ಚಿತ್ರ ಮಂಜರಿ

‘ಜವಾನ್​’ ಚಿತ್ರತಂಡದಿಂದ ಹೊಸ ಪೋಸ್ಟರ್​ ಬಿಡುಗಡೆ: ʼಸಾವಿನ ವ್ಯಾಪಾರಿʼಯಾಗಿ ವಿಜಯ್​ ಸೇತುಪತಿ

ಬಾಲಿವುಡ್​ನ ಜನಪ್ರಿಯ ನಟ ಶಾರುಖ್‌ ಖಾನ್‌ ಅಭಿನಯಿಸುತ್ತಿರುವ ಹೊಸ ಸಿನಿಮಾ ಜವಾನ್ ಬಗ್ಗೆ ಜನರಿಗೆ ಇರುವ ನಿರೀಕ್ಷೆ ದೊಡ್ಡದು. ದಿನದಿಂದ ದಿನಕ್ಕೆ ಈ ನಿರೀಕ್ಷೆಯ ಮಟ್ಟ ಹೆಚ್ಚಾಗುತ್ತಲೇ ಇದೆ. ಸಿನಿಮಾದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಇಂದು (ಜುಲೈ 24) ಹೊಸ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ.

ಜವಾನ್‌ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿರುವುದು ವಿಜಯ್​ ಸೇತುಪತಿ. ಅವರ ಗೆಟಪ್​ ಹೇಗಿರಲಿದೆ ಎಂಬುದು ಈ ಫೋಸ್ಟರ್​ನಲ್ಲಿ ಗೊತ್ತಾಗಿದೆ. ವಿಜಯ್‌ ಸೇತುಪತಿ ಅಭಿಮಾನಿಗಳ ವಲಯದಲ್ಲಿ ಈ ಪೋಸ್ಟರ್​ ವೈರಲ್​ ಆಗಿದೆ.

‘ಜವಾನ್​’ ಸಿನಿಮಾದಲ್ಲಿನ ವಿಜಯ್ ಸೇತುಪತಿ ಅವರ ಫಸ್ಟ್​ ಲುಕ್​ ಪೋಸ್ಟರ್​ ಅನ್ನು ಶಾರುಖ್ ಖಾನ್ ಅವರು ಬಿಡುಗಡೆ ಮಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರು ಈ ಪೋಸ್ಟರ್​ ಹಂಚಿಕೊಂಡಿದ್ದಾರೆ. ಹೊಸ ಪೋಸ್ಟರ್​ನಲ್ಲಿ ‘ಸಾವಿನ ವ್ಯಾಪಾರಿ’ ಎಂಬ ಟ್ಯಾಗ್​ಲೈನ್​ ಗಮನ ಸೆಳೆಯುತ್ತಿದೆ. ಆ ಮೂಲಕ ವಿಜಯ್ ಸೇತುಪತಿ ಪಾತ್ರ ಎಷ್ಟು ಭಯಂಕರವಾಗಿರಲಿದೆ ಎಂಬುದರ ಸುಳಿವು ನೀಡಲಾಗಿದೆ.

ಇದೇ ಮೊದಲ ಬಾರಿಗೆ ವಿಜಯ್ ಸೇತುಪತಿ ಮತ್ತು ಶಾರುಖ್​ ಖಾನ್​ ಅವರು ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇಬ್ಬರ ಮುಖಾಮುಖಿ ದೃಶ್ಯಗಳನ್ನು ನೋಡಲು ಫ್ಯಾನ್ಸ್​ ಕಾದಿದ್ದಾರೆ. ಇತ್ತೀಚೆಗಷ್ಟೇ ‘ಜವಾನ್​’ ಸಿನಿಮಾದ ಪ್ರಿವ್ಯೂ ಬಿಡುಗಡೆ ಆಗಿತ್ತು. ಅದರಲ್ಲೂ ವಿಜಯ್​ ಸೇತುಪತಿ ಅವರ ಪಾತ್ರದ ಝಲಕ್​ ಕಾಣಿಸಿತ್ತು. ಈಗ ಪೋಸ್ಟರ್​ ಮೂಲಕ ಇನ್ನಷ್ಟು ಕೌತುಕ ಹೆಚ್ಚಿಸುವ ಕೆಲಸ ಮಾಡಲಾಗಿದೆ. ಸೌತ್​ ಸಿನಿಮಾಗಳಲ್ಲಿ ವಿಲನ್​ ಪಾತ್ರ ಮಾಡಿ ಸೈ ಎನಿಸಿಕೊಂಡಿರುವ ವಿಜಯ್​ ಸೇತುಪತಿ ಅವರು ಶಾರುಖ್​ ಖಾನ್​ ಎದುರು ಹೇಗೆ ಅಬ್ಬರಿಸಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಹೆಚ್ಚಿದೆ.

‘ಜವಾನ್’ ಸಿನಿಮಾದ ಮೇಲೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಳ್ಳಲು ಅನೇಕ ಕಾರಣಗಳಿವೆ. ಪ್ರಿವ್ಯೂ ವಿಡಿಯೋದಲ್ಲಿ ಶಾರುಖ್ ಖಾನ್ ಅವರ ಬೋಳು ತಲೆ ಗೆಟಪ್​ ಗಮನ ಸೆಳೆದಿದೆ. ಹಾಗೆಯೇ ನಯನತಾರಾ ಅವರು ಆ್ಯಕ್ಷನ್​ ಅವತಾರದಲ್ಲಿ ಬರುತ್ತಿದ್ದಾರೆ. ಈಗ ವಿಜಯ್ ಸೇತುಪತಿ ಅವರನ್ನು ‘ಸಾವಿನ ವ್ಯಾಪಾರಿ’ ಎಂದು ಕರೆಯುವ ಮೂಲಕ ನಿರೀಕ್ಷೆಯನ್ನು ಹೆಚ್ಚಿಸಲಾಗಿದೆ.

ಅಟ್ಲಿ ನಿರ್ದೇಶನ ಮಾಡಿರುವ ‘ಜವಾನ್​’ ಸಿನಿಮಾ ಸೆಪ್ಟೆಂಬರ್ 7ರಂದು ವಿಶ್ವಾದ್ಯಂತ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆ ಆಗಲಿದೆ. ಶಾರುಖ್​ ಖಾನ್​ ಒಡೆತನದ ‘ರೆಡ್ ಚಿಲ್ಲೀಸ್ ಎಂಟರ್​ಟೇನ್ಮೆಂಟ್’ ಬ್ಯಾನರ್​ ಮೂಲಕ ಗೌರಿ ಖಾನ್ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಗೌರವ ವರ್ಮಾ ಅವರು ಸಹ-ನಿರ್ಮಾಪಕನಾಗಿದ್ದಾರೆ.

andolanait

Recent Posts

ಓದುಗರ ಪತ್ರ: ಐತಿಹಾಸಿಕ ಸಂಗತಿ!

ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…

1 hour ago

ಓದುಗರ ಪತ್ರ: ಟ್ರಾಫಿಕ್ ದಂಡ: ಸುಪ್ರೀಂ ಸಲಹೆ ಸ್ವಾಗತಾರ್ಹ

ಟ್ರಾಫಿಕ್ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರಿಂದ ಹಣ ವಸೂಲಿ ಮಾಡಲು, ಆ ದಂಡದ ಮೊತ್ತವನ್ನು ಅವರ ಮನೆ…

1 hour ago

ಓದುಗರ ಪತ್ರ: ಆಕಾಶದಲ್ಲಿ ಶೌರ‍್ಯಪ್ರದರ್ಶನಕ್ಕೊಂದು ಸಲಾಂ

ತನ್ನ ಪ್ರಾಣವನ್ನೇ ಒತ್ತೆಯಿಟ್ಟು ದುಬೈನಿಂದ ಇಸ್ರೇಲ್‌ನ ಅವೀವ್‌ಗೆ ತೆರಳುತ್ತಿದ್ದ -ದುಬೈ ವಿಮಾನ ಹೈಜಾಕ್ ತಪ್ಪಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್…

1 hour ago

ಬ್ರೇಕ್ ಕಿತ್ತ ಬಸ್ಸಿನಲ್ಲಿ ಇಳಿಜಾರಿನಲ್ಲಿ ಸಾಗುತ್ತಿದ್ದೇವೆ…

ಡಾ . ಚೇತನ ಗುರುರಾಜು, ಮುಖ್ಯ ಶಿಕ್ಷಕಿ, ಅರಿವು ವಿದ್ಯಾಸಂಸ್ಥೆ, ಮೈಸೂರು  ಸಾಮಾಜಿಕ ಮಾಧ್ಯಮಗಳ ಬಲೆಗೆ ಸಿಲುಕಿವೆ ಹಲವು ದೇಶಗಳು…

1 hour ago

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಸ್ವಾವಲಂಬನೆಯ ಸಂಕೇತ ಮಹಾತ್ಮ ಗಾಂಧೀಜಿ ಮಹಾತ್ಮ ಗಾಂಧೀಜಿ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕ ಹಾಗೂ ರಾಷ್ಟ್ರಪಿತ ಎಂದು…

2 hours ago

ಜಗದ ಸೌಹಾರ್ದ ನದಿ ಗಾಂಧಿ

ಪರಶುರಾಮ್, ನಿರ್ದೇಶಕರು, ಒಡನಾಡಿ ಸೇವಾ ಸಂಸ್ಥೆ ಗಾಂಧಿ ವಿಚಾರಗಳನ್ನು ಸಂವಾದದ ಮೂಲಕ ಮುನ್ನಡೆಸಲು ಸಾಧ್ಯವೇ? ಅಥವಾ ಅನುಸರಿಸಲು ಸಾಧ್ಯವಾಗದಿರುವ ನಡೆಯನ್ನು…

2 hours ago