ಮೈಸೂರು : ಎಲ್ಲ ವಿಶೇಷತೆಗಳೊಂದಿಗೆ ಸಮಗ್ರ ಮಧುಮೇಹ ಚಿಕಿತ್ಸಾ ಕೇಂದ್ರವಾಗಿರುವ ನಗರದ ನ್ಯೂ ಡಯಾಕೇರ್ ಸೆಂಟರ್ ಪಾನಿ ಕ್ಲಿನಿಕ್, ನವಾಯು ಕೇರ್ ಸೆಂಟರ್ ಎರಡು ವರ್ಷಗಳನ್ನು ಪೂರೈಸಿದ್ದು, ಅಲೋಪತಿ ಹಾಗೂ ಆಯುರ್ವೇದ ಎರಡೂ ಚಿಕಿತ್ಸೆಗಳನ್ನು ಒಂದೇ ಸೂರಿನಲ್ಲಿ ಒದಗಿಸುವ ಮೈಸೂರಿನ ಏಕೈಕ ಕೇಂದ್ರ ಇದಾಗಿದೆ.
ವಿ.ವಿ.ಮೊಹಲ್ಲಾದ ಗೋಕುಲಂ ರಸ್ತೆಯ ೬ನೇ ಮುಖ್ಯ ರಸ್ತೆಯ ಕಬ್ಸ್ ಬೇಕರಿ ಮುಂಭಾಗ ಇರುವ ಈ ಕೇಂದ್ರವನ್ನು ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಮಧುಮೇಹ ತಜ್ಞರಾದ ಡಾ.ಎ.ಆರ್.ರೇಣುಕಾ ಪ್ರಸಾದ್ ಹಾಗೂ ಸಿಇಒ ಆಯುರ್ವೇದ ತಜ್ಞರಾದ ಡಾ.ಪಿ.ನವ್ಯಾ ಅವರು ನಿರ್ವಹಣೆ ಮಾಡುತ್ತಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಅನೇಕ ಸಂಘ-ಸಂಸ್ಥೆಗಳಿಂದ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಇಲ್ಲಿ ಲಭ್ಯವಿರುವ ತಪಾಸಣಾ ಸೌಲಭ್ಯಗಳು : ಸಂಪೂರ್ಣ ಮಧುಮೇಹಿಗಳ ಆರೈಕೆ, ಮಧುಮೇಹಿಗಳ ಕಣ್ಣಿನ ಘಟಕ, ಪಾದ ರಕ್ಷಣಾ ಘಟಕ, ಹೃದ್ರೋಗ, ಮೂತ್ರಪಿಂಡ ನ್ಯೂರೋಕೇರ್, ಆರ್ಥೋಕೇರ್ ಮನೋವೈದ್ಯರ ಸಮಾಲೋಚನೆ, ಆಹಾರ ಪದ್ಧತಿ ಮತ್ತು ಪೋಷಣೆ, ಇತರ ವಿಶೇಷ ತಜ್ಞರೊಡನೆ ಸಮಾಲೋಚನೆ, ಮಧುಮೇಹ ಸ್ನೇಹಿ ಆಹಾರ ಉತ್ಪನ್ನಗಳು, ಆಯುರ್ವೇದ ತಜ್ಞರೊಡನೆ ಸಮಾಲೋಚನೆ, ಪಂಚಕರ್ಮ ಥೆರಪಿ, ನೇತ್ರ ತರ್ಪಣ, ಬೊಜ್ಜುತನದ ನಿರ್ವಹಣೆ, ಪಾರ್ಶ್ವವಾಯ ಹಾಗೂ ರಕ್ತದೊತ್ತಡ ನಿರ್ವಹಣೆಗಳನ್ನು ಒಳಗೊಂಡಿದ್ದು , ವಿಶೇಷವಾಗಿ ಉತ್ತಮವಾದ ಪ್ರಯೋಗಾಲಯ ಮತ್ತು ಔಷಧಾಲಯ ವನ್ನು ಮನೆ ಮನೆಗೆ ಹೋಗಿ ರಕ್ತಸಂಗ್ರಹಣೆ ಹಾಗೂ ಔಷಧಿ ವಿತರಣೆ ಸೌಲಭ್ಯಗಳನ್ನು ನೀಡುತ್ತಿದೆ.
ಶಿಬಿರಗಳು : ಕೇವಲ ಚಿಕಿತ್ಸೆ ನೀಡುವುದರಲ್ಲಿ ಮಾತ್ರವಲ್ಲದೇ ಸಾಮಾಜಿಕ ಕಳಕಳಿಯನ್ನು ಹೊಂದಿದ್ದು ಅನೇಕ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ನೂರಾರು ಉಚಿತ ಮಧುಮೇಹದ ಶಿಬಿರಗಳನ್ನು ಹಮ್ಮಿಕೊಂಡು ಸಾವಿರಾರು ಜನರಿಗೆ ತಪಾಸಣೆ ನಡೆಸಿ, ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಕಳೆದ ಐದು ವರ್ಷಗಳಿಂದ ಆಧುನಿಕ ವಿಧಾನವಾದ ಸಿಜಿಎಂಎಸ್ (ಕಂಟಿನಿಯಸ್ ಗುಲ್ಕೋಸ್ ಮಾನಿಟರಿಂಗ್ ಸಿಸ್ಟಮ್-ಇಎಖ – ನಿರಂತರವಾಗಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ಅರಿಯುವ ಸಾಧನ) ಬಳಸಲಾಗುತ್ತಿದ್ದು, ಕಳೆದ ೫ ವರ್ಷಗಳಲ್ಲಿ ಸಾವಿರಾರು ಮಂದಿ ಅಪ್ಲಿಕೇಷನ್ ಪ್ರಯೋಜನ ಪಡೆದಿದ್ದಾರೆ. ಸಮುದಾಯದೊಂದಿಗೂ ಕೆಲಸ ಮಾಡುತ್ತಾ, ಜನರಲ್ಲಿ ಇರುವ ಮಧುಮೇಹದ ಬಗೆಗಿನ ಭಯವನ್ನು ಹೋಗಲಾಡಿಸುವ ಕೆಲಸ ಮಾಡಲಾಗುತ್ತಿದೆ.
ವಿಶೇಷತೆಗಳೇನು ?
* ಮಧುಮೇಹಕ್ಕೆ ಸಂಬಂಧಿಸಿದ ಇದುವರೆಗಿನ ಎಲ್ಲ ರೀತಿಯ ಅತ್ಯಾಧುನಿಕ ವಿಧಾನಗಳಲ್ಲಿ ಚಿಕಿತ್ಸೆ ಸಿಗುತ್ತದೆ.
*ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಮಧುಮೇಹಿಗಳನ್ನು ಪ್ರೇರೆಪಿಸಲು ಉತ್ತಮ ನಿಯಂತ್ರಿತ ಮಧುಮೇಹಿಗಳಿಗೆ ಬಹುಮಾನ ನೀಡಲಾಗುತ್ತದೆ.
* ಬಹಳ ವರ್ಷಗಳ ಕಾಲ ಮಧುಮೇಹವಿದ್ದರೂ ಯಾವುದೇ ದುಷ್ಪರಿಣಾಮಗಳಗಳನ್ನು ಹೊಂದಿಲ್ಲದ ಮಧುಮೇಹಿಗಳನ್ನು ಗುರುತಿಸಿ ‘ಮಧುಮೇಹದ ರಾಯಭಾರಿ’ ಪ್ರಶಸ್ತಿಯನ್ನು ವಿಶ್ವಮಧುಮೇಹ ದಿನದಂದು ನೀಡುತ್ತಾ , ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ.
* ಮಧುಮೇಹಿಗಳಿಗೆ ಪ್ರತಿ ಮೂರು ತಿಂಗಳಿಗೆ ಒಮ್ಮೆ ಕರೆ ಮಾಡಿ ಫಾಲೋಅಪ್ ಮಾಡಲಾಗುತ್ತದೆ. ವಾಟ್ಸ್‌ಅಪ್ ಗ್ರೂಪ್ ಮೂಲಕ ಮಧುಮೇಹಕ್ಕೆ ಸಂಬಂಧಿಸಿದಂತೆ ಪ್ರತಿದಿನ ಟಿಪ್ಸ್‌ಗಳನ್ನು ತಿಳಿಸಲಾಗುತ್ತದೆ.
*ಮುಂದಿನ ತಿಂಗಳಿಂದ ಪ್ರತಿ ತಿಂಗಳ ಮೂರನೇ ಭಾನುವಾರ ಸಂಸ್ಥೆಯು ಕಾರ್ಯನಿರ್ವಹಿಸಲಿದ್ದು ಆ ದಿನ ಉಚಿತವಾಗಿ ಮಧುಮೇಹಿಗಳಿಗೆ ಸಮಾಲೋಚನೆ ಮಾಡಲಾಗುತ್ತದೆ.
* ಪ್ರಾಥಮಿಕ ಹಂತದಲ್ಲೇ ಸೂಕ್ತ ಪರೀಕ್ಷೆಗಳ ಮೂಲಕ ತಪಾಸಣೆ ನಡೆಸಿ , ಮುಂದಿನ ದಿನಗಳಲ್ಲಿ ಮಧುಮೇಹದಿಂದ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು.
*ಮುಂದಿನ ದಿನಗಳಲ್ಲಿ ಟೈಪ್ ೧ ಮಧುಮೇಹಿಗಳಿಗೆ (ಮಕ್ಕಳಿಗೆ) ಉಚಿತವಾಗಿ ಸಮಾಲೋಚನೆ ನೀಡಲಿದ್ದು ಅಗತ್ಯ ಇದ್ದಲ್ಲಿ ಉಚಿತವಾಗಿ ಇನ್ಸುಲಿನ್ ಔಷಧಿಗಳನ್ನು ನೀಡಲಾಗುತ್ತದೆ ಎಂದು ಸಂಸ್ಥೆಯ ಡಾ.ರೇಣುಕಾಪ್ರಸಾದ. ಎ ಆರ್ ಅವರು ಹೇಳಿದ್ದಾರೆ.
*ಜೂಮ್ /ಫೇಸ್ಬುಕ್ ಲೈವ್ ಮೂಲಕ ಮಧುಮೇಹ ಗಳು ಹಾಗೂ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಲಾಗುತಿದೆ.
ಅನೇಕರಿಗೆ ಮಧುಮೇಹದ ಬಗ್ಗೆ ಸರಿಯಾದ ಅರಿವು ಇಲ್ಲದಿರುವುದು. ಅರಿವಿದ್ದರೂ ಸಹ ವೈದ್ಯರಲ್ಲಿ ಹೋಗಿ ಸಮಾಲೋಚನೆ ಪಡೆಯಲು ಇರುವ ತಾತ್ಸಾರ ಮನೋಭಾವ ದಿಂದಾಗಿ ಇಂದು ಭಾರತ ಮಧುಮೇಹದ ರಾಜಧಾನಿಯಾಗುತ್ತಿದೆ. ನಮ್ಮ ನ್ಯೂ ಡಯಾಕೇರ್ ಸೆಂಟರ್, ನವಾಯು ಕೇರ್ ಸೆಂಟರ್ ಮಧುಮೇಹಕ್ಕೆ ಸಂಬಂಧಿಸಿದ ಇದುವರೆಗಿನ ಎಲ್ಲ ರೀತಿಯ ಅತ್ಯಾಧುನಿಕ ವಿಧಾನಗಳನ್ನು ಒಳಗೊಂಡಿದ್ದು, ಆಯುರ್ವೇದ ಮತ್ತು ಅಲೋಪತಿ ಎರಡೂ ರೀತಿಯ ಚಿಕಿತ್ಸೆಯನ್ನು ನೀಡುತ್ತಿದೆ ಮತ್ತು ಅರ್ಪಣ ಮನೋಭಾವದಿಂದ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ. – ಡಾ.ಎ.ಆರ್.ರೇಣುಕಾಪ್ರಸಾದ್, ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಮಧುಮೇಹ ತಜ್ಞರು.
ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…
ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು…
ಹೊಸದಿಲ್ಲಿ : 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್‌ಗೆ ಜಾಮೀನು ದೊರೆತಿರುವುದನ್ನು ವಿರೋಧಿಸಿ ಸಂತ್ರಸ್ತೆ…
ಬೆಂಗಳೂರು : ಮಾರ್ಕ್ʼ ಸಿನಿಮಾದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ…
ಚಾಮರಾಜನಗರ : ಅನ್ನದಾತರಾಗಿರುವ ರೈತರ ಬಗ್ಗೆ ಆತ್ಮೀಯ ಕಾಳಜಿಯಿದ್ದು, ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದೆ…
ಬೆಂಗಳೂರು : ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು…