ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷಿತ ಚಿತ್ರ ಕಾಟೇರ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಚಿತ್ರ ವರ್ಷಾಂತ್ಯಕ್ಕೆ ಬಿಡುಗಡೆಗೊಳ್ಳಲಿದೆ. ಡಿಸೆಂಬರ್ ಕೊನೆಯ ವಾರದಲ್ಲಿ ಹಿಂದಿ ಹಾಗೂ ತೆಲುಗು ಭಾಷೆಯ ದೊಡ್ಡ ಸ್ಟಾರ್ ನಟರ ಚಿತ್ರಗಳೂ ಸಹ ಬಿಡುಗಡೆಯಾಗಲಿದ್ದು, ಕಾಟೇರ ಚಿತ್ರ ಡಿಸೆಂಬರ್ 29ಕ್ಕೆ ಬಿಡುಗಡೆಯಾಗಲಿದೆ ಎಂದು ಘೋಷಣೆಯಾದಾಗ ಈ ಕುರಿತು ಚರ್ಚೆಗಳು ನಡೆದಿದ್ದವು.
ತೆಲುಗು ಸ್ಟಾರ್ ನಟ ಪ್ರಭಾಸ್ ನಟನೆಯ ಸಲಾರ್ ಹಾಗೂ ಹಿಂದಿಯ ಸ್ಟಾರ್ ನಟ ಶಾರುಖ್ ಖಾನ್ ನಟನೆಯ ಡಂಕಿ ಚಿತ್ರಗಳು ಇದೇ ತಿಂಗಳ 22ರಂದು ತೆರೆಗೆ ಬರಲಿದ್ದು, ಈ ಚಿತ್ರಗಳು ತೆರೆಕಂಡ ವಾರದ ಬಳಿಕ ಬಿಡುಗಡೆಯಾಗಲಿರುವ ಕಾಟೇರ ಚಿತ್ರದ ಮೇಲೆ ಈ ಚಿತ್ರಗಳ ಪ್ರಭಾವ ಬೀರಬಹುದು, ಬಿಡುಗಡೆಯನ್ನು ಮುಂದೂಡಿಕೊಂಡಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದರು.
ಇದೀಗ ಅಂತಹ ಅಭಿಪ್ರಾಯ ವ್ಯಕ್ತಪಡಿಸಿದವರ ಕುರಿತು ದರ್ಶನ್ ನಿನ್ನೆ ( ಡಿಸೆಂಬರ್ 14 ) ಪ್ರೆಸ್‌ಮೀಟ್‌ನಲ್ಲಿ ಮಾತನಾಡಿದ್ದಾರೆ. “29ಕ್ಕೆ ನಾವು ಬರೋಣ ಅಂತ ಅನ್ಕೊಂಡ್ವಿ. ನಮ್ ಸಿನಿಮಾ, ನಮ್ ಜಾಗ ಇದು. ಯಾರಿಗೋ ಹೆದರಿಕೊಂಡು ನಾವ್ಯಾಕ್ ಬರಬೇಕು ರೀ. ನಮ್ಮನೆಗೆ ಬರೋಕೆ ಅವರಿಗೆ ಹೆದರಿಕೆ ಇರಬೇಕೇ ಹೊರತು ನಮಗ್ಯಾಕೆ ಹೆದರಿಕೆ? ಕನ್ನಡ ಜನರು ಇದಾರಾ ಇಲ್ವಾ ಅಂತ ನನಗೆ ಡೌಟ್ ಬಂದುಬಿಡ್ತು. ಆದರೆ ಕನ್ನಡ ಸಿನಿಮಾ ಚೆನ್ನಾಗಿದ್ದಾಗ ಕನ್ನಡ ಜನ ಕೈಹಿಡಿದೇ ಹಿಡಿತಾರೆ. ಆಮೇಲೆ ನಾವ್ ಯಾವ್ದೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಿಲ್ಲ, ಅಪ್ಪಟ ಕನ್ನಡ ಸಿನಿಮಾ, ಕನ್ನಡ ಜನತೆಗೋಸ್ಕರ ಮಾಡಿರೋ ಸಿನಿಮಾ ಅಂತ ಹೇಳೋಕೆ ಇಷ್ಟಪಡ್ತೀನಿ” ಎಂದು ದರ್ಶನ್ ಹೇಳಿದರು.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…