ಚಿತ್ರ ಮಂಜರಿ

ಹಿರಿಯ ನಟ ಶರತ್‌ಕುಮಾರ್ ಗೆ ಅನಾರೋಗ್ಯ : ಆಸ್ಪತ್ರೆಗೆ ದಾಖಲು

ತಮಿಳುನಾಡು  : ಕನ್ನಡದ ರಾಜಕುಮಾರ ಹಾಗೂ ಜೇಮ್ಸ್‌ ಚಿತ್ರದ ಮೂಲಕ ಮನೆಮಾತಾಗಿದ್ದ ಹಿರಿಯ ಬಹುಭಾಷಾ ನಟ ಶರತ್‌ ಕುಮಾರ್‌ ಅವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶರತ್‌ ಕುಮಾರ್‌ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತಕ್ಷಣವೇ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರು ಡಯಾರಿಯಾ, ಡಿಹೈಡ್ರೇಷನ್‌ನಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

68ನೇ ವರ್ಷ ವಯಸ್ಸಿನ ನಟ ಶರತ್‌ಕುಮಾರ್  ಅವರ ಪತ್ನಿ ರಾಧಿಕಾ ಶರತ್ ಕುಮಾರ್  ಮತ್ತು ಪುತ್ರಿ ವರಲಕ್ಷ್ಮೀ ಅವರು ಈಗಾಗಲೇ ಆಸ್ಪತ್ರೆಗೆ ಆಗಮಿಸಿದ್ದಾರೆ.  ಸದ್ಯ ಶರತ್ ಕುಮಾರ್ ಅವರ ಆರೋಗ್ಯ ಸ್ಥಿತಿಯ ಕುರಿತು ಅವರ ಕುಟುಂಬದವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಅತ್ತ ಆಸ್ಪತ್ರೆ ಕಡೆಯಿಂದಲೂ ಯಾವುದೇ ಹೆಲ್ತ್ ಬುಲೆಟಿನ್ ಕೂಡ ರಿಲೀಸ್ ಆಗಿಲ್ಲ. ಈ ಹಿಂದೆ ಶರತ್‌ಕುಮಾರ್ ಅವರಿಗೆ ಕೊರೊನಾ ವೈರಸ್ ತಗುಲಿತ್ತು. ಇದೀಗ ಮತ್ತೊಂದು ಗಂಭೀರ ಆರೋಗ್ಯ ಸಮಸ್ಯೆಯಿಂದ ಶರತ್‌ಕುಮಾರ್ ಬಳಲುತ್ತಿದ್ದು, ಶೀಘ್ರವೇ ಅವರು ಗುಣಮುಖರಾಗಲಿ ಎಂದು ಅವರ ಆಪ್ತರು, ಸ್ನೇಹಿತರು, ಅಭಿಮಾನಿಗಳು ಹಾರೈಸಿದ್ದಾರೆ.

andolanait

Recent Posts

ರಾಜ್ಯ ಬಜೆಟ್‌ನಲ್ಲಿ ಮದ್ಯ ಪ್ರಿಯರಿಗೆ ಶಾಕ್‌ ಕೊಟ್ಟ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಂದು ದಾಖಲೆಯ 17ನೇ ರಾಜ್ಯ ಬಜೆಟ್‌ನ್ನು ಮಂಡನೆ ಮಾಡಿದ್ದಾರೆ. ಬಜೆಟ್‌ನಲ್ಲಿ ಮದ್ಯಪ್ರಿಯರಿಗೆ ಶಾಕ್‌ ಕೊಟ್ಟ ಸಿಎಂ…

23 mins ago

ರಾಜ್ಯ ಬಜೆಟ್‌: 16 ವರ್ಷದ ಒಳಗಿನ ಮಕ್ಕಳಿಗೆ ಮೊಬೈಲ್‌ ನಿಷೇಧ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಂದು ದಾಖಲೆಯ 17ನೇ ಬಜೆಟ್‌ ಅನ್ನು ಮಂಡಿಸಿದರು. ವಿಧಾನಸೌಧದಲ್ಲಿ ಬಜೆಟ್‌ ಮಂಡಿಸಿದ ಸಿಎಂ ಸಿದ್ದರಾಮಯ್ಯ ಅವರು,…

36 mins ago

ರಾಜ್ಯ ಬಜೆಟ್‌: ಮೈಸೂರಿನ ಜಯದೇವಾ ಆಸ್ಪತ್ರೆ 400 ಬೆಡ್‌ಗಳಿಗೆ ವಿಸ್ತರಣೆ

ಬೆಂಗಳೂರು: ರಾಜ್ಯ ಬಜೆಟ್‌ನಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೆಸರು ಬದಲಾವಣೆ ಮಾಡಲಾಗಿದ್ದು, ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಎಂದು ಹೆಸರು ಬದಲಾವಣೆ…

44 mins ago

ರಾಜ್ಯ ಬಜೆಟ್: ಬೆಂಗಳೂರು ಅಭಿವೃದ್ಧಿಗೆ 7 ಸಾವಿರ ಕೋಟಿ ಅನುದಾನ ಘೋಷಣೆ

ಬೆಂಗಳೂರು: ಇಂದು ಮಂಡನೆ ಆದ ರಾಜ್ಯ ಬಜೆಟ್‌ನಲ್ಲಿ ಬೆಂಗಳೂರು ಅಭಿವೃದ್ಧಿಗೆ 7 ಸಾವಿರ ಕೋಟಿ ಅನುದಾನ ಘೋಷಣೆ ಮಾಡಲಾಗಿದೆ. ರಾಜ್ಯ…

52 mins ago

ರಾಜ್ಯ ಬಜೆಟ್‌: ಗ್ಯಾರಂಟಿ ಯೋಜನೆಗೆ ಬಂಪರ್‌

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಇಂದು ರಾಜ್ಯ ಬಜೆಟ್‌ ಮಂಡಿಸಿದ್ದಾರೆ. ವಿಧಾನಸೌಧದಲ್ಲಿ ಬಜೆಟ್‌ ಮಂಡಿಸಿದ ಸಿಎಂ ಸಿದ್ದರಾಮಯ್ಯ ಅವರು, 83…

1 hour ago

ರಾಜ್ಯ ಬಜೆಟ್‌: ಈ ವರ್ಷ 56,432 ಖಾಲಿ ಹುದ್ದೆಗಳ ಭರ್ತಿ

ಬೆಂಗಳೂರು: ರಾಜ್ಯ ಸರ್ಕಾರ ಈ ವರ್ಷ ಪ್ರಮುಖ ಇಲಾಖೆಗಳ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.…

1 hour ago