ಕನ್ನಡದ ಮೊದಲ ಬಯೋಪಿಕ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಡಾ. ವಿಜಯಸಂಕೇಶ್ವರ ಅವರ ಜೀವನ ಆಧಾರಿತ ‘ವಿಜಯಾನಂದ’ ಚಿತ್ರವು ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಜಗತ್ತಿನಾದ್ಯಂತ 1200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಸಂತೋಷ್ ಥಿಯೇಟರ್ ನಲ್ಲಿ ತಲೆ ಎತ್ತಿದ ದೊಡ್ಡ ಕಟೌಟ್ ತಲೆ ಎತ್ತಿದೆ. ಯಶಸ್ವಿ ಉಧ್ಯಮಿಯ ಜೀವನ ಹೋರಾಟದ ಕಥೆ ಇದಾಗಿದ್ದು, ಬೆಂಗಳೂರು, ಹುಬ್ಬಳ್ಳಿ, ಹೈದರಾಬಾದ್ ಗಳಲ್ಲಿ ಪ್ರೀಮಿಯರ್ ಶೋ ಮಾಡಿದೆ.
ಸಂತೋಷ್ ಚಿತ್ರಂಮದಿರ ಸೇರಿದಂತೆ ರಾಜ್ಯದ ಹಲವು ಥಿಯೇಟರ್ ಗಳಲ್ಲಿ ರಿಲೀಸ್ ಆಗಿದೆ, ಓವರ್‌ಸೀಸ್‌ನಲ್ಲಿ 350 ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ವಿಜಯಾನಂದ ಆರ್ಭಟ ಶುರುವಾಗಿದೆ.
ಈ ಮೊದಲು ‘ಟ್ರಂಕ್’ ಎಂಬ ಚಿತ್ರದ ನಿರ್ದೇಶನ ಮಾಡಿದ್ದ ರಿಷಿಕಾ ಶರ್ಮ, ‘ವಿಜಯಾನಂದ’ ಚಿತ್ರಕ್ಕೆ ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ವಿಆರ್ಎಲ್ ಪ್ರೊಡಕ್ಷನ್ಸ್ ಅಡಿಯಲ್ಲಿ ಡಾ. ಆನಂದ ಸಂಕೇಶ್ವರ ನಿರ್ಮಿಸಿರುವ ವಿಜಯಾನಂದ ಚಿತ್ರಕ್ಕೆ ದಕ್ಷಿಣ ಭಾರತದ ಜನಪ್ರಿಯ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್ ಸಂಗೀತ ಸಂಯೋಜಿಸಿದ್ದು, ಕೀರ್ತನ್ ಪೂಜಾರಿ ಅವರ ಛಾಯಾಗ್ರಹಣವಿದೆ.
ಆ ಚಿತ್ರದಲ್ಲಿ ನಾಯಕನಾಗಿದ್ದ ನಿಹಾಲ್ ರಜಪೂತ್, ಈ ಚಿತ್ರದಲ್ಲಿ ಡಾ. ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ಅಭಿನಯಿಸಿದ್ದು, ಮೂರು ವಯೋಮಾನ ಮತ್ತು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕರುನಾಡಿನ ಯಶಸ್ವಿ ಉದ್ಯಮಿ ವಿಜಯ ಸಂಕೇಶ್ವರ ಅವರ ಜೀವನದ ವಿವರಗಳನ್ನು ಇಟ್ಟುಕೊಂಡು ‘ವಿಜಯಾನಂದ’ ಸಿನಿಮಾ ಮೂಡಿಬಂದಿದೆ. ನಿಹಾಲ್, ಸಿರಿ ಪ್ರಹ್ಲಾದ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ರಿಶಿಕಾ ಶರ್ಮಾ ಅವರು ನಿರ್ದೇಶನ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದೆ.
‘ನಾನೇ ನರರಾಕ್ಷಸ’, ‘ಸುನಾಮಿ 143’, ‘ಪ್ರಾಯಶಃ’, ‘ಪಂಖುರಿ’, ‘ಮೈಸೂರು ಡೈರೀಸ್’, ‘ಕ್ಷೇಮಗಿರಿಯಲ್ಲಿ ಕರ್ನಾಟಕ’, ‘ದ್ವಿಪಾತ್ರ’, ‘ಡಾ. 56’ ಸಿನಿಮಾಗಳು ಕೂಡ ಈ ವಾರ ತೆರೆಕಾಣುತ್ತಿವೆ. ಯಾವುದನ್ನು ನೋಡೋದು, ಯಾವುದನ್ನು ಬಿಡೋದು ಎಂಬ ಗೊಂದಲದಲ್ಲಿ ಪ್ರೇಕ್ಷಕರಿದ್ದಾರೆ.
ಚಿತ್ರದಲ್ಲಿ ಪ್ರತಿಭಾವಂತ ಕಲಾವಿದರುಗಳಾದ ಅನಂತ್ ನಾಗ್, , ಅರ್ಚನಾ ಕೊಟ್ಟಿಗೆ, ಪ್ರಕಾಶ್ ಬೆಳವಾಡಿ, ಭರತ್ ಬೋಪಣ್ಣ, ರಮೇಶ್ ಭಟ್ , ಶೈನ್ ಶೆಟ್ಟಿ, ರವಿಚಂದ್ರನ್, ವಿನಯಾ ಪ್ರಸಾದ್, ಸಿರಿ ಪ್ರಹ್ಲಾದ್ ದಯಾಳ್ ಪದ್ಮನಾಭನ್, ಮುಂತಾದವರು ಇದ್ದಾರೆ.
ಬಿಹಾರ ವಿಧಾನಸಭೆಗೆ ಚುನಾವಣೆ ನಡೆದು ಮೂರೂವರೆ ತಿಂಗಳಾಗುವಷ್ಟರಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆಗೆ ಏಕಿಷ್ಟು ಆತುರ? ಏನು ಕಾರಣ ಎನ್ನುವುದಕ್ಕೆಲ್ಲ ಉತ್ತರ…
ಕೃಷ್ಣ ಸಿದ್ದಾಪುರ ತೋಟದ ಮಾಲೀಕನ ದೌರ್ಜನ್ಯಕ್ಕೆ ತುತ್ತಾದ ೮ ಕುಟುಂಬಗಳ ೨೬ ಮಂದಿ ರಕ್ಷಣೆ; ಸಾಬೀತಾಗದ ಆರೋಪ ಸಿದ್ದಾಪುರ: ವ್ಯವಸ್ಥೆಯಲ್ಲಿ ಶತಮಾನಗಳಿಂದ…
ಮಹಾದೇಶ್ ಎಂ ಗೌಡ ಮಾ.೯ರಿಂದ ೫ ದಿನಗಳ ಕಾಲ ನಡೆಯಲಿರುವ ಹಬ್ಬ; ಸಾವಿರಾರು ಜನರು ಸೇರುವ ನಿರೀಕ್ಷೆ ಹನೂರು: ಪಟ್ಟಣದ…
ಸಿರಿ ಮೈಸೂರು ಮೈಸೂರಿನ ನ್ಯಾಯಾಲಯದ ಮುಂಭಾಗದಿಂದ ಮಾಧವ ರಾವ್ ವೃತ್ತದವರೆಗೂ (ಅಗ್ರಹಾರ ವೃತ್ತ) ಇರುವ ರಸ್ತೆಯನ್ನು ವಾಣಿವಿಲಾಸ ರಸ್ತೆ ಎಂದು…
ರಾಧಾ ಆದಿಕಾಲದಿಂದ ಮಾನವರನ್ನು ಮೂಕವಿಸ್ಮಿತನನ್ನಾಗಿ ಮಾಡುತ್ತಾ ಬಂದ ವಿಚಿತ್ರಮಯ ಜಗತ್ ಸೃಷ್ಟಿ ಅವರ ಪಾಲಿಗೆ ಬಿಡಿಸಲಾರದ ಒಗಟು. ಆದಿಮಾನವರಿಗಂತೂ, ಭೂಮ್ಯಾಕಾಶಗಳಲ್ಲಿ…
ಸುಕನ್ಯಾ ಕನಾರಳ್ಳಿ ಹೆಣ್ಣು ನಿಮ್ಮ ಆಸ್ತಿಗೆ ವಾರಸುದಾರರನ್ನ ಹುಟ್ಟಿಸುವ ಕೇವಲ ಗರ್ಭ ಅಲ್ಲ, ಅವಳೊಬ್ಬ ಪ್ರಜೆ, ಅಂತ ಸಾರಿ ಸಾರಿ…