ ಕಣ್ಣು (ಡ್ರೈ ಐ) ಸಮಸ್ಯೆ ಹೆಚ್ಚಾಗಿದೆ. ಅತಿಯಾದ ಮೊಬೈಲ್ ಬಳಕೆ, ಟಿವಿ ನೋಡುವುದು, ಕಂಪ್ಯೂಟರ್‌ಗಳ ಮುಂದೆ ಕೂರುವುದು, ಸೂರ್ಯ ಕಿರಣಗಳನ್ನು ನೇರವಾಗಿ ದಿಟ್ಟಿಸುವುದು ಸೇರಿ ಹಲವಾರು ಕಾರಣಗಳಿಂದ ಈ ಸಮಸ್ಯೆ ಎದುರಾಗುತ್ತದೆ. ಇದಕ್ಕೆ ಅವಕಾಶ ಕೊಡಬಾರದು. ಪ್ರತಿ ೨೦, ೩೦ ನಿಮಿಷಕ್ಕೆ ಒಮ್ಮೆ ಕಣ್ಣುಗಳಿಗೆ ನಿಮಿಷಗಳ ಕಾಲವಾದರೂ ರೆಸ್ಟ್ ನೀಡಬೇಕು.

ಕಣ್ಣಿನಲ್ಲಿ ನೀರು ಬರುವುದು, ಉರಿಯುವುದು, ಕಣ್ಣು ಕೆಂಪಾಗುವುದು, ಕಣ್ಣು ಮಂಜಾಗುವುದು ಸೇರಿ ಇತರೆ ಲಕ್ಷಣಗಳನ್ನು ಕಡೆಗಣಿಸುವುದು ಬೇಡ. ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಅಗತ್ಯ ಚಿಕಿತ್ಸೆ ಪಡೆದುಕೊಂಡರೆ ಮುಂದೆ ಆಗಬಹುದಾದ ಸಮಸ್ಯೆಗಳಿಂದ ದೂರ ಉಳಿಯಬಹುದು. ಕಣ್ಣಿನ ಆರೋಗ್ಯ ನಮ್ಮ ನಿತ್ಯದ ಚಟುವಟಿಕೆ, ಮಾನಸಿಕ ಆರೋಗ್ಯದ ಜೊತೆಗೂ ಸಂಬಂಧ ಹೊಂದಿರುವುದರಿಂದ ಈ ನಿಟ್ಟಿನಲ್ಲಿ ತಕ್ಷಣವೇ ಚಿಕಿತ್ಸೆ ಪಡೆಯುವುದು ಉತ್ತಮ.

ಮಕ್ಕಳನ್ನು ಹೊರಗೆ ಬಿಡಿ

ಬಾಲ್ಯದಲ್ಲಿ ಮಕ್ಕಳನ್ನು ಪ್ರಕೃತಿಯೊಂದಿಗೆ ತೆರೆದುಕೊಳ್ಳಲು ಬಿಡಬೇಕು. ಅವರು ಬಯಲಿಗೆ ಬಂದು ಆಕಾಶ, ಸೂರ್ಯ, ಚಂದ್ರ, ನಕ್ಷತ್ರಗಳು, ದೂರದ ವಸ್ತುಗಳು, ಹಸಿರನ್ನು ಕಣ್ತುಂಬಿಕೊಳ್ಳಬೇಕು. ಇದರಿಂದ ಅವರ ಕಣ್ಣಿನ ಸಾಮರ್ಥ್ಯ ಹೆಚ್ಚಾಗುತ್ತದೆ. ಮುಂದೆ ಬರಬಹುದಾದ ದೂರ ದೃಷ್ಟಿ ದೋಷದಿಂದಲೂ ಪಾರಾಗಬಹುದು.

ವರ್ಷಕ್ಕೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಿ

ಆರೋಗ್ಯದಲ್ಲಿ ಸ್ಥಿರತೆ ಇರುವವರು ವರ್ಷಕ್ಕೆ ಒಮ್ಮೆಯಾದರೂ ಕಣ್ಣಿನ ತಪಾಸಣೆ ಮಾಡಿಸುವುದು ಉತ್ತಮ. ಈಗ ಗ್ರಾಮ ಮಟ್ಟದಲ್ಲಿಯೂ ಉಚಿತ ನೇತ್ರ ತಪಾಸಣಾ ಶಿಬಿರಗಳು ನಡೆಯುತ್ತಿರುತ್ತವೆ. ನಮ್ಮ ಕಣ್ಣಿಗೆ ಏನೂ ಸಮಸ್ಯೆ ಇಲ್ಲ ಎಂದು ಸುಮ್ಮನೆ ಇರಬಾರದು. ತಪಾಸಣೆ ಮಾಡಿಸುವುದರಿಂದ ಏನಾದರೂ ಸಮಸ್ಯೆ ಇದ್ದರೆ ಪ್ರಾರಂಭಿಕ ಹಂತದಲ್ಲಿಯೇ ಗುಣಪಡಿಸಲು ಇದು ಸಹಕಾರಿ. ಸಕ್ಕರೆ ಕಾಯಿಲೆ ಇರುವವರು ಆಗಾಗ ಕಣ್ಣಿನ ತಪಾಸಣೆ ಮಾಡಿಸುವುದು ಉತ್ತಮ. ಇದರಿಂದ ಗ್ಲಾಕೋಮಾ ಸೇರಿ ಹಲವರು ಸಮಸ್ಯೆಗಳಿಂದ ದೂರ ಇರಬಹುದು.

ಕನ್ನಡಕ ಹಾಕುವವರ ಸಂಖ್ಯೆ ಯಾಕೆ ಹೆಚ್ಚಿದೆ ಗೊತ್ತಾ?

ಈಗ ಪುಟ್ಟ ಪುಟ್ಟ ಮಕ್ಕಳೂ ಕನ್ನಡ ಹಾಕುತ್ತಿದ್ದಾರೆ. ಹಿಂದೆಲ್ಲಾ ಹೀಗೆ ಇರಲಿಲ್ಲ. ಈಗ ಕಣ್ಣಿನ ಸಮಸ್ಯೆ ಹೆಚ್ಚಾಗಿದೆ ಎನ್ನುವ ಅಭಿಪ್ರಾಯ ಕೆಲವರಲ್ಲಿ ಇದೆ. ಆದರೆ ಇದನ್ನು ಸುಖಾಸುಮ್ಮನೆ ಹೇಳುವುದು ಸರಿಯಲ್ಲ. ಹಿಂದೆಯೂ ಮಕ್ಕಳಿಗೆ, ವಯಸ್ಸಾದವರಿಗೆ ಕಣ್ಣಿನ ಸಮಸ್ಯೆಗಳು ಇರುತ್ತಿದ್ದವು. ಆದರೆ ಅದರ ಬಗ್ಗೆ ಅರಿವು ಇರಲಿಲ್ಲ. ಇದೇ ಕಾರಣಕ್ಕೆ ಹೆಚ್ಚಿನವರು ಸಮಸ್ಯೆಗೆ ಚಿಕಿತ್ಸೆ ಪಡೆದು ಕನ್ನಡಕ ಧರಿಸುತ್ತಿರಲಿಲ್ಲ. ಆದರೆ ಈಗ ಸಾಕಷ್ಟು ಜಾಗೃತಿ ಉಂಟಾಗಿದೆ. ಮಕ್ಕಳಿಗೆ ಕಣ್ಣಿಗೆ ಸಂಬಂಧಿಸಿದ ಸಮಸ್ಯೆ ಇದ್ದರೆ ಅದನ್ನು ಶಿಕ್ಷಕರೇ ಗುರುತಿಸಿ ಪೋಷಕರಿಗೆ ತಿಳಿಸುತ್ತಾರೆ. ಪೋಷಕರೂ ಈ ನಿಟ್ಟಿನಲ್ಲಿ ಜಾಗೃತರಾಗಿದ್ದಾರೆ. ಹಿಂದೆ ಕನ್ನಡ ಹಾಕಲು ಕೀಳರಿಮೆ ಇತ್ತು. ಆದರೆ ಈಗ ಅದು ಬದಲಾಗಿದೆ. ಇದು ಒಳ್ಳೆಯ ಬೆಳವಣಿಗೆಯೂ ಹೌದು.

ಕಣ್ಣಿನ ಅರೋಗ್ಯಕ್ಕೆ ಸರಳ ಟಿಪ್ಸ

* ಮಕ್ಕಳು ಬೆಳೆಯುವಾಗ ಹೊರಾಂಗಣ ಚಟುವಟಿಕೆ ಮುಖ್ಯ

* ಸ್ಕ್ರೀನ್ ಟೈಮ್ ರೆಸ್ಟ್ರಿಕ್ಟ್ ಮಾಡಬೇಕು (೨೦, ೩೦ ನಿಮಿಷ)

* ಹೈ ರಿಸ್ಕ್ ಆಕ್ಟಿವಿಟಿಸ್ಟ್ ಮಾಡುವಾಗ ಎಚ್ಚರ ಇರಬೇಕು.

* ಮಕ್ಕಳಿಗೆ ಐ ಸೇಫ್ಟಿ ಪ್ರೊಟಕ್ಷನ್ ಮಾಡಬೇಕು, ಚೂಪಾದ ವಸ್ತುಗಳನ್ನು ಕೊಡಬಾರದು.

* ಸಮತೋಲಿತ ಆಹಾರದ ಸೇವನೆ ನಿರಂತರವಾಗಿರಬೇಕು.

* ಸನ್ ಗ್ಲಾಸ್, ಹ್ಯಾಟ್ ಹಾಕುವುದು ಮುಖ್ಯ.

* ಪದೇ ಪದೇ ಕಣ್ಣು ಉಜ್ಜುವುದು ಮಾಡಬಾರದು.

andolanait

Recent Posts

ಮಂಡ್ಯ ನೆಲದಲ್ಲಿ ಕನ್ನಡ ಕಹಳೆ

ಮಂಡ್ಯ: ಸಕ್ಕರೆ ನಗರಿಯಲ್ಲಿ ಶುಕ್ರವಾರ ಆಕ್ಷರಶಃ ದೊಡ್ಡ ಜಾತ್ರೆಯ ಸೊಬಗು ಮನೆ ಮಾಡಿತ್ತು. ಎಲ್ಲಿ ನೋಡಿದರಲ್ಲಿ ಜನವೋ ಜನ; ಅದು…

3 mins ago

ಕನ್ನಡಿಗರಿಗೆ ಉದ್ಯೋಗ ನೀಡದ ಸಾಹಿತ್ಯ ಸಮ್ಮೇಳನ: ವಾಟಲ್‌ ನಾಗರಾಜ್‌ ಆಕ್ರೋಶ

ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…

9 hours ago

ಹಾಸ್ಯ ಸಾಹಿತ್ಯ ಆಧುನಿಕ ಬದುಕಿಗೆ ಔಷಧಿ: ಪ್ರೊ.ಕರಿಯಪ್ಪ

ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…

9 hours ago

ಸಿ & ಡಿ ಲ್ಯಾಂಡ್ ಸಮಸ್ಯೆ ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ: ಯು.ಟಿ. ಖಾದರ್

ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…

10 hours ago

ಸಿ.ಟಿ ರವಿ ಕೊಲೆಗೆ ಪೊಲೀಸರ ಸಂಚು: ಅಶೋಕ್‌ ಆರೋಪ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…

10 hours ago

ವಿರಾಜಪೇಟೆ | ಬಿಟ್ಟಂಗಾಲದಲ್ಲಿ ಚಿರತೆ ಬೆಕ್ಕು ಸಾವು

ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…

10 hours ago