ಇಂದು ( ನವೆಂಬರ್ 17 ) ಕನ್ನಡದ ಬಹು ನಿರೀಕ್ಷಿತ ಸಿನಿಮಾ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಬಿಡುಗಡೆಗೊಂಡಿದೆ. ಸೆಪ್ಟೆಂಬರ್ 1ರಂದು ಬಿಡುಗಡೆಯಾಗಿದ್ದ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮೊದಲ ಭಾಗ ಸೈಡ್ ಎ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಬಾಕ್ಸ್ ಆಫೀಸ್‌ನಲ್ಲಿ 20 ಕೋಟಿಗೂ ಹೆಚ್ಚು ಗಳಿಕೆ ಮಾಡಿ ಯಶಸ್ಸು ಸಾಧಿಸಿತ್ತು.
ಕೇವಲ ಕನ್ನಡದಲ್ಲಿ ಮಾತ್ರ ಥಿಯೇಟ್ರಿಕಲ್ ಬಿಡುಗಡೆ ಕಂಡಿದ್ದ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಓಟಿಟಿಯಲ್ಲಿ ಪರಭಾಷೆಗಳಿಗೂ ಸಹ ಡಬ್ ಆಗಿ ಆ ಪ್ರೇಕ್ಷಕರಿಂದಲೂ ಸಹ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡ ಕಾರಣ ಇದೀಗ ಎರಡನೇ ಭಾಗವನ್ನು ಚಿತ್ರತಂಡ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಸಹ ಡಬ್ ಮಾಡಿ ಬಿಡುಗಡೆ ಮಾಡಿದೆ.
ಇನ್ನು ನಿನ್ನೆ ಸಂಜೆಯಿಂದಲೇ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಚಿತ್ರದ ಪ್ರದರ್ಶನಗಳು ಆರಂಭಗೊಂಡಿದ್ದು, ರಾಜ್ಯದ ಪ್ರಮುಖ ನಗರಗಳಲ್ಲಿ ಚಿತ್ರದ ಪ್ರೀಮಿಯರ್ ಶೋಗಳು ನಡೆದಿವೆ. ಇಂದಿನಿಂದ ದಕ್ಷಿಣ ಭಾರತದಾದ್ಯಂತ ಚಿತ್ರ ಬಿಡುಗಡೆಯಾಗಿದ್ದು ನಿನ್ನೆ ಹಾಗೂ ಇಂದು ಚಿತ್ರ ನೋಡಿದ ಸಿನಿ ರಸಿಕರು ಚಿತ್ರ ಹೇಗಿದೆ ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವುಗಳ ಪಟ್ಟಿ ಈ ಕೆಳಕಂಡಂತಿದೆ..
ನಮ್ಮನ್ನು ಅಳಿಸುತ್ತೇನೆ ಎಂದು ಪ್ರಮಾಣ ಸ್ವೀಕರಿಸಿದ್ದೀರಾ?
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ನೋಡಿ ಹೊರಬಂದ ಸಿನಿ ರಸಿಕನೋರ್ವ ತನ್ನ ಟ್ವಿಟರ್ ಖಾತೆಯಲ್ಲಿ ರಕ್ಷಿತ್ ಶೆಟ್ಟಿ ಅವರ ಖಾತೆಯನ್ನು ಉಲ್ಲೇಖಿಸಿ ಚಿತ್ರವನ್ನು ವಿಮರ್ಶಿಸಿದ್ದಾರೆ. “ಸರ್ ವರ್ಷಕ್ಕೊಂದು ಬಾರಿಯಾದರೂ ನಮ್ಮನ್ನು ಅಳಿಸುತ್ತೇನೆ ಎಂಬ ಪ್ರಮಾಣವನ್ನೇನಾದರೂ ತೆಗೆದುಕೊಂಡಿದ್ದೀರಾ? ಕಳೆದ ವರ್ಷ ಚಾರ್ಲಿ ಮೂಲಕ ಅಳುವಂತೆ ಮಾಡಿದ್ರಿ, ಈ ವರ್ಷ ಈ ಚಿತ್ರದ ಮೂಲಕ ಅಳಿಸುತ್ತಿದ್ದೀರ. ಸೈಡ್ ಬಿ ಚಿತ್ರ ಹೃದಯ ತುಂಬಾ ಭಾರ ಎನ್ನುವಂತೆ ಮಾಡಿತು” ಎಂದು ಬರೆದುಕೊಂಡಿದ್ದಾರೆ.
ತಮಿಳು ಸಿನಿ ರಸಿಕರಿಂದಲೂ ಮೆಚ್ಚುಗೆ
ಇನ್ನು ಸಪ್ತ ಸಾಗರದಾಚೆ ಎಲ್ಲೋ ತಮಿಳಿನಲ್ಲಿ ʼಏಳು ಕಡಲ್ ದಾಂಡಿʼ ಎಂಬ ಹೆಸರಿನ ಅಡಿಯಲ್ಲಿ ಬಿಡುಗಡೆಯಾಗಿದ್ದು ಚಿತ್ರ ವೀಕ್ಷಿಸಿದ ತಮಿಳು ಸಿನಿ ಪ್ರೇಮಿಯೊಬ್ಬ “ನೋವಿನಿಂದ ಕೂಡಿದ ಲವ್ ಸ್ಟೋರಿ. ಸತ್ಯ ಹೇಳಬೇಕೆಂದರೆ ಹೇಳಲು ಪದಗಳೇ ಇಲ್ಲ, ಚಿತ್ರವನ್ನು ಫೀಲ್ ಮಾಡಿ. ರಕ್ಷಿತ್ ಶೆಟ್ಟಿ ಅದ್ಭುತ ನಟನೆ ಮಾಡಿದ್ದಾರೆ, ಒಳ್ಳೆಯ ಸ್ಕ್ರೀನ್ ಪ್ಲೇ. ಒಂದು ಬಾರಿ ನೋಡಬಹುದಾದ ಚಿತ್ರʼ ಎಂದು ಬರೆದುಕೊಂಡಿದ್ದಾರೆ.
ಪಾಸಿಟಿವ್ ಹೆಚ್ಚು, ನೆಗೆಟಿವ್ ಕಡಿಮೆ
ಕನ್ನಡ, ತಮಿಳು ಮಾತ್ರವಲ್ಲದೇ ತೆಲುಗು ಹಾಗೂ ಮಲಯಾಳಂ ಸಿನಿ ರಸಿಕರೂ ಸಹ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಲವಾರು ವಿಮರ್ಶೆಗಳನ್ನು ಬರೆದುಕೊಂಡಿದ್ದು ಚಿತ್ರಕ್ಕೆ ನೆಗೆಟಿವ್‌ಗಿಂತ ಹೆಚ್ಚು ಪಾಸಿಟಿವ್ ವಿಮರ್ಶೆಗಳೇ ಹರಿದು ಬಂದಿವೆ. ನೂರಾರು ಪಾಸಿಟಿವ್ ರಿವ್ಯೂಗಳ ನಡುವೆ ಅಲ್ಲೊಂದು ಇಲ್ಲೊಂದು ನೆಗೆಟಿವ್ ರಿವ್ಯೂಗಳು ಸಿಗಲಿವೆ. ಒಟ್ಟಿನಲ್ಲಿ ಸಾಲು ಸಾಲು ಗೆಲುವಿನ ಅಲೆಯಲ್ಲಿರುವ ರಕ್ಷಿತ್ ಶೆಟ್ಟಿಗೆ ಮತ್ತೊಂದು ಸಕ್ಸಸ್ ಸಿಕ್ಕಿರುವುದಂತೂ ಪಕ್ಕಾ.
ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…
ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…