ನಟ ಬಾಂದಳದಿಂದ ಜಿಗಿದು ಬಂದ ನಟ ಕಿರಣ ರಾಜ್ !
ಎರಡು ಚಿತ್ರಗಳ ಹೆಸರುಗಳನ್ನು ವಿಶಿಷ್ಟ ರೀತಿಯಲ್ಲಿ ಲೋಕಾರ್ಪಣೆ ಮಾಡಿದ ಸುದ್ದಿ ಬಂದಿದೆ. ಎರಡೂ ಚಿತ್ರಗಳ ಮೊದಲ ನೋಟದ ಸಾಂಪ್ರದಾಯಿಕ ಸಮಾರಂಭಗಳಲ್ಲಿ ಅಲ್ಲ, ಬದಲಿಗೆ ತೀರಾ ವಿಭಿನ್ನ ರೀತಿಯಲ್ಲಿ ಆದವು.
ಹಾರುವ ವಿಮಾನದಿಂದ ಜಿಗಿಯುವ ಉತ್ಸಾಹಿಗಳು ಸಾಕಷ್ಟಿದ್ದಾರೆ. ಪ್ಯಾರಾ ಸೈಲಿಂಗ್, ಸ್ಕೈ ಡೈವಿಂಗ್‌ಗಳು ಮನರಂಜನೆ ಬಯಸುವ ಸಾಹಸಿ ಪ್ರವಾಸಿಗರಿಗೆ ಲಭ್ಯ. ಇದು ತಮ್ಮ ಚಿತ್ರದ ಪ್ರಚಾರಕ್ಕಾಗಿ ಬಾಂದಳದಿಂದ ನಟ ಕಿರಣರಾಜ್ ಜಿಗಿದರು. ಕಿರಣರಾಜ್, ‘ಕನ್ನಡತಿ’ ಸರಣಿಯ ಮೂಲಕ ಮನೆಮಾತಾದವರು. ‘ಬಡ್ಡೀಸ್’ ಚಿತ್ರದಲ್ಲಿ ನಟಿಸಿದ್ದಾರೆ. ಗುರುತೇಜ್ ಶೆಟ್ಟಿ ನಿರ್ದೇಶನದ ಹೊಸಚಿತ್ರದ ಮುಖ್ಯಪಾತ್ರಧಾರಿ ಅವರು. ಚಿತ್ರದ ಹೆಸರನ್ನು ಪ್ರಕಟಿಸಲು ಅವರು ಹೊಸ ಸಾಹಸ ಮಾಡಿದ್ದನ್ನು ಅವರ ಮಾತಿನಲ್ಲೇ ಕೇಳಬೇಕು: ‘ನನಗೆ ಸಿನಿಮಾ ಎಂದರೆ ಕನಸು. ಹಾಗಾಗಿ ಚಿತ್ರದ ಆರಂಭದಿಂದಲೂ ಸ್ವಲ್ಪ ವಿಶೇಷ ಇರಬೇಕು ಎಂದು ಬಯಸುತ್ತೇನೆ. ಸಾಮಾನ್ಯವಾಗಿ ಗಣ್ಯರ ಸಮ್ಮುಖದಲ್ಲಿ ಶೀರ್ಷಿಕೆ ಅನಾವರಣವಾಗುತ್ತದೆ. ಆದರೆ ನಾನು ಸ್ವಲ್ಪ ಭಿನ್ನವಾಗಿರಲಿ ಎಂದು ಯೋಚಿಸಿ, ಸ್ಕ್ತ್ಯೈವ್ ಡೈವ್ ಮೂಲಕ ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದೆ. ಈ ಚಿತ್ರದ ಹೆಸರು ‘ರಾನಿ’. ನನ್ನ ಈ ಸಾಹಸಕ್ಕೆ ಮನೆಯವರಿಂದ, ಸ್ನೇಹಿತರಿಂದ ವಿರೋಧ ವ್ಯಕ್ತವಾಯಿತು. ಆದರೂ ನಾನು ಅಲ್ಲಿನ ಪರಿಣಿತರಿಂದ ತರಬೇತಿ ಪಡೆದು ಈ ಸಾಹಸಕ್ಕೆ ಮುಂದಾದೆ’.
ಅವರು ದುಬೈಯಲ್ಲಿ ತರಬೇತಿ ಪಡೆದ ನಂತರ ಸುಮಾರು ಹದಿಮೂರು ಸಾವಿರ ಅಡಿ ಎತ್ತರದಿಂದ ಜಿಗಿದು (ಸ್ಕೈ ಡೈವ್ ಮಾಡಿ) ಶೀರ್ಷಿಕೆ ಅನಾವರಣ ಮಾಡುವಾಗ ಚಿತ್ರ ತಂಡದವರು ಅಲ್ಲಿ ಯಾರೂ ಇರಲಿಲ್ಲ. ನಿರ್ದೇಶಕ ಗುರುತೇಜ ಶೆಟ್ಟಿ ಅವರು, ಇಲ್ಲಿ ದೇವರ ಬಳಿ ಪ್ರಾರ್ಥಿಸುತ್ತಿದ್ದರಂತೆ! ‘ಶೀರ್ಷಿಕೆ ಅನಾವರಣ ಸಾಹಸದ ಪೂರ್ತಿ ವಿಡಿಯೋ ನೋಡಿದ ಮೇಲೆ ನೆಮ್ಮದಿಯ ನಿಟ್ಟುಸಿರು ಬಿಟ್ಟೆ’ ಎನ್ನುತ್ತಾರೆ ಅವರು. ಈ ಚಿತ್ರವನ್ನು ಚಂದ್ರಕಾಂತ್ ಪೂಜಾರಿ ಹಾಗೂ ಉಮೇಶ್ ಹೆಗಡೆ ನಿರ್ಮಿಸಿದ್ದಾರೆ.
ಪತಿ ಚಿರಂಜೀವಿ ಸರ್ಜಾ ಅಗಲಿಕೆಯ ನಂತರ ತಾರೆ ಮೇಘನ ರಾಜ್ ಸರ್ಜಾ ನಟನೆಗೆ ಮರಳಿರುವ ಚಿತ್ರ ‘ತತ್ಸಮತದ್ಭವ’. ನಿರ್ದೇಶಕ ಪನ್ನಗಭರಣ ಹಾಗೂ ಸ್ಛೂರ್ತಿ ಅನಿಲ್ ನಿರ್ಮಿಸುತ್ತಿರುವ ಈ ಚಿತ್ರವನ್ನು ವಿಶಾಲ್ ಆತ್ರೇಯ ನಿರ್ದೇಶಿಸುತ್ತಿದ್ದು, ಈಗಾಗಲೇ ಚಿತ್ರೀಕರಣ ಮುಗಿದಿದೆ. ಇದರ ಮೊದಲ ನೋಟದ ಲೋಕಾರ್ಪಣೆ, ಚಿತ್ರ ತಂಡದ ಪ್ರಕಾರ, ನೂರಕ್ಕೂ ಹೆಚ್ಚು ನಟನಟಿಯರಿಂದ ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಏಕಕಾಲಕ್ಕೆ ಆಗಿದೆ. ನಟನಟಿಯರು ಮಾತ್ರವಲ್ಲದೆ, ಮೂವತ್ತಕ್ಕೂ ಹೆಚ್ಚು ದೇಶಗಳಲ್ಲಿ ಕನ್ನಡ ಹಾಗೂ ಇತರ ಸಂಘಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದಾಗಿಯೂ ಚಿತ್ರತಂಡ ಹೇಳಿದೆ. ‘ತತ್ಸಮತದ್ಭವ’ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ, ಶ್ರೀನಿವಾಸ್ ರಾಮಯ್ಯ ಛಾಯಾಗ್ರಹಣ, ರವಿ ಆರಾಧ್ಯ ಸಂಕಲನ ಇದೆ.
ನಾಳೆಯಿಂದ ಬಿಜೆಪಿ ಪ್ರತಿಭಟನೆ: ಸಂಸದರ ಮಾಹಿತಿ ಮೈಸೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತ ಅವಹೇಳನಕಾರಿ ವೀಡಿಯೋ ಮಾಡಿದವರ…
ಬೆಳಗಾವಿ : ಮುಂದಿನ ಮಾರ್ಚ್‌ನಿಂದ ಎರಡೂವರೆ ಸಾವಿರ ಮೆಗಾ ವ್ಯಾಟ್ ಸೌರಶಕ್ತಿ ವಿದ್ಯುತ್ ಸೇರ್ಪಡೆಯಾಗುತ್ತಿದ್ದು, ಗೃಹ ಬಳಕೆ ಹಾಗೂ ಕೈಗಾರಿಕೆಗಳಿಗೆ…
ಬೆಳಗಾವಿ : ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೈದಿಗಳಿಗೆ ರಾಜ್ಯಾಥಿತ್ಯ ಸೌಲಭ್ಯಗಳು ಸಿಗುತ್ತಿರುವ ಬಗ್ಗೆ ವಿಧಾನಪರಿಷತ್‌ನಲ್ಲಿ ಪ್ರಸ್ತಾಪವಾಯಿತು. ಶೂನ್ಯವೇಳೆಯಲ್ಲಿ ಸದಸ್ಯ ಧನಂಜಯ್…
ಬೆಂಗಳೂರು : ನಟ ದರ್ಶನ್ ಅವರ ಅನುಪಸ್ಥಿತಿಯಲ್ಲಿ ದಿ ಡೆವಿಲ್ ಸಿನಿಮಾ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾವನ್ನು ಅಭಿಮಾನಿಗಳು, ದರ್ಶನ್…
ಬೆಳಗಾವಿ : ರಾಜ್ಯದಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 360 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ…
ಬೆಳಗಾವಿ : ರಾಜ್ಯದಲ್ಲಿ ಹೊಸ ತಾಲ್ಲೂಕುಗಳಲ್ಲಿ ಸದ್ಯಕ್ಕೆ ತಾಲ್ಲೂಕು ಮಟ್ಟದ ಆಸ್ಪತ್ರೆಗಳ ಮಂಜೂರಾತಿ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ…