ಚಿತ್ರ ಮಂಜರಿ

ವೈವಾಹಿಕ ಜೀವನಕ್ಕೆ ಕಾಲಿಟ್ಟ ಟಾಲಿವುಡ್‌ ನಟ ಶರ್ವಾನಂದ್: ಫೋಟೋಸ್‌ ವೈರಲ್

ಹೈದರಾಬಾದ್: ಟಾಲಿವುಡ್‌ ಸ್ಟಾರ್‌ ನಟ ಶರ್ವಾನಂದ್ – ರಕ್ಷಿತಾ ರೆಡ್ಡಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಜೂ.3 ರಂದು ಕುಟುಂಬದವರ ಸಮ್ಮುಖದಲ್ಲಿ ಶರ್ವಾನಂದ್ ವಿವಾಹವಾಗಿದ್ದಾರೆ.

ನಟರಾದ ರಾಮ್ ಚರಣ್, ಸಿದ್ಧಾರ್ಥ್, ನಿರ್ಮಾಪಕ ವಂಶಿ, ರಾಜಕಾರಣಿಗಳು ಸೇರಿದಂತೆ ಅನೇಕ ಗಣ್ಯರು ಮದುವೆಯಲ್ಲಿ ಪಾಲ್ಗೊಂಡು ನವ ಜೋಡಿಗೆ ಶುಭ ಹಾರೈಸಿದ್ದಾರೆ. ಮದುವೆ ಫೋಟೋಸ್‌ ಹೊರಬಿದ್ದಿದ್ದು, ಟಾಲಿವುಡ್‌ ವಲಯದಲ್ಲಿ ವೈರಲ್‌ ಆಗಿದೆ.

2023ರ ಜನವರಿ 26 ರಂದು ಟಾಲಿವುಡ್‌ ನಟ ಶರ್ವಾನಂದ್, ಯುಎಸ್‌ ನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿರುವ ಆಂಧ್ರ ಮೂಲದ ರಕ್ಷಿತಾ ರೆಡ್ಡಿ ಅವರೊಂದಿಗೆ  ಎಂಗೇಜ್‌ ಮೆಂಟ್‌ ಆಗಿರುವ ಫೋಟೋವನ್ನು  ಹಂಚಿಕೊಂಡಿದ್ದರು.

ಇತ್ತೀಚೆಗೆ ನಟ ಶರ್ವಾನಂದ್ ಅವರ ಮದುವೆ ರದ್ದಾಗಿದೆ. ಇಬ್ಬರು ಬ್ರೇಕಪ್‌ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದರ ಬೆನ್ನಲ್ಲೇ ಕೆಲ ದಿನಗಳ ಹಿಂದೆ ಅವರ ಕಾರು ಅಪಘಾತಗೊಂಡಿತ್ತು.

ಸದ್ಯ ಶರ್ವಾನಂದ್ ತಮ್ಮ 35 ನೇ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇದನ್ನು ಶ್ರೀರಾಮ್ ಆದಿತ್ಯ ನಿರ್ದೇಶಿಸುತ್ತಿದ್ದಾರೆ.

andolanait

Recent Posts

ಪುಷ್ಪ-2 ಕಾಲ್ತುಳಿತ ಪ್ರಕರಣ ; ವರ್ಷದ ಬಳಿಕ ಚಾರ್ಜ್‌ಶೀಟ್‌ ಸಲ್ಲಿಕೆ

ಹೈದರಾಬಾದ್‌ : ಪುಷ್ಪ-2 ಸಿನಿಮಾ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ವರ್ಷದ ಬಳಿಕ ಇದೀಗ ಪೊಲೀಸರು ಕೋರ್ಟ್ಗೆ…

42 seconds ago

ನರೇಗಾಗೆ ಯಾವ ಹೆಸರನ್ನು ಬೇಕಾದರು ಇಡಲಿ ; ಅಭ್ಯಂತರ ಇಲ್ಲ : ಸಚಿವ ಪ್ರಿಯಾಂಕ ಖರ್ಗೆ

ಗ್ರಾಮಗಳಲ್ಲಿ ಉದ್ಯೋಗ ಸೃಷ್ಟಿ ಮಾಡಲಿ : ಖರ್ಗೆ ಬೆಂಗಳೂರು : ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಮಹಾತ್ಮ ಗಾಂಧೀಜಿ ಅವರ…

19 mins ago

ದುರಂದರ್ ದರ್ಬಾರ್….. ಮರಳಿ ಟ್ರ್ಯಾಕ್ ಗೆ ಬಂತು ಬಾಲಿವುಡ್.?

ಮುಂಬೈ : ಸಾಲು ಸಾಲು ಸೋಲುಗಳಿಂದ ನೆಲಕಚ್ಚಿದ್ದ ಬಾಲಿವುಡ್ ಇಂಡಸ್ಟ್ರಿಯ ಭವಿಷ್ಯವನ್ನೇ ದುರಂದರ ಸಿನಿಮಾ ಬದಲಿಸಿದೆ. ರಣವೀರ್ ಸಿಂಗ್ ನಟನೆಯ…

40 mins ago

ಹುಲಿ ದಾಳಿಗೆ ಅರಣ್ಯ ಸಿಬ್ಬಂದಿ ಬಲಿ

ಗುಂಡ್ಲುಪೇಟೆ : ತಾಲ್ಲೂಕಿನ ಬಂಡೀಪುರ ಅರಣ್ಯ ಇಲಾಖೆಯ ಮರಳಳ್ಳ ಕ್ಯಾಂಪ್ ಬಳಿ ಕರ್ತವ್ಯ ನಿರ್ವಹಿಸುತಿದ್ದ ಸಣ್ಣಹೈದ( ೫೫) ಹುಲಿ ದಾಳಿಗೆ…

60 mins ago

ಕಾರವಾರದ ಕದಂಬ ನೌಕನೆಲೆಗೆ ರಾಷ್ಟ್ರಪತಿ ಭೇಟಿ ನಾಳೆ

ಬೆಂಗಳೂರು‌ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಏಷ್ಯಾದ ಅತಿದೊಡ್ಡ ನೌಕಾನೆಲೆ ಐಎನ್…

2 hours ago

ಲೋಕ್ ಅದಾಲತ್‌ನಲ್ಲಿ 14,850 ಪ್ರಕರಣ ಇತ್ಯರ್ಥ : ಒಂದಾದ ಕೌಟುಂಬಿಕ ಕಲಹದಿಂದ ಬೇರ್ಪಟ್ಟಿದ್ದ 6 ದಂಪತಿಗಳು

ಮಡಿಕೇರಿ : ಕೊಡಗು ಜಿಲ್ಲೆಯಾದ್ಯಂತ ನಡೆದ ಲೋಕ್ ಅದಾಲತ್‌ನಲ್ಲಿ ಒಟ್ಟು 14,850 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ,…

2 hours ago