ಪುನೀತ್ ರಾಜಕುಮಾರ್ ಅವರ ನಿಧನಾನಂತರ ಅವರನ್ನು ನೆನಪಿಸಿಕೊಳ್ಳದ ಕಾರ್ಯಕ್ರಮಗಳಿಲ್ಲ. ಚಲನಚಿತ್ರಗಳಿಲ್ಲ. ಫಿಲಂ ಫೇರ್ ಪ್ರಶಸ್ತಿ (ದಕ್ಷಿಣ) ಅವರಿಗೆ ಅರ್ಪಿಸಲಾಯಿತು. ಈ ತಿಂಗಳ ಕೊನೆಯ ವಾರದಲ್ಲಿ ನಡೆಯುವ ಕರ್ನಾಟಕ ಚಲನಚಿತ್ರ ಕಪ್‌ನ ಕ್ರಿಕೆಟ್ ಪಂದ್ಯಾಟದಲ್ಲಿ ಅವರ ವಿಜೃಂಭಣೆ ಇರುತ್ತದೆ.
ಮಾರ್ಚ್ 17, ಅಪ್ಪು ಅವರ ಜನ್ಮದಿನ. ಅಂದು ಎರಡು ಚಲನಚಿತ್ರಗಳು ತೆರೆಗೆ ಬರುವುದಾಗಿ ಪ್ರಕಟಿಸಿವೆ. ಅವುಗಳೆಂದರೆ ಗಣೇಶ್ ಮುಖ್ಯಭೂಮಿಕೆಯ ?ಭಾನದಾರಿಯಲ್ಲಿ’ ಮತ್ತು ಚಂದ್ರು ನಿರ್ಮಾಣ, ನಿರ್ದೇಶನದ ?ಕಬ್ಜ’.
ಗಣೇಶ್ ಅಭಿನಯದ ಚಿತ್ರದ ಹೆಸರು ಪುನೀತ್ ?ಭಾಗ್ಯವಂತ’ ಚಿತ್ರಕ್ಕಾಗಿ ಹಾಡಿದ ?ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ’ ಹಾಡಿನ ಮೊದಲ ಶಬ್ದ. ಮಾರ್ಚ್ ವೇಳೆಗೆ ಚಿತ್ರ ಸಿದ್ಧವಾಗುವ ಕಾರಣ ನಿರ್ಮಾಪಕರು ಪುನೀತ್ ಜನ್ಮದಿನದಂದು ಅದನ್ನು ತೆರೆಗೆ ತರಲು ನಿರ್ಧರಿಸಿ ಆ ಕುರಿತು ಪ್ರಕಟಿಸಿಯೂ ಇದ್ದರು. ಪ್ರೀತಂ ಗುಬ್ಬಿ ನಿರ್ದೇಶನದ ಈ ಚಿತ್ರದಲ್ಲಿ ಗಣೇಶ್ ಅವರದು ಕ್ರಿಕೆಟ್ ಆಟಗಾರನ ಪಾತ್ರವಾದರೆ, ಅವರ ಜೋಡಿಯಾಗಿ ನಟಿಸಿರುವ ರುಕ್ಮಿಣಿ ವಸಂತ್ ಅವರದು ಮತ್ತೊಬ್ಬ ಕ್ರೀಡಾಪಟುವಿನ ಪಾತ್ರ. ಈ ಚಿತ್ರಕ್ಕೆ ಆಫ್ರಿಕದಲ್ಲಿ ಚಿತ್ರೀಕರಣವಾಗಿರುವುದು ವಿಶೇಷ.
?ಕಬ್ಜ’ ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರ. ?ಕೆಜಿಎಫ್ ಚಾಪ್ಟರ್ 2’ರ ನಂತರ ಕನ್ನಡ ಚಿತ್ರರಂಗದತ್ತ ಭಾರತದ ಎಲ್ಲ ಭಾಷೆಗಳ ಚಿತ್ರೋದ್ಯಮಗಳೂ ಗಮನ ಹರಿಸಿದ್ದು, ?ಕಬ್ಜ’ ಚಿತ್ರದ ಕುರಿತಂತೆ, ಮುಂದಿನ ಅತೀ ಹೆಚ್ಚು ನಿರೀಕ್ಷೆಯ ಚಿತ್ರ ಎನ್ನಲಾಗಿದೆ. ಅದೇ ಹಾದಿಯ ಕಥಾನಕ ಇದು ಎನ್ನಲಾಗುತ್ತಿದ್ದು, ಉಪೇಂದ್ರ ಮತ್ತು ಸುದೀಪ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಗಳಾಗಿರುವುದು ಈ ನಿರೀಕ್ಷೆಗೆ ಇನ್ನಷ್ಟು ಇಂಬು ಕೊಟ್ಟಂತಿದೆ.
ಪುನೀತ್ ರಾಜಕುಮಾರ್ ಮತ್ತು ತಮ್ಮ ನಡುವಿನ ಸ್ನೇಹ, ಪ್ರೀತಿ, ಅವರ ಸಲಹೆ, ಸೂಚನೆಗಳು ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಪರಿಣಾಮ ಬೀರಿದ್ದು, ಅವರ ಹುಟ್ಟುಹಬ್ಬದಂದು ಈ ಚಿತ್ರವನ್ನು ತೆರೆಗೆ ತರುವುದಾಗಿ ಚಂದ್ರು ಹೇಳಿದ್ದಾರೆ. ಕನ್ನಡದ ಈ ಚಿತ್ರವನ್ನು ವಿಶ್ವಾದ್ಯಂತ ತೆರೆಗೆ ತರಲಿದ್ದು, ಏಳು ಭಾಷೆಗಳಲ್ಲಿ ಈ ಚಿತ್ರವನ್ನು ನೋಡಬಹುದು ಎಂದಿದ್ದಾರೆ. ನಿರ್ಮಾಪಕ, ನಿರ್ದೇಶಕ ಚಂದ್ರು. ಎಲ್ಲ ಭಾಷೆಗಳಲ್ಲೂ ಚಿತ್ರಕ್ಕೆ ಬೇಡಿಕೆ ಇದ್ದು, ಅಲ್ಲಿನ ಪ್ರತಿಷ್ಠಿತ ಉದ್ಯಮಿಗಳು ಚಿತ್ರವನ್ನು ಬಿಡುಗಡೆ ಮಾಡಲು ಉತ್ಸುಕರಾಗಿದ್ದಾರಂತೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…