ನಟ ದರ್ಶನ್ ಹಾಗೂ ಸುದೀಪ್ ಮಧ್ಯೆ ವೈಮನಸ್ಸು ಮೂಡಿ ಹಲವು ವರ್ಷಗಳು ಕಳೆದಿವೆ. ಇಬ್ಬರೂ ಒಂದಾಗಬೇಕು ಎಂಬುದು ಅಭಿಮಾನಿಗಳ ಆಸೆ. ಇತ್ತೀಚಿನ ವರ್ಷಗಳಲ್ಲಿ ಸುದೀಪ್ ಈ ವಿಚಾರದಲ್ಲಿ ಪಾಸಿಟಿವ್ ಆಗಿ ಪ್ರತಿಕ್ರಿಯಿಸುತ್ತಲೇ ಬಂದಿದ್ದಾರೆ. ಇಂದು ಸುದೀಪ್ ಹುಟ್ಟುಹಬ್ಬ. ಈ ವೇಳೆ ಅವರು ದರ್ಶನ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ದರ್ಶನ್ ಮೇಲೆ ಕೋಪವಿಲ್ಲ ಎಂದು ಅವರು ನೇರವಾಗಿ ಹೇಳಿದ್ದಾರೆ. ಜೊತೆಗೆ ರಾಜಿ ಸಂಧಾನದ ಸೂಚನೆ ನೀಡಿದ್ದಾರೆ.
ಇತ್ತೀಚೆಗೆ ಸುಮಲತಾ ಅಂಬರೀಷ್ ಹುಟ್ಟುಹಬ್ಬ ಆಚರಿಸಿಕೊಂಡರು. ಈ ವೇದಿಕೆ ಮೇಲೆ ದರ್ಶನ್ ಹಾಗೂ ಸುದೀಪ್ ಒಟ್ಟಾಗಿ ಕಾಣಿಸಿಕೊಂಡರು. ಆರು ವರ್ಷಗಳ ಬಳಿಕ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡರು. ಆದರೆ, ಇವರ ಮಧ್ಯೆ ಮಾತುಕತೆ ನಡೆದಿಲ್ಲ. ಈಗ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ದರ್ಶನ್ ಹಾಗೂ ನಾನು ಒಂದೇ ಪಾರ್ಟಿಯಲ್ಲಿ ಭೇಟಿ ಆಗಿದ್ದು ನನಗೆ ಖುಷಿ ತಂದಿದೆ. ನಾವು ಕಿತ್ತಾಡಿಕೊಂಡಿಲ್ಲ. ನನಗೆ ದರ್ಶನ್ ಮೇಲೆ ಕೋಪವಿಲ್ಲ. ನಂಗೂ ಕೆಲವು ಪ್ರಶ್ನೆಗಳು ಇವೆ, ಅದೇ ರೀತಿ ದರ್ಶನ್ಗೂ ಪ್ರಶ್ನೆ ಇದೆ. ಇಬ್ಬರೂ ಮುಖಾಮುಖಿ ಆದಾಗ ಮಾತ್ರ ಸಮಸ್ಯೆಗೆ ಪರಿಹಾರ ಸಿಗೋದು. ಸುಮಲತಾ ಮೇಲಿನ ಗೌರವದಿಂದ ಆ ಪಾರ್ಟಿಗೆ ಹೋಗಿದ್ದೆ ಎಂದಿದ್ದಾರೆ.
ನಾನು ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ಗಳನ್ನು ನೋಡಲು ಹೋಗುವುದಿಲ್ಲ. ದರ್ಶನ್ ಏನು ಪೋಸ್ಟ್ ಮಾಡಿದ್ದಾರೆ ಎಂಬುದನ್ನು ನಾನು ನೋಡಿಲ್ಲ. ನೇರವಾಗಿ ಏನಾದರೂ ಹೇಳಿದರೆ ಅದನ್ನು ಪರಿಗಣನೆ ಮಾಡುತ್ತೇನೆ. ಶೇಕ್ ಹ್ಯಾಂಡ್ ಮಾಡೋದು ದೊಡ್ಡದಲ್ಲ. ಕೆಲವೊಂದಕ್ಕೆ ಸಮಯ ಕೂಡಿ ಆ ಬಳಿಕ ಸರಿ ಹೋಗುತ್ತದೆ. ನಾವಿಬ್ಬರು ಮತ್ತೆ ಒಂದಾದರೆ ನನಗೆ ಖುಷಿ ಇದೆ ಎಂದಿದ್ದಾರೆ.
ಅಭಿಮಾನಿಗಳು ಹುಟ್ಟುಹಬ್ಬ ಆಚರಿಸುತ್ತಿರುವ ಬಗ್ಗೆ ಸುದೀಪ್ ಪ್ರತಿಕ್ರಿಯಿಸಿದ್ದು,ಎಲ್ಲವೂ ಸರ್ಪ್ರೈಸ್ ಆಗಿ ಬರುತ್ತಿದೆ. ರಾತ್ರಿಯಿಂದ ನಿದ್ದೆಯನ್ನೇ ಮಾಡಿಲ್ಲ. ನಿಮ್ಮಿಂದಲೇ ತಾಳ್ಮೆ ಕಲಿತಿದ್ದೀನಿ. ನಾನು ಹೇಗೆ ಬೇಕಾದರು ಇರುತ್ತೇನೆ ಎನ್ನುವುದಕ್ಕೆ ಆಗುವುದಿಲ್ಲ. ಕಲಾವಿದರಾಗಿ ನಾವು ಸರ್ವೆಂಟ್ ಆಗಬೇಕು. ಸಾವಿರ ನೋವಿರಲಿ ಎಲ್ಲರನ್ನೂ ಭೇಟಿಯಾಗಬೇಕು ಎಂದಿದ್ದಾರೆ.
ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…
ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…
ದಾ.ರಾ. ಮಹೇಶ್ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…
ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…