ಚಿತ್ರ ಮಂಜರಿ

ಬೆಂಗಳೂರಿನಲ್ಲಿ ಸೈಮಾ ಪ್ರಶಸ್ತಿ ಪ್ರದಾನ ಸಂಭ್ರಮ…

ಬೆಂಗಳೂರು: ಇದೇ ಮೊದಲ ಬಾರಿಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೈಮಾ 2022 (SIIMA) ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿದ್ದು ಶನಿವಾರ ರಾತ್ರಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಚಿತ್ರರಂಗದ ಘಟಾನುಘಟಿಗಳು ಭಾಗವಹಿಸಿದ್ದರು. ಭಾನುವಾರವೂ ಕಾರ್ಯಕ್ರಮ ಮುಂದುವರಿಯಲಿದೆ.

ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ (Bengaluru Palace Ground)ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಗಲಿದ ಪುನೀತ್ ರಾಜ್ಕುಮಾರ್ (Puneeth Rajkumar) ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು.

19 ವಿಭಾಗಗಳಿಗೆ ಪ್ರಶಸ್ತಿ

ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ ಇದು ಸೈಮಾದ ವಿಸ್ತಾರ ರೂಪ. ಇದು ಆರಂಭಗೊಂಡಿದ್ದು 2012ರಲ್ಲಿ. ಹೀಗಾಗಿ, ಸೈಮಾ ಈ ಬಾರಿ 10 ವರ್ಷದ ಸಂಭ್ರಮಾಚರಣೆಯಲ್ಲಿ ಇದೆ. ಈ ಕಾರಣಕ್ಕೂ ಸೈಮಾ ಕಾರ್ಯಕ್ರಮ ವಿಶೇಷವಾಗಿದೆ. ಶನಿವಾರ ನಡೆದ ಕಾರ್ಯಕ್ರಮದಲ್ಲಿ 2021ರಲ್ಲಿ ತೆರೆಗೆ ಬಂದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳನ್ನು ನಾನಾ ವಿಭಾಗಗಳಲ್ಲಿ ನಾಮಿನೇಷನ್ ಮಾಡಲಾಗಿತ್ತು. ಆ ಪೈಕಿ ಹಲವು ಸಿನಿಮಾಗಳು ಪ್ರಶಸ್ತಿ ಬಾಚಿಕೊಂಡಿವೆ.

2021ರಲ್ಲಿ ತರುಣ್ ಸುಧಿರ್ ನಿರ್ದೇಶನದ ‘ರಾಬರ್ಟ್’ ಸಿನಿಮಾ ತೆರೆಗೆ ಬಂತು. ಸುಧಾಕರ್ ರಾಜ್ ಅವರು ಈ ಚಿತ್ರದ ಸಿನಿಮಾಟೋಗ್ರಫಿಗೆ ‘ಬೆಸ್ಟ್ ಸಿನಿಮಾಟೋಗ್ರಫಿ’ (ಕನ್ನಡ) ಪ್ರಶಸ್ತಿ ಪಡೆದುಕೊಂಡಿದ್ದಾರೆ.

‘ನಿನ್ನ ಸನಿಹಕೆ’ ಸಿನಿಮಾದ ‘ನೀ ಪರಿಚಯ..’ ಹಾಡಿಗೆ ವಾಸುಕಿ ವೈಭವ್ ‘ಅತ್ಯುತ್ತಮ ಗೀತ ರಚನಕಾರ’ (ಕನ್ನಡ) ಪ್ರಶಸ್ತಿ ಬಾಚಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅಭಿನಯಿಸಿದ್ದ ಯುವರತ್ನ ಚಿತ್ರದ ನೀನಾದೇನಾ ಹಾಡಿಗೆ ಗಾಯಕ ಅರ್ಮಾನ್ ಮಲೀಕ್ ಗೆ ಸೈಮಾ ಪ್ರಶಸ್ತಿ ದೊರಕಿದೆ. ಈ ಪ್ರಶಸ್ತಿಯನ್ನು ಅವರು ಅಪ್ಪು ಅವರಿಗೆ ಅರ್ಪಿಸಿದ್ದಾರೆ.

ಮೊದಲ ದಿನದ ಕಾರ್ಯಕ್ರಮದಲ್ಲಿ ಹಲವು ಸ್ಟಾರ್ಗಳ ಸಮಾಗಮ ಆಗಿದೆ. ಖ್ಯಾತ ಕಲಾವಿದ ಕಮಲ್‌ ಹಾಸನ್, ‘ಕೆಜಿಎಫ್ 2’ ಮೂಲಕ ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ ಯಶ್ ಪತ್ನಿ ರಾಧಿಕಾ ಜತೆ ಆಗಮಿಸಿದ್ದರು. ‘ಪುಷ್ಪ’ ಹೀರೋ ಅಲ್ಲು ಅರ್ಜುನ್ , ಬಾಲಿವುಡ್‌ ಹೀರೋ ರಣವೀರ್‌, ಸಂಸದೆ ಸುಮಲತಾ, ತೆಲುಗು ನಟ ರಾಣಾ ದಗ್ಗುಬಾಟಿ, ತೆಲುಗಿನ ಆಲಿ ಕುಟುಂಬ, ಐಂದ್ರಿತಾ-ದಿಗಂತ್‌ ಜೋಡಿ, ಶುಭ್ರಾ. ಅಯ್ಯಪ್ಪ, ಸೋನು ಗೌಡ , ಲಾಸ್ಯ ನಾಗರಾಜ್ , ಕಾವ್ಯ ಶಾ, ಆಕುಲ್ ಬಾಲಾಜಿ , ನಿಧಿ ಸುಬ್ಬಯ್ಯ ಅರ್ಜುನ್ ಜನ್ಯ ಪೂರ್ಣಿಮ ರಾಮ್ ಕುಮಾರ್ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಹಲವು ನಟನಟಿಯರು ಭಾಗವಹಿಸಿದ್ದರು.

andolana

Recent Posts

ಕನ್ನಡಿಗರಿಗೆ ಉದ್ಯೋಗ ನೀಡದ ಸಾಹಿತ್ಯ ಸಮ್ಮೇಳನ: ವಾಟಲ್‌ ನಾಗರಾಜ್‌ ಆಕ್ರೋಶ

ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…

8 hours ago

ಹಾಸ್ಯ ಸಾಹಿತ್ಯ ಆಧುನಿಕ ಬದುಕಿಗೆ ಔಷಧಿ: ಪ್ರೊ.ಕರಿಯಪ್ಪ

ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…

9 hours ago

ಸಿ & ಡಿ ಲ್ಯಾಂಡ್ ಸಮಸ್ಯೆ ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ: ಯು.ಟಿ. ಖಾದರ್

ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…

9 hours ago

ಸಿ.ಟಿ ರವಿ ಕೊಲೆಗೆ ಪೊಲೀಸರ ಸಂಚು: ಅಶೋಕ್‌ ಆರೋಪ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…

9 hours ago

ವಿರಾಜಪೇಟೆ | ಬಿಟ್ಟಂಗಾಲದಲ್ಲಿ ಚಿರತೆ ಬೆಕ್ಕು ಸಾವು

ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…

10 hours ago

ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ನಟ ದರ್ಶನ್‌ ವಾಸ್ತವ್ಯ

ಮೈಸೂರು: ನಟ ದರ್ಶನ್‌ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…

10 hours ago