ಈ ತಿಂಗಳಾಂತ್ಯಕ್ಕೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರ ಬಹುನಿರೀಕ್ಷಿತ ಸಿನಿಮಾ ಕಾಂತಾರ 1 ಪ್ರೀಕ್ವೆಲ್ ನ ಫಸ್ಟ್ ಲುಕ್ ಬಿಡುಗಡೆಯಾಗಲಿದೆ.
ಇದೇ ನವೆಂಬರ್ 27 ರಂದು ಮಧ್ಯಾಹ್ನ 12 – 25ಕ್ಕೆ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ ಎಂದು ಹೊಂಬಾಳೆ ಫಿಲ್ಮ್ಸ್ ಮಾಹಿತಿ ಹಂಚಿಕೊಂಡಿದೆ.
ತುಳುನಾಡಿನ ಸಂಪ್ರದಾಯ ಹಾಗೂ ದೈವಾಚರಣೆ ಕುರಿತಾದ ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಗೆದ್ದು ಬೀಗಿತ್ತು. ಹೊಂಬಾಳೆ ಫೀಲ್ಮ್ಸ್ ಕಾಂತಾರ ಬಳಿಕ ಬಾಕ್ಸ್ ಆಫೀಸ್ ನಲ್ಲಿ 400 ಕೋಟಿಗೂ ಅಧಿಕ ಗಳಿಕೆ ಕಂಡಿತ್ತು.
ಕಾಂತಾರ ಪಾರ್ಟ್ 1 ಸಕ್ಸಸ್ ಕಂಡ ಬಳಿಕ ಎರಡನೇ ಭಾಗವೂ ಕೂಡ ಸಿನಿರಸಿಕರ ಮುಂದೆ ಬರಲಿದೆ ಎಂದು ರಿಶಬ್ ಶೆಟ್ಟಿ ಅವರು ಸಿನಿಮಾದ ಶತದಿನ ಸಂಭ್ರಮದ ವೇಳೆ ಹೇಳಿದ್ದರು. ಅದಾದ ನಂತರ ಸ್ಕ್ರಿಪ್ಟ್ ಹಾಗೂ ಲೋಕೇಶನ್ ಹುಡುಕಾಟ ಪೂರ್ಣಗೊಳಿಸಿ, ಸಿನಿಮಾ ಕುರಿತು ಒಂದೊಂದೇ ಅಪ್ಡೇಟ್ ನೀಡುತ್ತಾ ಬಂದಿದ್ದರು. ಇದೀಗ ಚಿತ್ರತಂಡ ಇದೇ ತಿಂಗಳ 27 ರಂದು ಪ್ರೀಕ್ವೆಲ್ ನ ಫಸ್ಟ್ ಲುಕ್ ರಿಲೀಸ್ ಮಾಡುವುದಾಗಿ ಘೋಷಣೆ ಮಾಡಿದ್ದು ಸಿನಿ ಪ್ರಿಯರು ಫುಲ್ ಖುಷ್ ಆಗಿದ್ದಾರೆ.
ಪ್ರಿಕ್ವೆಲ್ ನಲ್ಲಿ ಪಂಜುರ್ಲಿ ದೈವದ ಹುಟ್ಟು ಹಾಗೂ ಮೂಲದ ಕುರಿತ ಕಥೆ ಇದೆ ಎನ್ನಲಾಗಿದೆ. ಈ ತಿಂಗಳ ಕೊನೆಯಲ್ಲಿ ಉಡುಪಿಯಲ್ಲಿ ಸಿನಿಮಾದ ಮುಹೂರ್ತ ನಡೆಯಲಿದೆ ಎನ್ನಲಾಗುತ್ತಿದೆ.
ಕಾಂತಾರ ಮೊದಲ ಭಾಗದಂತೆ ಎರಡನೇ ಭಾಗವು ಕೂಡ ಯಶಸ್ಸನ್ನು ಕಾಣಬೇಕೆಂದು ರಿಷಬ್ ಶೆಟ್ಟಿ ತೆರೆಮರೆಯಲ್ಲಿ ಭರ್ಜರಿ ಕಸರತ್ತು ನಡೆಸಿದ್ದಾರೆ. ಅದಕ್ಕಾಗಿ ತಮ್ಮ ಗೆಟಪ್ ಕೂಡ ಬದಲಾಯಿಸಿಕೊಂಡಿದ್ದಾರೆ.
ಇತ್ತೀಚಿಗಷ್ಟೇ ಕುಟುಂಬಸ್ಥರೊಂದಿಗೆ ದೀಪಾವಳಿ ಆಚರಿಸಿದ್ದ ರಿಶಬ್ ಶೆಟ್ಟಿ, ಸೋಶಿಯಲ್ ಮೀಡಿಯಾದಲ್ಲಿ ಹಬ್ಬದ ಆಚರಣೆಯ ಫೋಟೋಗಳನ್ನು ಹಂಚಿಕೊಂಡಿದ್ದರು. ಆ ಫೋಟೋದಲ್ಲಿ ರಿಷಬ್ ಶೆಟ್ಟಿ ಎಂದಿನಂತೆ ಕಾಣಿಸಿರಲಿಲ್ಲ. ಬದಲಾಗಿ ನ್ಯೂ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಫೋಟೋ ನೋಡಿದ ಅಭಿಮಾನಿಗಳು ಕಾಂತಾರ 2ಗಾಗಿ ರಿಷಬ್ ತಮ್ಮ ಗೆಟಪ್ ಬದಲಿಸಿಕೊಂಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದರು.
ಇದೀಗ ಅಭಿಮಾನಿಗಳ ಮಾತು ಸತ್ಯವಾಗಿದೆ. ಕಾಂತಾರ 2 ನಲ್ಲಿ ರಿಷಬ್ ಶೆಟ್ಟಿ ಹೊಸ ಅವತಾರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಮುಹೂರ್ತದ ಬಳಿಕ ಸಿನಿಮಾ ಬಗ್ಗೆ ಹೆಚ್ಚಿನ ಅಪ್ಡೇಟ್ ಹೊರಬರಲಿದೆ.
ಉಡುಪಿ: ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಉಡುಪಿಗೆ ಆಗಮಿಸಿದ್ದು, ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಇಂದು…
ಹಾಸನ: ಕಾಫಿ ಬೆಳೆಗೆ ಉತ್ತಮ ಬೆಲೆ ಬಂದಿರುವ ಪರಿಣಾಮ ಮಲೆನಾಡು ಭಾಗದಲ್ಲಿ ಕಾಫಿ ಕಳವು ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.…
ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂದಾನ ಹಾಗೂ ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಮದುವೆ ಮುಂದೂಡಿಕೆಯಾಗಿತ್ತು.…
ಗುಂಡ್ಲುಪೇಟೆ: ಬಂಡೀಪುರ ರಾಜ್ಯದಲ್ಲೇ ಅತಿ ಹೆಚ್ಚು ಹುಲಿ, ಚಿರತೆ ಹಾಗೂ ಆನೆಗಳಿರುವ ತಾಣ. ಈ ಅರಣ್ಯದಲ್ಲಿ ದೇಶದಲ್ಲೇ ಮೊದಲ ಟ್ರ್ಯಾಕರ್…
ಬೆಳಗಾವಿ: ಬೆಳಗಾವಿಯಲ್ಲಿ ನಾಳೆಯಿಂದ ವಿಧಾನಮಂಡಲ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ನಿಗದಿಯಾಗಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಮುಂದೂಡಿಕೆ…
ಪಣಜಿ: ಗೋವಾದ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 25 ಜನರು ಸಾವನ್ನಪ್ಪಿರುವ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಆದೇಶ…