ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10ನ ಸ್ಪರ್ಧಿ ವರ್ತೂರ್ ಸಂತೋಷ್ ಅವರು ದೊಡ್ಮನೆಯಿಂದ ಹೊರನಡೆಯುವ ತೀರ್ಮಾನ ಮಾಡಿದ್ದಾರೆ. ಈ ನಿರ್ಧಾರದಿಂದ ಶೋ ಹೋಸ್ಟರ್ ಕಿಚ್ಚ ಸುದೀಪ್ ಬೇಸರ ಹೊರ ಹಾಕಿದ್ದು, ವೇದಿಕೆಯಿಂದಲೇ ಹೊರ ನಡೆದಿದ್ದಾರೆ.
ಹುಲಿ ಉಗುರಿನ ಪ್ರಕರಣದಲ್ಲಿ ಬಂಧಿತರಾಗಿ ನಂತರ ಜಾಮೀನಿನ ಮೇಲೆ ಹೊರಬಂದು ಬಗ್‌ಬಾಸ್ ಮನೆಗೆ ಬಂದಿದ್ದರು. ಬಿಗ್‌ಬಾಸ್ ಗೆಲ್ಲಲೇ ಬೇಕೆಂದು ಅವರ ಅಪಾರ ಅಭಿಮಾನಿ ಬಳಗ ಆಶಿಸಿತ್ತು.
ಪ್ರತಿ ವಾರದಂತೆ ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ವರ್ತೂರ್ ಸಂತೋಷ್ ಅವರನ್ನು ಕಿಚ್ಚ ಸುದೀಪ್ ಅವರು ಸೇಪ್ ಎಂದು ಘೋಷಿಸಿದರು. ಅವರ ಮಾತು ಕೇಳಿ ಭಾವುಕರಾದ ಸಂತೋಷ್, ಹೊರಗಡೆ ಒಂದು ಘಟನೆ ನಡೆದಿದೆ. ಅದರಿಂದ ಹೊರಬಂದು ಬಿಗ್‌ಬಾಸ್ ಮನೆಯಲ್ಲಿ ಆಡಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನಾನು ಹೊರಗಡೆ ಇರಲು ಬಯಸುತ್ತೇನೆ ಎಂದು ಹಠ ಹಿಡಿದರು.
ಇದರಿಂದ ಬೇಸರಗೊಂಡ ಕಿಚ್ಚ ನಿಮಗೆ ಜನರು 34,15,472 ಮತಗಳನ್ನು ನೀಡಿದ್ದಾರೆ, ಆ ಜನಗಳ ವಿರುದ್ಧ ನಾನು ಹೋಗಲು ಆಗುವುದಿಲ್ಲ ನಾನು ಹೋಗುವುದು ಇಲ್ಲ. ನಿಮ್ಮಿಂದ ನನಗೆ ಬೇಸರವಾಗಿದೆ ಎಂದು ವೇದಿಕೆಯಿಂದಲೇ ಹೊರ ನಡೆದಿದ್ದಾರೆ.
ಸ್ನೇಹಿತ್, ನೀತು, ಇಶಾನಿ ಮತ್ತು ವರ್ತೂರ್ ಎಲಿಮಿನೇಷನ್ ಪ್ರಕ್ರಿಯೆಗೆ ನಾಮಿನಿಯಾಗಿದ್ದರು. ಇವರಲ್ಲಿ ವರ್ತೂರ್ ಸೇಫ್ ಆಗಿದ್ದರು.
ಟೆಹ್ರಾನ್ : ಇರಾನಿನ ಬಂದರುಗಳು ಸಾಗುವ ಸಮುದ್ರ ಸಂಚಾರದ ಮೇಲೆ ಅಮೆರಿಕ ಮಿಲಿಟರಿ ದಿಗ್ಬಂಧನವನ್ನು ನಿಗದಿತ ಗಡುವಿನಂತೆ ಆರಂಭಿಸಿದೆ. ಈ…
ನವದೆಹಲಿ : ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ ಆರೋಪ ಸಂಬಂಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಮಧ್ಯಂತರ…
ಬೆಂಗಳೂರು : ಪಕ್ಷದ ಶಾಸಕರು ಹೈಕಮಾಂಡ್ ವರಿಷ್ಠರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ. ಅನವಶ್ಯಕವಾಗಿ ಏನೇನೋ ಹೇಳಿಕೆ ನೀಡಿದರೆ ಶಿಸ್ತು ಕ್ರಮ…
ಚಾಮರಾಜನಗರ : ವಯನಾಡು ಸಂಸದೆ ಪ್ರಿಯಾಂಕ ವಾದ್ರಾ ಅವರು ಬಂಡೀಪುರ ರಾತ್ರಿ ಸಂಚಾರ ನಿಷೇಧ ಮುಕ್ತ ಮಾಡುವುದಾಗಿ ಹೇಳಿರುವುದು ಮತ್ತು…
ಮಡಿಕೇರಿ : ಕಾಡಾನೆ ಮರಿಯೊಂದು ಬಾವಿಗೆ ಬಿದ್ದು ನರಳಾಡಿದ ಘಟನೆ ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಪೆರಾಜೆ ಸಮೀಪದ ಕಲ್ಚೆರ್ಪೆಯಲ್ಲಿ…
ಟೆಹ್ರಾನ್ : ಕದನ ವಿರಾಮ ಒಪ್ಪಂದಕ್ಕೆ ಬರಲು ವಿಫಲವಾದ ನಂತರ, ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ಹಡಗುಗಳಿಗೆ ದಿಗ್ಬಂಧನ ವಿಧಿಸುವುದಾಗಿ…