ಮುಂಬೈ: ಮುಂಬೈನ ಜುಹು ಪ್ರದೇಶದಲ್ಲಿರುವ ನಟ, ಬಿಜೆಪಿ ಸಂಸದ ಸನ್ನಿ ಡಿಯೋಲ್ ಅವರ ಬಂಗಲೆಯ ಹರಾಜು ನೋಟಿಸ್ ವಾಪಸ್ ಪಡೆದುಕೊಳ್ಳಲಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾ ಇಂದು ಹೇಳಿದೆ.
ಭಾನುವಾರ ಬ್ಯಾಂಕ್ ಇ-ಹರಾಜು ಮೂಲಕ ಸನ್ನಿ ಅವರ ಆಸ್ತಿಯನ್ನು ಆಗಸ್ಟ್ 25 ರಂದು ಹರಾಜು ಹಾಕಿ ಬಾಕಿಯಿರುವ ರೂ. 56 ಕೋಟಿ ಮೊತ್ತವನ್ನು ಈ ಮೂಲಕ ವಸೂಲು ಮಾಡಲಾಗುವುದು ಎಂದು ಹೇಳಿತ್ತು. ಗುರುದಾಸ್ಪುರ್ ಕ್ಷೇತ್ರದ ಸಂಸದರಾಗಿರುವ ಸನ್ನಿ ಡಿಯೋಲ್ ಡಿಸೆಂಬರ್ 2022ರಿಂದ ಬ್ಯಾಂಕ್ ಆಫ್ ಬರೋಡಾಗೆ ಅವರು ವಾಪಸ್ ನೀಡಬೇಕಿರುವ ರೂ 55.99 ಕೋಟಿ ನೀಡಿಲ್ಲ.
ಸನ್ನಿಯ ಬಂಗಲೆ- ಸನ್ನಿ ವಿಲ್ಲಾ ಹೊರತಾಗಿ ಅದರ ಸುತ್ತ ಇರುವ 599.44 ಚದರ ಮೀಟರ್ ಪ್ರದೇಶ ಹಾಗೂ ನಟನ ಕುಟುಂಬದ ಒಡೆತನದ ಸನ್ನಿ ಸೌಂಡ್ಸ್ ಕಂಪೆನಿಯನ್ನೂ ಹರಾಜು ಹಾಕಲಾಗುವುದು ಎಂದು ಬ್ಯಾಂಕ್ ಭಾನುವಾರ ಹೇಳಿತ್ತು. ಈ ಸಂಸ್ಥೆ ಸಾಲಕ್ಕೆ ಗ್ಯಾರೆಂಟರ್ ಆಗಿದ್ದರೆ ಸನ್ನಿ ಡಿಯೋಲ್ ತಂದೆ ಧರ್ಮೇಂದ್ರ ವೈಯಕ್ತಿಕ ಗ್ಯಾರಂಟರ್ ಆಗಿದ್ದರು.
ಆದರೆ ಇಂದು ಏಕಾಏಕಿ ಬ್ಯಾಂಕ್ ತಾಂತ್ರಿಕ ಕಾರಣಗಳನ್ನು ಮುಂದೊಡ್ಡಿ ಹರಾಜು ನೋಟಿಸ್ ವಾಪಸ್ ಪಡೆದಿದೆ.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ನೋಟಿಸ್ ವಾಪಸಾತಿಗೆ ಕಾರಣವಾದ ತಾಂತ್ರಿಕ ಸಮಸ್ಯೆಯನ್ನು ಯಾರು ಉಂಟು ಮಾಡಿದರು ಎಂದು ಪ್ರಶ್ನಿಸಿದೆ.
“ಬ್ಯಾಂಕ್ 24 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ತನ್ನ ನೋಟಿಸ್ ವಾಪಸ್ ಪಡೆದಿರುವುದಕ್ಕೆ ಕಾರಣವೇನು” ಎಂದು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಟ್ವೀಟ್ ಮಾಡಿದ್ದಾರೆ.
ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…
ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…
ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…
ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…
ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…
ಸತೀಶ್ ತಿಪಟೂರು ಕರ್ನಾಟಕದ ಯಾವುದೇ ಭಾಗದಲ್ಲಿ ಜಂಬೆ ಮೇಷ್ಟ್ರ ಹಿರಿ - ಕಿರಿಯ ವಿದ್ಯಾರ್ಥಿಗಳು ಮೂರ್ನಾಲ್ಕು ಜನ ಒಂದೆಡೆ ಸೇರಿದರೆಂದರೆ…