ಹನುಮ ಜಯಂತಿಯ ಪ್ರಯುಕ್ತ ‘ಆದಿಪುರುಷ’ ಚಿತ್ರ ತಂಡ ‘ಹನುಮಂತನ‘ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು, ಮರಾಠಿ ನಟ ದೇವದತ್ತ ನಾಗೆ ಹನುಮನಾಗಿ ಕಾಣಿಸಿಕೊಂಡಿದ್ದಾರೆ.
ತಪಸ್ಸು ಮಾಡುತ್ತಿರುವ ಭಂಗಿಯಲ್ಲಿ ಕುಳಿತಿರುವ ಹನುಮಂತನ ಫಸ್ಟ್‌ಲುಕ್ ಪೋಸ್ಟರ್‌ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ನಟ ಪ್ರಭಾಸ್, ‘ರಾಮನ ಭಕ್ತ ಮತ್ತು ರಾಮಾಯಣದ ಪ್ರಾಣ‘ ಎಂದು ಬರೆದುಕೊಂಡಿದ್ದಾರೆ.
ಹನುಮ ಪಾತ್ರಧಾರಿ ದೇವದತ್ತ ನಾಗೆ ಮೊದಲು ಮರಾಠಿ ಕಿರುತರೆಯಲ್ಲಿ ನಟಿಸುತ್ತಿದ್ದರು. ಮರಾಠಿ ಧಾರವಾಹಿ ‘ಜೈ ಮಲ್ಹಾರ್‘ನಲ್ಲಿ ಭಗವಾನ್ ಖಂಡೋಬಾ ಪಾತ್ರದಲ್ಲಿ ನಟಿಸಿ ಹೆಸರುವಾಸಿಯಾಗಿದ್ದರು. 2013ರಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಅವರು ಅನೇಕ ಚಿತ್ರಗಳಲ್ಲಿ ನಟಿಸಿ ಭರವಸೆಯ ನಟ ಎನಿಸಿಕೊಂಡಿದ್ದಾರೆ.
ಬ್ಲಾಕ್‌ಬ್ಲಾಸ್ಟರ್ ‘ತನ್ಹಾಜಿ:ದಿ ಅನ್‌ಸಂಗ್ ವಾರಿಯರ್‘ ಚಿತ್ರದ ನಿರ್ದೇಶಕ ಓಂ ರಾವುತ್ ಆದಿಪುರುಷ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ರಾಮಾಯಣ ಕಥೆಯಾಧಾರಿತ ಚಿತ್ರ ಇದಾಗಿದ್ದು, ಬಾಹುಬಲಿ ಖ್ಯಾತಿಯ ಪ್ರಭಾಸ್ ಈ ಚಿತ್ರದಲ್ಲಿ ರಾಘವ ಪಾತ್ರವನ್ನು ನಿರ್ವಹಿಸಲಿದ್ದಾರೆ. ಬಾಲಿವುಡ್ ನಟಿ ಕೃತಿ ಸನೂನ್ ಸೀತೆಯಾಗಿ ಕಾಣಿಸಿಕೊಂಡರೆ, ನಟ ಸನ್ನಿ ಲಕ್ಷಣನಾಗಿ ಕಾಣಿಸಿಕೊಂಡಿದ್ದಾರೆ. ಜೂನ್ 16ರಂದು ಚಿತ್ರ ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ.
ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…
ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…
ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…
ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…
ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…