ಚಿತ್ರ ಮಂಜರಿ

UI ವರ್ಸಸ್‌ ಮ್ಯಾಕ್ಸ್‌ ಸುಳ್ಳು

ನಮ್ಮ ನಡುವೆ ಯಾವುದೇ ಕ್ಲ್ಯಾಶ್‌ ಇಲ್ಲ ಎಂದ ಉಪೇಂದ್ರ ಮತ್ತು ಸುದೀಪ್‌

ಮೊದಲು ವರ್ಷದ ಕೊನೆಗೆ ಯಾವ ಚಿತ್ರ ಬರುತ್ತದೆ ಎಂದೇ ಗೊತ್ತಿರಲಿಲ್ಲ. ಒಂದೆರಡು ತಿಂಗಳ ಹಿಂದೆ ಡಿಸೆಂಬರ್ ೨೦ರಂದು ಉಪೇಂದ್ರ ನಟನೆ, ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಯುಐ’, ಐದು ಭಾಷೆಗಳಲ್ಲಿ ಬಿಡುಗಡೆ ಆಗುತ್ತದೆ ಎಂದು ಸುದ್ದಿಯಾಯಿತು. ಇನ್ನು, ನವೆಂಬರ್ ಕೊನೆಯಲ್ಲಿ ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರವು ಕ್ರಿಸ್‌ಮಸ್ ಅಂಗವಾಗಿ ಡಿ.೨೫ರಂದು ಬಿಡುಗಡೆಯಾಗುತ್ತದೆ ಎಂದು ಸುದ್ದಿಯಾಯಿತು.

ಅಲ್ಲಿಂದ ನೂರೆಂಟು ಚರ್ಚೆಗಳು ಶುರುವಾದವು. ಪ್ರಮುಖವಾಗಿ, ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಚಿತ್ರಗಳು ಕಡಿಮೆಯಾಗುತ್ತಿವೆ, ಈ ವರ್ಷ ಸಾಕಷ್ಟು ಚಿತ್ರಗಳು ಸೋತಿವೆ. ಈ ಪರಿಸ್ಥಿತಿಯಲ್ಲಿ ಇಂತಹ ಪೈಪೋಟಿ ಮತ್ತು ಕ್ಲ್ಯಾಶ್ ಬೇಕಾ? ಎಂಬ ಪ್ರಶ್ನೆಗಳು ಚಿತ್ರರಂಗದ ವಲಯದಲ್ಲಿ ಮತ್ತು ಸಾಮಾಜಿಕ ತಾಣಗಳಲ್ಲಿ ಕೇಳಿಬಂತು. ಕೆಲವರು ಇಂಥದ್ದೊಂದು ಪೈಪೋಟಿ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯಪಟ್ಟರು.

ಮುಂದಿನ ದಿನಗಳಲ್ಲಿ ಸದ್ಯ ಯಾವುದೇ ಸ್ಟಾರ್ ಸಿನಿಮಾಗಳಿಲ್ಲದ ಕಾರಣ, ಆ ಸಂದರ್ಭದಲ್ಲಿ ಒಂದು ಚಿತ್ರ ಬರಬಹುದಿತ್ತು ಮತ್ತು ಇಂಥದ್ದೊಂದು ಕ್ಲ್ಯಾಶ್ ತಪ್ಪಿಸಬಹುದಿತ್ತು ಎಂದು ಹಲವರು ಅಭಿಪ್ರಾಯಪಟ್ಟರು.

ಆದರೆ, ಇದರಲ್ಲಿ ಯಾವುದೇ ಕ್ಲ್ಯಾಶ್ ಇಲ್ಲ ಎಂದು ಉಪೇಂದ್ರ ಮತ್ತು ಸುದೀಪ್ ಇಬ್ಬರೂ ಹೇಳಿಕೊಂಡಿದ್ದಾರೆ. ‘ಖಿಐ’ ಚಿತ್ರದ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಮಾತನಾಡಿದ ಉಪೇಂದ್ರ, ‘ಒಂದೇ ದಿನ ಎರಡು ದೊಡ್ಡ ಚಿತ್ರಗಳು ಬಿಡುಗಡೆಯಾಗುವುದು ಕನ್ನಡ ಚಿತ್ರರಂಗದಲ್ಲಿ ಹೊಸತೇನಲ್ಲ. ಹಾಗೆ ಎರಡು ಚಿತ್ರಗಳು ಬಿಡುಗಡೆಯಾದಾಗ, ಎರಡೂ ಚಿತ್ರಗಳು ಯಶಸ್ವಿಯಾದ ಉದಾಹರಣೆಗಳಿವೆ. ಅದು ರಜೆಯ ಸೀಸನ್ ಆಗಿರುವುದರಿಂದ, ಅವರೂ ಬರುತ್ತಿದ್ದಾರೆ. ‘ಮ್ಯಾಕ್ಸ್’ ಚಿತ್ರಕ್ಕೂ ಒಳ್ಳೆಯದಾಗಲಿ.

ಜನ ಎರಡೂ ಚಿತ್ರಗಳನ್ನು ನೋಡುತ್ತಾರೆ ಎಂಬ ನಂಬಿಕೆ ಇದೆ. ನಾವೆಲ್ಲಾ ಕನ್ನಡ ಚಿತ್ರರಂಗದವರು. ಕನ್ನಡ ಚಿತ್ರಗಳನ್ನು ಮಾಡುತ್ತಿದ್ದೇವೆ. ಕನ್ನಡ ಚಿತ್ರಗಳು ಬೆಳೆಯುತ್ತಿವೆ. ಅದಕ್ಕೆ ನಾವು ಹೆಮ್ಮೆ ಪಡಬೇಕು. ಒಬ್ಬರಿಗೊಬ್ಬರು ಸಪೋರ್ಟ್ ಮಾಡಬೇಕು. ಸುದೀಪ್ ಅವರು ನಮ್ಮ ಚಿತ್ರಕ್ಕೆ ಶುಭಕೋರಿ ಟ್ವೀಟ್ ಮಾಡಿದ್ದಾರೆ. ನಾವೂ ಅವರ ಚಿತ್ರಕ್ಕೆ ಬೆಂಬಲ ಕೊಡುತ್ತೇವೆ’ ಎಂದರು.

ಇನ್ನು, ಭಾನುವಾರ ರಾತ್ರಿ ನಡೆದ ‘ಮ್ಯಾಕ್ಸ್’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, ‘ನಮ್ಮ ಚಿತ್ರ ಬಿಡುಗಡೆ ಆಗುತ್ತಿರುವ ಬಗ್ಗೆ ಉಪೇಂದ್ರ ಅವರೇ ತಲೆಕೆಡಿಸಿಕೊಂಡಿಲ್ಲ. ನಾವ್ಯಾಕೆ ಡಿಸೆಂಬರ್ ೨೫ರಂದು ಬರುತ್ತಿದ್ದೇವೆ ಎಂದು ಅವರಿಗೂ ಗೊತ್ತಿದೆ. ಡಿ.೨೫ರಂದು ಚಿತ್ರ ಬಿಡುಗಡೆ ಆಗುತ್ತಿರುವುದಕ್ಕೆ ಪ್ರಮುಖ ಕಾರಣ ರಜೆಯ ಸೀಸನ್. ಚಿತ್ರದಲ್ಲಿ ನಾನು ನಟಿಸಿದ್ದರೂ, ಹಣ ಹಾಕುತ್ತಿರುವವರು ಬೇರೆಯವರು. ಅವರ ಪ್ಲಾನ್ ಬೇರೆಯೇ ಇರುತ್ತದೆ. ಆಗಸ್ಟ್ ತಿಂಗಳಲ್ಲೇ ಚಿತ್ರ ಬಿಡುಗಡೆ ಮಾಡುವ ಪ್ರಯತ್ನ ಮಾಡಲಾಗಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಇದರಿಂದ ಉಪೇಂದ್ರ ಅವರ ತಂಡಕ್ಕೆ ಯಾವುದೇ ತೊಂದರೆ ಇಲ್ಲ. ಅದು ದೊಡ್ಡ ಸಿನಿಮಾ. ಆ ಚಿತ್ರದ ಬಗ್ಗೆ ನಾವು ಹೆದರಬೇಕು. ಉಪೇಂದ್ರ ನಮ್ಮ ಗುರುವಿದ್ದಂತೆ. ಅವರು ಮೊದಲು ಬರುತ್ತಿದ್ದಾರೆ. ಅವರ ಶಿಷ್ಯನಾಗಿ ನಾನು ಐದು ದಿನಗಳ ನಂತರ ಬರುತ್ತಿದ್ದೇನೆ. ಇಲ್ಲಿ ಯಾವುದೇ ಕ್ಲ್ಯಾಶ್ ಇಲ್ಲ. ಒಂದಕ್ಕಿಂತ ಹೆಚ್ಚು ದೊಡ್ಡ ಚಿತ್ರಗಳು ಬಂದರೆ ಚಿತ್ರರಂಗಕ್ಕೆ ಸಮಸ್ಯೆ ಇಲ್ಲ. ಇದರಿಂದ ಅನುಕೂಲವೇ ಆಗುತ್ತದೆ’ ಎಂದರು.

ಅಲ್ಲಿಗೆ ಐದು ದಿನಗಳ ಅಂತರದಲ್ಲಿ ‘ಖಿಐ’ ಮತ್ತು ‘ಮ್ಯಾಕ್ಸ್’ ಎರಡೂ ಚಿತ್ರಗಳು ಬಿಡುಗಡೆಯಾಗುತ್ತಿವೆ. ಒಂದೇ ದಿನ ಎರಡು ದೊಡ್ಡ ಚಿತ್ರಗಳು ಬಿಡುಗಡೆಯಾಗಿ ಎರಡೂ ಗೆದ್ದ ಉದಾಹರಣೆಗಳಿವೆ ಎಂದು ಉಪೇಂದ್ರ ಹೇಳಿದ್ದಾರೆ. ಹಾಗಿರುವಾಗ, ಐದು ದಿನಗಳ ಅಂತರದಲ್ಲಿ ಎರಡು ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಎರಡೂ ಚಿತ್ರಗಳನ್ನು ಪ್ರೇಕ್ಷಕರು ಕೈಹಿಡಿಯಲಿ ಎಂಬುದು ಚಿತ್ರರಂಗದ ಆಸೆ.

’ಯುಐ’ ವರ್ಸಸ್ ‘ಮ್ಯಾಕ್ಸ್ ’ ಸುಳ್ಳು ನಮ್ಮ ನಡುವೆ ಯಾವುದೇ ಕ್ಲ್ಯಾಶ್ ಇಲ್ಲ ಎಂದ ಉಪೇಂದ್ರ, ಸುದೀಪ್ ತಾಯಿ ಆಸೆ ಈಡೇರಲಿಲ್ಲ? ಸುದೀಪ್ ಅವರ ತಾಯಿ ಸರೋಜ ಸಂಜೀವ್ ಇತ್ತೀಚೆಗೆ ನಿಧನರಾಗಿದ್ದು ಗೊತ್ತೇ ಇದೆ. ಅವರ ನಿಧನಕ್ಕೂ ಮುನ್ನ ಅವರ ಆಸೆಯೊಂದನ್ನು ಈಡೇರಿಸುವುದಕ್ಕೆ ಸಾಧ್ಯವಾಗಲಿಲ್ಲ ಎಂದು ಸುದೀಪ್ ಹೇಳಿಕೊಂಡಿದ್ದಾರೆ.

ಇಷ್ಟಕ್ಕೂ ಅವರ ಆಸೆ ಏನಾಗಿತ್ತು? ‘ಮ್ಯಾಕ್ಸ್’ ಚಿತ್ರವನ್ನು ನೋಡುವ ಆಸೆ ಅವರಿಗಿತ್ತಂತೆ. ಆದರೆ, ಅವರ ನಿಧನದಿಂದ ಆ ಆಸೆಯನ್ನು ಸುದೀಪ್ ಅವರಿಂದ ಈಡೇರಿಸುವುದಕ್ಕೆ ಸಾಧ್ಯವಾಗಿಲ್ಲ. ‘ಈ ಚಿತ್ರವನ್ನು ನೋಡಬೇಕು ಎಂದು ನನ್ನ ತಾಯಿ ಆಸೆಪಟ್ಟಿದ್ದರು. ಆ ಆಸೆ ಈಡೇರಲಿಲ್ಲ. ಆಗಾಗ ಅವರಿಗೆ ಕೆಲವು ತುಣುಕುಗಳನ್ನು ತೋರಿಸುತ್ತಿದ್ದೆ. ಅದು ಬಿಟ್ಟರೆ, ಅವರು ಪೂರ್ತಿಚಿತ್ರವನ್ನು ನೋಡುವುದಕ್ಕೆ ಸಾಧ್ಯವೇ ಆಗಲಿಲ್ಲ. ಅವರ ಆಶೀರ್ವಾದ ಚಿತ್ರದ ಮೇಲೆ ಸದಾ ಇರುತ್ತದೆ’ ಎಂದು ಹೇಳಿದರು.

ಪ್ರೇಕ್ಷಕರು ಯಾವತ್ತೂ ಮೇಲಿರುತ್ತಾರೆ: ’ಯುಐ’ ಚಿತ್ರದ ವಾರ್ನರ್ ಹೆಸರಿನ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಇದರಲ್ಲಿ ೨೦೪೦ರ ಕಾಲಘಟ್ಟವನ್ನು ಉಪೇಂದ್ರ ತೋರಿಸಿದ್ದಾರೆ. ಕೋವಿಡ್, ಗ್ಲೋಬಲ್ ವಾರ್ಮಿಂಗ್ ಮುಂತಾದ ಸಮಸ್ಯೆಗಳಿಂದ ೨೦೪೦ರಲ್ಲಿ ಏನಾಗಬಹುದು ಎಂದು ಹೇಳುವ ಪ್ರಯತ್ನ ಮಾಡಿದ್ದಾರೆ. ಇವೆಲ್ಲಾ ಪ್ರೇಕ್ಷಕರಿಗೆ ಅರ್ಥವಾಗುತ್ತದಾ? ಎಂಬ ಪ್ರಶ್ನೆಗೆ, ‘ಜನರಿಗೆ ಚಿತ್ರ ಅರ್ಥವಾಗುತ್ತದೆ, ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ಪ್ರೇಕ್ಷಕರು ಯಾವತ್ತೂ ನಮಗಿಂತ ಮೇಲಿರುತ್ತಾರೆ. ನಾವು ಏನೇ ಮಾಡಿದರೂ ಪ್ರೇಕ್ಷಕರಿಗಿಂತ ಮೇಲೆ ಹೋಗುವುದು ಕಷ್ಟ. ನಾನು ‘ಎ’ ಸಿನಿಮಾ ಮಾಡಿದಾಗ, ಚಿತ್ರ ನೋಡಿ ಗಾಂಧಿನಗರದ ಎಲ್ಲರೂ ಡಬ್ಬ ಸಿನಿಮಾ ಎಂದರು. ಸೆನ್ಸಾರ್ ಅಧಿಕಾರಿ, ಚಿತ್ರ ವೀಕ್ಷಣೆಗೆ ಯೋಗ್ಯವಿಲ್ಲ ಎಂದು ಪ್ರಮಾಣಪತ್ರವನ್ನೇ ಕೊಡುವುದಿಲ್ಲ ಎಂದರು. ಚಿತ್ರದ ಫೈನಾನ್ಶಿಯರ್ ಸಹ ಚಿತ್ರ ಚೆನ್ನಾಗಿಲ್ಲ, ದುಡ್ಡು ಕೊಡಲ್ಲ ಎಂದರು. ಜನ ಮಾತ್ರಅರ್ಥ ಮಾಡಿಕೊಂಡು ಗೆಲ್ಲಿಸಿದರು. ಹಾಗೆಯೇ ಈ ಚಿತ್ರವನ್ನೂ ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ’ ಎಂದರು.

ತಾಯಿ ಆಸೆ ಈಡೇರಲಿಲ್ಲ?:  ಸುದೀಪ್ ಅವರ ತಾಯಿ ಸರೋಜ ಸಂಜೀವ್ ಇತ್ತೀಚೆಗೆ ನಿಧನರಾಗಿದ್ದು ಗೊತ್ತೇ ಇದೆ. ಅವರ ನಿಧನಕ್ಕೂ ಮುನ್ನ ಅವರ ಆಸೆಯೊಂದನ್ನು ಈಡೇರಿಸುವುದಕ್ಕೆ ಸಾಧ್ಯವಾಗಲಿಲ್ಲ ಎಂದು ಸುದೀಪ್ ಹೇಳಿಕೊಂಡಿದ್ದಾರೆ. ಇಷ್ಟಕ್ಕೂ ಅವರ ಆಸೆ ಏನಾಗಿತ್ತು? ‘ಮ್ಯಾಕ್ಸ್’ ಚಿತ್ರವನ್ನು ನೋಡುವ ಆಸೆ ಅವರಿಗಿತ್ತಂತೆ. ಆದರೆ, ಅವರ ನಿಧನದಿಂದ ಆ ಆಸೆಯನ್ನು ಸುದೀಪ್ ಅವರಿಂದ ಈಡೇರಿಸುವುದಕ್ಕೆ ಸಾಧ್ಯವಾಗಿಲ್ಲ. ‘ಈ ಚಿತ್ರವನ್ನು ನೋಡಬೇಕು ಎಂದು ನನ್ನ ತಾಯಿ ಆಸೆಪಟ್ಟಿದ್ದರು. ಆ ಆಸೆ ಈಡೇರಲಿಲ್ಲ. ಆಗಾಗ ಅವರಿಗೆ ಕೆಲವು ತುಣುಕುಗಳನ್ನು ತೋರಿಸುತ್ತಿದ್ದೆ. ಅದು ಬಿಟ್ಟರೆ, ಅವರು ಪೂರ್ತಿಚಿತ್ರವನ್ನು ನೋಡುವುದಕ್ಕೆ ಸಾಧ್ಯವೇ ಆಗಲಿಲ್ಲ. ಅವರ ಆಶೀರ್ವಾದ ಚಿತ್ರದ ಮೇಲೆ ಸದಾ ಇರುತ್ತದೆ’ ಎಂದು ಹೇಳಿದರು

ಆಂದೋಲನ ಡೆಸ್ಕ್

Recent Posts

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

41 mins ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

53 mins ago

ಮಂಡ್ಯ ಸಮ್ಮೇಳನ | ನಗರ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…

1 hour ago

ನಕಲಿ ಚಿನ್ನಾಭರಣ ಅಡವಿಟ್ಟು ಬರೋಬ್ಬರಿ 34 ಲಕ್ಷ ರೂ. ವಂಚನೆ..!

ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…

2 hours ago

ಮುಡಾ ಪ್ರಕರಣ | ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ಜ.15ಕ್ಕೆ ಮುಂದೂಡಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಜನವರಿ…

2 hours ago

ಸಮ್ಮೇಳನಕ್ಕೆ ಕ್ಷಣಗಣನೆ | ಸಮ್ಮೇಳನ ಸರ್ವಾಧ್ಯಕ್ಷ ಗೊ.ರು ಚನ್ನಬಸಪ್ಪಗೆ ಆತ್ಮೀಯ ಸ್ವಾಗತ

ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…

2 hours ago