ಸಾಮಾನ್ಯವಾಗಿ ಪ್ರೇಮಿಗಳ ದಿನದಂದು ಸಿನಿಮಾ ಸಂಬಂಧಪಟ್ಟ ಕಾರ್ಯಕ್ರಮಗಳು ಇದ್ದೇ ಇರುತ್ತವೆ. ಈ ಬಾರಿ ಕೂಡ ಇದ್ದವು. ಲೋಹಿತ್ ಹೆಚ್ ಅವರು ಕುಮಾರ್ ಬಿ. ಅವರಿಗಾಗಿ ನಿರ್ಮಿಸಿರುವ ‘ಮಾಫಿಯಾ’ ಚಿತ್ರದ ಭಿತ್ತಿಪತ್ರ ಬಿಡುಗಡೆ, ನಮಿತಾರಾವ್- ವಿಕ್ರಂಸೂರಿ ಜೋಡಿಯ ‘ಚೌಕಾಬಾರಾ’ ಹಾಡಿನ ಲೋಕಾರ್ಪಣೆ ಇದರಲ್ಲಿ ಸೇರಿದೆ. ‘ಮಾಫಿಯಾ’ ಪ್ರಜ್ವಲ್ ದೇವರಾಜ್‌ಮತ್ತು ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ ಚಿತ್ರ. ಮಾಫಿಯಾ ಅಂದರೆ ದುರುಳರ, ಅಪರಾಧಿಗಳ ಕೂಟ. ಇವರಿಗೂ ಪ್ರೇಮಿಗಳ ದಿನಕ್ಕೂ ಏನು ಸಂಬಂಧ ಎಂದು ಕೇಳುವಂತಿಲ್ಲ. ಈ ಚಿತ್ರತಂಡ ಪ್ರೇಮಿಗಳ ದಿನಕ್ಕೆ ಶುಭಕೋರಿದೆ. ‘ಮಾಫಿಯಾ’ ಚಿತ್ರಕ್ಕೆ ಎಸ್.ಪಾಂಡಿಕುಮಾರ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಇದ್ದು, ತಾರಾಬಳಗದಲ್ಲಿ ಪ್ರಜ್ವಲ್ ದೇವರಾಜ್, ಅದಿತಿ ಪ್ರಭುದೇವ ಅವರೊಂದಿಗೆ ದೇವರಾಜ್, ಸಾಧು ಕೋಕಿಲ, ಶೈನ್ ಶೆಟ್ಟಿ, ವಿಜಯ್ ಚೆಂಡೂರ್, ವಾಸುಕಿ ವೈಭವ್ ಮುಂತಾದವರಿದ್ದಾರೆ.
‘ಚೌಕಾಬಾರ’ ಚಿತ್ರವನ್ನು ನಮಿತಾರಾವ್ ತಮ್ಮ ನವಿ ನಿರ್ಮಿತಿ ಲಾಂಛನದಲ್ಲಿ ನಿರ್ಮಿಸಿದರೆ, ವಿಕ್ರಮ್ ಸೂರಿ ನಿರ್ದೇಶಿಸಿದ್ದಾರೆ. ಮಣಿ ಆರ್ ರಾವ್ ಕಾದಂಬರಿ ಆಧರಿಸಿ ಈ ಚಿತ್ರ ತಯಾರಾಗಿದೆ ಎಂದಿದೆ ಚಿತ್ರತಂಡ. ಮುಂದಿನ ತಿಂಗಳು ತೆರೆಕಾಣಲಿರುವ ಈ ಚಿತ್ರ ಅಮೆರಿಕದಲ್ಲೂ ಏಕಕಾಲದಲ್ಲಿ ತೆರೆಗೆ ಬರುವ ಸಾಧ್ಯತೆ ಇದ್ದು, ಏಪ್ರಿಲ್ ನಲ್ಲಿ ದುಬೈ, ಆಸ್ಟ್ರೇಲಿಯಾ ಮುಂತಾದ ಕಡೆ ಬಿಡುಗಡೆ ಮಾಡುವ ಸಿದ್ಧತೆ ನಡೆಯುತ್ತಿದೆಯಂತೆ. ಚಿತ್ರದ ತಾರಾಗಣದಲ್ಲಿ ವಿಹಾನ್ ಪ್ರಭಂಜನ್, ಕಾವ್ಯ ರಮೇಶ್, ಸಂಜಯ್ ಸೂರಿ, ಸುಮಾ ರಾವ್, ಪ್ರಥಮ ಪ್ರಸಾದ್, ಮಧು ಹೆಗಡೆ, ದಮಯಂತಿ ನಾಗರಾಜ್ ಮುಂತಾದವರಿದ್ದಾರೆ. ರವಿರಾಜ್ ಛಾಯಾಗ್ರಹಣ, ಶಶಿಧರ್ ಸಂಕಲನ ಚಿತ್ರಕ್ಕಿದೆ.
ಇದರ ಜೊತೆಯಲ್ಲಿ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ ತಾರಾ ಜೋಡಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಭಿನ್ನರೀತಿಯಲ್ಲಿ ಪ್ರೇಮಿಗಳ ದಿನ ಆಚರಿಸಿಕೊಂಡಿತು. ಪ್ರೇಮಕತೆಗಳ ಪುಸ್ತಕವನ್ನು ಬಿಡುಗಡೆ ಮಾಡುವುದರ ಮೂಲಕ ತಮ್ಮ ಪ್ರೇಮದ ದಿನಗಳನ್ನು ಮೆಲುಕು ಹಾಕಿದ್ದಾರೆ. ಶಿವಕುಮಾರ ಮಾವಲಿಯವರ ‘ಪ್ರೇಮಪತ್ರದ ಆಫೀಸು ಮತ್ತು ಅವಳು’ ಕಥಾ ಸಂಕಲನವನ್ನು ಅವರಿಬ್ಬರೂ ಬಿಡುಗಡೆ ಮಾಡಿದ್ದಾರೆ. ಲೇಖಕ ಶಿವಕುಮಾರ ಮಾವಲಿ, ಪ್ರಕಾಶಕಿ ಪ್ರೇಮ ಶಿವಕುಮಾರ ಜೊತೆಗೂಡಿ ಇಬ್ಬರೂ ಪ್ರೇಮ ಪುಸ್ತಕವೊಂದನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ವಾಲಂಟೈನ್ ದಿನಗಳ ನೆನಪು ಮಾಡಿಕೊಂಡರು.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…