ಸದ್ಯ ಹತ್ತನೇ ಆವೃತ್ತಿಯ ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ನಡೆಯುತ್ತಿದ್ದು, ಈ ಬಾರಿ ಸಾಲು ಸಾಲು ಜಗಳ, ಕಿತ್ತಾಟಗಳಿಂದಲೇ ಹೆಚ್ಚು ಸುದ್ದಿಗೀಡಾಗಿದೆ. ಕಳೆದ ಬಾರಿಯ ಸೀಸನ್‌ಗಳಲ್ಲಿ ಇಲ್ಲದೇ ಇದ್ದಷ್ಟು ಗುಂಪುಗಾರಿಕೆ, ಕುತಂತ್ರ ಈ ಬಾರಿ ಇರುವುದೇ ಬಿಗ್ ಬಾಸ್ ಇತಿಹಾಸದಲ್ಲಿಯೇ ಈ ಆವೃತ್ತಿ ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿರುವುದಕ್ಕೆ ಕಾರಣವಾಗಿದೆ.
ಇನ್ನು ಈ ಬಾರಿ ವಿನಯ್ ಹಾಗೂ ಕಾರ್ತಿಕ್ ಈ ಇಬ್ಬರದ್ದೂ ಪ್ರತ್ಯೇಕ ಗುಂಪುಗಳಿದ್ದು, ವಿನಯ್ ಗುಂಪಿನಲ್ಲಿ ನಮ್ರತಾ ಗೌಡ ಹಾಗೂ ಸ್ನೇಹಿತ್ ಸೇರಿಕೊಂಡರೆ, ಕಾರ್ತಿಕ್ ಗುಂಪಿನಲ್ಲಿ ಸಂಗೀತಾ ಶೃಂಗೇರಿ ಹಾಗೂ ಡ್ರೋನ್ ಪ್ರತಾಪ್ ಗುರುತಿಸಿಕೊಂಡಿದ್ದರು. ಅಲ್ಲದೇ ಕಾರ್ತಿಕ್ ಹಾಗೂ ಸಂಗೀತಾ ಶೃಂಗೇರಿ ಇಬ್ಬರನ್ನು ಒಳ್ಳೆಯ ಜೋಡಿ ಎಂದೂ ಸಹ ವೀಕ್ಷಕರು ಹೊಗಳುತ್ತಿದ್ದರು.
ಆದರೆ ಇತ್ತೀಚಿನ ಎಪಿಸೋಡ್ ಒಂದರಲ್ಲಿ ಸಂಗೀತ ಶೃಂಗೇರಿ ಕಾರ್ತಿಕ್ ಗುಂಪನ್ನು ಬಿಟ್ಟು ವಿನಯ್ ಗುಂಪನ್ನು ಸೇರಿಕೊಂಡಿದ್ದಾರೆ. ಅಲ್ಲದೇ ಕಾರ್ತಿಕ್ ತಲೆ ಬೋಳಿಸಿಕೊಳ್ಳಲು ಸಹ ಕಾರಣರಾಗಿದ್ದಾರೆ. ಸಂಗೀತ ಶೃಂಗೇರಿ ಅವರ ಈ ನಡೆ ವೀಕ್ಷಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಪರಿಣಾಮ ಸಾಮಾಜಿಕ ಜಾಲತಾಣದ ತುಂಬಾ ಸಂಗೀತಾ ಶೃಂಗೇರಿ ವಿರುದ್ಧ ಭಾರೀ ಪ್ರಮಾಣದ ನೆಗೆಟಿವ್ ಕಾಮೆಂಟ್ ಹರಿದಾಡುತ್ತಿವೆ.
ಅಲ್ಲದೇ ಸಂಗೀತಾ ಶೃಂಗೇರಿ ಇನ್ಸ್ಟಾಗ್ರಾಮ್ ಖಾತೆಯನ್ನು ಬರೋಬ್ಬರಿ 10 ಸಾವಿರ ಜನ ಅನ್ ಫಾಲೋ ಮಾಡಿದ್ದಾರೆ. 449000 ಫಾಲೋವರ್ಸ್ ಹೊಂದಿದ್ದ ಸಂಗೀತ ಶೃಂಗೇರಿ ಈಗ 439000 ಫಾಲೋವರ್ಸ್ ಹೊಂದಿದ್ದಾರೆ.
ಬೆಂಗಳೂರು : ನಾಳೆಯಿಂದ ಐಪಿಎಲ್ ಪಂದ್ಯಾವಳಿಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಂಬಂಧಪಟ್ಟ…
ಮದ್ದೂರು : ಖಾಸಗಿ ಶಾಲೆ ಬಸ್ ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿ, 14 ವಿದ್ಯಾರ್ಥಿಗಳ ಜತೆಗೆ 6…
ಹನೂರು : ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ…
ಎಚ್.ಡಿ.ಕೋಟೆ : ರಾಜ್ಯದಲ್ಲಿ ಜಾತ್ಯತೀತ ಜನತಾದಳ-ಬಿಜೆಪಿಯ ಮೈತ್ರಿಯ ಸರ್ಕಾರ ಅಧಿಕಾರಕ್ಕೆ ಬಂದು ಜನಪರ ಆಡಳಿತ ನೀಡುವ ದಿನಗಳು ಹತ್ತಿರವಾಗುತ್ತಿವೆ ಎಂದು…
ಬೆಂಗಳೂರು : ದಾವಣಗೆರೆ ಉಪಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ತಾವು ಕಣದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ್ದಾರೆ.…
ಬೆಂಗಳೂರು : ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ರಾಜ್ಯ ಸರ್ಕಾರವು ಅತ್ಯಂತ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ಆಮೂಲಾಗ್ರ…