ಮುಂಬೈ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಬಗ್ಗೆ ಒಂದಲ್ಲ ಒಂದು ವಿಚಾರಕ್ಕೆ ಚರ್ಚೆ ನಡೆಯುತ್ತಲೇ ಇರುತ್ತದೆ.
ಅನೇಕ ಬಾರಿ ಕೆಲವೊಂದು ವಿಷಯಕ್ಕೆ ಟ್ರೋಲ್ ಆಗಿದ್ದಾರೆ. ಇದೀಗ ಮತ್ತೊಂದು ಕಾರಣಕ್ಕೆ ಅವರು ನೆಟ್ಟಿಗರ ಟ್ರೋಲ್ ಗೆ ಒಳಗಾಗಿದ್ದಾರೆ.
ʼಕಿರಿಕ್ ಪಾರ್ಟಿʼ ಬೆಡಗಿ ರಶ್ಮಿಕಾ ಮಂದಣ್ಣ ಹತ್ತಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಜನಪ್ರಿಯ ಬರ್ಗರ್ ಬ್ರ್ಯಾಂಡ್ ಆಗಿರುವ ಮೆಕ್‌ಡೊನಾಲ್ಡ್ ಅವರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿನಲ್ಲಿ ಅವರು ಪ್ರೈಡ್ ಚಿಕನ್ ತಿಂದಿದ್ದಾರೆ. ಒಟ್ಟಿನಲ್ಲಿ ಈ ಜಾಹೀರಾತು ಮೆಕ್‌ಡೊನಾಲ್ಡ್ ಬ್ರ್ಯಾಂಡ್ ಪ್ರಚಾರದ ಜಾಹೀರಾತಾಗಿದೆ.
ಆದರೆ ಚಿಕನ್ ತಿಂದದ್ದಕ್ಕೆ ರಶ್ಮಿಕಾ ಟ್ರೋಲ್ ಗೆ ಒಳಾಗಿದ್ದಾರೆ. ಅದಕ್ಕೆ ಕಾರಣ ಅವರ ಹಿಂದಿನ ಒಂದು ಮಾತು. ಈ ಹಿಂದೆ ರಶ್ಮಿಕಾ ಅವರು ತಾನು ಸಸ್ಯಾಹಾರಿ ಮತ್ತು ಸಸ್ಯಾಹಾರಿಗಳನ್ನು ಬೆಂಬಲಿಸುತ್ತೇನೆ ಎಂದಿದ್ದರು. ಈ ಮಾತನ್ನು ಹೇಳಿಯೂ ಅವರು ಚಿಕನ್ ತಿನ್ನುವ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.
“ಇಲ್ಲಿ ಸಸ್ಯಾಹಾರಿ ರಶ್ಮಿಕಾ ಪ್ರೈಡ್ ಚಿಕನ್ ತಿನ್ನುತ್ತಿದ್ದಾರೆ. ಖ್ಯಾತನಾಮರು ಮತ್ತು ಅವರ ಬೂಟಾಟಿಕೆ” ಎಂದು ಬರೆದಿದ್ದಾರೆ. “ನಾವು ಕನ್ನಡಿಗರು ಅವಳನ್ನು ಏಕೆ ಇಷ್ಟಪಡುವುದಿಲ್ಲ ಎಂದು ಈಗಾದರೂ ಅರ್ಥಮಾಡಿಕೊಳ್ಳಿ. ಏಕೆಂದರೆ ಅವಳು ತನ್ನ ಮಾತುಗಳನ್ನು ಅಲ್ಲಿ ಮತ್ತು ಇಲ್ಲಿ ಅನೇಕ ಬಾರಿ ಬದಲಾಯಿಸುತ್ತಾಳೆ” ಎಂದು ಪೋಸ್ಟ್‌ನಲ್ಲಿ ಕಮೆಂಟ್ ಮಾಡಿದ್ದಾರೆ.
“ಇದು ನಕಲಿ ಚಿಕನ್ ಆಗಿರಬಹುದು ಆದರೆ ಹೌದು ಸಸ್ಯಾಹಾರಿಯಾಗಿದ್ದುಕೊಂಡು ಅವಳು ಈ ಜಾಹೀರಾತನ್ನು ಮಾಡಬಾರದು ಎಂದು ಮತ್ತೊಬ್ಬರು ಹೇಳಿದ್ದಾರೆ.
ಸದ್ಯ ರಶ್ಮಿಕಾ ಸಂದೀಪ್ ರೆಡ್ಡಿ ವಂಗ ಅವರ ʼ ಆ್ಯನಿಮಲ್ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬೆಳಗಾವಿ : ಉತ್ತರ ಕರ್ನಾಟಕದ ಸಮಸ್ಯೆ, ಕಾನೂನು ಸುವ್ಯವಸ್ಥೆಯಲ್ಲಿ ಲೋಪ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಇನ್ನೂ ದೀರ್ಘ ಚರ್ಚೆ…
ಬೆಳಗಾವಿ : ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆ ಎಂಬ ವಿಚಾರದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿ ವರದಿ ನೀಡಲು ಇಲಾಖೆಗೆ ಸೂಚಿಸಲಾಗಿದೆ ಎಂದು…
ಹೊಸದಿಲ್ಲಿ : ದಿಲ್ಲಿಯಲ್ಲಿ ಉಂಟಾದ ದಟ್ಟವಾದ ಹೊಗೆ ಹಾಗೂ ತೀವ್ರ ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ 21 ಶಾಸಕರು ಮತ್ತು 7…
ಹೊಸದಿಲ್ಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ನೋಟೀಸ್ʼಗೆ ಉತ್ತರ ನೀಡಲು ಕಾಲಾವಕಾಶ ಕೋರುವೆ ಎಂದು ಡಿಸಿಎಂ…
ಬಳ್ಳಾರಿ : ನಗರದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಲಾರಿಯಲ್ಲಿ ಸಾಗಿಸುತ್ತಿದ್ದ ಯಮಹಾ ಕಂಪನಿಯ 40 ಬೈಕ್‌ಗಳು ಸಂಪೂರ್ಣವಾಗಿ ಸುಟ್ಟು…
ಬೆಂಗಳೂರು : ಆಸ್ಪ್ರೇಲಿಯಾದ ಬೀಚ್‌ನಲ್ಲಿ ಭಾನುವಾರ ಮಧ್ಯಾಹ್ನ ಭೀಕರ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಪೊಲೀಸರು ಸೇರಿದಂತೆ 12 ಮಂದಿ…